Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
Dina Bhavishya: ಪ್ರಯಾಣಗಳಲ್ಲಿ ಶುಭ, ಆಪ್ತರಿಂದ ಹಣ ಪಡೆಯುವ ಸಂಭವ!
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 18 (18 October Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಸಮಸ್ಯೆಗಳ ದಿನವಾಗಬಹುದು. ನಿಮ್ಮ ಕೆಲಸಗಳಲ್ಲಿ ಅಡ್ಡಿಗಳು ಎದುರಾಗಬಹುದು. ಪ್ರಯಾಣ ಮಾಡುವಾಗ ಎಚ್ಚರಿಕೆ ಇಡುವುದು ಉತ್ತಮ. ನಿಮ್ಮ ಬಹುಮುಖ್ಯ ಕೆಲಸವೊಂದನ್ನು ಮರೆತು ಬಿಡುವುದು ಒತ್ತಡ ಹೆಚ್ಚಲು ಕಾರಣವಾಗಬಹುದು.
ವೃಷಭ ರಾಶಿ
ವೃಷಭ ರಾಶಿ ಮಂದಿ ಇಂದು ಪ್ರಯಾಣ ಮಾಡಬಹುದು. ನಿಮ್ಮ ಹಲವು ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬಹುದು. ಯಾರಿಗಾದರು ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಅದನ್ನು ಪೂರ್ಣ ಮಾಡುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಇಂದು ಮಿಶ್ರಫಲವಿದೆ. ಗೃಹಿಣಿಯರು ತಮ್ಮ ಖರ್ಚುಗಳ ಮೇಲೆ ನಿಗಾ ಇಡುವುದು ಉತ್ತಮ. ಸಂಜೆ ಸಮಯದಲ್ಲಿ ಒತ್ತಡ ಹೆಚ್ಚಾಗುವ ನಿರೀಕ್ಷೆ ಇದೆ. ಮನೆಗಾಗಿ ಹಲವು ವಸ್ತುಗಳ ಖರೀದಿಸಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಸಾಮಾನ್ಯ ದಿನವಾಗುತ್ತಿದೆ. ನಿಮ್ಮ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ನೋಡಬಹುದು. ಅನೇಕರಲ್ಲಿ ಹಣಕಾಸು ಸಂಬಂಧಿತ ವಿಚಾರದಲ್ಲಿ ಒತ್ತಡ ಹಾಗೆ ಸಮಸ್ಯೆಗಳಿವೆ. ಸಾಲ ಮಾಡುವ ಸಾಧ್ಯತೆ ಇದೆ. ಖರ್ಚುಗಳ ನಿಭಾಯಿಸುವುದು ಉತ್ತಮ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ದಿನ ವಿಶ್ರಾಂತಿದಾಯಕ ದಿನ. ವ್ಯಾಪಾರಿ ವರ್ಗಕ್ಕೆ ಇಂದು ಉತ್ತಮ ಲಾಭದ ದಿನ. ಹಲವು ಕೆಲಸಗಳಲ್ಲಿ ಅಡ್ಡಿಗಳ ನೋಡಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರು ಇಂದು ಉತ್ತಮ ದಿನ. ದೇವಾಲಯ ಭೇಟಿಯ ಸಾಧ್ಯತೆ ಇದೆ. ಕುಟುಂಬಸ್ಥರೊಂದಿಗೆ ಪ್ರಯಾಣ ಮಾಡಬಹುದು. ಸ್ನೇಹಿತರಿಂದ ಹಣಕಾಸು ಬೆಂಬಲ ಸಾಧ್ಯತೆ ಇದೆ. ವಾಹನ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಇಂದು ಸವಾಲಿನ ದಿನ. ನಿಮ್ಮ ಬಯಕೆಯಂತೆ ಪ್ರಯಾಣಗಳಲ್ಲಿ ಉತ್ತಮ ಫಳಿತಾಂಶ ಇರುವುದಿಲ್ಲ. ಮನೆಯ ವಸ್ತುವೊಂದರ ಕಾರಣಕ್ಕೆ ಖರ್ಚುಗಳು ಬರಬಹುದು. ದಿನದ ಅಂತ್ಯದಲ್ಲಿ ಆಯಾಸ ಕಾಡಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಲ್ಲಿ ಈ ದಿನ ಬಹಳ ಅನುಕೂಲಕರ ದಿನ. ಹಲವು ದಿನದಿಂದ ಯಾವುದಾದರು ವಸ್ತು ಖರೀದಿಗೆ ನೀವು ಆಲೋಚಿಸಿದ್ದರೆ ಈ ದಿನ ಖರೀದಿ ಸಂಭವವಿದೆ. ಯಾರಿಗೂ ಸಾಲ ನೀಡುವ ಮುನ್ನ ಎಚ್ಚರವಿಡಿ. ಶನಿ ದೇವರ ಪೂಜಿಸುವುದು ಉತ್ತಮ.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಮಿಶ್ರ ಫಲದ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಇಂದು ಮಿಶ್ರ ಫಲ ನೋಡುತ್ತೀರಿ, ಪ್ರೀತಿ ವಿಚಾರದಲ್ಲಿ ಶುಭವಿದೆ. ಆಪ್ತರಿಗೆ ನಿಮ್ಮಿಂದ ಸಹಕಾರವಾಗಬಹುದು. ಹೊಸ ಆದಾಯ ಹುಡುಕುವ ನಿಮ್ಮ ಪ್ರಯತ್ನಕ್ಕೆ ಫಲ ನೀಡಲಿದೆ.
ಮಕರ ರಾಶಿ
ಮಕರ ರಾಶಿಯ ಜನರಿಗೆ ಇಂದು ಉತ್ತಮ ಸಮಯ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಾಗಲಿದೆ. ಆಪ್ತರೊಬ್ಬರಿಗೆ ನಿಮ್ಮಿಂದ ಹಣಕಾಸಿನ ಸಹಾಯ ಸಿಗಲಿದೆ. ನಿಮ್ಮ ಆರ್ಥಿಕ ವಿಚಾರದಲ್ಲಿ ಶುಭವಿದೆ. ಹಲವು ಮೂಲದಿಂದ ನಿಮಗೆ ಹಣ ಹರಿದು ಬರಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಮಿಶ್ರ ಫಲವಿದೆ. ನಿಮ್ಮ ಪ್ರಯಾಣದಿಂದ ಲಾಭವಾಗಲಿದೆ. ಹಲವರ ದೊಡ್ಡ ವ್ಯವಹಾರಗಳು ಅರ್ಧಕ್ಕೆ ನಿಲ್ಲಬಹುದು. ನಿಮಗೆ ಬರಬೇಕಿದ್ದ ಹಣ ಕೈಸೇರಬಹುದು. ಮನೆ ವಿಚಾರದಲ್ಲಿ ಖರ್ಚು ಮಾಡುವಿರಿ.
ಮೀನ ರಾಶಿ
ಮೀನ ರಾಶಿಯ ಜನರಲ್ಲಿ ಇಂದು ಸುಗಮ ವಾತಾವರಣದ ದಿನ. ಗೃಹಿಣಿಯರು ಸವಾಲುಗಳ ಎದುರಿಸಬಹುದು. ಆರ್ಥಿಕ ವಿಚಾರದಲ್ಲಿ ಮತ್ತೊಬ್ಬರ ಸಲಹೆಯನ್ನು ಪರಿಶೀಲಿಸುವುದು ಉತ್ತಮ. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.



Click it and Unblock the Notifications
