Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
Dina Bhavishya: ಈ ಶುಕ್ರವಾರ ಸಾಲ ನೀಡುವ ಮುನ್ನ ಎಚ್ಚರ!
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಶುಕ್ರವಾರವು ಬಹಳ ಅನುಕೂಲಕರ ದಿನಗಳ ತರಲಿದೆ. ನಿಮ್ಮ ಹಲವು ವಿಚಾರಗಲ್ಲಿ ಶುಭ ಸಮಯವನ್ನು ನೋಡಬಹುದು, ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣವನ್ನು ಪಡೆಯಬಹುದು. ಯಾರಿಂದಾದರು ಉದ್ಯೋಗ ಬಯಸಿ ನೀವು ಭೇಟಿಯಾಗಿದ್ದರೆ ಅದರಿಂದಲ ಉತ್ತಮ ಫಲಿತಾಂಶ ಪಡೆಯಲಿದ್ದೀರಿ.
ವೃಷಭ ರಾಶಿ
ವೃಷಭ ರಾಶಿ ಜನರು ಇಂದು ಮಿಶ್ರ ಫಲ ಅನುಭವಿಸಲಿದ್ದಾರೆ. ನಿಮ್ಮ ಹಲವು ಪ್ರಯತ್ನಗಳಲ್ಲಿ ವಿಫಲತೆ ನೋಡುವಿರಿ. ಗೃಹಿಣಿಯರ ಕೆಲಸಗಳು ಎಂದಿನಂತೆ ಸಾಗಲಿದೆ. ಸ್ವಂತ ಉದ್ಯೋಗ ಮಾಡುವ ಮಂದಿಗೆ ಈ ದಿನ ಅನುಕೂಲವಾಗಿರಲಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರು ಇಂದು ಪ್ರಯಾಣ ಮಾಡುವಿರಿ. ನಿಮ್ಮ ಹಲವು ಕೆಲಸಗಳನ್ನು ಬಹುಬೇಗ ಮುಗಿಸುವಿರಿ. ನಿಮ್ಮಿಂದಾಗಿ ದೊಡ್ಡ ಕೆಲಸವೊಂದು ಅರ್ಧಕ್ಕೆ ನಿಲ್ಲಬಹುದು, ಹಾಗೆ ಅದನ್ನು ಪೂರ್ಣ ಮಾಡುವ ಜವಾಬ್ದಾರಿ ಪಡೆಯಲಿದ್ದೀರಿ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಮನೆಯಲ್ಲಿ ಅಶಾಂತಿಯ ದಿನವಾಗಬಹುದು. ನಿಮ್ಮ ಹಣಕಾಸು ಸಂಬಂಧಿತ ವಿಚಾರವಾಗಿ ದೊಡ್ಡ ಮಟ್ಟದ ಚರ್ಚೆಗಳು ಅಥವಾ ಮಾತುಕತೆಯಲ್ಲಿ ಮನಸ್ತಾಪಗಳು ಮೂಡಬಹುದು. ಕೃಷಿ ಸಂಬಂಧಿತ ವಿಚಾರಗಳಲ್ಲಿ ಶುಭವಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ದಿನ ಅಚ್ಚರಿ ಫಲಿತಾಂಶಗಳು ಬರುವ ದಿನವಾಗುತ್ತದೆ. ನಿಮ್ಮ ಕೆಲಸಗಳನ್ನು ಏಕಾಗೃತೆಯಿಂದ ಮಾಡಿ ಮುಗಿಸಿ. ಶುಭ ಕಾರ್ಯ ಸಂಬಂಧವಾಗಿ ನೀವು ಆಲೋಚಿಸಬಹುದು. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಲ್ಲಿ ದಿಢೀರ್ ಪ್ರಯಾಣ ಮಾಡಬೇಕಾಗಿ ಬರಬಹುದು. ಗೃಹಿಣಿಯರು ಅಥವಾ ಯುವತಿಯರು ಇಂದು ವಾಹನ ವಿಚಾರವಾಗಿ ಎಚ್ಚರಿಕೆಯಿಂದ ಇರಬೇಕಿದೆ. ಬಹುದಿನದಿಂದ ಅರ್ಧಕ್ಕೆ ಬಿಟ್ಟು ಕೆಲಸವನ್ನು ಪೂರ್ಣ ಮಾಡುವಿರಿ.
