Latest Updates
-
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ!
Dina Bhavishya: ಈ ಶನಿವಾರವು ಹಣ ಒಲಿಯುವ ದಿನ!
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 15 (15 November Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ಶನಿವಾರ ಬಹಳ ಅನುಕೂಲವಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಶುಭವಾಗುತ್ತಿದೆ. ಆಪ್ತರಿಗೆ ನಿಮ್ಮಿಂದಾಗಿ ಹಣಕಾಸಿನ ನೆರವು ಸಿಗಲಿದೆ. ವೈದ್ಯರು, ವಕೀಲರು ಸೇರಿ ಹಲವು ಹುದ್ದೆಯಲ್ಲಿರುವ ಮಂದಿಗೆ ಈ ದಿನ ಶುಭವಾಗುತ್ತಿದೆ. ದಾಂಪತ್ಯ ಸಂತೋಷ ನಿಮ್ಮದಾಗಲಿದೆ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಪ್ರಯಾಣ ಮಾಡುವ ಅನಿವಾರ್ಯತೆ ಇರಲಿದೆ. ನಿಮ್ಮದಲ್ಲದ ಕೆಲಸಕ್ಕೆ ನೀವು ಪ್ರಯಾಣ ಮಾಡುವಿರಿ. ಆಪ್ತರಿಂದ ನಿಮಗೆ ಹಣಕಾಸಿನ ನೆರವು ಇರಲಿದೆ. ನಿಮಗೆ ಅಗತ್ಯವಾಗಿ ಬೇಕಾಗಿದ್ದ ವಸ್ತುವೊಂದನ್ನು ಇಂದು ಖರೀದಿಸುತ್ತೀರಿ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಸಮಸ್ಯೆಗಳ ದಿನವಾಗಬಹುದು. ನಿಮ್ಮ ಹಣಕಾಸು ಸ್ಥಿತಿ ಹದಗೆಡಬಹುದು. ಇದರಿಂದ ನಿಮ್ಮಲ್ಲಿ ಅಶಾಂತಿ ಇರಲಿದೆ, ಗೊಂದಲದ ದಿನವಾಗಬಹುದು. ಸುಲಭವಾಗಿ ಮಾಡುತ್ತಿದ್ದ ಕೆಲಸವೊಂದು ಕಷ್ಟವಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಜನರಲ್ಲಿ ಸಾಮಾನ್ಯ ದಿನವಾಗಲಿದೆ. ನಿಮಗಾಗಿ ಶುಭ ಸುದ್ದಿ ಕಾದಿದೆ. ಅನೇಕರಿಗೆ ಇಂದು ಪ್ರಯಾಣ ಮಾಡಬೇಕಾದ ದಿನವಾಗಲಿದೆ. ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕು. ನಿಮ್ಮ ವ್ಯಾಪಾರಗಳು ನಿಧಾನವಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಸಾಮಾನ್ಯ ದಿನವಾಗಿರಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಇಂದು ಅಡ್ಡಿಗಳಿವೆ. ಆದ್ರೆ ದಿನದ ಅಂತ್ಯದಲ್ಲಿ ನೆಮ್ಮದಿ ಇರಲಿದೆ. ಆಪ್ತರಿಂದ ಶುಭ ಸುದ್ದಿ ಕೇಳುವಿರಿ. ಮನೆಯಿಂದ ಹೊರಗೆ ಹೆಚ್ಚು ಸಮಯ ಕಳೆಯುವಿರಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಸಮಸ್ಯೆಗಳಿಂದ ತುಂಬಿರುವ ದಿನ. ನಿಮ್ಮ ಆರೋಗ್ಯದಲ್ಲಿ ಏರುಪೇರು ಸಂಭವ. ನಿಮ್ಮ ಹಲವು ಕಷ್ಟಗಳಿಗೆ ಪರಿಹಾರ ಪಡೆಯುವ ಸಮಯ. ಆಪ್ತರ ಮೂಲಕ ನಿಮಗೆ ಸಹಕಾರ ಸಿಗಲಿದೆ. ದಾಂಪತ್ಯ ವಿಚಾರದಲ್ಲಿ ನಿಮ್ಮ ತಾಳ್ಮೆ ಪರೀಕ್ಷೆ ನಡೆಯಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಹಣಕಾಸು ವಿಚಾರದಲ್ಲಿ ಸಮಸ್ಯೆಗಳು ಬರಬಹುದು. ಅದ್ರಲ್ಲೂ ನಿಮ್ಮ ಆಪ್ತರಿಗೆ ನೀಡಿದ್ದ ಹಣ ಮರಳಿ ಪಡೆಯುವುದು ಕಷ್ಟವಾಗಬಹುದು. ಯಾರಿಂದಾದರು ನಿಮಗೆ ನೋವಾಗಿದ್ದರೆ ಈ ದಿನ ಪರಿಹಾರ ಮಾಡಿಕೊಳ್ಳಬಹುದು. ನಿಮ್ಮ ಕೆಲಸಗಳು ಪೂರ್ಣವಾಗದೆ ಇರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಇಂದು ಪ್ರಯಾಣ ಮಾಡಬೇಕಾದ ದಿನವಾಗುತ್ತದೆ. ಇಂದು ಹಲವು ವಿಚಾರಗಳು ನಿಮಗೆ ನೋವು ತರಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಸಾಮಾನ್ಯ ದಿನವಾಗಲಿದೆ.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಸವಾಲಿನಿಂದ ತುಂಬಿರಲಿದೆ. ಇಂದು ಯಾರ ಬಳಿಯಾದರು ಹಣಕ್ಕಾಗಿ ಬೇಡಿಕೆ ಇಟ್ಟರೆ ಪಡೆಯುವ ಸಂಭವ ಹೆಚ್ಛಾಗಲಿದೆ. ಪ್ರೀತಿಯ ವಿಚಾರದಲ್ಲಿ ನಿಮಗೆ ಶುಭವಾಗುತ್ತದೆ. ಪ್ರಯಾಣ ಮಾಡಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನ ಶುಭವಾಗಲಿದೆ. ಕುಟುಂಬಸ್ಥರೊಂದಿಗೆ ಸಮಯ ಕಳೆಯುವಿರಿ, ದಿನದ ಅಂತ್ಯದಲ್ಲಿ ಕುಟುಂಬದೊಂದಿಗೆ ಪ್ರಯಾಣ ಮಾಡಬಹುದು. ನಿಮಗಾಗಿ ಹಲವು ವಸ್ತು ಖರೀದಿಸಬಹುದು. ಪ್ರಯಾಣದಲ್ಲಿ ಎಚ್ಚರ ಇಡುವುದು ಉತ್ತಮ.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗಬಹುದು. ಹಣಕಾಸು ವಿಚಾರಗಳಲ್ಲಿ ನಿಮ್ಮ ಬಯಕೆಗಳು ಪೂರ್ಣವಾಗದೇ ಇರಬಹುದು. ಕೆಲಸಗಳಲ್ಲಿ ಅಡ್ಡಿಗಳು ಬರಬಹುದು. ಆರೋಗ್ಯದಲ್ಲಿ ಏರುಪೇರು ಸಂಭವವಿದೆ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಸವಾಲಿನ ದಿನ. ನಿಮ್ಮ ಕೆಲಸ ಕಾರ್ಯದಲ್ಲಿ ಶುಭವಾಗುವ ದಿನವಿದು. ದೇವಾಲಯ ಭೇಟಿಯ ಸಾಧ್ಯತೆ ಇದೆ. ಹಲವು ಮಂದಿಗೆ ಇಂದು ದಾಂಪತ್ಯ ವಿಚಾರವಾಗಿ ಅಥವಾ ಸಂಬಂಧಿಕರೊಂದಿಗೆ ಮನಸ್ತಾಪ ಮೂಡಬಹುದು.



Click it and Unblock the Notifications











