Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ನಿಮಗಿಂದು ನೋವಿನ ದಿನ, ಕಹಿ ಸುದ್ದಿಯೂ ಬರಬಹುದು!
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 19 (19 November Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಉತ್ತಮ ದಿನವಾಗಿರಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿಗಳ ನೋಡಬಹುದು. ಗ್ಯಾಜೆಟ್ ಸಂಬಂಧಿತ ವಿಚಾರದಲ್ಲಿ ಸಮಸ್ಯೆಗಳಿವೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾಗಬಹುದು.
ವೃಷಭ ರಾಶಿ
ವೃಷಭ ರಾಶಿ ಜನರಲ್ಲಿ ಇಂದು ಮಿಶ್ರ ಫಲದ ದಿನ. ನಿಮ್ಮ ಕೆಲಸಗಳಲ್ಲಿ ಹಣಕಾಸಿನ ಖರ್ಚು ನೋಡಬಹುದು. ನಿಮ್ಮ ಹಲವು ವಿಚಾರಗಳಲ್ಲಿ ಇಂದು ಪ್ರಯಾಣ ಮಾಡುವಿರಿ. ಹಾಗೆ ಮನೆಗಾಗಿ ನೀವು ಹೊಸ ವಸ್ತುವೊಂದನ್ನು ಖರೀದಿಸಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಸಮಸ್ಯೆಗಳ ತರಬಹುದು. ನಿಮ್ಮ ಉದ್ಯೋಗ ಸಂಬಂಧಿತ ವಿಚಾರದಲ್ಲಿ ನಿಮಗೆ ಉತ್ತಮ ದಿನ. ಆದ್ರೆ ಹಳೆಯ ಸಮಸ್ಯೆಯೊಂದನ್ನು ಬಗೆಹರಿಸಿಕೊಳ್ಳಲು ನೀವು ಚಿಂತಿಸುವಿರಿ. ಆಪ್ತರಿಂದ ನಿಮಗೆ ಸಮಸ್ಯೆಗಳು ಬರಬಹುದು.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಮಿಶ್ರ ಫಲ. ನಿಮ್ಮ ಎಲ್ಲಾ ವಿಚಾರಗಳನ್ನು ಆಪ್ತರೊಬ್ಬರ ಬಳಿಕ ಹೇಳಿಕೊಳ್ಳುವಿರಿ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ದೂರಾಗಲಿದೆ. ನಿಮ್ಮ ಹಲವು ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿ ಮುಗಿಸುವುದು ಉತ್ತಮ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಇಂದು ದೊಡ್ಡ ಮಟ್ಟದ ಲಾಭವಿದೆ. ನಿಮ್ಮ ವ್ಯಾಪಾರ ಹಾಗೂ ವ್ಯವಹಾರ ಸಂಬಂಧಿತ ವಿಚಾರಗಳಲ್ಲಿ ಶುಭವಾಗುತ್ತಿದೆ. ಯಾರಿಗಾದರು ಹಣ ನೀಡಿದ್ದ ಮರಳಿ ಪಡೆಯಬಹುದು. ಹೊಸ ಉದ್ಯೋಗದಲ್ಲಿ ನೆಮ್ಮದಿ ಬರಲಿದೆ. ಮಕ್ಕಳ ವಿಚಾರದಲ್ಲಿ ಸಂತಸ ಇರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಪ್ರಯಾಣದ ದಿನವಾಗುತ್ತಿದೆ. ನಿಮ್ಮ ಹಲವು ಕೆಲಸಗಳನ್ನು ಅರ್ಧದಲ್ಲೇ ಬಿಡಬಹುದು. ಯಾರಿಗಾದರು ಹಣ ನೀಡಿದ್ದರೆ ಮರಳಿ ಪಡೆಯುವ ಪ್ರಯತ್ನ ಮುಂದುವರೆಸಿ. ನಿಮ್ಮ ಕೆಲಸದಲ್ಲಿ ಹೊಸ ಜವಾಬ್ದಾರಿ ಬರಬಹುದು. ದಿನದ ಅಂತ್ಯದಲ್ಲಿ ಖರ್ಚುಗಳು ಹೆಚ್ಚಾಗಬಹುದು.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಇಂದು ಅನುಕೂಲಕರ ದಿನ. ನಿಮ್ಮ ಸಮಸ್ಯೆಗಳಿಗೆ ಕಾರಣವಾಗಿದ್ದ ಅಂಶವೊಂದು ನಿವಾರಣೆಯಾಗಲಿದೆ. ನಿಮ್ಮ ಖರ್ಚುಗಳು ಕಡಿಮೆಯಾಗಲಿದೆ, ಉಳಿತಾಯ ಹೆಚ್ಚಾಗಬಹುದು. ಗೃಹಿಣಿಯರಿಗೆ ವಾಹನ ಸಂಬಂಧಿ ಸಮಸ್ಯೆಗಳು ಬರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಈ ದಿನ ಸವಾಲುಗಳಿವೆ, ಹಣಕಾಸಿನ ವಿಚಾರದಲ್ಲಿ ತರಾತುರಿಯ ನಿರ್ಧಾರಕ್ಕೆ ಮುಂದಾಗಬೇಡಿ. ಯಾರಿಗೂ ಸಾಲ ನೀಡುವುದು ಅಥವಾ ಅನಗತ್ಯ ಖರ್ಚುಗಳಿಗೆ ಮುಂದಾಗಬೇಡಿ. ದೊಡ್ಡ ಒಪ್ಪಂದಗಳ ಮಾಡಿಕೊಳ್ಳಲು ಪ್ರಯತ್ನಗಳು ಮುಂದುವರೆಯಲಿದೆ.
ಧನು ರಾಶಿ
ಧನು ರಾಶಿಯ ಜನರಲ್ಲಿ ಇಂದು ಮಿಶ್ರ ಫಲ. ಗೃಹಣಿಯರು ಅಥವಾ ಯುವತಿಯರಿಗೆ ಇಂದು ಶ್ರಮದಾಯಕ ದಿನವಾಗುತ್ತಿದೆ. ಖರ್ಚುಗಳು ಹೆಚ್ಚಾಗುತ್ತದೆ. ಮನೆಯ ಹಿರಿಯರ ಆರೋಗ್ಯದಲ್ಲಿನ ಏರುಪೇರು ಚಿಂತೆ ಮಾಡುವಂತೆ ಆಗಲಿದೆ. ಮನೆಗಾಗಿ ವಸ್ತುವೊಂದನ್ನು ಖರೀದಿಸಬಹುದು.
ಮಕರ ರಾಶಿ
ಮಕರ ರಾಶಿಯ ಜನರಿಗೆ ಇಂದು ಉತ್ತಮ ದಿನವಾಗುತ್ತಿದೆ. ನೀವು ಯಾರಿಗೂ ಹಣ ನೀಡುವ ಮುನ್ನ ಆಲೋಚಿಸುವುದು ಉತ್ತಮ. ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ಗಮನವಿಟ್ಟು ಮಾಡಿ. ಅಪಾಯಕಾರಿ ಕೆಲಸ ಮಾಡುವ ಮಂದಿಗೆ ಇಂದು ಎಚ್ಚರಿಕೆಯ ಅಗತ್ಯವಿದೆ. ಕುಟುಂಬದಲ್ಲಿ ಶಾಂತಿ ಇರಲಿದೆ.
ಕುಂಭ ರಾಶಿ
ಕುಂಭ ರಾಶಿಯವರಲ್ಲಿ ಇಂದು ಪ್ರಯಾಣದ ದಿನ. ನಿಮ್ಮ ಆಪ್ತರೊಬ್ಬರಿಂದ ಶುಭ ಸುದ್ದಿ ಬರಬಹುದು. ನಿಮಗೆ ಹಣಕಾಸಿನ ಚಿಂತೆ ಕಾಡುವ ದಿನವಾಗುತ್ತದೆ. ಅಗತ್ಯ ಕೆಲಸಕ್ಕೆ ನಿಮ್ಮಲ್ಲಿ ಹಣಕಾಸಿನ ಕೊರತೆ ಎದುರಾಗಬಹುದು. ನಿಮ್ಮ ವ್ಯವಹಾರ ಸಂಬಂಧಿತ ವಿಚಾರದಲ್ಲಿ ಮನಸ್ತಾಪಗಳ ಮಾಡಿಕೊಳ್ಳುವಿರಿ.
ಮೀನ ರಾಶಿ
ಮೀನ ರಾಶಿಯವರಿಗೆ ಈ ದಿನ ಬಹಳ ಅನುಕೂಲಕರ ದಿನ. ಅವಿವಾಹಿತರಲ್ಲಿ ಧನಲಾವಿದೆ. ಗೃಹಿಣಿಯರು ಇಂದು ತಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವ ದಿನ. ವಾಹನ ಸಂಬಂಧಿತ ವಿಚಾರದಲ್ಲಿ ಎಚ್ಚರಿಕೆಯಿಂದ ಮುನ್ನಡೆಯಿರಿ, ಸರ್ಕಾರಿ ನೌಕರರಿಗೆ ಹೊಸ ಸವಾಲು ಎದುರಾಗಬಹುದು.



Click it and Unblock the Notifications