Latest Updates
-
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್!
Dina Bhavishya: ಯಾರಿಗಾದರು ಹಣ ನೀಡುವ ಮುನ್ನ ಎಚ್ಚರ!
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 23 (23 November Horoscope)ರ ನಿಮ್ಮ ರಾಶಿಫಲ ನೋಡೋಣ
ಮೇಷ ರಾಶಿ
ಮೇಷ ರಾಶಿ ಜನರಲ್ಲಿ ಇಂದು ಉತ್ತಮ ದಿನ, ನಿಮ್ಮ ಹಲವು ಕೆಲಸಗಳಲ್ಲಿ ಯಶಸ್ಸು ಪಡೆಯಬಹುದು. ನಿಮ್ಮ ಖರ್ಚುಗಳನ್ನು ನಿಭಾಯಿಸುವುದು ಉತ್ತಮ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾಗುತ್ತದೆ. ಕೆಲವು ಕರೆಗಳು ನಿಮಗೆ ಒತ್ತಡ ತರಬಹುದು.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನ ಉತ್ತಮವಾಗಿ ಕಳೆಯಲಿದ್ದೀರಿ. ಪ್ರೀತಿ ಪಾತ್ರರು, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವಿರಿ. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ಆಪ್ತರೊಬ್ಬರ ಭೇಟಿಯು ನಿಮ್ಮಲ್ಲಿ ಖರ್ಚು ಹೆಚ್ಚಿಸಬಹುದು.

ಮಿಥುನ ರಾಶಿ
ಮಿಥುನ ರಾಶಿಯವರು ಈ ದಿನ ಅತ್ಯಂತ ದೊಡ್ಡ ನಿರ್ಧಾರ ತೆಗೆದುಕೊಳ್ಳುವಿರಿ. ಆಪ್ತರೊಂದಿಗೆ ನೀವು ಪ್ರವಾಸ ಕೈಗೊಳ್ಳಬಹುದು. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಶುಭ ಸುದ್ದಿಯೊಂದನ್ನು ಕೇಳಬಹುದು. ನಿಮ್ಮಿಂದಾಗಿ ಆಧ್ಯಾತ್ಮಿಕ ಕಾರ್ಯವೊಂದಕ್ಕೆ ಚಾಲನೆ ಸಿಗಲಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ದಿನ ಮಿಶ್ರ ಫಲವಿದೆ. ಮಕ್ಕಳ ಕುರಿತಾದ ಚಿಂತೆಯೊಂದು ನಿಮಗೆ ಕಾಡಬಹುದು. ಸಂಬಂಧಗಳಲ್ಲಿ ಮನಸ್ತಾಪ ಮೂಡುವ ಘಟನೆಗಳಿಂದ ದೂರವಿರಿ. ವಾಹನ ವಿಚಾರದಲ್ಲಿ ನಿಮಗೆ ಅಡ್ಡಿ ಹಾಗೂ ಆತಂಕಗಳಿವೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲಕರ ಯೋಗ ತರಲಿದೆ. ನಿಮ್ಮ ಹಲವು ಕೆಲಸದಲ್ಲಿ ಆತ್ಮಿವಿಶ್ವಾಸ ನೋಡಬಹುದು. ಯಾರ ಬಳಿಯಿಂದಾದರು ವಸ್ತುವನ್ನು ಬಳಕೆಗಾಗಿ ಪಡೆದಿದ್ದರೆ ಮರಳಿ ನೀಡಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸಗಳ ಮುಗಿಸುವಿರಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ದೊಡ್ಡ ಲಾಭವಿದೆ. ನಿಮ್ಮ ಹಲವು ಕೆಲಸಗಳು ಇಂದು ಪ್ರಾಮಾಣಿಕವಾಗಿ ಮುಗಿಸುವಿರಿ. ಮನೆಯಲ್ಲಿ ಶಾಂತಿ ನೋಡುವಿರಿ. ಗೃಹಿಣಿಯರ ಹಣಕಾಸಿನ ವಿಚಾರದಲ್ಲಿದ್ದ ಚಿಂತೆಯೊಂದು ದೂರಾಗಲಿದೆ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ದಿನವು ದೊಡ್ಡ ಶುಭ ತರಲಿದೆ. ನಿಮಗಾಗಿ ಅಲ್ಲದೆ ಇದ್ದರೂ ಇತರರ ಕೆಲಸ ಸಂಬಂಧವಾಗಿ ನೀವಿಂದು ಪ್ರಯಾಣ ಮಾಡಬೇಕಾಗುತ್ತದೆ. ವಾಹನ ಸಂಬಂಧಿತ ವಿಚಾರದಲ್ಲಿ ಎಚ್ಚರ ಅಗತ್ಯ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ಪ್ರಯಾಣ ಮಾಡುವ ದಿನ. ನಿಮಗಾಗಿ ಹೊಸ ಜವಾಬ್ದಾರಿಯೊಂದು ಬರಬಹುದು. ಸಂಬಂಧಿಕರೊಬ್ಬರ ವಿಚಾರವಾಗಿ ಇಂದು ಪ್ರಯಾಣಗಳ ಮಾಡುವಿರಿ. ಯಾರಿಗೂ ವ್ಯವಹಾರ ಸಂಬಂಧಿತ ವಿಚಾರಗಳನ್ನು ಹಂಚಿಕೊಳ್ಳಬೇಡಿ.
ಧನು ರಾಶಿ
ಧನು ರಾಶಿ ಜನರಿಗೆ ಈ ದಿನ ಶುಭ ತರಲಿದೆ. ನಿಮ್ಮ ಬಹು ದಿನದ ಕೆಲಸವೊಂದು ಅರ್ಧಕ್ಕೆ ನಿಂತಿದ್ದರೆ ಇಂದು ಪೂರ್ಣ ಮಾಡುವಿರಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಲಿದ್ದೀರಿ. ಕುಟುಂಬಸ್ಥರ ಹಣಕಾಸಿನ ಸಮಸ್ಯೆಯನ್ನು ನಿವಾರಿಸಲು ನೀವು ಮುಂದಾಗಬೇಕಾಗಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನವು ಬಹಳ ಅನುಕೂಲಕವಿದೆ. ಗೃಹಿಣಿಯರಲ್ಲಿ ಇದ್ದಂತಹ ಆಂತಕರಿ ಸಮಸ್ಯೆಯೊಂದರ ಸಂಬಂಧ ಒತ್ತಡ ಕಡಿಮೆಯಾಗಲಿದೆ. ದಿಢೀರ್ ಹಣ ಒಲಿದು ಬರಬಹುದು.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಮಿಶ್ರ ಫಲ ಅನುಭವಿಸುವ ದಿನ. ನಿಮ್ಮೆಲ್ಲಾ ವಿಚಾರಗಳು ನೀವು ಅಂದುಕೊಂಡಂತೆ ನಡೆಯಲಿದೆ. ಆಪ್ತರಿಗೆ ನಿಮ್ಮಿಂದಾಗಿ ಸಹಾಯ ಆಗಲಿದೆ. ಸಾಲ ಮಾಡುವ ಕುರಿತಾಗಿ ನೀವು ಆಲೋಚಿಸಬಹುದು. ವ್ಯಾಪಾರಿಗಳಿಗೆ ಇಂದು ಮಿಶ್ರ ಫಲವಿದೆ.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ವ್ಯವಹಾರ ಸಂಬಂಧಿತ ಪ್ರಯಾಣಗಳಿವೆ. ನಿಮ್ಮ ಅನೇಕ ವಿಚಾರಗಳಲ್ಲಿ ಇಂದು ಶುಭವಿದೆ. ನಿರುದ್ಯೋಗಿಗಳಾಗಿದ್ದರೆ ಅಚ್ಚರಿಯ ಬೆಳವಣಿಗೆಯಲ್ಲಿ ಅವಕಾಶಗಳ ಪಡೆಯಬಹುದು. ಯಾರಿಗೂ ಹಣ ನೀಡುವ ಮೊದಲು ಮತ್ತೊಮ್ಮೆ ಆಲೋಚಿಸುವುದು ಉತ್ತಮ.



Click it and Unblock the Notifications