Dina Bhavishya: ಈ ಶನಿವಾರದಂದು ನಿಮ್ಮ ರಾಶಿಯಲ್ಲಿ ಏನಿದೆ?

ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 08 (08 November Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಇಂದು ಅನುಕೂಲಕರ ದಿನ. ಗೃಹಿಣಿಯರು ಇಂದು ದೊಡ್ಡ ಮಟ್ಟದ ಯಶಸ್ಸು ಪಡೆಯಬಹುದು. ಹಣಕಾಸು ವಿಚಾರವಾಗಿ ನಿಮಗೆ ದೊಡ್ಡ ಲಾಭವಿದೆ. ಸಮಯದೊಳಗೆ ನಿಮ್ಮ ಕೆಲಸಗಳನ್ನು ಮುಗಿಸುವಿರಿ.

ವೃಷಭ ರಾಶಿ

ವೃಷಭ ರಾಶಿಯ ಜನರಿಗೆ ಇಂದು ಸವಾಲುಗಳಿಂದ ತುಂಬಿದ ದಿನ. ನಿಮ್ಮ ಪ್ರಯಾಣಗಳಲ್ಲಿ ಲಾಭವಿದ್ದರೂ ಅದರ ಪ್ರಕ್ರಿಯೆಯು ದೊಡ್ಡ ಸಮಸ್ಯೆ ತರಬಹುದು. ನಿಮಗಾಗಿ ಕುಟುಂಬಸ್ಥರಿಂದ ಹಣಕಾಸಿನ ಒತ್ತಡ ಬರಬಹುದು. ಪ್ರಯಾಣ ಮಾಡುವಾಗ ವಸ್ತುಗಳ ಕುರಿತ ಎಚ್ಚರ ವಹಿಸುವುದು ಉತ್ತಮ.

Dina Bhavishya November 08 Today s Daily Horoscope for 12 Zodiac Signs

ಮಿಥುನ ರಾಶಿ

ಮಿಥುನ ರಾಶಿ ಜನರಿಗೆ ಮಿಶ್ರಫಲದ ದಿನ. ನಿಮ್ಮ ಹಲವು ಸಮಸ್ಯೆಗಳನ್ನು ಎದುರಿಸಲು ಹೊಸ ಮಾರ್ಗವನ್ನು ಕಂಡುಕೊಳ್ಳಬಹುದು. ವ್ಯಾಪಾರಿಗಳು ಬುದ್ದಿವಂತಿಕೆಯಿಂದ ಇಂದು ಕೆಲಸ ನಿರ್ವಹಿಸಿ. ದೇವಾಲಯ ಭೇಟಿ ಸಂಭವವಿದೆ.

ಕರ್ಕ ರಾಶಿ

ಕರ್ಕ ರಾಶಿಯವರು ಇಂದು ಓಡಾಟಗಳಲ್ಲಿ ಕಳೆಯಬಹುದು. ನಿಮ್ಮಲ್ಲಿದ್ದ ಉದ್ಯೋಗ ಸಂಬಂಧಿ ಸಮಸ್ಯೆಯೊಂದರಿಂದ ತಾತ್ಕಾಲಿಕ ಪರಿಹಾರ ಪಡೆಯಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ, ತಂದೆ ತಾಯಿ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಈ ದಿನ ಉತ್ತಮವಾಗಿರಲಿದೆ. ಆಪ್ತರಿಂದ ಹಣಕಾಸು ಸಹಾಯ ಒಲಿದು ಬರಲಿದೆ. ಹಲವು ದಿನಗಳಿಂದ ನೀವು ಮಾಡಬೇಕೆಂದು ಬಯಸಿದ್ದ ಕೆಲಸವೊಂದನ್ನು ಪೂರ್ಣ ಮಾಡುವಿರಿ. ಯಾರಿಗೂ ಸಾಲ ನೀಡದೆ ಇರುವುದು ಉತ್ತಮ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಿಗೆ ಇಂದು ಸಮಸ್ಯೆಗಳಿವೆ. ನೀವು ಮಾಡಬೇಕಿದ್ದ ಕೆಲಸದಲ್ಲಿ ಅಡಚಣೆ ನೋಡಬಹುದು. ದೊಡ್ಡ ವ್ಯವಹಾರಗಳನ್ನು ಮಾಡದೆ ಇರುವುದು ಉತ್ತಮ. ವ್ಯಪಾರಿಗಳು ನಿಯೋಜಿತ ಖರ್ಚುಗಳನ್ನು ಮಾಡಬೇಕಾಗಬಹುದು.

