Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ದಿಢೀರ್ ಧನಲಾಭ, ಸಾಲ ಮರುಪಾವತಿ!
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 19 (19 October Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ದಿನ ಮಿಶ್ರ ಫಲವಿದೆ. ನಿಮ್ಮ ಹಲವು ಕೆಲಸಗಳಿಂದ ವಿರಾಮ ಪಡೆಯುತ್ತೀರಿ. ಸವಾಲುಗಳ ಎದುರಿಸುವುದನ್ನು ಕಲಿಯಬೇಕಿದೆ. ಸಭೆಗಳಲ್ಲಿ ಭಾಗಿಯಾಗಬಹುದು. ಪ್ರಯಾಣ ಮಾಡುವಿರಿ. ಖರ್ಚು ಹೆಚ್ಚಾಗುವ ಸಂಭವ.
ವೃಷಭ ರಾಶಿ
ವೃಷಭ ರಾಶಿಯಲ್ಲಿ ಇಂದು ಸವಾಲುಗಳಿವೆ. ನಿಮ್ಮ ಹಲವು ಕೆಲಸಗಳನ್ನು ಅನಗತ್ಯ ವಿಚಾರದ ಹಿನ್ನೆಲೆ ಅರ್ಧಕ್ಕೆ ನಿಲ್ಲಿಸುವಿರಿ. ಪ್ರಯಾಣ ಮಾಡುವಿರಿ. ಮನೆಗಾಗಿ ಹೊಸ ವಸ್ತುಗಳ ಖರೀದಿಸಬಹುದು. ಹೊಸ ಪರಿಚಯಸ್ಥರಿಂದ ನಿಮಗೆ ನಷ್ಟವಿದೆ.

ಮಿಥುನ ರಾಶಿ
ಮಿಥುನ ರಾಶಿಯ ಜನರಲ್ಲಿ ಇಂದು ಶುಭ ಗಳಿಗೆಗಳಿವೆ. ಹಲವು ರೀತಿಯ ಕೆಲಸಗಳನ್ನು ನೀವು ಒಟ್ಟಿಗೆ ಮಾಡುವಿರಿ. ಹಣಕಾಸು ವಿಚಾರದಲ್ಲಿ ಎಚ್ಚರಿಕೆ ವಹಿಸಿ. ವ್ಯಾಪಾರಿಗಳು ಲಾಭ ಮಾಡುವ ದಿನ. ಆರೋಗ್ಯದ ಕಡೆ ಗಮನವಿಡಿ. ಕುಟುಂಬಸ್ಥರಿಂದ ಶುಭ ಸುದ್ದಿ ಕೇಳುವಿರಿ.
ಕರ್ಕ ರಾಶಿ
ನೀವಿಂದು ಹೊಸ ಹೊಸ ವಸ್ತುಗಳ ಖರೀದಿಸಬಹುದು. ಪ್ರಯಾಣದ ಸಮಯ ಅಡೆತಡೆಗಳ ಎದುರಿಸಬಹುದು. ನಿಮ್ಮ ಉಳಿತಾಯದ ಕಡೆ ಆಸಕ್ತಿ ಹೆಚ್ಚಾಗಲಿದೆ. ಆಪ್ತರೊಬ್ಬರ ಭೇಟಿ ಹಾಗೆ ಹೊಸ ವಿಚಾರಗಳು ನಿಮ್ಮಲ್ಲಿ ಸಂತಸಕ್ಕೆ ಕಾರಣವಾಗಲಿದೆ.
ಸಿಂಹ ರಾಶಿ
ನಿಮ್ಮ ದೊಡ್ಡ ಸಮಸ್ಯೆಯೊಂದಕ್ಕೆ ಇಂದು ಪರಿಹಾರ ಸಿಗಲಿದೆ. ನಿತ್ಯದ ಕೆಲಸಗಳು ಸುಸೂತ್ರವಾಗಿ ನಡೆಯಲಿದೆ. ಖರೀದಿಯ ಆಸಕ್ತಿ ಹೆಚ್ಚಾಗಲಿದೆ. ಕುಟುಂಬದಲ್ಲಿ ಶಾಂತಿ ಇತರಲಿದೆ. ದಿನದ ಅಂತ್ಯದಲ್ಲಿ ಖರ್ಚು ಹೆಚ್ಚಾಗಬಹುದು. ಉದರ ಸಂಬಂಧಿ ಸಮಸ್ಯೆ ಕಾಡಬಹುದು.