ತುಲಾ ರಾಶಿ
ತುಲಾ ರಾಶಿಯವರಲ್ಲಿ ಈ ದಿನವು ಸುಖ ಅನುಭವಿಸುವ ದಿನ ಎನ್ನಬಹುದು. ನಿಮ್ಮ ಎಲ್ಲಾ ಕೆಲಸಗಳನ್ನು ನೀವು ಅಂದುಕೊಂಡ ರೀತಿಯಲ್ಲಿ ಮುಗಿಸುವಿರಿ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವಿರಿ. ಮನೆಗಾಗಿ ನೀವು ಅಗತ್ಯ ವಸ್ತುವೊಂದನ್ನು ಖರೀದಿಸಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ಮೂರನೇ ವ್ಯಕ್ತಿಯಿಂದ ಸಮಸ್ಯೆ ಅಥವಾ ಖರ್ಚುಗಳು ಬರಬಹುದು. ನಿಮ್ಮ ಮನೆಯಲ್ಲಿನ ಆರ್ಥಿಕ ಸಮಸ್ಯೆಯೊಂದನ್ನು ಬಗೆಹರಿಸಿಕೊಳ್ಳುವಿರಿ. ಯಾರಿಗೂ ಹಣ ನೀಡುವ ಕಾರ್ಯಕ್ಕೆ ಮುಂದಾಗಬೇಡಿ.
ಧನು ರಾಶಿ
ಧನು ರಾಶಿಯವರು ಈ ದಿನ ಪ್ರಯಾಣದಲ್ಲಿ ತೊಡಗಬಹುದು. ನಿಮ್ಮ ಹಳೆಯ ಕೆಲಸಗಳನ್ನು ಪೂರ್ಣ ಮಾಡುವಿರಿ. ದುರಸ್ತಿಯಾದ ಯಾವುದಾದರು ವಸ್ತುವನ್ನು ರಿಪೇರಿ ಮಾಡಿಸಬಹುದು. ದೇವಾಲಯ ಭೇಟಿಯ ಸಾಧ್ಯತೆ ಇದೆ. ಸ್ವಂತ ಉದ್ಯಮದಲ್ಲಿ ಇಂದು ಲಾಭ ನೋಡುವ ಸಮಯ.
ಮಕರ ರಾಶಿ
ಮಕರ ರಾಶಿಯವರಲ್ಲಿ ಈ ದಿನ ದೊಡ್ಡ ಒಪ್ಪಂದಗಳ ಕುರಿತಾದ ಮಾತುಕತೆ ನಡೆಯಲಿದೆ. ಆಸ್ತಿ, ಮನೆ ವಿಚಾರದಲ್ಲಿ ನಿಮ್ಮ ಆಲೋಚನೆಗಳು ಬದಲಾಗಬಹುದು. ದಾಂಪತ್ಯ ವಿಚಾರದಲ್ಲಿನ ಮನಸ್ತಾನ ನಿವಾರಣೆಗೆ ಮುಂದಾಗುವುದು ಉತ್ತಮ.
ಕುಂಭ ರಾಶಿ
ಕುಂಭ ರಾಶಿ ಜನರು ಆರ್ಥಿಕವಾಗಿ ಇಂದು ಚಿಂತೆ ಅನುಭವಿಸಬಹುದು. ನೀವು ಬಯಸಿದ್ದ ಕೆಲಸವೊಂದಕ್ಕೆ ಹಣ ಬೇಕಾಗುತ್ತದೆ. ಮಕ್ಕಳ ಕುರಿತಾದ ಚಿಂತೆ ದೊಡ್ಡದಾಗಬಹುದು. ಆರೋಗ್ಯದಲ್ಲಿನ ಏರುಪೇರು ಇಡೀ ದಿನ ನಿಮಗೆ ಕಾಡಬಹುದು.
ಮೀನ ರಾಶಿ
ಮೀನ ರಾಶಿ ಜನರು ಇಂದು ಪ್ರಯಾಣಗಳಲ್ಲಿ ತೊಡಗಬೇಕಾಗುತ್ತದೆ. ಹಣ ಮರುಪಾವತಿಗೆ ನಿಮಗೆ ಒತ್ತಡ ಬರಬಹುದು. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ಮುನ್ನ ಆಲೋಚಿಸುವುದು ಉತ್ತಮ. ಸಾಲ ನೀಡುವ ಮುನ್ನ ಮತ್ತೊಮ್ಮೆ ಆಲೋಚಿಸಿ.



Click it and Unblock the Notifications











