Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
Dina Bhavishya: ಈ ಮಂಗಳವಾರ ಯಾರಿಗೆಲ್ಲಾ ಶುಭಕರ?
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 11(11 November Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಸವಾಲುಗಳಿಂದ ತುಂಬಿದ ದಿನ. ನಿಮ್ಮ ದೈನಂದಿನ ಕೆಸಲಗಳಲ್ಲಿ ಹಣಕಾಸಿನ ವಿಚಾರವು ಅಡ್ಡಿಯಾಗಲಿದೆ. ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ಅರ್ಧಕ್ಕೆ ನಿಲ್ಲಬಹುದು. ನಿಮ್ಮ ವ್ಯಾಪಾರ ಸಂಬಂಧಿತ ವಿಚಾರವಾಗಿ ಚಿಂತೆ ಕಾಡಬಹುದು.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಪ್ರಯಾಣ ಮಾಡುವ ದಿನ. ಗೃಹಿಣಿಯರು ಪ್ರಯಾಣದೊಂದಿಗೆ ಖರ್ಚುಗಳ ಮಾಡಬೇಕಾಗುತ್ತದೆ. ಹೊಸ ದಿಕ್ಕು ಅಥವಾ ಮೂಲದಿಂದ ನಿಮಗೆ ಆದಾಯ ಬರಬಹುದು. ಕುಟುಂಬದಲ್ಲಿನ ಮನಸ್ತಾಪ ದೊಡ್ಡದಾಗಬಹುದು.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ಅನುಕೂಲಕರ ದಿನ. ನಿಮ್ಮೆಲ್ಲಾ ಕೆಲಸಗಳನ್ನು ನಿಗದಿತ ಸಮಯಕ್ಕೆ ಮುಗಿಸಲು ನೀವು ಮುಂದಾಗಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ. ಪ್ರಯಾಣದಲ್ಲಿ ಎಚ್ಚರಿಕೆ ಇಡಿ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಉತ್ತಮ ದಿನ. ಗೃಹಿಣಿಯರು ಇಂದು ಧನಲಾಭ ನೋಡಬಹುದು. ಅವಿವಾಹಿತರಲ್ಲಿ ಇಂದು ಹಣಕಾಸು ವಿಚಾರದಲ್ಲಿ ಸವಾಲುಗಳಿವೆ. ಸಾಲ ಮಾಡುವ ನಿಮ್ಮ ನಿರ್ಧಾರಕ್ಕೆ ಅಡ್ಡಿ ಇರಲಿದೆ.
ಸಿಂಹ ರಾಶಿ
ಸಿಂಹ ರಾಶಿಯ ಜನರಲ್ಲಿ ಇಂದು ಮಿಶ್ರ ಫಲ ನೋಡಬಹುದು. ನಿಮ್ಮ ಹಣಕಾಸು ಸ್ಥಿತಿ ಸುಧಾರಿಸಲಿದೆ. ಆಪ್ತರಿಂದ ನಿಮಗೆ ಆರ್ಥಿಕ ಸಹಾಯ ಸಿಗಲಿದೆ. ಉಳಿತಾಯ ಹೆಚ್ಚಾಗಲಿದೆ. ಯಾರಿಂದಾದರು ವಸ್ತು ಪಡೆದಿದ್ದರೆ ಮರಳಿ ನೀಡುವುದು ಉತ್ತಮ. ಗೃಹಿಣಿಯರಲ್ಲಿ ಸಂತೋಷದ ದಿನ. ಪ್ರೀತಿ ವಿಚಾರದಲ್ಲಿ ಮಧುರ ದಿನ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಲವು ಕೆಲಸಗಳನ್ನು ಯಾರ ಸಹಾಯವೂ ಇಲ್ಲದೆ ಮುಗಿಸಲಿದ್ದೀರಿ. ನಿಮಗಾಗಿ ಶುಭ ಸುದ್ದಿಯೊಂದು ಕೇಳಿಬರಬಹುದು. ದಾಂಪತ್ಯದಲ್ಲಿ ಸಂದೇಹಗಳು ದೂರಾಗಬಹುದು. ಸ್ವಂತ ಉದ್ಯೋಗ ಮಾಡುತ್ತಿರುವ ಮಂದಿಗೆ ಉತ್ತಮ ದಿನ.
