Dina Bhavishya: ಲಕ್ಷ್ಮಿಯ ವಾರದಂದು ಯಾರಿಗೆಲ್ಲಾ ಲಾಭದಾಯಕ?

ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 07 (07 November Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಇಂದು ಸಮಸ್ಯೆಗಳು ಬರಬಹುದು. ನಿಮ್ಮ ಕೆಲಸಳಲ್ಲಿ ಹೊಸ ರೀತಿ ಅಡ್ಡಿಗಳ ಎದುರಿಸಬಹುದು. ಆಪ್ತರಿಂದ ಪಡೆದ ಹಣವನ್ನು ಮರಳಿ ನೀಡಬೇಕಾದ ಒತ್ತಡ ಬರಲಿದೆ. ಗೃಹಿಣಿರಲ್ಲಿ ಕೆಲಸದ ಒತ್ತಡ ಸಂಬಂಧವಾಗಿ ಇಡೀ ದಿನ ಅಶಾಂತಿ ಇರಲಿದೆ.

ವೃಷಭ ರಾಶಿ

ವೃಷಭ ರಾಶಿಯ ಜನರಿಗೆ ಇಂದು ಉತ್ತಮ ಪ್ರತಿಫಲದ ದಿನ. ಪ್ರಯಾಣಗಳ ಮಾಡುವಾಗ ಎಚ್ಚರಿಕೆ ಅಗತ್ಯ. ಸಾಮಾನ್ಯ ಕೆಲಸವನ್ನು ಮಾಡುವಾಗಲು ಎಚ್ಚರ ಇಡಿ. ಹಣಕಾಸು ವಿಚಾರದಲ್ಲಿ ನೆಮ್ಮದಿಯ ದಿನ. ಆರೋಗ್ಯದಲ್ಲಿನ ಏರುಪೇರು ನಿಮಗೆ ಯಾವ ಸಮಸ್ಯೆ ತರುವುದಿಲ್ಲ.

Dina Bhavishya November 07

ಮಿಥುನ ರಾಶಿ

ಮಿಥುನ ರಾಶಿ ಜನರಿಗೆ ಇಂದು ಅನುಕೂಲಗಳಿರುವಂತೆ ಅನಾನುಕೂಲಗಳು ಸಹ ಎದುರಾಗುತ್ತವೆ. ದಿನದ ಆರಂಭದಲ್ಲಿ ಇದ್ದ ಲಾಭ ಅಂತ್ಯದಲ್ಲಿ ನಿರಾಸೆ ಮೂಡಿಸಬಹುದು. ನಿಮ್ಮ ಉದ್ಯೋಗ ಸಂಬಂಧಿತ ಸಮಸ್ಯೆಯೊಂದು ದೊಡ್ಡದಾಗಬಹುದು. ಪ್ರೀತಿ ವಿಚಾರದಲ್ಲಿ ಮಧುರ ದಿನ.

ಕರ್ಕ ರಾಶಿ

ಕರ್ಕ ರಾಶಿ ಗೃಹಿಣಿಯರು ಅನಾರೋಗ್ಯಕ್ಕೆ ತುತ್ತಾಗಬಹುದು. ಸಹೋದರರಲ್ಲಿ ನಿಮಗೆ ಬೇಕಾದ ವಸ್ತು ಪಡೆಯಬಹುದು. ಆಸ್ತಿ ಕುರಿತಾದ ವಿಚಾರದಲ್ಲಿ ಮೇಲುಗೈ ಸಂಭವವಿದೆ. ಪ್ರಭಾವಿಯೊಬ್ಬರನ್ನು ನೀವು ಭೇಟಿಯಾಗಬಹುದು.

ಸಿಂಹ ರಾಶಿ

ಸಿಂಹ ರಾಶಿ ಜನರಲ್ಲಿ ಇಂದು ಪ್ರಯಾಣ ಮಾಡುವ ದಿನ. ಉದ್ದೇಶಿತ ಕೆಲಸ ಸಂಬಂಧವಾಗಿ ನೀವು ಪ್ರಯಾಣ ಮಾಡುವಿರಿ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ. ಶುಭ ಕಾರ್ಯ ಸಂಬಂಧವಾಗಿ ಶುಭ ಸುದ್ದಿ ಕೇಳಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಿಗೆ ಇಂದು ಪ್ರಯಾಣದಲ್ಲಿ ತೊಡಗುವ ದಿನ. ಮನೆಗೆ ಬೇಕಾದ ವಸ್ತುವೊಂದನ್ನು ಇಂದು ಖರೀದಿಸುವ ಸಾಧ್ಯತೆ ಇದೆ. ನ್ಯಾಯಾಲಯ ಸಂಬಂಧಿತ ವಿಚಾರಗಳಲ್ಲಿ ನಿಮಗೆ ಅನುಕೂಕರ ದಿನ. ವೃತ್ತಿ ಜೀವನದಲ್ಲೂ ಶುಭ ಸುದ್ದಿಗಳಿವೆ.

