Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
Dina Bhavishya: ಯಾರಿಗೆಲ್ಲಾ ಇಂದು ಶುಭಕರ ದಿನ!
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 13 (13 November Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಉತ್ತಮ ಅನುಕೂಲಕರ ದಿನ. ನಿಮ್ಮ ಹಲವು ಕೆಲಗಳನ್ನು ನೀವು ಅಂದುಕೊಂಡ ಸಮಯದಲ್ಲಿ ಮುಗಿಸುವಿರಿ. ಆಪ್ತರಿಂದ ದೊಡ್ಡ ಮಟ್ಟದ ಸಹಾಯ ಪಡೆಯಲಿದ್ದೀರಿ. ನಿಮ್ಮ ವ್ಯಾಪಾರ ಅಥವಾ ವ್ಯವಹಾರ ಸಂಬಂಧವಾಗಿ ಪ್ರಯಾಣ ಮಾಡುವಿರಿ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಮಿಶ್ರ ಫಲದ ದಿನ. ನಿಮ್ಮ ಕೆಲಸಗಳಲ್ಲಿ ಸವಾಲುಗಳು ಎದುರಾಗಲಿದೆ, ಆದಾಯದಷ್ಟೇ ಖರ್ಚು, ಆರೋಗ್ಯದಲ್ಲಿನ ಸುಧಾರಣೆಯಿಂದ ಕೆಲಸದಲ್ಲಿ ಹುಮ್ಮಸ್ಸು ನೋಡಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾಗುತ್ತದೆ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಪ್ರಯಾಣಗಳಲ್ಲಿ ಶುಭವಿದೆ. ಬ್ಯಾಂಕಿಂಗ್, ಫೈನಾನ್ಸ್, ನ್ಯಾಯಾಲಯ ಸಂಬಂಧಿತ ವಿಚಾರವಾಗಿ ಶುಭವಿದೆ. ಆಪ್ತರಿಗೆ ಸಹಾಯ ಮಾಡಬೇಕಾಗುತ್ತದೆ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಸವಾಲುಗಳಿಂದ ತುಂಬಿದ ದಿನ. ನಿಮ್ಮ ಹಲವು ಕೆಲಸಗಳನ್ನು ಇಂದು ಯಾವುದೇ ಅಡ್ಡಿ ಇಲ್ಲದೆ ಮಾಡಬಹುದು. ಯಾರಿಂದಾದರು ಹಣ ಪಡೆದಿದ್ದರೆ ಒತ್ತಡ ಎದುರಿಸಬಹುದು. ನಿಮ್ಮ ಪ್ರಯಾಣಗಳಲ್ಲಿ ಶುಭವಿದೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಯಾರಿಂದಾದರು ಸಹಾಯ ಪಡೆಯುವ ದಿನ. ಆರ್ಥಿಕವಾಗಿ ನಿಮ್ಮ ಬಲ ದೃಢವಾಗಲಿದೆ. ಯಾರಿಗಾದರು ಸಾಲ ನೀಡುವ ಮುನ್ನ ಎಚ್ಚರ ವಹಿಸಿ. ವ್ಯಾಪಾರಿಗಳಿಗೆ ಉತ್ತಮ ಲಾಭದ ದಿನ. ಪ್ರಯಾಣಗಳ ಮಾಡುವಿರಿ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಲ್ಲಿ ಇಂದು ದೊಡ್ಡ ಮಟ್ಟದ ಲಾಭವಿದೆ. ನಿಮ್ಮ ಹಣಕಾಸು ವಿಚಾರವಾಗಿ ಧನಾತ್ಮಕ ವಿಚಾರಗಳಿರಲಿದೆ. ವಾಹನ ಖರೀದಿ ಸಂಬಂಧವಾಗಿ ನಿಮಗೆ ಶುಭ ಫಲವಿದೆ. ಯಾರಿಗೂ ಹಣ ನೀಡಲು