Dina Bhavishya: ಯಾರಿಗೆಲ್ಲಾ ಇಂದು ಧನಲಾಭದ ದಿನ?

ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 26 (26 November Horoscope)ರ ನಿಮ್ಮ ರಾಶಿಫಲ ನೋಡೋಣ

ಮೇಷ ರಾಶಿ

ಮೇಷ ರಾಶಿ ಜನರಿಗೆ ಇಂದು ಬಹಳ ಅನುಕೂಲಕದ ದಿನವಾಗಲಿದೆ. ನಿಮ್ಮ ಆಪ್ತರಿಂದ ಹಣ ಪಡೆಯುವ ಅವಕಾಶ ಬರಲಿದೆ, ನಿಮ್ಮ ಹಲವು ಕೆಲಸಗಳಲ್ಲಿ ಅಚ್ಚರಿಯ ಫಲಿತಾಂಶ ಸಹ ಪಡೆಯಬಹುದು. ಯಾರಿಂದಿಗೂ ಅನಗತ್ಯ ಮಾತುಕತೆಗಳಲ್ಲಿ ತೊಡಗಬೇಡಿ.

ವೃಷಭ ರಾಶಿ

ವೃಷಭ ರಾಶಿ ಜನರಲ್ಲಿ ಇಂದು ದೊಡ್ಡ ಲಾಭದ ದಿನ. ನಿಮ್ಮ ಹಣಕಾಸು ವಿಚಾರದಲ್ಲಿ ಶುಭವಾಗುತ್ತಿದೆ. ಆಪ್ತರಿಂದಾಗಿ ನಿಮ್ಮ ಸಮಸ್ಯೆಯೊಂದು ದೊಡ್ಡದಾಗುವ ಲಕ್ಷಣಗಳಿವೆ. ಪ್ರಾಮಾಣಿಕ ಕೆಲಸಗಳು ನಿಮಗೆ ಶುಭ ತರಲಿದೆ.

Dina Bhavishya November 26 Today s Daily Horoscope for 12 Zodiac Signs

ಮಿಥುನ ರಾಶಿ

ಮಿಥುನ ರಾಶಿ ಜನರಿಗೆ ಇಂದು ಸವಾಲುಗಳಿಂದ ತುಂಬಿದ ದಿನವಾಗಲಿದೆ. ಪ್ರೀತಿ ಪಾತ್ರರಿಂದ ನೀವು ಉಡುಗೊರೆ ಅಥವಾ ಪ್ರಮುಖ ವಸ್ತುವೊಂದನ್ನು ಪಡೆಯಬಹುದು. ಸವಾಲುಗಳಿಂದ ತುಂಬಿದ ದಿನವಾಗುವಿದರಿಂದ ಚಿಂತೆ ಅಥವಾ ಒತ್ತಡ ಕಾಡಬಹುದು.

ಕರ್ಕ ರಾಶಿ

ಕರ್ಕ ರಾಶಿ ಜನರಿಗೆ ಇಂದು ಉತ್ತಮ ಪ್ರತಿಫಲ ಅನುಭವಿಸುವ ದಿನವಾಗಲಿದೆ. ಯಾರಿಗೂ ಹಣಕಾಸಿನ ಸಹಾಯಕ್ಕೆ ಮುಂದಾಗದೆ ಇರುವುದು ಉತ್ತಮ. ನಿಮ್ಮದಲ್ಲದ ಕೆಲಸಕ್ಕೆ ನೀವು ಪ್ರಯಾಣ ಮಾಡಬೇಕಾಗುತ್ತದೆ. ನಿಮ್ಮ ಸಮಸ್ಯೆಗಳನ್ನು ಕುಟುಂಬದಲ್ಲಿ ಹಂಚಿಕೊಳ್ಳುವುದು ಉತ್ತಮ.

ಸಿಂಹ ರಾಶಿ

ಸಿಂಹ ರಾಶಿ ಜನರಲ್ಲಿ ಇಂದು ಪ್ರಯಾಣ ಮಾಡಬೇಕಾದ ದಿನ. ನಿಮ್ಮ ಹಲವು ವಿಚಾರದಲ್ಲಿ ಲಾಭವಿದೆ. ಬಹುದಿನದ ಹಣಕಾಸಿನ ಸಮಸ್ಯೆಯೊಂದು ಮತ್ತೆ ಚಿಂತೆಗೆ ದೂಡಬಹುದು. ದಿನದ ಆರಂಭದಲ್ಲಿದ್ದ ಆತಂಕ ದಿನದ ಅಂತ್ಯದಲ್ಲಿ ಕೊನೆಯಾಗಬಹುದು.

ಕನ್ಯಾ ರಾಶಿ

ಕನ್ಯಾ ರಾಶಿ ಜನರಲ್ಲಿ ಇಂದು ಪ್ರಯಾಣ ಮಾಡಬೇಕಾದ ದಿನವಾಗುತ್ತದೆ. ಗೃಹಿಣಿಯರು ಇಂದು ಯಾರಿಂದಾದರು ಹಣ ಪಡೆಯುವ ಬಯಕೆಯನ್ನು ಈಡೇರಿಸಿಕೊಳ್ಳಬಹುದು. ವಾಹನ ವಿಚಾರದಲ್ಲಿ ಖರ್ಚುಗಳು ಬರಬಹುದು.