ತುಲಾ ರಾಶಿ

ತುಲಾ ರಾಶಿಯ ಜನರಿಗೆ ಇಂದು ಮಿಶ್ರ ಫಲದ ದಿನ. ನಿಮ್ಮ ಆದಾಯದಷ್ಟೇ ಇಂದು ಖರ್ಚು ಕೂಡ ಇದೆ. ಪ್ರಯಾಣಗಳನ್ನು ಮಾಡುವಾಗ ನಿಮ್ಮ ವಸ್ತುಗಳ ಕುರಿತಾಗಿ ಎಚ್ಚರಿಕೆ ಅಥವಾ ಜಾಗೃತೆ ವಹಿಸಿ. ಮಕ್ಕಳ ಕುರಿತ ಚಿಂತೆಯೊಂದು ಕಾಡಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ಋಆಶಿಯ ಜನರಿಗೆ ಇಂದು ಮಧುರವಾದ ದಿನ. ನೀವು ಬಯಸಿದಂತೆ ದೊಡ್ಡ ಕೆಲಸವೊಂದರಲ್ಲಿ ಶುಭವಾಗುತ್ತಿದೆ. ಆಪ್ತರಿಂದ ಹಣ ಪಡೆಯಬಹುದು. ಸಂಬಂಧಿಕರಿಂದ ಶುಭ ಸುದ್ದಿ ಬರಬಹುದು. ಮನೆಯ ವಿಚಾರದಲ್ಲಿ ಶಾಂತ ವಾತಾವರಣ ಇರಲಿದೆ.

ಧನು ರಾಶಿ

ಧನು ರಾಶಿಯ ಜನರು ಇಂದು ಪ್ರಯಾಣ ಅಥವಾ ಓಡಾಟದಲ್ಲಿ ಕಳೆಯಬಹುದು. ಬಹುತೇಕ ನಿಮ್ಮ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಮನೆಯ ಬಹುದೊಡ್ಡ ಸಮಸ್ಯೆಯೊಂದಕ್ಕೆ ಪರಿಹಾರ ಹುಡುಕಬಹುದು.

ಮಕರ ರಾಶಿ

ಮಕರ ರಾಶಿಯವರು ಹಿಂದೆ ಅನುಭವಿಸಿದ್ದ ನೋವಿನಿಂದ ಪಾಠ ಕಲಿಯುವ ದಿನವಾಗಲಿದೆ, ಮಾಡಿದ್ದ ತಪ್ಪನ್ನೇ ಮತ್ತೆ ಮಾಡುವುದು ನಿಮಗೆ ಸಮಸ್ಯೆಗಳ ತರಬಹುದು. ದಾಂಪತ್ಯ ವಿಚಾರವಾಗಿ ಬಹುಕಾಲದ ಮನಸ್ತಾಪ ಮತ್ತೆ ಹೆಚ್ಚಾಗಬಹುದು. ಹಣಕಾಸು ವ್ಯವಹಾರ ಮಾಡುವಾಗ ಎಚ್ಚರ ಅಗತ್ಯ.

ಕುಂಭ ರಾಶಿ

ಕುಂಭ ರಾಶಿ ಜನರಿಗೆ ಈ ದಿನ ಅಚ್ಚರಿಯ ಫಲಿತಾಂಶಗಳ ತರುವ ದಿನ. ನಿಮಗೆ ಅಗತ್ಯವಾಗಿ ಬೇಕಿದ್ದ ವಸ್ತುವೊಂದನ್ನು ಇಂದು ಹುಡುಕಬೇಕಾಗುತ್ತದೆ. ಹಣಕಾಸು ಹಾಗೂ ವ್ಯಾಪಾರ ದೃಷ್ಟಿಯಲ್ಲಿ ಸಾಮಾನ್ಯ ದಿನವಾಗಿರಲಿದೆ. ಆತಂಕ ತರುವಂತಹ ಕರೆಗಳು ಬರಬಹುದು.

ಮೀನ ರಾಶಿ

ಮೀನ ರಾಶಿ ಮಂದಿಗೆ ಅನುಕೂಲಕರ ದಿನ. ನೀವು ಮಾಡುವ ಕೆಲಸದಿಂದ ನಿಮಗೆ ತೃಪ್ತಿ ಸಿಗುವ ದಿನ. ಸ್ವಂತ ವ್ಯಾಪಾರಿಗಳಿಗೆ ಇಂದು ಲಾಭದಾಯಕ ದಿನ. ದೇವಾಲಯ ಭೇಟಿಯ ಸಾಧ್ಯತೆ ಇದೆ. ನಿಮ್ಮ ಪ್ರಯಾಣದಲ್ಲಿ ಸುಖವಿದೆ.

English summary

Dina Bhavishya November 07: Today’s (Daily) Horoscope for 12 Zodiac Signs

daily horoscope for November 07 astrology predictions for all 12 zodiac signs including career, health, love, and money Boldsky kannada
Story first published: Friday, November 7, 2025, 5:00 [IST]
X
Desktop Bottom Promotion