Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Dina Bhavishya: ಈ ಸೋಮವಾರ ಯಾರಿಗೆ ಶುಭಕರ?
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 24 (24 November Horoscope)ರ ನಿಮ್ಮ ರಾಶಿಫಲ ನೋಡೋಣ
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಸೋಮವಾರವು ಹಲವು ಅನುಕೂಲಗಳ ತರಲಿದೆ. ಅದ್ರಲ್ಲೂ ನಿಮ್ಮ ನಿತ್ಯದ ಹಣಕಾಸು ಸಮಸ್ಯೆಯೊಂದನ್ನು ಬಗೆಹರಿಸಿಕೊಳ್ಳಬಹುದು. ನಿಮ್ಮ ಆಪ್ತರೊಬ್ಬರು ನಿಮ್ಮ ಅಗತ್ಯ ಕೆಲಸವೊಂದಕ್ಕೆ ಹಣಕಾಸಿನ ನೆರವು ನೀಡಬಹುದು.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನ ಬಹಳ ಅನುಕೂಲವಿದೆ. ಕೃಷಿ ಸಂಬಂಧಿತ ವಿಚಾರವಾಗಿ ನಿಮ್ಮಲ್ಲಿ ಶುಭ ಸಮಯ. ಯಾರೊಂದಿಗಾದರು ಮನಸ್ತಾಪವಾಗಿದ್ದರೆ ಈ ದಿನ ಕುಳಿತು ಬಗೆಹರಿಸಿಕೊಳ್ಳುವಿರಿ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಈ ದಿನವು ಅದೃಷ್ಟಕರ. ನಿಮ್ಮ ಹಲವು ಕೆಲಸಗಳನ್ನು ಸರಿಯಾದ ಸಮಯಕ್ಕೆ ಮುಗಿಸುವಿರಿ. ಅನೇಕರಲ್ಲಿದ್ದ ಅನಾರೋಗ್ಯ ಸಮಸ್ಯೆಯೊಂದು ಇಂದು ಸುಧಾರಣೆ ಇರಲಿದೆ. ಅನತ್ಯ ಚರ್ಚೆಗಳು ಗಲಾಟೆಗಳಿಗೆ ಅನಾನುಕೂಲಗಳಿಗೆ ಕಾರಣವಾಗಲಿವೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ದಿನ ಮಿಶ್ರ ಫಲ ತರಲಿದೆ. ಯಾರಿಗೂ ಇಂದು ಸಾಲ ನೀಡುವ ಕೆಲಸ ಮಾಡಬೇಡಿ. ಹಾಗೆ ವಸ್ತುಗಳನ್ನು ಬೇರೆಯವರಿಗೆ ನೀಡಬೇಡಿ. ಗೃಹಿಣಿಯರಿಗೆ ಈ ದಿನದಂದು ಅನಾರೋಗ್ಯ ಕಾಡಬಹುದು, ತಲೆನೋವು ಅಥವಾ ಉದರ ಸಂಬಂಧಿತ ವಿಚಾರದಲ್ಲಿ ಸಮಸ್ಯೆ ಬರಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ದಿನ ಉತ್ತಮವಾಗಿರಲಿದೆ, ನಿಮ್ಮ ಹಲವು ಕೆಲಸಗಳನ್ನು ನಿಮ್ಮ ಅಣತಿಯಂತೆ ಮುಗಿಸುವಿರಿ. ಆರಂಭದಿಂದಲೂ ನಿಮ್ಮ ಹಣಕಾಸಿನ ವಿಚಾರದಲ್ಲಿ ಎದುರಾಗಿದ್ದ ಅಡ್ಡಿ ನಿವಾರಣೆಯಾಗಲಿದೆ. ವ್ಯಾಪಾರಿಗಳಿಗೆ ಈ ದಿನವು ಶುಭ ತರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಒತ್ತಡದ ದಿನವಾಗಲಿದೆ. ಹಣಕಾಸು, ಕೆಲಸ, ಓಡಾಟ ವಿಚಾರದಲ್ಲಿ ಒತ್ತಡದ ದಿನವಾಗಬಹುದು. ತಂದೆ ತಾಯಿ ವಿಚಾರವಾಗಿ ನಿರ್ಲಕ್ಷ್ಯ ಮಾಡಬೇಡಿ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣವನ್ನು ಮರಳಿ ಪಡೆಯುವ ಪ್ರಯತ್ನ ಮಾಡಿ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ದಿನ ಅತ್ಯುತ್ತಮವಾಗಿರಲಿದೆ. ನಿಮ್ಮ ಹಲವು ಕೆಲಸಗಳನ್ನು ಆರಾಮವಾಗಿ ಮುಗಿಸುವಿರಿ. ನಿಮ್ಮಿಂದಾಗಿ ದೊಡ್ಡ ವ್ಯವಹಾರ ಸಂಬಂಧಿತ ಒಪ್ಪಂದಗಳು ನಡೆಯಬಹುದು. ಪಾಲುದಾರಿಕೆ ವ್ಯವಹಾರಗಳು ಲಾಭದಾಯಕ ಎನಿಸಲಿದೆ. ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುವಿರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ಪ್ರಯಾಣದಲ್ಲಿ ತೊಡಗುವ ದಿನವಾಗಲಿದೆ. ದೇವಾಲಯ ಭೇಟಿಯ ಸಾಧ್ಯತೆಯೂ ಇದೆ. ಸರ್ಕಾರಿ ನೌಕರರಲ್ಲಿ ಒತ್ತಡ ಹೆಚ್ಚಲಿದೆ. ನಿಮ್ಮ ಉದ್ಯೋಗದ ಸ್ಥಳದಲ್ಲಿ ಬದಲಾವಣೆಯಿಂದಾಗಿ ಚಿಂತೆಯೊಂದು ಕಾಡಬಹುದು. ಗೃಹಿಣಿರಯ ಆರೋಗ್ಯ ಕುರಿತು ಎಚ್ಚರಿಕೆ ಇಡಬೇಕಿದೆ.
ಧನು ರಾಶಿ
ಧನು ರಾಶಿ ಜನರು ಈ ಸಮಯದಲ್ಲಿ ಅನುಕೂಲ ನಿರೀಕ್ಷಿಸಬಹುದು. ನಿಮ್ಮ ಎಲ್ಲಾ ಕೆಲಸಗಳನ್ನು ಸಮಯದೊಳಗೆ ಮುಗಿಸುವಿರಿ. ನಿಮ್ಮಿಂದಾಗಿ ಮನೆಯಲ್ಲಿ ಶಾಂತಿ ಇರಲಿದೆ. ಯಾರಿಗಾದರು ಹಣ ನೀಡಬೇಕಾಗಿ ಬಂದರೆ ಷರತ್ತುಗಳ ಹೊರತಾಗಿ ನೀಡಬೇಡಿ.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಹಲವು ಸಮಸ್ಯೆಗಳನ್ನು ಇಂದು ಪರಿಹರಿಸಿಕೊಳ್ಳಬಹುದು, ನೀವು ಪ್ರಯಾಣ ಮಾಡುವಾಗ ಎಚ್ಚರಿಕೆಯಿಂದ ಇರುವುದು ಉತ್ತಮ. ವಾಹನ ಚಾಲಕರಿಗೆ ಶುಭವಾಗುವ ದಿನ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಈ ದಿನವು ಅಚ್ಚರಿಯ ಫಲಿತಾಂಶ ತರಬಹುದು. ನಿಮ್ಮ ಹಲವು ಕೆಲಸಗಳನ್ನು ಅಂದುಕೊಂಡಂತೆ ಮುಗಿಸಲು ಇಂದು ಅವಕಾಶಗಳು ಬರಲಿವೆ. ಆಪ್ತರೊಬ್ಬರಿಂದ ನಿಮಗೆ ಸಹಾಯ ಬರಬಹುದು. ಮನೆಯ ವಸ್ತುವೊಂದನ್ನು ರಿಪೇರಿ ಮಾಡಬಹುದು.
ಮೀನ ರಾಶಿ
ಮೀನ ರಾಶಿಯ ಗೃಹಿಣಿಯರು ಇಂದು ಪ್ರಯಾಣ ಮಾಡಬೇಕಾಗಿ ಬರಬಹುದು. ಮಕ್ಕಳ ಕುರಿತಾದ ಚಿಂತೆಯೊಂದು ನಿಮಗೆ ಕಾಡಬಹುದು. ತಂದೆ ತಾಯಿಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಆಸ್ಪತ್ರೆ ಸಂಬಂಧಿತ ವಿಚಾರದಲ್ಲಿ ಪ್ರಯಾಣ ಮಾಡುವಿರಿ.



Click it and Unblock the Notifications