ತುಲಾ ರಾಶಿ

ತುಲಾ ರಾಶಿ ಜನರು ಇಂದು ಉತ್ತಮ ಕೆಲಸಗಳ ಮಾಡುವರು. ನೀವು ನಿರುದ್ಯೋಗಿಗಳಾಗಿದ್ದರೆ ಇಂದು ಆಪ್ತರೊಬ್ಬರ ಸಹಕಾರದಿಂದ ಉತ್ತಮ ಅವಕಾಶಗಳ ಪಡೆಯಬಹುದು. ನಿಮ್ಮ ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ಸಂಬಂಧಗಳು ಗಟ್ಟಿಯಾಗಲಿವೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಜನರು ಇಂದು ಉತ್ತಮ ಪ್ರತಿಫಲ ನೋಡಬಹುದು. ನಿಮ್ಮ ಹಲವು ಕೆಲಸಗಳಲ್ಲಿ ಶುಭವಾಗುತ್ತದೆ. ವ್ಯಾಪಾರ ವಲಯದಲ್ಲಿ ಲಾಭ ನೋಡುವ ದಿನ. ನಿಮ್ಮ ಸ್ವಂತ ಉದ್ಯೋಗಗಳಲ್ಲಿ ಇಂದು ಮಿಶ್ರ ಫಲವಿದೆ. ಅಗತ್ಯ ಕೆಲಸವೊಂದಕ್ಕೆ ಹಣಕಾಸು ಒಟ್ಟುಗೂಡಿಸಬೇಕಾಗುತ್ತದೆ.

ಧನು ರಾಶಿ

ಧನು ರಾಶಿ ಜನರಿಗೆ ಈ ಸಮಯ ಬಹಳ ಲಾಭಕರ. ಹಲವು ಕೆಲಸಗಳನ್ನು ನೀವು ಅಂದುಕೊಂಡಂತೆ ಮುಗಿಸುವಿರಿ. ನಿಮಗಾಗಿ ಐಷಾರಾಮಿ ವಸ್ತು ಖರೀದಿಗೆ ಆಲೋಚಿಸಬಹುದು. ನಿಮ್ಮಿಂದ ಇತರರಿಗೆ ಇಂದು ಸಹಾಯವಾಗುವ ದಿನ.

ಮಕರ ರಾಶಿ

ಮಕರ ರಾಶಿಯವರಿಗೆ ಮಿಶ್ರಫಲ. ಗೃಹಿಣಿಯರ ಆರೋಗ್ಯದಲ್ಲಿನ ಏರುಪೇರು ಅವರ ಕೆಲಸ ಕಾರ್ಯಗಳಲ್ಲಿ ಅಡ್ಡಿ ತರಲಿದೆ. ಮನೆಯಲ್ಲಿನ ಹಿರಿಯರೊಬ್ಬರು ಮಾತನ್ನು ನಿರ್ಲಕ್ಷಿಸುವುದು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. ತಾಳ್ಮೆಯಿಂದ ಎಲ್ಲಾ ಕೆಲಸದಲ್ಲಿ ಭಾಗಿಯಾಗಿ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಈ ದಿನವು ಬಹಳಷ್ಟು ಶ್ರಮದಾಯಕವಾಗಲಿದೆ. ನಿಮ್ಮ ಕೆಲಸಗಳನ್ನು ಮತ್ತೆ ಮುಂದೂಡುತ್ತೀರಿ. ಅವಿವಾಹಿತರಲ್ಲಿ ಹಣಕಾಸಿನ ಸಮಸ್ಯೆಗಳ ನೋಡಬಹುದು. ವ್ಯಾಪಾರದಲ್ಲಿನ ಲಾಭವನ್ನು ಬೇರೆ ಕೆಲಸಕ್ಕೆ ಬಳಸಬೇಕಾಗುತ್ತದೆ.

ಮೀನ ರಾಶಿ

ಮೀನ ರಾಶಿ ಜನರಲ್ಲಿ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಇಂದು ಧನಾತ್ಮಕ ಬದಲಾವಣೆಗಳ ನೋಡುವಿರಿ. ಯಾರಿಂದಾದರು ಹಣ ಪಡೆಯುವ ನಿಮ್ಮ ಆಸೆ ಈಡೇರಬಹುದು. ಪ್ರೀತಿ ಪ್ರೇಮದ ವಿಚಾರದಲ್ಲಿ ಇಂದು ಮಧುರಾದ ದಿನವಾಗುತ್ತಿದೆ.

English summary

Dina Bhavishya November 26: Today’s (Daily) Horoscope for 12 Zodiac Signs

daily horoscope for November 26 astrology predictions for all 12 zodiac signs including career, health, love, and money Boldsky kannada
Story first published: Wednesday, November 26, 2025, 5:00 [IST]
X
Desktop Bottom Promotion