Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಈ ಶನಿವಾರ ಪ್ರಯಾಣಕ್ಕೂ ಮುನ್ನ ಎಚ್ಚರ!
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 29 (29 November Horoscope)ರ ನಿಮ್ಮ ರಾಶಿಫಲ ನೋಡೋಣ
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನ ಶುಭವಾಗಲಿದೆ. ನಿಮ್ಮ ಅನೇಕ ಕೆಲಸಗಳನ್ನು ಗಮನವಿಟ್ಟು ಮಾಡುವುದರಿಂದ ಹಲವು ಅಡ್ಡಿಗಳು ನಿವಾರಣೆಯಾಗಲಿದೆ. ಅನೇಕರಿಗೆ ದೊಡ್ಡ ಸವಾಲುಗಳ ಎದುರಿಸುವಾಗ ಇತರರಿಗೆ ನೋವು ನೀಡಬೇಕಾಗಬಹುದು. ಮಾನಸಿಕ ನೆಮ್ಮದಿ ಹಾಳಾಗಬಹುದು.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನ ದೊಡ್ಡ ಸವಾಲುಗಳಿಂದ ತುಂಬಿದೆ. ನಿಮ್ಮ ಹಣಕಾಸು ವಿಚಾರದಲ್ಲಿ ಅಡ್ಡಿಗಳನ್ನು ಎದುರಿಸಬೇಕಾಗಲಿದೆ. ಆಪ್ತರಿಂದ ಬರುವ ಕರೆಯಿಂದಾಗಿ ನಿಮ್ಮಲ್ಲಿ ಗೊಂದಲ ಅಥವಾ ಚಿಂತೆಯೊಂದು ಮೂಡಬಹುದು. ತಾಯಿ ಆರೋಗ್ಯದ ಕಡೆ ಗಮನವಿಡಿ.

ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನ ಉತ್ತಮವಾಗಿರಲಿದೆ. ನಿಮ್ಮ ಹಲವು ಕೆಲಸಗಳಿಗೆ ಆಪ್ತರಿಂದ ಸಹಕಾರವಿದೆ. ವಾಹನ ಚಾಲನೆ ವೇಳೆ ಎಚ್ಚರ ವಹಿಸಿ. ದಾಂಪತ್ಯದಲ್ಲಿ ಮಧುರ ದಿನ. ಮಕ್ಕಳಿಂದ ನಿಮಗೆ ಶುಭವಾಗಲಿದೆ, ಖರ್ಚುಗಳ ಸಂಬಂಧ ನಿಮ್ಮ ನಿರ್ಧಾರ ಸರಿಯಾಗಿರಲಿ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ದಿನ ಉತ್ತಮವಾಗಿರಲಿದೆ. ನಿಮ್ಮ ದೊಡ್ಡ ಕೆಲಸವೊಂದರ ಸಂಬಂಧ ಚರ್ಚೆಗಾಗಿ ಪ್ರಯಾಣ ಮಾಡಬಹುದು. ಆಹಾರ ಸಂಬಂಧಿತ ವಿಚಾರವಾಗಿ ನಿಮ್ಮ ಆರೋಗ್ಯ ಹದಗೆಡಬಹುದು. ನಿಮ್ಮ ಜವಾಬ್ದಾರಿಗಳ ಕಾರಣದಿಂದಾಗಿ ನಿಮ್ಮ ಚಿಂತೆಗಳು ದೊಡ್ಡದಾಗಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಸಮಸ್ಯೆಗಳಿಂದ ತುಂಬಿದ ದಿನ. ನಿಮ್ಮ ಹಣಕಾಸು ಅಥವಾ ಖರ್ಚುಗಳ ಮೇಲೆ ಹಿಡಿಯ ಇಟ್ಟುಕೊಳ್ಳುವುದು ಉತ್ತಮ. ವಾಹನ ಸಂಬಂಧಿ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಿದೆ. ನಿಮ್ಮಲ್ಲಿ ಉದರ ಸಂಬಂಧಿ ಸಮಸ್ಯೆಗಳು ಬರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರು ಈ ದಿನದ ಅಂತ್ಯದಲ್ಲಿ ಪ್ರಯಾಣ ಮಾಡಬಹುದು. ಮಹಿಳೆಯರು ತಮ್ಮ ಸಂಬಂಧಿಕರೊಂದಿಗೆ ಮನಸ್ತಾಪಗಳ ಮಾಡಿಕೊಳ್ಳಬಹುದು. ದಿನದ ಆರಂಭದಲ್ಲಿ ನಿಮ್ಮ ದೊಡ್ಡ ಚಿಂತೆಯೊಂದು ನಿವಾರಣೆಯಾಗಲಿದೆ. ದೇವಾಲಯ ಭೇಟಿಯ ಅವಕಾಶಗಳಿಂದ ಹಿಂದೆ ಸರಿಯಬೇಡಿ.
