Latest Updates
-
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ!
Dina Bhavishya: ಈ ಭಾನುವಾರ ಧನಲಾಭ ಯಾರಿಗೆ?
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 30 (30 November Horoscope)ರ ನಿಮ್ಮ ರಾಶಿಫಲ ನೋಡೋಣ
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನವು ಸಮಸ್ಯೆಗಳಿಂದ ತುಂಬಿರಬಹುದು. ನಿಮ್ಮ ಆದಾಯದಲ್ಲಿ ಇಳಿಮುಖ ನೋಡಬಹುದು. ಹಾಗೆ ಕೆಲಸ ಕಾರ್ಯಗಳಿಂದ ವಿಶ್ರಾಂತಿ ಪಡೆಯುವ ಸಾಧ್ಯತೆ ಇದ್ದರೂ ನಿಮ್ಮ ಮನೆಯ ಸಮಸ್ಯೆಗಳ ಕುರಿತಾದ ಚಿಂತೆ ದೊಡ್ಡದಾಗಿ ಕಾಡಬಹುದು. ಮಕ್ಕಳಿಂದ ನಿಮ್ಮ ಚಿಂತೆ ಹೆಚ್ಚಾಗಬಹುದು.
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ದಿನ ಉತ್ತಮವಾಗಿರಲಿದೆ. ಮನೆಯ ವಾತಾವರಣ ಹಿತವಾಗಿರಲಿದೆ. ದಿನದ ಅಂತ್ಯದಲ್ಲಿ ಖರ್ಚು ಹೆಚ್ಚಾಗಲಿದೆ. ನಿಮ್ಮ ಸಂಬಂಧಗಳು ಉತ್ತಮವಾಗುತ್ತವೆ. ಯಾರಿಂದಾದರು ಹಣದ ಬೇಡಿಕೆ ಇಟ್ಟಿದ್ದರೆ ಈ ದಿನ ಈಡೇರಲಿದೆ. ವ್ಯಾಪಾರದಲ್ಲಿ ನಿಧಾನಗತಿ ನೋಡಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರಲ್ಲಿ ಇಂದು ಉತ್ತಮ ದಿನವಾಗಲಿದೆ. ನಿಮ್ಮ ದಾಂಪತ್ಯ ವಿಚಾರದಲ್ಲಿ ಮಧುರ ದಿನ. ಕುಟುಂಬದೊಂದಿಗೆ ಪ್ರಯಾಣ ಮಾಡಬಹುದು. ನಿಮ್ಮ ಹಲವು ಕೆಲಸಗಳು ಯಶಸ್ಸಿನತ್ತ ಸಾಗಲಿದೆ. ಪಾಲುದಾರಿಕೆ ವ್ಯವಹಾರ ಸಂಬಂಧವಾಗಿ ದೊಡ್ಡ ಮಟ್ಟದ ಚರ್ಚೆಯಲ್ಲಿ ತೊಡಗಬಹುದು.
ಕರ್ಕ ರಾಶಿ
ಕರ್ಕ ರಾಶಿ ಜನರು ಇಂದು ಅನುಕೂಲಕರ ದಿನ. ಗೃಹಿಣಿಯರು ಇಂದು ಸವಾಲಿನ ದಿನವಾಗಿ ನೋಡಬಹುದು. ನಿಮ್ಮ ಆರೋಗ್ಯ ವಿಚಾರದಲ್ಲಿನ ಏರುಪೇರು ಹಣಕಾಸಿನ ಚಿಂತೆಗೆ ದಾರಿಯಾಗಬಹುದು. ಮನೆಯಲ್ಲಿ ಶುಭ ಕಾರ್ಯ ಅಥವಾ ಪ್ರಯಾಣ ಸಂಬಂಧವಾಗಿ ಮಾತುಕತೆ ನಡೆಯಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರು ಇಂದು ಉತ್ತಮ ದಿನವಾಗಿ ನೋಡಲಿದ್ದೀರಿ. ನಿಮ್ಮ ಕೆಲಸಗಳಲ್ಲಿ ಶುಭವಾಗುತ್ತಿದೆ. ಅವಿವಾಹಿತರಲ್ಲಿ ಧನಲಾಭದ ದಿನವಾಗುತ್ತಿದೆ, ನಿಮ್ಮ ಭವಿಷ್ಯದ ದೃಷ್ಟಿಯಿಂದ ಇಂದು ಉತ್ತಮ ನಿರ್ಧಾರವೊಂದನ್ನು ತೆಗೆದುಕೊಳ್ಳುವಿರಿ. ಯಾರಿಂದಾದರು ಹಣ ಪಡೆದಿದ್ದರೆ ಇಂದು ಮರಳಿ ನೀಡಬೇಕಾದ ಅನಿವಾರ್ಯಕ್ಕೆ ಸಿಲುಕುವಿರಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಪ್ರಯಾಣದ ದಿನ. ದಿನದ ಆರಂಭದಿಂದ ಅಂತ್ಯದವರೆಗೂ ಪ್ರಯಾಣ ಮಾಡಬಹುದು. ನಿಮ್ಮ ಹಲವು ಕೆಲಸಗಳನ್ನು ಮುಂದೂಡಬೇಕಾಗುತ್ತದೆ. ಆಪ್ತರಿಂದ ನಿಮಗೆ ಯಾವುದಾದರು ವಸ್ತು ಅಥವಾ ಹಣ ಬರುವುದು ಬಾಕಿ ಉಳಿದಿದ್ದರೆ ಇಂದು ನಿಮ್ಮ ಪ್ರಯತ್ನದ ಮೂಲಕ ಅದನ್ನು ಪಡೆಯಬಹುದು.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ದಿನ ಉತ್ತಮ ಫಲಿತಾಂಶ ಬರುವ ದಿನ. ನೀವು ಉಳಿತಾಯ ಅಥವಾ ಹೂಡಿಕೆಯಲ್ಲಿ ಆಸಕ್ತಿ ಹೊಂದಿರಬಹುದು. ಪ್ರೀತಿಯ ವಿಚಾರವಾಗಿ ಇಂದು ಉತ್ತಮ ದಿನ. ಆಪ್ತರೊಬ್ಬರ ಭೇಟಿ ಮಾಡುವಿರಿ, ಹಣಕಾಸಿನ ನೆರವೂ ಸಹ ಪಡೆಯುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ಮಿಶ್ರ ಫಲದ ದಿನ. ಯಾರಿಂದಾದರು ಹಣ ಪಡೆದರೆ ಇಂದು ಮರಳಿ ನೀಡುವಂತೆ ಒತ್ತಡ ಕೇಳಿಬರಬಹುದು. ನಿಮ್ಮ ಹಳೆಯ ಸಂಬಂಧವೊಂದರಲ್ಲಿ ಮನಸ್ತಾಪಗಳಿವೆ. ಪ್ರಯಾಣಗಳಲ್ಲಿ ತೊಡಗುವ ಮಂದಿಗೆ ಇಂದು ಉತ್ತಮ ದಿನವಲ್ಲ.
