Dina Bhavishya: ಸಹಾಯ ಪಡೆದ ಮಂದಿ ಮರೆಯುವ ದಿನ, ಸವಾಲಿನ ಆಗರ!

ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 17 (17 November Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಈ ದಿನ ಶುಭವಾಗಿರಲಿದೆ. ನಿಮ್ಮ ಪ್ರಯಾಣಗಳು ಶುಭ ತರಲಿದೆ. ನಿಮ್ಮ ಕೆಲಸಗಳಲ್ಲಿ ಸಾಮಾನ್ಯ ಸ್ಥಿತಿ ಇರಲಿದೆ. ನಿಮಗಾಗಿ ಯಾರಿಂದಾದರು ಹಣ ಬರಬಹುದು. ಹೊಸ ವ್ಗವಹಾರ ಸಂಬಂಧಿತ ಆಲೋಚನೆಗಳು ನಿಮಗೆ ಬರಬಹುದು.

ವೃಷಭ ರಾಶಿ

ವೃಷಭ ರಾಶಿ ಜನರಲ್ಲಿ ಇಂದು ಪ್ರಯಾಣದ ದಿನ. ನಿಮ್ಮ ದೊಡ್ಡ ಕೆಲಸವೊಂದು ಕೈಗೂಡಬಹುದು. ಹಣಕಾಸು ವಿಚಾರವಾಗಿ ಬಹಳ ಎಚ್ಚರಿಕೆಯಿಂದ ಇಂದು ಕೆಲಸ ಮಾಡುವುದು ಉತ್ತಮ. ನಿಮ್ಮ ದಾಂಪತ್ಯ ವಿಚಾರದಲ್ಲಿ ಸಂತಸದ ದಿನವಾಗಿರಲಿದೆ.

Dina Bhavishya November 17 Today s Daily Horoscope for 12 Zodiac Signs

ಮಿಥುನ ರಾಶಿ

ಮಿಥುನ ರಾಶಿಯ ಜನರಿಗೆ ಮಿಶ್ರಫಲದ ದಿನ. ಸಮಾಜಮುಖಿ ಕಾರ್ಯದಲ್ಲಿ ಇಂದು ನೀವು ಭಾಗಿಯಾಗುವಿರಿ. ಆಪ್ತರಿಂದ ಹಣ ಕೇಳಿದ್ದರೆ ಸಫಲವಿದೆ. ದೇವಾಲಯ ಭೇಟಿಯ ಸಾಧ್ಯತೆ ಇದೆ. ನಿಮ್ಮ ಕನಸೊಂದನ್ನು ಇಂದು ನನಸು ಮಾಡಿಕೊಳ್ಳಬಹುದು.

ಕರ್ಕ ರಾಶಿ

ಕರ್ಕ ರಾಶಿ ಜನರಲ್ಲಿ ಇಂದು ಪ್ರಯಾಣ ಮಾಡಬೇಕಾದ ದಿನವಾಗಿರಲಿದೆ. ನಿಮಗೆ ಹಣಕಾಸಿನ ಖರ್ಚುಗಳು ಹೆಚ್ಚಾಗಿ ಬರಲಿದೆ. ಪ್ರಯಾಣ ಮಾಡುವಾಗ ಎಚ್ಚರಿಕೆ ಅಗತ್ಯ. ಪೂರ್ವಜರ ಕೆಲಸ ಕಾರ್ಯಗಳನ್ನು ಇಂದು ಮಾಡಿ ಮುಗಿಸಬಹುದು. ಆಸ್ತಿ ಸಂಬಂಧಿತ ವಿಚಾರದಲ್ಲಿ ಗೆಲುವಿದೆ.

ಸಿಂಹ ರಾಶಿ

ಸಿಂಹ ರಾಶಿ ಜನರಿಗೆ ಪ್ರಯಾಣದ ದಿನ. ನಿಮಗಾಗಿ ಶುಭ ಸುದ್ದಿ ಕಾದಿದೆ. ದಿನದ ಅಂತ್ಯದಲ್ಲಿ ಓಡಾಟಗಳು ಹೆಚ್ಛಾಗಲಿದೆ, ರಾತ್ರಿ ಪ್ರಯಾಣಗಳ ಮುಂದೂಡಿದರೆ ಉತ್ತಮ. ಪ್ರೀತಿಯ ವಿಚಾರದಲ್ಲಿ ಇಂದು ಮಧುರವಾದ ದಿನವಾಗಲಿದೆ. ನಿಮಗಾಗಿ ವಸ್ತುವೊಂದನ್ನು ಖರೀದಿ ಮಾಡಬಹುದು.

ಕನ್ಯಾ ರಾಶಿ

ಕನ್ಯಾ ರಾಶಿ ಜನರಲ್ಲಿ ಇಂದು ಅನುಕೂಲಕರ ದಿನವಾಗುತ್ತಿದೆ. ನಿಮ್ಮ ಹಲವು ವಿಚಾರಗಳನ್ನು ಪ್ರಭಾವಿಯೊಬ್ಬರ ಮುಂದಿಡಬಹುದು. ಸವಾಲುಗಳಿಂದ ತುಂಬಿದ ದಿನವಾದರು ಎಲ್ಲಾ ಸವಾಲುಗಳನ್ನು ಕೂಡ ಎದುರಿಸುತ್ತೀರಿ. ಹಲವರಿಗೆ ಬಹುದಿನದ ಹಣವೊಂದು ಕೈ ಸೇರುವ ದಿನವಾಗಬಹುದು.

ತುಲಾ ರಾಶಿ

ತುಲಾ ರಾಶಿ ಜನರಿಗೆ ಬಹುದಿನದಿಂದ ಬರಬೇಕಿದ್ದ ವಸ್ತು ಅಥವಾ ಹಣ ಕೈ ಸೇರಬಹುದು. ನಿಮ್ಮ ಉದ್ಯೋಗದಲ್ಲಿದ್ದ ಅಡ್ಡಿಯೊಂದು ನಿವಾರಣೆಯಾಗುತ್ತದೆ. ಮನೆಯಲ್ಲಿ ಶಾಂತಿಯ ವಾತಾವರಣ ಕೂಡ ಇರಲಿದೆ. ನಿಮ್ಮಿಂದಾಗಿ ಆಪ್ತರೊಬ್ಬರಿಗೆ ಎಲ್ಲಾ ರೀತಿಯಲ್ಲು ನೆರವಾಗುತ್ತಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಜನರಲ್ಲಿ ಸಮಸ್ಯೆಗಳ ದಿನ. ದಿನದ ಆರಂಭದಲ್ಲಿ ಒತ್ತಡ ಇರಲಿದೆ. ಉದರ ಸಂಬಂಧಿ ಸಮಸ್ಯೆಯೊಂದು ನಿಮಗೆ ಕಾಡಬಹುದು. ಅನೇಕರಿಗೆ ಈ ದಿನ ಮನೆಯೊಳಗಿನ ಸಮಸ್ಯೆಗಳು ದೊಡ್ಡದಾಗಬಹುದು, ಅದ್ರಲ್ಲೂ ಸದಸ್ಯರೊಬ್ಬರಿಂದ ನೋವಿನ ಮಾತುಗಳ ಕೇಳಬಹುದು.

ಧನು ರಾಶಿ

ಧನು ರಾಶಿಯ ಮಂದಿಗೆ ಈ ದಿನ ಸಾಮಾನ್ಯವಾಗಿರಲಿದೆ. ನಿಮ್ಮ ಹಣಕಾಸು ಸ್ಥಿತಿಯಲ್ಲಿನ ಏರಿಳಿತ ಇಂದು ಚಿಂತೆಗೆ ತಳ್ಳಬಹುದು. ಮನೆಯಲ್ಲಿ ನಿಮಗಾಗಿ ಶುಭ ಸುದ್ದಿ ಬರಬಹುದು. ಯಾರಿಂದಾದರು ಹಣ ಪಡೆಯುವ ನಿಮ್ಮ ಉದ್ದೇಶ ಈಡೇರಲಿದೆ.

ಮಕರ ರಾಶಿ

ಮಕರ ರಾಶಿಯವರಿಗೆ ಇಂದು ಪ್ರಯಾಣದ ದಿನ. ದೂರ ಪ್ರಯಾಣದ ಅಂತ್ಯದಲ್ಲಿ ನೆಮ್ಮದಿ ಇರಲಿದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಬರಬಹುದು. ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಬ್ಬರಿಂದ ನಿಮಗೆ ಕಷ್ಟದ ದಿನವಾಗಬಹುದು.

ಕುಂಭ ರಾಶಿ

ಕುಂಭ ರಾಶಿ ಜನರಲ್ಲಿ ಈ ದಿನ ಅನುಕೂಲಕರ ವಾತಾವರಣ ಇರಲಿದೆ. ನಿಮ್ಮ ಕಲಸಗಳನ್ನು ಸಮಯದೊಳಗೆ ಮಾಡಿ ಮುಗಿಸುವಿರಿ. ಯಾರಿಂದಾದರು ಹಣ ಪಡೆಯುವುದು ಬಾಕಿ ಉಳಿಸಿಕೊಂಡಿದ್ದರೆ ಮರಳಿ ಪಡೆಯುವ ಪ್ರಯತ್ನ ಬಿಡಬೇಡಿ. ಅಗತ್ಯ ವಸ್ತುಗಳಿಗೆ ಖರ್ಚುಗಳಿವೆ.

ಮೀನ ರಾಶಿ

ಮೀನ ರಾಶಿಯವರು ಇಂದು ಸಮಸ್ಯೆಗಳ ಎದುರಿಸುವ ದಿನ. ನಿಮ್ಮಿಂದ ಸಹಾಯ ಪಡೆದ ಮಂದಿ ನಿಮ್ಮನ್ನು ಮರೆಯುವ ದಿನ. ದುಂದುವೆಚ್ಚಗಳನ್ನು ಮಾಡದೆ ಇರುವುದು ಉತ್ತಮ. ದೇವಾಲಯ ಭೇಟಿ, ಪ್ರವಾಸದ ಸಾಧ್ಯತೆ ಇದೆ.

English summary

Dina Bhavishya November 17: Today’s (Daily) Horoscope for 12 Zodiac Signs

daily horoscope for November 17 astrology predictions for all 12 zodiac signs including career, health, love, and money Boldsky kannada
Story first published: Monday, November 17, 2025, 5:00 [IST]
X
Desktop Bottom Promotion