Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಗಜಕೇಸರಿ ಯೋಗದ ದಿನ ನಿಮ್ಮ ರಾಶಿಫಲ
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 25 (25 November Horoscope)ರ ನಿಮ್ಮ ರಾಶಿಫಲ ನೋಡೋಣ
ಮೇಷ ರಾಶಿ
ಮೇಷ ರಾಸಿ ಜನರಿಗೆ ಇಂದು ಸಮಸ್ಯೆಗಳಿಂದ ತುಂಬಿರಬಹುದು. ನಿಮ್ಮ ಹಲವು ಕೆಲಸಗಳಲ್ಲಿ ಇಂದು ಹಣಕಾಸಿನ ಅಡಚಣೆಗಳು ಇರಲಿದೆ. ನಿಮ್ಮ ಅನಾರೋಗ್ಯ ಸಂಬಂಧಿತ ವಿಚಾರವಾಗಿ ಇಂದು ಖರ್ಚುಗಳು ಹೆಚ್ಚಾಗುತ್ತವೆ. ಆಪ್ತರಿಂದ ಬರಬೇಕಿದ್ದ ಹಣ ಮತ್ತೆ ಮುಂದೂಡಬಹುದು.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಸವಾಲುಗಳಿಂದ ತುಂಬಿದ ದಿನವಾಗಿರಲಿದೆ. ನಿಮ್ಮ ಹಲವು ಕೆಲಸಗಳನ್ನು ಅರ್ಧಕ್ಕೆ ಬಿಡಬಹುದು. ಯಾರಿಗಾದರು ಹಣ ನೀಡುವ ನಿಮ್ಮ ಇಚ್ಛೆ ಈಡೇರಲಿದೆ. ಸಂಬಂಧಗಳು ಗಟ್ಟಿಯಾಗಲಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರು ಇಂದು ಪ್ರಭಾವಶಾಲಿ ದಿನವನ್ನಾಗಿ ನೋಡಬಹುದು. ಮನೆ ಸದಸ್ಯರ ಪರವಾಗಿ ನೀವು ಖರ್ಚು ಮಾಡುತ್ತೀರಿ. ಯಾರಿಗೂ ಇಂದು ಕೆಲಸ ಸಂಬಂಧಿತ ಮಾತು ನೀಡಲು ಮುಂದಾಗಬೇಡಿ. ಪ್ರಯಾಣ ಮಾಡಬೇಕಾಗಿ ಬರಲಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರು ಇಂದು ಪ್ರಯಾಣದಲ್ಲಿ ತೊಡಗುವಿರಿ. ನಿಮ್ಮ ಆದಾಯ ಹೆಚ್ಚಳದ ಕಾರಣ ನೆಮ್ಮದಿ ನೋಡಲಿದ್ದೀರಿ. ಕೃಷಿ ಸಂಬಂಧಿತ ವಿಚಾರದಲ್ಲಿ ಶುಭವಿದೆ. ಯಾರಿಂದಾದರು ಹಣ ಪಡೆಯಬಹುದು. ವಾಹನ ಸಂಬಂಧಿತ ವಿಚಾರದಲ್ಲಿ ನೆಮ್ಮದಿ ಇದೆ.
ಸಿಂಹ ರಾಶಿ
ಸಿಂಹ ರಾಶಿಗೆ ಇಂದು ಅನುಕೂಲಕರ ದಿನ. ಈ ಸಮಯದಲ್ಲಿ ನಿಮ್ಮ ಹಲವು ಕೆಲಸಗಳು ಅಡ್ಡಿಗಳಿಂದ ತುಂಬಿರಬಹುದು. ಕೌಟುಂಬಿಕ ಸಮಸ್ಯೆಗಳು ದೊಡ್ಡದಾಗಬಹುದು. ಪ್ರೀತಿ ಪ್ರೇಮದ ವಿಚಾರದಲ್ಲಿಯೂ ಮನಸ್ತಾಪಗಳಿವೆ. ಮಾತುಗಳ ಆಡುವ ಮುನ್ನ ತಾಳ್ಮೆ ಇರಲಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಒತ್ತಡದಿಂದ ತುಂಬಿರುವ ದಿನ. ಗೃಹಿಣಿಯರು ಹೊಸ ವಸ್ತು ಖರೀಸುವ ದಿನವಾಗಿರಲಿದೆ. ನಿಮ್ಮಿಂದಾಗಿ ಹೊಸ ವಿಚಾರಗಳು ಆರಂಭವಾಗಬಹುದು. ವಾಹನ ಲಾಭವಿದೆ, ವ್ಯಾಪಾರಿಗಳಿಗೆ ಆದಾಯದಲ್ಲಿ ಹೆಚ್ಚಳವಾಗುವುದು ಖಚಿತ.
ತುಲಾ ರಾಶಿ
ತುಲಾ ರಾಶಿ ಜನರಲ್ಲಿ ಇಂದು ಮಿಶ್ರಫಲದ ದಿನ. ನಿಮ್ಮ ಅನೇಕ ಕೆಲಸಗಳನ್ನು ಅಡ್ಡಿಗಳಿಲ್ಲದೆ ಮುಗಿಸುವಿರಿ. ಆದ್ರೆ ದಾಂಪತ್ಯ ವಿಚಾರದಲ್ಲಿ ನಿಮ್ಮ ನಿರ್ಲಕ್ಷ್ಯವು ದೊಡ್ಡ ಬೆಲೆ ತೆರುವಂತೆ ಮಾಡಬಹುದು. ಸ್ನೇಹಿತರಿಂದ ನಿಮಗೆ ಹಣಕಾಸು ಸಂಬಂಧಿತ ಕರೆಗಳಿವೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರು ಇಂದು ಓಡಾಟಗಳಲ್ಲಿ ತೊಡಗುವ ದಿನ. ನಿಮ್ಮ ಸರ್ಕಾರಿ ದಾಖಲಾತಿಗಳ ವಿಚಾರವಾಗಿ ಹಾಗೆ ಕೆಲಸದ ವಿಚಾರವಾಗಿ ಪ್ರಯಾಣಗಳು ಇರಲಿವೆ. ನಿಮ್ಮ ಮನೆಯಲ್ಲಿದ್ದ ಆಂತರಿಕ ವಿಚಾರದ ಸಮಸ್ಯೆ ನಿವಾರಣೆಯಾಗಲಿದೆ. ದೇವಾಲಯ ಭೇಟಿಯ ಸಾಧ್ಯತೆ ಇದೆ.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಸವಾಲುಗಳಿಂದ ತುಂಬಿದ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಹಣಕಾಸು ಸಂಬಂಧಿ ಅಡ್ಡಿಗಳಿವೆ. ಹಾಗೆ ಸ್ವಂತ ಉದ್ಯೋಗ ಮಾಡುತ್ತಿರುವ ಮಂದಿಗೆ ಈ ದಿನ ದೊಡ್ಡ ಸವಾಲುಗಳ ಎದುರಿಸಬೇಕಾಗುತ್ತದೆ. ಅದ್ರಲ್ಲೂ ನಿಮ್ಮ ಅನಾರೋಗ್ಯ ಸಂಬಂಧಿ ವಿಚಾರದಲ್ಲಿ ಅಶುಭ ದಿನವಾಗಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಮಿಶ್ರ ಫಲ ಅನುಭವಿಸುವ ದಿನ. ನಿಮ್ಮೆಲ್ಲಾ ಖರ್ಚುಗಳನ್ನು ಜಾಣತನದಿಂದ ಮಾಡಬೇಕಾಗಿದೆ. ನಿಮ್ಮ ಮನೆಯಲ್ಲಿ ಶುಭ ಕಾರ್ಯ ಸಂಬಂಧಿತ ವಿಚಾರವಾಗಿ ಇಂದು ನಿರ್ಣಯಗಳ ತೆಗೆದುಕೊಳ್ಳಬಹುದು. ಪ್ರೇಮಿಗಳಿಗೆ ಉತ್ತಮ ದಿನ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಲವು ಕೆಲಸಗಳನ್ನು ನೀವಿಂದು ಮುಗಿಸಬೇಕಾದ ಒತ್ತಡದಲ್ಲಿ ಕಳೆಯಬಹುದು. ಗೃಹಿಣಿಯರು ಮಕ್ಕಳ ಕುರಿತಾದ ಚಿಂತೆಯೊಂದರಲ್ಲಿ ಮುಳುಗಬಹುದು. ಪ್ರಯಾಣ ಮಾಡುವಾಗ ಎಚ್ಚರಿಕೆ ವಹಿಸಬೇಕಿದೆ.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ದೊಡ್ಡ ಮಟ್ಟದ ಲಾಭಗಲಿವೆ. ವ್ಯಾಪಾರಿಗಳು ಲಾಭ ನೋಡುವ ಸಮಯ. ದಾಂಪತ್ಯ ವಿಚಾರದಲ್ಲಿ ಹಲವು ದಿನದಿಂದ ಇದ್ದ ಮನಸ್ತಾಪಗಳು ನಿವಾರಣೆಯಾಗಲಿದೆ.



Click it and Unblock the Notifications