ಮುಂದಾಗಬೇಡಿ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಇಂದು ಸವಾಲಿನ ದಿನ. ನೀವು ಮಾಡಬೇಕಿದ್ದ ಕೆಲಸಗಳು ಅಪೂರ್ಣವಾಗಬಹುದು. ಕೆಲಸದ ವಿವಾರದಲ್ಲಿ ಕಲಹಗಳಿರಬಹುದು. ದೊಡ್ಡ ಕೆಲಸಗಳಿಗೆ ಅಡ್ಡಿ ಇದೆ. ತಂದೆ ತಾಯಿ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ಅಚ್ಚರಿಯ ದಿನ. ನೀವು ಬಯಸಿದಂತಹ ಫಲಿತಾಂಶ ಪಡೆಯಬಹುದು. ದಾಂಪತ್ಯ ವಿಚಾರದಲ್ಲಿ ನಿಮಗೆ ಸಂತಸದ ದಿನ. ದೂರ ಪ್ರಯಾಣಗಳಲ್ಲಿ ನಿಮಗೆ ನಿರೀಕ್ಷಿತ ಫಲಿತಾಂಶಗಳಿವೆ. ಅಡ್ಡಿಗಳನ್ನು ಎದುರಿಸುವುದು ನಿಮಗೆ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಲಿದೆ.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಉತ್ತಮ ದಿನ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆ ಈಡೇರಲಿದೆ. ಅನೇಕರಲ್ಲಿ ಇಂದಿನ ಕೆಲಸಗಳು ಸುಗಮವಾಗಿ ನಡೆಯಲಿದೆ. ಆಪ್ತರೊಬ್ಬರ ಅನಾರೋಗ್ಯ ಸಂಬಂಧವಾಗಿ ನೀವಿಂದು ಪ್ರಯಾಣದಲ್ಲಿ ಭಾಗಿಯಾಗುತ್ತೀರಿ.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ಸವಾಲಿನ ದಿನ. ಸರ್ಕಾರಿ ಕಚೇರಿ ಕೆಲಸಗಳು, ಬ್ಯಾಂಕಿಂಗ್ ವಿಚಾರಗಳಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸುವಿರಿ. ಕೃಷಿ ಸಂಬಂಧಿತ ವಿಚಾರವಾಗಿ ನಿಮಗೆ ಉತ್ತಮ ದಿನ. ಗೃಹಿಣಿಯರು ಇಂದು ಪ್ರಯಾಣ ಮಾಡುವಿರಿ.
ಕುಂಭ ರಾಶಿ
ಕುಂಭ ರಾಶಿಯವರು ಈ ದಿನ ಉತ್ತಮವಾಗಿ ಕಳೆಯುವಿರಿ. ಪ್ರೀತಿ ಪಾತ್ರರೊಂದಿಗೆ ಹೆಚ್ಚು ಸಮಯ ಇರಬಹುದು. ನಿಮ್ಮಲ್ಲಿದ್ದ ದೊಡ್ಡ ಕಷ್ಟವೊಂದು ನಿವಾರಣೆಯಾಗಲಿದೆ. ವಾಹನ ಸಂಬಂಧವಾಗಿ ಇದ್ದ ಒತ್ತಡ ಅಥವಾ ಚಿಂತೆ ದೂರಾಗಲಿದೆ.
ಮೀನ ರಾಶಿ
ಮೀನ ರಾಶಿಯ ಗೃಹಿಣಿಯರಿಗೆ ಇಂದು ಉತ್ತಮ ದಿನವಾಗುವ ನಿರೀಕ್ಷೆ ಇದೆ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆ ಈಡೇರಲಿದೆ. ಸವಾಲುಗಳನ್ನು ಎದುರಿಸಬಹುದು, ಆದ್ರೆ ಅದರಿಂದ ಹೊರಬರುವ ಮಾರ್ಗವನ್ನೂ ಕೂಡ ಕಂಡುಕೊಳ್ಳಲಿದ್ದೀರಿ.



Click it and Unblock the Notifications











