Dina Bhavishya: ಯಾರಿಗಾದರು ನಿಮ್ಮಿಂದಾಗಿ ಸಹಾಯವಾಗಬಹುದು!!

ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 20 (20 November Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನ ಉತ್ತಮವಾಗಿರಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಧನಾತ್ಮಕ ಸ್ಥಿತಿ ಇರಲಿದೆ. ಅದ್ರಲ್ಲೂ ನಿಮ್ಮ ಪ್ರಯಾಣಗಳಿಂದ ನಿಮಗೆ ಶುಭವಾಗುತ್ತದೆ. ದಿನದ ಅಂತ್ಯದಲ್ಲಿ ಖರ್ಚುಗಳಿವೆ. ದಾಂಪತ್ಯದಲ್ಲಿ ಅಥವಾ ಸ್ನೇಹಿತರೊಂದಿಗೆ ಮನಸ್ತಾಪಗಳು ಮೂಡಬಹುದು.

ವೃಷಭ ರಾಶಿ

ವೃಷಭ ರಾಶಿ ಜನರಿಗೆ ಇಂದು ಪ್ರಯಾಣಗಳಲ್ಲಿ ತೊಡಗಬೇಕಾದ ದಿನ. ನಿಮ್ಮ ದೈನಂದಿನ ಕೆಲಸಗಳು ಅರ್ಧಕ್ಕೆ ನಿಲ್ಲಬಹುದು. ಆಪ್ತರೊಬ್ಬರ ಜೊತೆಗೆ ಪ್ರಯಾಣಿಸಬೇಕಾಗುತ್ತದೆ. ಅನೇಕರಲ್ಲಿ ಇಂದು ಹೊಸ ಜವಾಬ್ದಾರಿಗಳ ವಹಿಸಿಕೊಳ್ಳುವ ದಿನವಾಗಲಿದೆ. ನಿಮ್ಮ ಸಮಸ್ಯೆಗಳಿಗೆ ಇಂದು ಪರಿಹಾರ ಪಡೆಯಬಹುದು.

Dina Bhavishya November 20 Today s Daily Horoscope for 12 Zodiac Signs

ಮಿಥುನ ರಾಶಿ

ಮಿಥುನ ರಾಶಿ ಜನರಿಗೆ ಇಂದು ಉತ್ತಮ ದಿನ, ನಿಮ್ಮ ಹಲವು ಕೆಲಸಗಳನ್ನು ಆಪ್ತರೊಬ್ಬರ ಸಹಕಾರದಿಂದ ಮುಗಿಸುವಿರಿ. ನಿಮಗಾಗಿ ಹೊಸ ವಸ್ತುವೊಂದನ್ನು ಖರೀದಿಸಬಹುದು. ಅನಗತ್ಯ ಹೂಡಿಕೆ ಮಾಡಲು ಮುಂದಾಗಬೇಡಿ. ಅದೃಷ್ಟದ ಹಿಂದೆ ಬೀಳಬೇಡಿ.

ಕರ್ಕ ರಾಶಿ

ಕರ್ಕ ರಾಶಿ ಜನರಲ್ಲಿ ಇಂದು ಮಿಶ್ರ ಫಲದ ದಿನ. ನೀವು ಸಮಯದೊಳಗೆ ಮುಗಿಸಬೇಕಿದ್ದ ಕೆಲಸವು ಮತ್ತಷ್ಟು ವಿಳಂಬವಾಗಬಹುದು. ನಿಮ್ಮ ವ್ಯಾಪಾರ ವೃದ್ಧಿಯಾಗಲಿದೆ. ಕೆಲಸಗಳ ಮಾಡುವಾಗ ಎಚ್ಚರಿಕೆ ವಹಿಸಬೇಕಿದೆ.

ಸಿಂಹ ರಾಶಿ

ಸಿಂಹ ರಾಶಿ ಜನರಿಗೆ ಇಂದು ಪ್ರಯಾಣದಲ್ಲಿ ತೊಡಕುಗಳು ಎದುರಾಗುವ ದಿನ. ಅವಿವಾಹಿತರು ಕೆಲಸದಲ್ಲಿ ನಿರಾಸಕ್ತಿ ಹೊಂದಬಹುದು. ನಿಮ್ಮ ಮಾನಸಿಕ ನೆಮ್ಮದಿ ಹಾಳು ಮಾಡುವ ಘಟನೆಗಳು ನಡೆಯಬಹುದು. ಹಣಕಾಸು ವಿಚಾರದಲ್ಲಿ ನೆಮ್ಮದಿ ಇರಲಿದೆ. ಸಂಬಂಧಗಳಲ್ಲಿ ತೊಡಕುಗಳು ಇವೆ.

ಕನ್ಯಾ ರಾಶಿ

ಕನ್ಯಾ ರಾಶಿ ಜನರಲ್ಲಿ ಇಂದು ಅನುಕೂಲಕರ ದಿನ. ಕೆಲಸದ ವಿಚಾರದಲ್ಲಿ ಸಂತೋಷ ನೋಡಬಹುದು. ನಿಮ್ಮ ದಾಂಪತ್ಯ ವಿಚಾರದಲ್ಲಿ ಇದ್ದಂತಹ ಮನಸ್ತಾಪ ನಿವಾರಣೆಯಾಗಲಿದೆ. ಬಹು ಸಮಯದಿಂದ ನಿಮ್ಮ ಕೈ ಸೇರಬೇಕಿದ್ದ ಹಣ ನಿಮಗೆ ಸೇರಬಹುದು. ಮನೆಗಾಗಿ ಖರ್ಚು ಮಾಡುವಿರಿ.

ತುಲಾ ರಾಶಿ

ತುಲಾ ರಾಶಿ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಇಷ್ಟು ದಿನದಿಂದ ನಿಮ್ಮ ವ್ಯವಹಾರದಲ್ಲಿನ ಅಡ್ಡಿಗಳು ನಿವಾರಣೆಯಾಗಲಿದೆ. ನಿಮ್ಮ ವೈಯಕ್ತಿಕ ಸಂಪರ್ಕ ವೃದ್ಧಿಸಲಿದೆ. ಬೇರೆಯವರಿಂದ ಹಣ ಪಡೆಯುವ ಬಯಕೆಯೂ ಈಡೇರಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಜನರಿಗೆ ಇಂದು ಮಿಶ್ರ ಫಲ ಅನುಭವಿಸುವಿರಿ. ಪ್ರಯಾಣ ವಿಚಾರದಲ್ಲಿ ನಿಮಗೆ ಸಮಸ್ಯೆಗಳು ಬರಬಹುದು. ಹಣಕಾಸಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಭೇಟಿಯಾಗಬಹುದು. ಬ್ಯಾಂಕಿಂಗ್ ವಿಚಾರ, ಸರ್ಕಾರಿ ಕೆಲಸದ ವಿಚಾರದಲ್ಲಿ ಶುಭವಿದೆ. ಖರ್ಚುಗಳು ಹೆಚ್ಚಾಗಬಹುದು.

ಧನು ರಾಶಿ

ಧನು ರಾಶಿ ಜನರಿಗೆ ಇಂದು ಉತ್ತಮ ದಿನವಾಗುತ್ತಿದೆ, ಅದ್ರಲ್ಲೂ ಧನು ರಾಶಿಯ ಮಹಿಳೆಯರಿಗೆ ಈ ದಿನ ಹಣಕಾಸು ಸಂಬಂಧಿತ ವಿಚಾರವಾಗಿ ಲಾಭ ನೋಡಬಹುದು. ಬಹು ದಿನದಿಂದ ಹಣಕಾಸಿನ ವಿಚಾರವಾಗಿ ಎದುರುನೋಡಿದ್ದರೆ ಈ ದಿನ ನಿರಾಳರಾಗಬಹುದು.

ಮಕರ ರಾಶಿ

ಮಕರ ರಾಶಿ ಜನರಲ್ಲಿ ಸಮಸ್ಯೆಗಳಿರಬಹುದು. ಇಂದು ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡ್ಡಿಗಳು ಎದುರಾಗಬಹುದು. ಆಪ್ತರೊಬ್ಬರಿಗೆ ನೀವು ಹಣ ನೀಡಬೇಕಾಗಬಹುದು. ಗೃಹಿಣಿಯರು ಗೃಹ ಸಂಬಂಧಿ ಕೆಲಸದಲ್ಲಿ ಎಚ್ಚರಿಕೆ ವಹಿಸಿ. ವ್ಯಾಪಾರ ಕ್ಷೇತ್ರದಲ್ಲಿ ಧನಾತ್ಮಕ ಸ್ಥಿತಿ ಇರಲಿದೆ.

ಕುಂಭ ರಾಶಿ

ಕುಂಭ ರಾಶಿ ಜನರಲ್ಲಿ ಇಂದು ಉತ್ತಮ ದಿನವಾಗುವ ಅವಕಾಶಗಳಿವೆ. ನಿಮ್ಮ ಕೆಲಸಗಳನ್ನು ನಿಗದಿತ ಸಮಯದೊಳಗೆ ಮುಗಿಸಲು ಪ್ರಯತ್ನಿಸಿ. ರಾಯರ ಆಶೀರ್ವಾದ ಪಡೆಯುವ ದಿನವೂ ಹೌದು. ನೀವು ಬಯಸಿದಂತೆ ದೊಡ್ಡ ವ್ಯವಹಾರದಲ್ಲಿ ಶುಭವಾಗಲಿದೆ.

ಮೀನ ರಾಶಿ

ಮೀನ ರಾಶಿಯವರಿಗೆ ಇಂದು ಪರಿಣಾಮಕಾರಿ ಫಲಿತಾಂಶಗಳ ಪಡೆಯುವ ದಿನ. ವಿದ್ಯಾರ್ಥಿಗಳು ಈ ದಿನದಂದು ಓದಿನಲ್ಲಿ ಯಶಸ್ಸಿನ ಹೆಜ್ಜೆ ಇಡಬಹುದು. ಸರ್ಕಾರಿ ಕೆಲಸ ಕಾರ್ಯಗಳು, ದಾಖಲಾತಿ ಸಂಬಂಧಿತ ವಿಚಾರದಲ್ಲಿ ಮೇಲುಗೈ ಸಾಧಿಸಲಿದ್ದೀರಿ.

English summary

Dina Bhavishya November 20: Today’s (Daily) Horoscope for 12 Zodiac Signs

daily horoscope for November 20 astrology predictions for all 12 zodiac signs including career, health, love, and money Boldsky kannada
Story first published: Thursday, November 20, 2025, 5:00 [IST]
X
Desktop Bottom Promotion