ಕನ್ಯಾ ರಾಶಿ
ನಿಮಗಿಂದು ಪ್ರಯಾಣದ ದಿನ. ಬಹಳ ಓಡಾಟದಿಂದ ಆಯಾಸ ಕಾಡಬಹುದು. ಹಲವರಿಗೆ ಇಂದು ಆರ್ಥಿಕವಾಗಿ ಕಷ್ಟದ ದಿನ. ನಿಮ್ಮ ಹಣಕಾಸು ಪರಿಸ್ಥಿತಿ ಅನುಕೂಲಕರವಾಗಿರುವುದಿಲ್ಲ. ನಿಮ್ಮ ದೊಡ್ಡ ಕೆಲಸವನ್ನು ಅರ್ಧದಲ್ಲೆ ನಿಲ್ಲಿಸಬಹುದು. ದೇವಾಲಯ ಭೇಟಿ ಸಂಭವವಿದೆ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಇಂದು ಸಮಸ್ಯೆಗಳ ದಿನ. ನಿಮ್ಮ ದೊಡ್ಡ ವಿಚಾರವೊಂದಕ್ಕೆ ಪರಿಹಾರ ಪಡೆಯಲು ನೀವು ಖರ್ಚು ಮಾಡಬಹುದು. ಬಹುದಿನದ ಅನಾರೋಗ್ಯ ಸಮಸ್ಯೆ ಸಂಬಂಧವಾಗಿ ವೈದ್ಯರ ಭೇಟಿಗೆ ಮುಂದಾಗಬಹುದು. ಉಳಿತಾಯದ ಹಣ ಬಳಸಲ ನೀವು ಆಲೋಚಿಸಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಇಂದು ಉತ್ತಮ ಅನುಕೂಲದ ದಿನ. ಹಲವು ದಿನದಿಂದ ಬರಬೇಕಿದ್ದ ಹಣವೊಂದು ನಿಮ್ಮ ಕೈ ಸೇರಬಹುದು. ಒಂದಿಷ್ಟು ದಂಡ ಪಾವತಿ ಅಥವಾ ಶುಲ್ಕ ಭರಿಸುವ ದಿನ. ನಿಮ್ಮದಲ್ಲದ ಕೆಲಸಕ್ಕಾಗಿ ಪ್ರಯಾಣ ಮಾಡಬೇಕಾಗಬಹುದು.
ಧನು ರಾಶಿ
ಧನು ರಾಶಿಯವರು ಈ ದಿನ ಉತ್ತಮ ಸಮಯ ಕಳೆಯಬಹುದು. ನಿಮ್ಮ ಹಲವು ಕೆಲಸಗಳು ಅವಧಿಯೊಳಗೆ ಮುಗಿಸಬಹುದು. ಮನೆಗಾಗಿ ಬೇಕಾದ ಅಗತ್ಯ ವಸ್ತು ಖರೀದಿಯ ಸಂಭವಿದೆ. ಉಳಿತಾಯದಲ್ಲಿ ಹೆಚ್ಚಳವಿದೆ.
ಮಕರ ರಾಶಿ
ಮಕರ ರಾಶಿಯ ಮಂದಿಗೆ ಇಂದು ಶುಭದಾಯಕ ದಿನ. ನಿಮ್ಮ ಹಣಕಾಸು ಕಷ್ಟವೊಂದು ನಿವಾರಣೆಯಾಗುವ ದಿನ. ಆಪ್ತರೊಬ್ಬರಿಂದ ನಿಮಗೆ ಹಣ ಕೈಸೇರಲಿದೆ. ಹಲವು ರೀತಿಯ ಕೆಲಸಗಳನ್ನು ಒಟ್ಟಿಗೆ ಮಾಡಿ ಮುಗಿಸಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಇಂದು ಮಿಶ್ರ ಫಲದಾಯಕ ದಿನ. ಬಹಳ ಸಮಯದಿಂದ ಪೂರ್ಣಗೊಳಿಸದೆ ಇದ್ದ ಕೆಲಸವೊಂದನ್ನು ಪೂರ್ಣ ಮಾಡುವಿರಿ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾಗಬಹುದು. ಕೆಲಸದ ವಿಚಾರದಲ್ಲಿದ್ದ ಒತ್ತಡ ನಿವಾರಣೆಯಾಗಲಿದೆ. ಆಪ್ತರಿಂದ ಹಣ ಪಡೆಯಬಹುದು.
ಮೀನ ರಾಶಿ
ಮೀನ ರಾಶಿಯ ಜನರಲ್ಲಿ ಇಂದು ಸಮಸ್ಯೆಗಳಿವೆ. ನಿಮ್ಮ ದೊಡ್ಡ ವ್ಯವಹಾರ ಸಂಬಂಧವಾಗಿ ಚಿಂತೆ ಕಾಡಲಿದೆ. ಹೊಸ ವ್ಯವಹಾರದಲ್ಲಿ ನಿಮಗೆ ಶುಭವಿದೆ. ನಿಮ್ಮ ಮಕ್ಕಳ ಕುರಿತಾದ ಚಿಂತೆಯೊಂದು ಕಾಡಬಹುದು. ಆಪ್ತರಿಂದ ಹಣಪಡೆಯುವ ದಿನವಾಗಿರಲಿದೆ.



Click it and Unblock the Notifications