Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಈ ಗುರುವಾರ ಯಾರಿಗೆಲ್ಲಾ ಶುಭವಾರ?
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 27 (27 November Horoscope)ರ ನಿಮ್ಮ ರಾಶಿಫಲ ನೋಡೋಣ
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಮಿಶ್ರಫಲದ ದಿನ. ಗೃಹಿಣಿಯರ ಕೆಲಸಗಳಲ್ಲಿ ಅಡ್ಡಿಗಳು ಬರಬಹುದು. ನಿಮ್ಮ ಹಲವು ಆರ್ಥಿಕ ವಿಚಾರಗಳಲ್ಲಿ ನಿಮ್ಮ ಹಸ್ತಕ್ಷೇಪದಿಂದ ಸಮಸ್ಯೆಗಳು ಬರಲಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾಗಿ ಬರಲಿದೆ.
ವೃಷಭ ರಾಶಿ
ವೃಷಭ ರಾಶಿ ಜನರಲ್ಲಿ ನಿಮ್ಮ ಹಲವು ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸುವ ದಿನ. ದಾಂಪತ್ಯದಲ್ಲಿ ತಾಳ್ಮೆ ಕಳೆದುಕೊಂಡು ಯಾವುದೇ ಗಲಾಟೆಗಳು, ಚರ್ಚೆಗಳಲ್ಲಿ ತೊಡಗಬೇಡಿ. ಸರ್ಕಾರಿ ಕೆಲಸಗಳು, ದಾಖಲೆಗಳ ವಿಚಾರದಲ್ಲಿ ಇಂದು ಪ್ರಯಾಣ ಮಾಡಬೇಕಾಗುತ್ತದೆ.

ಮಿಥುನ ರಾಶಿ
ಮಿಥುನ ರಾಶಿ ಜನರು ಇಂದು ಪ್ರಯಾಣ ಮಾಡುವ ದಿನ. ಗೃಹಿಣಿಯರಲ್ಲಿ ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಗಳನ್ನು ನೋಡಬಹುದು. ಆಪ್ತರಿಂದ ನಿಮಗೆ ಬರಬೇಕಿದ್ದ ಹಣಕಾಸು ಸಂಬಂಧಿತ ವಿಚಾರದಲ್ಲಿ ಮಾತುಕತೆ ನಡೆಯಲಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರು ಇಂದು ಉತ್ತಮ ದಿನವನ್ನಾಗಿ ನೋಡಬಹುದು. ನಿಮ್ಮ ಹಲವು ಕಷ್ಟಗಳನ್ನು ಇಂದು ಬೇರೆಯವರೊಂದಿಗೆ ಹಂಚಿಕೊಳ್ಳಲಿದ್ದೀರಿ. ನಿಮ್ಮ ಹಲವು ಕೆಲಸಗಳಲ್ಲಿ ಪ್ರಾಮಾಣಿಕ ಪ್ರಯತ್ನವು ನಿಮಗೆ ಉತ್ತಮ ಪ್ರತಿಫಲ ತರಲಿದೆ. ವ್ಯಾಪಾರಿಗಳಿಗೆ ಉತ್ತಮ ದಿನ.
ಸಿಂಹ ರಾಶಿ
ಸಿಂಹ ರಾಶಿ ಜನರು ಇಂದು ಅನುಕೂಲವಿದೆ. ನಿಮ್ಮ ಹಣಕಾಸು ಸಂಬಂಧಿತ ವಿಚಾರದಲ್ಲಿ ನಿರಾಳರಾಗುವ ಸಮಯ. ಉದ್ಯೋಗ ಸಂಬಂಧಿ ಕೆಲಸಗಳಿಂದ ನೀವು ಮುಕ್ತರಾಗಬಹುದು. ಯಾರಿಗೂ ಸಾಲ ನೀಡಲು ಮುಂದಾಗಬೇಡಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಲ್ಲಿ ಇಂದು ಮಿಶ್ರಫಲ. ನಿಮ್ಮ ಕೆಲಸದ ಒತ್ತಡವನ್ನು ಮನೆಯ ಸದಸ್ಯರ ಮೇಲೆ ತೋರಿಸುವುದು ಸೂಕ್ತವಲ್ಲ. ದೇವಾಲಯ ಭೇಟಿಯ ಸಾಧ್ಯತೆ ಇದೆ. ಪ್ರಯಾಣದಲ್ಲಿ ನೀವು ಅಂದುಕೊಂಡಂತಹ ಪ್ರತಿಫಲ ಸಿಗದೆ ಇರಬಹುದು.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ದಿನ ಪ್ರಯಾಣ ಮಾಡಬೇಕಾಗುತ್ತದೆ. ಆಪ್ತರಿಂದ ಬರಬೇಕಿದ್ದ ಹಣಕಾಸಿನ ವಿಚಾರದಲ್ಲಿ ಯಾರೊಂದಿಗಾದರು ಮನಸ್ತಾಒಗಳು ಬರಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಶುಭವಿದೆ. ಮನೆಯಲ್ಲಿ ಶಾಂತಿ ಇರಲಿದೆ. ವಾಹನ ಸಂಬಂಧ ಎಚ್ಚರಿಕೆಯಿಂದ ಇರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ಮಿಶ್ರಫಲವಿದೆ. ನಿಮ್ಮ ಹಲವು ಕೆಲಸಗಳನ್ನು ಇಂದು ಒಂಟಿಯಾಗಿ ಎದುರಿಸುವಿರಿ, ಉದ್ಯೋಗ ಸಂಬಂಧಿತ ವಿಚಾರದಲ್ಲಿ ನಿಮ್ಮ ಶ್ರಮ ವ್ಯರ್ಥವಾಗಬಹುದು. ಆಹಾರ ಸಂಬಂಧಿತ ಖರ್ಚುಗಳು ಹೆಚ್ಚಾಗಲಿದೆ.
