Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
Dina Bhavishya: ಭಾನುವಾರದ ನಿಮ್ಮ ರಾಶಿಫಲ!
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 09 (09 November Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಭಾನುವಾರ ಅದೃಷ್ಟಕರ ದಿನ. ನಿಮ್ಮ ಬಹುತೇಕ ಸಮಯ ಧನಾತ್ಮಕವಾಗಿ ಇರಲಿದೆ. ಆಪ್ತರಿಂದ ನಿಮಗೆ ಹಣಕಾಸಿನ ಬೆಂಬಲ ಸಿಗಲಿದೆ. ಹಲವರಿಗೆ ಈ ದಿನ ಧನಲಾಭವಿದೆ. ಪ್ರಯಾಣಗಳಲ್ಲಿ ನೀವು ತೊಡಗುತ್ತೀರಿ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಪ್ರಯಾಣಗಳ ಮಾಡುವ ದಿನ. ಸ್ನೇಹಿತರೊಂದಿಗೆ ಅಥವಾ ಕುಟುಂಬದೊಂದಿಗೆ ನೀವು ಪ್ರಯಾಣ ಮಾಡುವಿರಿ. ದೊಡ್ಡ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸುವಿರಿ. ನಿಮ್ಮ ದೈನಂದಿನ ಕೆಲಸಗಳಲ್ಲಿ ಶುಭವಿದೆ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಇಂದು ಸವಾಲುಗಳ ದಿನ. ಆರ್ಥಿಕ ಸ್ಥಿತಿ ಸುಧಾರಿಸುವ ಬದಲಾಗಿ ಮತ್ತಷ್ಟು ಹದಗೆಡಲಿದೆ. ನಿಮ್ಮ ಅನೇಕ ಕೆಲಸಗಳಲ್ಲಿ ಅಡ್ಡಿಗಳಿವೆ. ದಾಂಪತ್ಯ ವಿಚಾರದಲ್ಲಿ ಮನಸ್ತಾಪಗಳಿವೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ದೊಡ್ಡ ಲಾಭವಿದೆ, ಕುಟುಂಬಸ್ಥರು, ಸ್ನೇಹಿತರಿಂದ ನಿಮಗೆ ಧನ ಸಹಾಯ ಸಿಗಲಿದೆ. ಆಸ್ತಿಗಾಗಿ ನೀವು ಖರ್ಚು ಮಾಡುತ್ತೀರಿ. ಪ್ರಯಾಣ ಮಾಡುವಾಗ ಎಚ್ಚರಿಕೆ ವಹಿಸಬೇಕಿದೆ. ಆಪ್ತರ ಸಲಹೆಗಳನ್ನು ಕಡೆಗಣಿಸಬೇಡಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಸಾಮಾನ್ಯ ದಿನವಾಗಿರಲಿದೆ. ನಿಮ್ಮ ದೈನಂದಿನ ಕೆಲಸದಿಂದ ಇಂದು ವಿಶ್ರಾಂತಿ ಪಡೆಯುತ್ತೀರಿ. ದೂರ ಪ್ರಯಾಣಗಳ ಮಾಡಬೇಕಾಗುತ್ತದೆ. ಆಪ್ತರಿಂದ ಬರಬೇಕಿದ್ದ ಹಣ ಮರಳಿ ಪಡೆಯಲು ನೀವು ಅರ್ಹರಾಗಿರುತ್ತೀರಿ. ಆರೋಗ್ಯದ ಕಡೆಗೂ ಗಮನವಿಡಿ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಅನುಕೂಲಕರ ದಿನ. ದಾಂಪತ್ಯ ಸುಖ ಅನುಭವಿಸುವ ದಿನ. ಮನೆಗಾಗಿ ನೀವು ಖರ್ಚು ಮಾಡುತ್ತೀರಿ. ಸಂಬಂಧಿಕರ ಭೇಟಿ ಸಂಭವವಿದೆ. ಸ್ವಂತ ಉದ್ಯಮಿಗಳು ಇಂದು ಮಿಶ್ರ ಫಲ ನೋಡುವಿರಿ. ಪ್ರೇಮಿಗಳು ಇಂದು ಪ್ರಯಾಣ ಮಾಡಬಹುದು.