ಧನು ರಾಶಿ
ಧನು ರಾಶಿ ಜನರಿಗೆ ಈ ದಿನ ಉತ್ತಮವಾಗಿರಲಿದೆ. ನಿಮ್ಮ ಹಲವು ವಿಚಾರಗಳನ್ನು ಇಂದು ಆಪ್ತರೊಬ್ಬರ ಬಳಿ ಹೇಳಿಕೊಳ್ಳುವಿರಿ. ದಿನದ ಅಂತ್ಯದಲ್ಲಿ ಅನಗತ್ಯ ವಿಚಾರವಾಗಿ ಪ್ರಯಾಣ ಹಾಗೂ ಖರ್ಚುಗಳಿವೆ. ದೇವಾಲಯ ಭೇಟಿ ಸಾಧ್ಯತೆ ಇದೆ. ಶುಭ ಕಾರ್ಯ ಸಂಬಂಧಿತ ವಿಚಾರದಲ್ಲಿ ಚರ್ಚೆಗಳು ನಡೆಯಲಿದೆ.
ಮಕರ ರಾಶಿ
ಮಕರ ರಾಶಿ ಜನರಿಗೆ ಈ ಸಮಯವು ಅದೃಷ್ಟ ತರಲಿದೆ. ನಿಮ್ಮ ದೈನಂದಿನ ಕೆಲಸದಿಂದ ಬಿಡುವು ಪಡೆದು ಕುಟುಂಬಸ್ಥರ ಜೊತೆ ಸಮಯ ಕಳೆಯುವಿರಿ. ವಾಹನ ಚಾಲನೆ ವೇಳೆ ಎಚ್ಚರಿಕೆ ಅಗತ್ಯ. ಅಗತ್ಯ ವಸ್ತುವೊಂದನ್ನು ನೀವು ಖರೀದಿಸಬಹುದು. ಆನ್‌ಲೈನ್, ಶಾಪಿಂಗ್ ವಿಚಾರದಲ್ಲಿ ದುಂದು ವೆಚ್ಚ ಉತ್ತಮವಲ್ಲ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಅನಾರೋಗ್ಯ ಕಾಡುವ ದಿನ. ನಿಮ್ಮ ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಗಳು ನಿಮ್ಮ ಕೆಲಸಗಳಲ್ಲಿ ಅಡ್ಡಿ ತರಬಹುದು. ಮನೆಗೆ ಅತಿಥಿಗಳ ಆಗಮನವಾಗಬಹುದು. ಆಹಾರ ಸಂಬಂಧಿತ ವಿಚಾರವಾಗಿ ನಿಮ್ಮಲ್ಲಿ ಖರ್ಚು ಹೆಚ್ಚಾಗಲಿದೆ. ಪ್ರಯಾಣ ಮಾಡುವಾಗ ಎಚ್ಚರ ವಹಿಸುವುದು ಉತ್ತಮ.
ಮೀನ ರಾಶಿ
ಮೀನ ರಾಶಿ ಜನರಲ್ಲಿ ಇಂದು ಉತ್ತಮ ದಿನ. ನಿಮಗಾಗಿ ವಸ್ತುವೊಂದನ್ನು ಖರೀದಿಸಬಹುದು. ಆಪ್ತರೊಂದಿಗೆ ನಿಮ್ಮ ಹಣಕಾಸು ವ್ಯವಹಾರ ದೊಡ್ಡದಾಗಬಹುದು. ಸ್ನೇಹಿತರೊಂದಿಗೆ ನೀವು ಪ್ರಯಾಣ ಮಾಡಬಹುದು. ಉದರ ಸಂಬಂಧಿ ಸಮಸ್ಯೆಗಳಿಗೆ ನೀವಿಂದು ತುತ್ತಾಗುವ ಸಂಭವವಿದೆ.



Click it and Unblock the Notifications