Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ರಾಯರ ವಾರ ಯಾರಿಗೆಲ್ಲಾ ಶುಭಕರ?
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 06 (06 November Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಉತ್ತಮ ಅನುಕೂಲಗಳ ದಿನ. ನಿಮ್ಮ ಹಲವು ವಿಚಾರಗಳು ಎಂದಿನಂತೆ ಇದ್ದರೂ ಆರ್ಥಿಕ ವಿಚಾರವಾಗಿ ನಿಮಗೆ ