Dina Bhavishya: ಯಾರಿಗಿಂದು ಲಾಭದಾಯಕ ದಿನ!

ಮೇಷ ರಾಶಿ

ಮೇಷ ರಾಶಿ ಜನರಿಗೆ ಇಂದು ಸಮಸ್ಯೆಗಳ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿ ನೋಡಬಹುದು. ವ್ಯಾಪಾರ ಸಂಬಂಧಿತ ವಿಚಾರದಲ್ಲಿ ಇಂದು ಹಣಕಾಸಿನ ಸಮಸ್ಯೆಗಳ ನೋಡಬಹುದು. ದಿನದ ಅಂತ್ಯದಲ್ಲಿ ದೊಡ್ಡ ಖರ್ಚು ಇರಲಿದೆ. ನಿಮಗಾಗಿ ಇಂದು ವಸ್ತುವೊಂದನ್ನು ಖರೀದಿಸಲಿದ್ದೀರಿ.

ವೃಷಭ ರಾಶಿ

ವೃಷಭ ರಾಶಿ ಜನರಿಗೆ ಇಂದು ಪ್ರಯಾಣ ಮಾಡಬೇಕಾದ ದಿನ. ನಿಮ್ಮ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬೇಕಾಗಬಹುದು. ಆಪ್ತರೊಬ್ಬರಿಂದ ಹಣಕಾಸಿನ ನೆರವು ಪಡೆಯುವ ನಿಮ್ಮ ಬಯಕೆಯು ವಿಫಲವಾಗಬಹುದು.

Dina Bhavishya November 16 Today s Daily Horoscope for 12 Zodiac Signs

ಮಿಥುನ ರಾಶಿ

ಮಿಥುನ ರಾಶಿ ಜನರಿಗೆ ಇಂದು ಮಿಶ್ರಫಲದ ದಿನ. ನಿಮಗೆ ಹಲವು ವಿಚಾರಗಳಲ್ಲಿ ಧನಾತ್ಮಕ ಸಂಗತಿಗಳಿವೆ. ಅನೇಕರು ಇಂದು ಪ್ರಯಾಣ ಮಾಡುತ್ತೀರಿ. ನಿಮಗಾಗಿ ಶುಭ ಸುದ್ದಿಗಳು ಕಾದಿವೆ. ದಾಂಪತ್ಯದಲ್ಲಿನ ದೊಡ್ಡ ಸಮಸ್ಯೆಯೊಂದನ್ನು ನಿವಾರಣೆ ಮಾಡಿಕೊಳ್ಳಬಹುದು.

ಕರ್ಕ ರಾಶಿ

ಕರ್ಕ ರಾಶಿಯ ಜನರಿಗೆ ಇಂದು ಸವಾಲುಗಳಿಂದ ತುಂಬಿದ ದಿನ. ನಿಮ್ಮ ಕೆಲಸ ಕಾರ್ಯದಲ್ಲಿ ಹಿನ್ನಡೆ ನೋಡಬಹುದು. ಹೊಸ ವ್ಯವಹಾರಗಳನ್ನು ಎಚ್ಚರಿಕೆಯಿಂದ ಮಾಡಬೇಕಿದೆ. ಹೊಸ ದಿಕ್ಕಿನಿಂದ ಹಣ ಗಳಿಸುವ ನಿಮ್ಮ ನಿರೀಕ್ಷೆ ದೂರಾಗಲಿದೆ.

ಸಿಂಹ ರಾಶಿ

ಸಿಂಹ ರಾಶಿ ಜನರಿಗೆ ಇಂದು ಪ್ರಯಾಣ ಮಾಡುವ ದಿನ. ಕುಟುಂಬಸ್ಥರೊಂದಿಗೆ ನೀವು ಪ್ರಯಾಣ ಮಾಡುವಿರಿ. ಆಪ್ತರೊಬ್ಬರಿಂದ ಬರಬೇಕಿದ್ದ ಹಣ ಮುಂದೂಡಬಹುದು. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವ ಕಡೆಗೆ ಒಲವು ಹೆಚ್ಚಾಗುತ್ತದೆ. ಉಳಿತಾಯದ ಹಣವನ್ನು ಬೇರೆ ಕೆಲಸಗಳಿಗೆ ಬಳಸುವುದು ನಿಲ್ಲಿಸಿ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಲ್ಲಿ ಇಂದು ಪ್ರಯಾಣದ ದಿನ. ನಿಮಗೆ ದೂರ ಪ್ರಯಾಣದಿಂದ ಧನಲಾಭವಿದೆ. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ನಿಮಗಾಗಿ ದೊಡ್ಡ ಕನಸೊಂದನ್ನು ಈಡೇರಿಸಿಕೊಳ್ಳುವ ದಾರಿ ಸಿಗುವ ದಿನ. ದಾಂಪತ್ಯದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ.

