Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ಬರಬಹುದು!
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 22 (22 November Horoscope)ರ ನಿಮ್ಮ ರಾಶಿಫಲ ನೋಡೋಣ
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಉತ್ತಮ ಅನುಕೂಲಗಳ ತರುವ ದಿನ. ಶನಿವಾರದಲ್ಲಿ ನೀವು ಅಂದುಕೊಂಡ ಕೆಲಸಗಳ ಮಾಡಿ ಮುಗಿಸುವಿರಿ. ನಿಮ್ಮಿಂದಾಗಿ ಮನೆಯ ವಾತಾವರಣವು ಸಂತೋಷದಾಯಕವಾಗಲಿದೆ. ದಾಂಪತ್ಯದಲ್ಲಿ ನೆಮ್ಮದಿ ದಿನ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ದಿನ ಮಿಶ್ರ ಫಲವಿದೆ. ನಿಮ್ಮ ಹಲವು ಕೆಲಸಗಳಲ್ಲಿ ಧನಾತ್ಮಕ ವಿಚಾರಗಳಿವೆ. ಆಪ್ತರೊಬ್ಬರ ಭೇಟಿಯಿಂದ ನಿಮಗೆ ನೆಮ್ಮದಿ ಇರಲಿದೆ. ನಿಮ್ಮ ಅದೃಷ್ಟ ಕೈ ಹಿಡಿಯುವ ಸಾಧ್ಯತೆಯಿಂದ ನಿಮ್ಮ ಹಣಕಾಸಿನ ಸಮಸ್ಯೆಯೊಂದು ನಿವಾರಣೆಯಾಗಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಕೆಲಸ ಕಾರ್ಯಗಳಿಗೆ ಈ ಸಮಯದಲ್ಲಿ ಉತ್ತಮ. ಹೊಸದಾದ ಆರಂಭಗಳಿಗೆ ಸೂಕ್ತ ಮಾನ್ಯತೆ ಸಿಗಲಿದೆ. ಆರ್ಥಿಕ ವಿಚಾರದಲ್ಲಿ ನಿಮ್ಮ ಸ್ಥಿತಿ ಸುಧಾರಣೆ ಇರಲಿದೆ. ಯಾರಿಗೂ ಸಾಲ ನೀಡಲು ಮುಂದಾಗಬೇಡಿ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮಗಾಗಿ ಮನೆಯಲ್ಲಿ ಶುಭ ಸುದ್ದಿ ಇರಲಿದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಮತ್ತೆ ಮುಂದೂಡಬೇಕಾಗಬಹುದು. ಸಂಬಂಗಳನ್ನು ಮತ್ತಷ್ಟು ಬಲಪಡಿಸಲು ನೀವು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.
ಸಿಂಹ ರಾಶಿ
ಸಿಂಹ ರಾಶಿ ಜನರು ಇಂದು ಪ್ರಯಾಣದಲ್ಲಿ ಭಾಗಿಯಾಗಬಹುದು. ಗೃಹಿಣಿಯರ ಖರ್ಚು ಹೆಚ್ಚಾಗುವ ದಿನ. ನೀವು ಆಪ್ತರೊಂದಿಗೆ ಪ್ರಯಾಣ ಮಾಡುವಿರಿ. ಅನೇಕ ಕೆಲಸಗಳನ್ನು ಅರ್ಧದಲ್ಲೇ ಬಿಡುವಿರಿ. ವಿವಾಹಿತರಿಂದು ವಿಶ್ರಾಂತಿ ಪಡೆಯುವ ದಿನವಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿ ಜನರು ಇಂದು ದೊಡ್ಡ ಮಟ್ಟದ ಲಾಭ ನೋಡುವ ದಿನ. ಹೊಸ ವ್ಯವಹಾರದಲ್ಲಿ ಪ್ರಗತಿ ನೋಡಬಹುದು. ಕೃಷಿ ಸಂಬಂಧಿತ ವ್ಯವಹಾರದಲ್ಲಿ ಶುಭವಾಗುವ ದಿನ. ಆಪ್ತರ ಜೊತೆಗೆ ನಿಮ್ಮ ಸಂಬಂಧ ಗಟ್ಟಿಯಾಗಲಿದೆ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ಸಮಯವು ಬಹಳ ಅನುಕೂಲಕರವಾಗಿರಲಿದೆ. ನಿಮ್ಮಿಂದಾಗಿ ಹೊಸ ಕೆಲಸಕ್ಕೆ ಚಾಲನೆ ಇರಲಿದೆ. ವಾಹನ ಸಂಬಂಧಿತ ವಿಚಾರದಲ್ಲಿ ದಿಢೀರ್ ಬದಲಾವಣೆಗಳ ನೋಡಬಹುದು. ಸಾಲ ಮರುಪಾವತಿ ಕುರಿತು ಒತ್ತಡ ಇರಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ ಈ ದಿನ ಮಿಶ್ರ ಫಲದ ದಿನ. ನಿಮ್ಮ ಗೊಂದಲಗಳು ಇಮದು ನಿವಾರಣೆಯಾಗುವ ಸಮಯ. ಹೊಸ ಕೆಲಸವೊಂದಕ್ಕೆ ಮುನ್ನುಡಿ ಬರೆಯಬಹುದು. ದಿನದ ಅಂತ್ಯದಲ್ಲಿ ನೀವು ಪ್ರಯಾಣ ಮಾಡುವಿರಿ. ಖರ್ಚುಗಳಿವೆ.
ಧನು ರಾಶಿ
ಧನು ರಾಶಿಯವರಲ್ಲಿ ಇಂದು ಅನುಕೂಲಕರ ದಿನ. ನೀವು ಬಯಸಿದ ವಸ್ತುವೊಂದನ್ನು ಇಂದು ಖರೀದಿಸಬಹುದು. ಸಾಲ ಪಡೆಯುವ ನಿಮ್ಮ ಬಯಕೆಗಳಿಗೆ ಸಲಹೆ ಪಡೆಯುವುದು ಉತ್ತಮ. ಪಿತ್ರಾರ್ಜಿತ ವ್ಯವಹಾರದಲ್ಲಿ ಇಂದು ಲಾಭವಿದೆ.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ಮಿಶ್ರ ಫಲ. ನಿಮ್ಮ ಆದಾಯದಷ್ಟೇ ಖರ್ಚು ಕೂಡ ಇರಲಿದೆ. ನಿಮ್ಮ ಕೆಲಸಗಳನ್ನು ನಿಗದಿತ ಸಮಯದಲ್ಲಿ ಮುಗಿಸುವಿರಿ. ಹಲವು ಸಮಯದಿಂದ ಬಾಕಿ ಉಳಿಸಿಕೊಂಡಿದ್ದ ಕೆಲಸಗಳನ್ನು ಪೂರ್ಣ ಮಾಡುವುದು ಉತ್ತಮ.
ಕುಂಭ ರಾಶಿ
ಕುಂಭ ರಾಶಿ ಜನರಲ್ಲಿ ಇಂದು ಸಮಸ್ಯೆಗಳ ದಿನ. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಹಲವರಿಗೆ ಈ ದಿನವು ಹಣಕಾಸು ವಿಚಾರದಲ್ಲಿ ಸಮಸ್ಯೆ ಇದೆ. ಅದ್ರಲ್ಲೂ ಸಾಲದ ಸಮಸ್ಯೆ ದೊಡ್ಡದಾಗಬಹುದು. ನಿಮಗೆ ಬರಬೇಕಿದ್ದ ಹಣ ಕೈ ತಪ್ಪಬಹುದು.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಆರಾಮದಾಯಕ ದಿನ. ಯಾರಿಗಾದರು ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಈ ದಿನ ನೀಡುವುದು ಉತ್ತಮ. ನಿಮ್ಮ ಉಳಿತಾದ ಹಣವನ್ನು ಬೇರೆ ಕೆಲಸಗಳಿಗೆ ವಿನಿಯೋಗಿಸಬೇಕಾಗಬಹುದು. ದಿನದ ಅಂತ್ಯದಲ್ಲಿ ಗೊಂದಲದ ಸಮಯ ಕಳೆಯಬಹುದು.



Click it and Unblock the Notifications