Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಇಂದು ಸಾಲ ನೀಡುವುದರಿಂದ ಪಾರಾಗುವುದು ಉತ್ತಮ
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 21 (21 November Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಸರಾಸರಿಯ ದಿನ. ನಿಮಗಾಗಿ ಹಲವು ಕೆಲಸಗಳಲ್ಲಿ ಗೊಂದಲಗಳಿಂದ ಮಾಡುವಿರಿ. ನಿಮ್ಮ ಹಣಕಾಸಿನ ವಿಚಾರದಲ್ಲಿ ಇಂದು ದೊಡ್ಡ ಸಮಸ್ಯೆಗಳಿವೆ. ವ್ಯಾಪಾರದಲ್ಲಿನ ನಷ್ಟ ನಿಮಗೆ ಚಿಂತೆ ತರಬಹುದು.
ವೃಷಭ ರಾಶಿ
ವೃಷಭ ರಾಶಿ ಜನರಲ್ಲಿ ಇಂದು ಲಾಭವಿದೆ. ಗೃಹಿಣಿಯರು ಇಂದು ಬಯಸಿದ್ದನ್ನು ಪಡೆಯುವ ದಿನ. ನಿಮ್ಮ ಹಲವು ವಿಚಾರಗಳು ಶುಭದಾಯಕವಾಗಲಿದೆ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆ ಈಡೇರಬಹುದು. ಸವಾಲುಗಳನ್ನು ಎದುರಿಸುವುದು ನಿಮಗೆ ದೊಡ್ಡ ಶುಭ ತರಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಉತ್ತಮ ದಿನ, ನಿಮ್ಮ ಕೆಲಸಗಳಲ್ಲಿ ಆತಂಕಗಳಿರುವುದಿಲ್ಲ. ಮನೆ ವಾತಾವರಣದಲ್ಲಿ ಸಂತಸ ಇರಲಿದೆ. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ಗೃಹಿಣಿಯರು ಪ್ರಯಾಣ ಮಾಡಬೇಕಾಗಿ ಬರಬಹುದಾದ ದಿನವಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಲ್ಲಿ ಇಂದಿನ ದಿನ ದೊಡ್ಡ ಕೆಲಸಗಳನ್ನು ಮಾಡಬೇಕಾಗುತ್ತದೆ. ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ನಿಮಗಾಗಿ ಹೊಸ ವಸ್ತುವೊಂದನ್ನು ಖರೀದಿಸಲಿದ್ದೀರಿ, ಆಸ್ಪತ್ರೆ ಸಂಬಂಧಿತ ವಿಚಾರದಲ್ಲಿ ತೊಡಗುವಿರಿ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ದಿನ ಉತ್ತಮ ಪ್ರತಿಫಲ ಅನುಭವಿಸುವ ದಿನ. ನಿಮ್ಮ ಹಣಕಾಸಿನ ವಿಚಾರದಲ್ಲಿ ಶುಭವಾಗುವ ದಿನ. ಗೃಹಿಣಿಯರಲ್ಲಿ ಇಂದು ಧನಲಾಭವಿದೆ. ಅವಿವಾಹಿತರು ಆಪ್ತರೊಂದಿಗೆ ಮಧುರ ಕ್ಷಣ ಪಡೆಯಬಹುದು. ನಿಮ್ಮಿಂದ ಇತರರಿಗೆ ಸಹಾಯವಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಲ್ಲಿ ಇಂದು ದೊಡ್ಡ ಮಟ್ಟದ ಕೆಲಸ ಅಥವಾ ಪ್ರಯಾಣದಲ್ಲಿ ತೊಡಗಿಸಿಕೊಳ್ಳುವ ದಿನ. ವಾಹನ ಸಂಬಂಧಿತ ಖರ್ಚುಗಳು