ತುಲಾ ರಾಶಿ
ತುಲಾ ರಾಶಿಯ ಗೃಹಿಣಿಯರಿಗೆ ಇಂದು ಉತ್ತಮ ದಿನ. ನಿಮ್ಮ ಹಲವು ಕನಸನ್ನು ಈಡೇರಿಸಿಕೊಳ್ಳುವತ್ತ ಮತ್ತೊಂದು ಹೆಜ್ಜೆ ಹತ್ತಿರವಾಗಬಹುದು. ಮಕ್ಕಳ ಕುರಿತಾದ ಚಿಂತೆಯೊಂದು ನಿಮಗೆ ಕಾಡಲಿದೆ. ದಿನದ ಅಂತ್ಯವು ಖರ್ಚುಗಳಿಂದ ತುಂಬಿರಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ದೊಡ್ಡ ಲಾಭದ ದಿನ. ವ್ಯಾಪಾರಿಗಳು ಲಾಭ ನೋಡುವಿರಿ. ರಸ್ತೆ ಬದಿ ವ್ಯಾಪಾರಿಗಳು ಅಧಿಕ ಲಾಭ ನೋಡುವ ದಿನ. ವ್ಯವಹಾರದಲ್ಲಿ, ಹೊಸ ಒಪ್ಪಂದ ವಿಚಾರವಾಗಿ ವ್ಯಕ್ತಿಯೊಬ್ಬರ ಭೇಟಿಯಾಗುತ್ತೀರಿ. ಮನೆ ನಿರ್ಮಾಣ ವಿಚಾರದಲ್ಲಿ ತೊಡಕುಗಳಿವೆ.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಪ್ರಯಾಣದ ದಿನ. ನಿಮ್ಮದಲ್ಲದ ವಿಚಾರಕ್ಕೂ ನೀವು ಪ್ರಯಾಣ ಮಾಡಬಹುದು. ಆಪ್ತರೊಂದಿಗೆ ಸಮಯ ಕಳೆಯುವಿರಿ. ವಾಹನ ಚಲಾವಣೆ ವೇಳೆ ಎಚ್ಚರ ವಹಿಸಿ. ಮಕ್ಕಳ ಉದ್ಯೋಗ ಸಂಬಂಧವಾಗಿ ಚಿಂತೆ ಇರಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಅನುಕೂಲಕರ ದಿನ. ಹಣಕಾಸು ಸ್ಥಿತಿಯಲ್ಲಿ ಸುಧಾರಣೆ ನೋಡುವಿರಿ. ಆಪ್ತರಿಂದ ಹಣ ಪಡೆಯುವ ನಿಮ್ಮ ಉದ್ದೇಶ ಈಡೇರಲಿದೆ. ಉದ್ಯೋಗದ ಸ್ಥಳದಲ್ಲಿ ನಿಮಗೆ ಒತ್ತಡ ಎದುರಾಗಬಹುದು. ಮನೆಯಲ್ಲಿ ಶುಭ ಕಾರ್ಯ ಸಂಬಂಧಿತ ಚರ್ಚೆ ನಡೆಯಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಇಂದು ಪ್ರಯಾಣದಲ್ಲಿ ತೊಡಗಬೇಕಾದ ದಿನ. ಹೀಗಾಗಿ ನಿಮ್ಮಲ್ಲಿ ಖರ್ಚು ಕೂಡ ಇರಲಿದೆ. ಉದರ ಸಂಬಂಧಿ ಸಮಸ್ಯೆಗಳಿಗೆ ನೀವು ಒಳಗಾಗಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಸಾಮಾನ್ಯ ದಿನವಾಗುತ್ತಿದೆ. ದೈನಂದಿನ ಕೆಲಸಗಳಲ್ಲಿ ಅಡ್ಡಿಗಳಿವೆ. ಹಣಕಾಸು ಸಂಬಂಧಿ ವಿಚಾರವಾಗಿ ಮನಸ್ತಾಪಗಳಿವೆ. ದಾಂಪತ್ಯ ವಿಚಾರದಲ್ಲಿ ಮೂರನೇ ವ್ಯಕ್ತಿಯ ಆಗಮನ ತಡೆಯುವುದು ಉತ್ತಮ. ತಾಳ್ಮೆ ಕಳೆದುಕೊಳ್ಳಬೇಡಿ.



Click it and Unblock the Notifications