ತುಲಾ ರಾಶಿ

ತುಲಾ ರಾಶಿಯ ಜನರಿಗೆ ಮಿಶ್ರ ಫಲದ ದಿನ. ನಿಮ್ಮ ಹಲವು ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬೇಕಾಗಬಹುದು. ದೊಡ್ಡ ಸವಾಲುಗಳು ಎದುರಾಗಬಹುದು. ಹೂವು, ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಈ ದಿನ ಶುಭವಾಗಲಿದೆ. ಸಂಬಂಧಗಳು ಗಟ್ಟಿಯಾಗಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರಿಗೆ ಸವಾಲುಗಳಿಂದ ತುಂಬಿದ ದಿನವಾಗುತ್ತಿದೆ. ನಿಮ್ಮಿಂದಾಗಿ ಸ್ನೇಹಿತರಿಗೆ ಸಹಾಯವಾಗಲಿದೆ. ಉದ್ಯೋಗದ ಸ್ಥಳದಲ್ಲಿ ಒತ್ತಡ ಹಾಗೆ ಕೆಲಸದಲ್ಲಿ ದೊಡ್ಡ ಸಮಸ್ಯೆಗಳು ಎದುರಾಗಬಹುದು. ವಾಹನ ಸಂಬಂಧಿ ಖರ್ಚುಗಳಿವೆ. ಉದರ ಸಂಬಂಧಿ ಸಮಸ್ಯೆಗಳಿರಬಹುದು.

ಧನು ರಾಶಿ

ಧನು ರಾಶಿಯ ಜನರಿಗೆ ಇಂದು ಅನುಕೂಲಕರ ದಿನ. ಹಲವು ಕೆಲಸಗಳಲ್ಲಿ ನಿಮಗೆ ಶುಭವಿದೆ. ದೇವಾಲಯ ಅಥವಾ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಪಂಚೇಂದ್ರಿಯ ಸಂಬಂಧಿತ ವಿಚಾರದಲ್ಲಿ ನೋವಿನ ಸಂಗತಿಗಳಿವೆ. ಆರ್ಥಿಕ ಸ್ಥಿತಿಯ ಬಿಕ್ಕಟ್ಟು ಹಿನ್ನಲೆಯಲ್ಲಿ ಚಿಂತೆ ಕಾಡಬಹುದು.

ಮಕರ ರಾಶಿ

ಮಕರ ರಾಶಿ ಜನರಿಗೆ ಇಂದು ಅನುಕೂಲಕರ ದಿನ. ದಾಂಪತ್ಯ ವಿಚಾರದಲ್ಲಿ ನಿಮಗಿಂದು ಸಮಸ್ಯೆಗಳಿವೆ. ತಾಳ್ಮೆಯಿಂದ ವರ್ತಿಸುವುದರಿಂದ ನಿಮ್ಮ ದೊಡ್ಡ ಉದ್ದೇಶವೊಂದು ಪೂರ್ಣವಾಗಲಿದೆ. ವಾಹನ ಸಂಬಂಧಿತ ಖರ್ಚು ಇದೆ.

ಕುಂಭ ರಾಶಿ

ಕುಂಭ ರಾಶಿಯವರಲ್ಲಿ ಮಿಶ್ರಫಲದ ದಿನ. ಪ್ರಯಾಣಗಳಲ್ಲಿ ಶುಭಫಲವಿದೆ. ಕೃಷಿ ಸಂಬಂಧಿತ ವಿವಾರದಲ್ಲಿ ಲಾಭ ಮಾಡುವಿರಿ. ಹೊಸ ವ್ಯವಹಾರಗಳಲ್ಲಿ ಲಾಭ ನೋಡಬಹುದು. ಆಪ್ತರಿಗೆ ನಿಮ್ಮಿಂದ ಎಲ್ಲಾ ರೀತಿ ಸಹಕಾರ ನಿರೀಕ್ಷಿಸಬಹುದು.

ಮೀನ ರಾಶಿ

ಮೀನ ರಾಶಿಯವರಿಗೆ ಶುಭಫಲದ ದಿನ. ಆಹಾರ ಸಂಬಂಧಿತ ಖರ್ಚುಗಳಿವೆ. ನಿಮ್ಮ ನೋವಿನ ವಿಚಾರದಲ್ಲಿ ಬೇರೆಯವರ ಆಗಮನದಿಂದ ನಿರಾಳತೆ ಇದೆ. ಹಣಕಾಸು ವಿಚಾರವಾಗಿ ಎಚ್ಚರಿಕೆಯಿಂದ ಇರುವುದು ಉತ್ತಮ. ಮಕ್ಕಳ ವಿಚಾರದಲ್ಲಿ ಚಿಂತೆ ಇರಲಿದೆ.

English summary

Dina Bhavishya November 16: Today’s Daily Horoscope for 12 Zodiac Signs

daily horoscope for November 16 astrology predictions for all 12 zodiac signs including career, health, love, and money Boldsky kannada
Story first published: Sunday, November 16, 2025, 5:01 [IST]
X
Desktop Bottom Promotion