Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
Dina Bhavishya: ಈ ಮಂಗಳವಾರ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದ್ಯಾ?
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 18 (18 November Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಸವಾಲುಗಳ ದಿನ. ಗೃಹಿಣಿಯರಲ್ಲಿ ಇಂದು ಪ್ರಯಾಸದಾಯಕ. ನಿಮ್ಮ ಹಣಕಾಸು ವಿಚಾರದಲ್ಲಿ ನಿಮಗೆ ಅಡ್ಡಿಗಳಿವೆ. ಆಪ್ತರಿಂದ ಬರಬೇಕಿದ್ದ ಹಣ ನಿಮಗೆ ಬರಬಹುದು. ಯಾರಿಂದಾದರು ಆಗಬೇಕಿದ್ದ ಕೆಲಸದ ಕಾರಣಕ್ಕೆ ನೀವು ಪ್ರಯಾಣ ಮಾಡಬೇಕಿದೆ.
ವೃಷಭ ರಾಶಿ
ವೃಷಭ ರಾಶಿ ಜನರಲ್ಲಿ ಇಂದು ಸವಾಲುಗಳಿಂದ ತುಂಬಿದ ದಿನ. ಯಾರಿಗೂ ಈ ದಿನ ಹಣ ನೀಡಲು ಮುಂದಾಗಬೇಡಿ. ಸಾಲದ ಪ್ರಮಾಣ ಕಡಿಮೆಯಾಗಲಿದೆ. ವಾಹನ ಸಂಬಂಧಿ ಖರ್ಚುಗಳಿವೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಸವಾಲುಗಳ ದಿನ. ನಿಮ್ಮ ಉದ್ಯೋಗ ಸಂಬಂಧಿತ ಕೆಲಸಗಳಲ್ಲಿ ತಡೆ ಉಂಟಾಗಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ಕೇಳುವ ಮೂಲಕ ನಿಮ್ಮಲ್ಲಿ ಒತ್ತಡ ತರಬಹುದು.
ಕರ್ಕ ರಾಶಿ
ಕರ್ಕ ರಾಶಿ ಮಂದಿಗೆ ಇಂದು ದೊಡ್ಡ ಮಟ್ಟದ ಲಾಭವಿದೆ. ನೀವು ನಿರುದ್ಯೋಗಿಗಳಾಗಿದ್ದರೆ ಆಪ್ತರೊಬ್ಬರ ಸಲಹೆಯಂತೆ ಉತ್ತಮ ಅವಕಾಶ ಹುಡುಕಬಹುದು. ಪ್ರಯಾಣ ಮಾಡುತ್ತೀರಿ. ಮನೆಯಿಂದ ಹೊರಗೆ ಉಳಿಯಬೇಕಾಗಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಸವಾಲುಗಳಿಂದ ತುಂಬಿದ ದಿನವಾಗುತ್ತದೆ. ನಿಮ್ಮಿಂದ ದೊಡ್ಡ ಮಟ್ಟದ ಲಾಭಗಳ ನಿರೀಕ್ಷಿಸುವ ಮಂದಿ ಹೆಚ್ಛಾಗುತ್ತಾರೆ. ಮನೆಗಾಗಿ ಅಗತ್ಯ ವಸ್ತುವೊಂದನ್ನು ಖರೀದಿಸಬಹುದು. ಪ್ರೀತಿಯ ವಿಚಾರದಲ್ಲಿ ಮಧುರ ಕ್ಷಣಗಳ ನೋಡಬಹುದು. ಸಾಲಗಾರರಿಂದ ದೂರ ಓಡುವ ಯತ್ನ ಮಾಡಬೇಡಿ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ನೋಡಬಹುದು. ನಿಮ್ಮ ಹಲವು ಕೆಲಸಗಳು ಅರ್ಧದಲ್ಲೇ ನಿಲ್ಲಬಹುದು. ಯಾರಿಗಾದರು ಹಣ ನೀಡಿದ್ದರೆ ಮರಳಿ ಪಡೆಯುವ ಪ್ರಯತ್ನ ಬಿಡಬೇಡಿ. ದೇವಾಲಯ ಭೇಟಿಯ ಸಂಭವದಿಂದ ದೂರ ಸರಿಯಬೇಡಿ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ದಿನ ಬಹಳ ಅನುಕೂಲಕರ ದಿನ. ಗೃಹಿಣಿಯರಿಗೆ ಈ ದಿನ ಖರ್ಚುಗಳ ಮಾಡಬೇಕಾದ ದಿನವಾಗುತ್ತಿದೆ. ನಿಮ್ಮೆಲ್ಲಾ ಪ್ರಯಾಣಗಳಲ್ಲಿ ಶುಭವಿದೆ. ಅದ್ರಲ್ಲೂ ಕುಟುಂಬದಲ್ಲಿದ್ದ ಮನಸ್ತಾಪ ಬಗೆಹರಿಸಿಕೊಳ್ಳುವಿರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಈ ದಿನ ಮಿಶ್ರ ಫಲ ತರುವ ದಿನ. ವ್ಯಾಪಾರಿಗಳು ಲಾಭ ಮಾಡಿದರು ನಿಮ್ಮ ದೊಡ್ಡ ಪ್ರಮಾಣದ ಮೊತ್ತವೊಂದನ್ನು ಬೇರೆ ವಿಚಾರವಾಗಿ ವಿನಿಯೋಗಿಸಬೇಕಾಗಿ ಬರಬಹುದು. ನಿಮ್ಮ ಮನೆಯಲ್ಲಿ ಅಶಾಂತಿ ಇರಬಹುದು.
ಧನು ರಾಶಿ
ಧನು ರಾಶಿ ಜನರಲ್ಲಿ ಇಂದು ಪ್ರಯಾಣದ ದಿನ. ನಿಮ್ಮ ಹಲವು ಕೆಲಸದಲ್ಲಿ ಅಡ್ಡಿಗಳಿವೆ, ಅದ್ರಲ್ಲೂ ಹಣಕಾಸಿನ ಕೆಲಸಗಳು ನಿಧಾನವಾಗುತ್ತವೆ. ಉದ್ಯೋಗದ ಸ್ಥಳದಲ್ಲಿ ನಿಮಗೆ ಸಮಸ್ಯೆಗಳು ಬರಬಹುದು. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ನೆರವು ಬರಬಹುದು.
ಮಕರ ರಾಶಿ
ಮಕರ ರಾಶಿ ಜನರಲ್ಲಿ ಇಂದು ಆದಾಯದಲ್ಲಿ ಏರುಪೇರು ಸಂಭವಿಸುವ ದಿನ. ನಿಮ್ಮ ದೊಡ್ಡ ವ್ಯವಹಾರವು ನಷ್ಟವನ್ನು ಅನುಭವಿಸಲು ಕಾರಣವಾಗಬಹುದು. ಬ್ಯಾಂಕಿಂಗ್ ವಿಚಾರಗಳು ಸೇರಿ, ವ್ಯವಹಾರ ಸಂಬಂಧದಲ್ಲಿ ಇಂದು ನಿಧಾನಗತಿ ನೋಡಬಹುದು.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಬಹುಮುಖ್ಯ ದಿನ. ನಿಮ್ಮ ಹಲವು ವಿಚಾರದಲ್ಲಿ ಧನಾತ್ಮಕ ಯಶಸ್ಸು ಇರಲಿದೆ. ಗೃಹಿಣಿಯರು ಈ ದಿನ ಪ್ರಯಾಣ ಮಾಡುವಿರಿ. ಈ ಸಮಯದಲ್ಲಿ ನಿಮ್ಮ ಪ್ರಯತ್ನಗಳು ಫಲ ನೀಡಲಿವೆ. ಯಾರಿಂದಾದರು ಹಣ ಪಡೆಯುವ ಬಯಕೆಯು ಕೂಡ ಈಡೇರಬಹುದು.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಣಕಾಸಿನ ವಿಚಾರ ಶುಭವಾಗುತ್ತಿದೆ. ಬಹು ದಿನದಿಂದ ಮುಗಿಸದೆ ಅರ್ಧಕ್ಕೆ ಬಿಟ್ಟಿದ್ದ ವಿಚಾರವೊಂದು ಪೂರ್ಣವಾಗಲಿದೆ. ವಿದ್ಯಾರ್ಥಿಗಳು ಓದಿನತ್ತ ಗಮನವಿಡುವುದು ಒಳಿತು. ಆಸ್ತಿ ಕುರಿತಾದ ವಿಚಾರದಲ್ಲಿ ನಿಮಗೆ ಗೆಲುವಿದೆ.



Click it and Unblock the Notifications