ತುಲಾ ರಾಶಿ
ತುಲಾ ರಾಶಿ ಜನರಲ್ಲಿ ಈ ದಿನ ಮಿಶ್ರ ಫಲವಿದೆ. ನಿಮ್ಮ ಹಲವು ಕೆಲಸಗಳನ್ನು ನಿಧಾನವಾಗಿ ಮಾಡಿ ಮುಗಿಸುವಿರಿ. ಸಹೋದರರೊಂದಿಗಿನ ವಿವಾದಗಳು ಬಗೆಹರಿಯಲಿವೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ಅನಿವಾರ್ಯತೆ ಬರಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಲ್ಲಿ ಇಂದು ಪ್ರಯಾಣ ಮಾಡಬೇಕಾದ ದಿನವಾಗುತ್ತಿದೆ. ನಿಮ್ಮ ಹಲವು ಕೆಲಸಗಳನ್ನು ಇತರರೊಂದಿಗೆ ಹಂಚಿಕೊಳ್ಳಬಹುದು. ಗೃಹಿಣಿಯರಲ್ಲಿ ಇಂದು ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇರಲಿದೆ. ನಿಮ್ಮ ಹಣಕಾಸು ವಿಚಾರವಾಗಿ ದೊಡ್ಡ ವ್ಯವಹಾರಕ್ಕೆ ಮುಂದಾಗಬಹುದು.
ಧನು ರಾಶಿ
ಧನು ರಾಶಿಯವರು ಇಂದು ಪ್ರಯಾಣ ಮಾಡವೇಕಾಗಲಿದೆ, ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿಗಳು ಬರಬಹುದು. ಅದ್ರಲ್ಲೂ ಮುಖ್ಯವಾಗಿ ಹಣಕಾಸು ಸಂಬಂಧಿತ ವಿಚಾರದಲ್ಲಿ ಅಡೆತಡೆ ನೋಡಬಹುದು. ಯಾರಿಗೂ ಸಾಲ ನೀಡುವ ಆಲೋಚನೆಯಲ್ಲಿದ್ದರೆ ಆಲೋಚಿಸುವುದು ಉತ್ತಮ. ತಂದೆಯ ಆರೋಗ್ಯದಲ್ಲಿ ಏರುಪೇರು ಸಂಭವ.
ಮಕರ ರಾಶಿ
ಮಕರ ರಾಶಿ ಜನರು ಇಂದು ದೊಡ್ಡ ಕೆಲಸಗಳಲ್ಲಿ ಭಾಗಿಯಾಗಬಹುದು. ಆಸ್ಪತ್ರೆ ಸಂಬಂಧಿತ ಖರ್ಚುಗಳು ಹೆಚ್ಚಾಗಬಹುದು. ಯಾರಿಗೂ ಹಣ ನೀಡುವ ಮುನ್ನ ಆಲೋಚಿಸಿ. ಗೃಹಿಣಿಯರಿಗೆ ಧನಲಾಭವ ದಿನ ಎನ್ನಬಹುದು.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ತುಂಬಾ ಅನುಕೂಲಕರ ದಿನವಾಗಲಿದೆ. ನಿಮ್ಮ ಆಪ್ತರೊಂದಿಗೆ ಇಂದು ಸಮಯ ಕಳೆಯುವಿರಿ. ಸಂಜೆಯ ಸಮಯದಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಅನೇಕರ ಜೊತೆಗೆ ನಿಮ್ಮ ಮಾತುಗಳ ಮೇಲೆ ಹಿಡಿತ ಇಟ್ಟುಕೊಳ್ಳಬೇಕಾಗಲಿದೆ.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಪ್ರಯಾಣಗಳಲ್ಲಿ ತೊಡಗುವ ದಿನ. ನಿಮ್ಮ ಕೆಲಸಗಳನ್ನು ಇಂದು ಅರ್ಧಕ್ಕೆ ನಿಲ್ಲಿಸಬೇಕಾಗಬಹುದು, ಉದ್ಯೋಗದ ಸ್ಥಳದಲ್ಲಿ ನೀವು ಒತ್ತಡ ಎದುರಿಸಬಹುದು. ದಿನದ ಅಂತ್ಯದಲ್ಲಿ ನೀವು ಪ್ರಯಾಣಗಳಲ್ಲಿ ತೊಡಗುವುದಾದರೆ ನಿಮ್ಮ ವಸ್ತುಗಳ ಕುರಿತಾಗಿ ಎಚ್ಚರಿಕೆ ವಹಿಸಿ.



Click it and Unblock the Notifications