ತುಲಾ ರಾಶಿ
ತುಲಾ ರಾಶಿಯ ಜನರಲ್ಲಿ ಇಂದು ಪ್ರಯಾಣದ ದಿನ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆ ಈಡೇರಬಹುದು. ಕುಟುಂಬಸ್ಥರಿಂದ ನಿಮ್ಮ ಕೆಲಸದ ಸಂಬಂಧ ಬೆಂಬಲ ಪಡೆಯಲಿದ್ದೀರಿ. ಪ್ರಯಾಣಕ್ಕೆ ಸಿದ್ದರಾಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಇಂದು ಸವಾಲಿನ ದಿನ. ದಿನದ ಆರಂಭದಿಂದಲೂ ಆತಂಕ ನಿಮಗೆ ಕಾಡಬಹುದು. ಉದರ ಸಂಬಂಧಿ ಸಮಸ್ಯೆ ಕಾಡಬಹುದು. ಮನೆಯಲ್ಲಿ ಅಶಾಂತಿ ವಾತಾವರಣವು ನಿಮಗೆ ಕಿರಿಕಿರಿ ಉಂಟು ಮಾಡಬಹುದು.
ಧನು ರಾಶಿ
ಧನು ರಾಶಿಯವರು ಇಂದು ಮೂಳೆ ಸಂಬಂಧಿತ ವಿಚಾರವಾಗಿ ಅಥವಾ ಪಂಚೇಂದ್ರಿಯ ಕುರಿತಾದ ವಿಚಾರದಲ್ಲಿ ನೋವು ಅನುಭವಿಸಬಹುದು. ನಿಮ್ಮ ಕೆಲಸಗಳು ಸರಾಗ ನಡೆಯಲಿವೆ. ಬ್ಯಾಂಕಿಂಗ್ ವಿಚಾರಗಳು ಸುಲಭವಾಗುತ್ತವೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಿ.
ಮಕರ ರಾಶಿ
ಮಕರ ರಾಶಿಯವರಿಗೆ ಸವಾಲುಗಳಿಂದ ತುಂಬಿರುವ ದಿನ. ಶುಭ ಕಾರ್ಯದಲ್ಲಿ ನೀವು ಭಾಗಿಯಾಗಬಹುದು. ವಾಹನ ಸಂಬಂಧಿತ ಖರ್ಚು ಹೆಚ್ಚಾಗಲಿದೆ. ಹೋಟೆಲ್ ಉದ್ಯಮಿಗಳು ಹೊಸ ವ್ಯವಹಾರದಿಂದ ದೂರ ಉಳಿಯುವುದು ಉತ್ತಮ.
ಕುಂಭ ರಾಶಿ
ಕುಂಭ ರಾಶಿಯ ಜನರಲ್ಲಿ ಇಂದು ಅತ್ಯುತ್ತಮ ದಿನ. ನಿಮ್ಮ ಎಲ್ಲಾ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮುಗಿಸುತ್ತೀರಿ. ಇಷ್ಟು ದಿನದ ಆದಾಯ ವಿಚಾರದಲ್ಲಿ ಇಂದು ಫಲತಾಂಶ ಸಿಗಲಿದೆ. ನಿಮ್ಮ ಕುಟುಂಬದಲ್ಲಿದ್ದ ಒತ್ತಡವೊಂದು ನಿವಾರಣೆಯಾಗಲಿದೆ.
ಮೀನ ರಾಶಿ
ಮೀನ ರಾಶಿಯ ಜನರಲ್ಲಿ ಇಂದು ಉತ್ತಮ ದಿನವಾಗುವ ಅವಕಾಶಗಳಿವೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ. ನಿಮ್ಮ ಕೆಲಸದಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿ. ದೊಡ್ಡ ಕೆಲಸಗಳಲ್ಲಿ ಸ್ನೇಹಿತರ ಸಹಾಯ ಪಡೆಯಲಿದ್ದೀರಿ.



Click it and Unblock the Notifications