ಹೆಚ್ಚಾಗುವ ದಿನ. ಹೊಸದಾಗಿ ಆರಂಭಿಸುವ ನಿಮ್ಮ ವ್ಯವಹಾರದಲ್ಲಿ ಶುಭವಿದೆ. ದಿನದ ಅಂತ್ಯದಲ್ಲಿ ಖರ್ಚುಗಳಿವೆ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ದಿನ ಪ್ರಯಾಣಗಳಿವೆ. ನಿಮ್ಮದಲ್ಲದ ಕೆಲಸಗಳ ಸಂಬಂಧ ಪ್ರಯಾಣ ಮಾಡುವಿರಿ. ದಾಂಪತ್ಯ ವಿಚಾರದಲ್ಲಿ ಇಂದು ನಿಮ್ಮ ಮಾತುಗಳು ಹರಿತವಾಗಿರಬಹುದು. ಮನೆಯ ಹಿರಿಯ ಸದಸ್ಯರ ಆರೋಗ್ಯದಲ್ಲಿ ಏರುಪೇರು ಸಂಭವವಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಈ ಸಮಯ ಬಹಳ ಅನುಕೂಲವಿದೆ. ನಿಮ್ಮಿಂದಾಗಿ ಹೊಸ ಜವಾಬ್ದಾರಿಯನ್ನು ಬೇರೆಯವರು ವಹಿಸಿಕೊಳ್ಳಬಹುದು. ದಿನದ ನಿಮ್ಮ ಹಲವು ಕೆಲಸಗಳು ಗೊಂದಲ ತರಬಹುದು. ಮಕ್ಕಳ ಕುರಿತಾದ ಚಂತೆಯೊಂದು ಕಾಡಬಹುದು. ನಿರುದ್ಯೋಗಿಗಳು ಹೊಸ ಉದ್ಯೋಗ ಹುಡುಕಲು ಇನ್ನಷ್ಟು ಶ್ರಮ ಹಾಕಬೇಕಿದೆ.
ಧನು ರಾಶಿ
ಧನು ರಾಶಿ ಜನರಲ್ಲಿ ಇಂದು ಹಣಕಾಸು ಸಂಬಂಧಿತ ವಿಚಾರದಲ್ಲಿ ಲಾಭವಿದೆ. ನಿಮ್ಮ ವ್ಯವಹಾರ ಹಾಗೂ ವ್ಯಾಪಾರ ಸಂಬಂಧಿತ ವಲಯದಲ್ಲಿ ಧನಾತ್ಮಕ ಕ್ರಿಯೆಗಳ ನೋಡಬಹುದು. ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕಿದೆ.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ಮಿಶ್ರಫಲವಿದೆ. ಆದಾಯದಷ್ಟೇ ನಿಮ್ಮಲ್ಲಿ ಖರ್ಚು ಕೂಡ ಇರಲಿದೆ. ಹಾಗೆ ನಿಮ್ಮ ಪ್ರಯಾಣಗಳು ನೀವು ಅಂದುಕೊಂಡ ಲಾಭ ಅಥವಾ ಫಲಿತಾಂಶ ತರದೆ ಇರಬಹುದು. ನಿಮ್ಮಿಂದಾಗಿ ಇತರರಿಗೆ ನೋವಾಗುವ ದಿನ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಮಿಶ್ರ ಫಲವಿದೆ. ನಿಮ್ಮ ಕೆಲಸಗಳು ಒತ್ತಡದಿಂದ ಕಳೆಯಬಹುದು. ದೇವಾಲಯ ಭೇಟಿ ಮಾಡುವ ನಿಮ್ಮ ಬಯಕೆ ಮತ್ತೆ ಮುಂದೂಡಬಹುದು. ದಿನದ ಅಂತ್ಯದಲ್ಲಿ ಶುಭವಿದೆ. ಸಾಲ ನೀಡದೆ ಇರುವುದು ಉತ್ತಮ.
ಮೀನ ರಾಶಿ
ಮೀನ ರಾಶಿ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಹಣಕಾಸು ಸ್ಥಿತಿ ಸುಧಾರಿಸಲಿದೆ. ನಿಮಗಾಗಿ ವಸ್ತುವೊಂದನ್ನು ಖರೀದಿಸುವ ಸಂಬಂಧ ಹಣ ಒಗ್ಗೂಡಿಸಬಹುದು. ನಿಮಗೆ ಅಗತ್ಯವಾಗಿ ಬರಬೇಕಿದ್ದ ಹಣ ಮತ್ತಷ್ಟು ವಿಳಂಬ ವಾಗಬಹುದು.



Click it and Unblock the Notifications