ಧನು ರಾಶಿ
ಧನು ರಾಶಿ ಜನರಲ್ಲಿ ಇಂದು ಪ್ರಯಾಣ ಮಾಡಬೇಕಾದ ದಿನವಾಗಿರಲಿದೆ. ಇಂದು ನಿಮ್ಮ ಹಲವು ಕೆಲಸಗಳನ್ನು ಒಂದೇ ಬಾರಿಗೆ ಮುಗಿಸಬೇಕಾಗಬಹುದು. ಯಾರಿಗೂ ಹಣ ನೀಡಲು ಮುಂದಾಗಬೇಡಿ. ಬ್ಯಾಂಕಿಂಗ್ ವಿಚಾರದಲ್ಲಿ ನಿಮಗೆ ಅಡ್ಡಿಗಳು ಎದುರಾಗಬಹುದು.
ಮಕರ ರಾಶಿ
ಮಕರ ರಾಶಿಯವರು ಸಮಸ್ಯೆಗಳ ನೋಡಬಹುದು. ನಿಮ್ಮ ಮನೆಯಲ್ಲಿದ್ದ ಹಣಕಾಸು ಸಮಸ್ಯೆಯೊಂದು ದೊಡ್ಡದಾಗಹುದು. ದಾಂಪತತ್ಯ ವಿಚಾರ ಸಂಬಂಧವಾಗಿ ಎಚ್ಚರದ ನಿರ್ಧಾರ ತೆಗೆದುಕೊಳ್ಳಿ. ವ್ಯವಹಾರ, ಹಣಕಾಸಿನ ವಿಚಾರದಲ್ಲಿ ದುಡುಕಿನ ನಿರ್ಧಾರಕ್ಕೆ ಮುಂದಾಗಬೇಡಿ.
ಕುಂಭ ರಾಶಿ
ಕುಂಭ ರಾಶಿ ಜನರಲ್ಲಿ ಈ ದಿನವು ಬಹಳ ಅನುಕೂಲ ತರಲಿದೆ, ನಿಮ್ಮ ವೈವಾಹಿಕ ಜೀವನದಲ್ಲಿ ಶುಭವಿದೆ. ಮಕ್ಕಳ ಕುರಿತಾದ ವಿಚಾರವೊಂದರಿಂದ ನಿಮಗೆ ಶುಭವಾಗಲಿದೆ. ಪಾಲುದಾರಿಕೆಯಲ್ಲಿ ಲಾಭವಿದೆ. ಮನೆಗಾಗಿ ನೀವು ಖರ್ಚು ಮಾಡುವಿರಿ.
ಮೀನ ರಾಶಿ
ಮೀನ ರಾಶಿ ಜನರು ಇಂದು ಪ್ರಯಾಣಗಳಲ್ಲಿ ತೊಡಗುವಿರಿ. ಯಾರಿಂದಾದರು ಹಣದ ಬೇಡಿಕೆ ಇಟ್ಟಿದ್ದರೆ ಪ್ರಯತ್ನ ಮುಂದುವರೆಸಿ. ನಿಮ್ಮ ವಾಹನ ಸಂಬಂಧಿ ವಿಚಾರದಲ್ಲಿ ಚಿಂತೆ ಇದೆ. ವಿದ್ಯಾರ್ಥಿಗಳು ಯಾವುದಾದರು ಸಂಕಷ್ಟದಲ್ಲಿ ಸಿಲುಕಬಹುದು.



Click it and Unblock the Notifications