ತುಲಾ ರಾಶಿ

ತುಲಾ ರಾಶಿಯ ಜನರಿಗೆ ಈ ಶನಿವಾರದ ದಿನ ನಿಮಗೆ ಹಲವು ರೀತಿಯ ಸಮಸ್ಯೆಗಳಿವೆ. ದಾಂಪತ್ಯ ವಿಚಾರದಲ್ಲಿ ನಿಮಗೆ ಮನಸ್ತಾಪದಿಂದ ನೋವಾಗಬಹುದು. ನಿರುದ್ಯೋಗಿಗಳಿಗೆ ಈ ದಿನ ಉತ್ತಮ ಅವಕಾಶವೊಂದು ಬರಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲದ ದಿನ. ನಿಮಗಾಗಿ ಶುಭ ಸುದ್ದಿ ಇದ್ದರೂ ಕೂಡ ದಿನದ ಅಂತ್ಯದಲ್ಲಿ ನಿಮಗೆ ಒತ್ತಡಗಳಿವೆ. ಕೌಟುಂಬಿಕ ವಿಚಾರವಾಗಿ ಪರಿಹಾರ ಪಡೆಯಲು ನೀವು ಪ್ರಯಾಣ ಮಾಡಬಹುದು. ಕೃಷಿ ಸಂಬಂಧಿತ ವಿಚಾರವಾಗಿ ಲಾಭವಾಗಲಿದೆ.

ಧನು ರಾಶಿ

ಧನು ರಾಶಿ ಜನರಿಗೆ ಉತ್ತಮ ದಿನವಾಗಲಿದೆ. ಪ್ರಯಾಣಗಳ ಮಾಡುವಿರಿ, ಕುಟುಂಬಸ್ಥರೊಂದಿಗೆ ನೀವು ಇಂದು ದೇವಾಲಯ ಭೇಟಿಯಂತಹ ಕೆಲಸಕ್ಕೆ ಮುಂದಾಗುತ್ತೀರಿ. ಕಣ್ಣಿಗೆ ಸಂಬಂಧಿತ ಸಮಸ್ಯೆ ಎದುರಿಸಬಹುದು.

ಮಕರ ರಾಶಿ

ಮಕರ ರಾಶಿಯವರಿಗೆ ಪ್ರಯಾಣ ಮಾಡುವ ದಿನ. ಪ್ರೀತಿ, ದಾಂಪತ್ಯ ವಿಚಾರದಲ್ಲಿ ಇಂದು ತಾಳ್ಮೆಯಿಂದ ವರ್ತಿಸುವುದು ಉತ್ತಮ. ಮನೆಯ ಹಿರಿಯ ಸದಸ್ಯರ ಆರೋಗ್ಯದಲ್ಲಿ ಏರುಪೇರು ಬರಬಹುದು. ಸಂಜೆಯ ಸಮಯದಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗಬಹುದು.

ಕುಂಭ ರಾಶಿ

ಕುಂಭ ರಾಶಿಯವರಿಗೆ ಅನುಕೂಲಕರ ದಿನ. ಉದ್ಯೋಗದಲ್ಲಿನ ಒತ್ತಡ ನಿವಾರಣೆಯಾಗಲಿದೆ. ದಿನದ ಅಂತ್ಯದಲ್ಲಿ ಪ್ರಯಾಣ ಮಾಡುವಿರಿ. ರಾತ್ರಿ ಪ್ರಯಾಣವನ್ನು ಮುಂದೂಡುವುದು ಉತ್ತಮ. ಅನೇಕರಿಗೆ ಈ ದಿನ ಆಯಾಸದ ದಿನ. ಆಹಾರ ಸಂಬಂಧಿತ ಖರ್ಚುಗಳಿವೆ.

ಮೀನ ರಾಶಿ

ಮೀನ ರಾಶಿಯ ಜನರು ಇಂದು ಪ್ರಯಾಣ ಮಾಡುವಿರಿ. ದೀರ್ಘಕಾಲದ ಪ್ರಯಾಣಗಳಲ್ಲಿ ನಿಮಗೆ ಶುಭವಿದೆ. ವಾಹನ ಸಂಬಂಧಿತ ವಿಚಾರಗಳಲ್ಲಿ ಅನೇಕ ತೊಡಕುಗಳು ಬರಬಹುದು. ಹೂಡಿಕೆಗಳತ್ತ ಗಮನವಿಡಿ. ಮನೆಯ ವಸ್ತುವೊಂದನ್ನು ರಿಪೇರಿ ಮಾಡಿಸಬೇಕಾಗಿ ಬರಬಹುದು.

English summary

Dina Bhavishya November 08: Today’s (Daily) Horoscope for 12 Zodiac Signs

daily horoscope for November 08 astrology predictions for all 12 zodiac signs including career, health, love, and money Boldsky kannada
Story first published: Saturday, November 8, 2025, 5:00 [IST]
X
Desktop Bottom Promotion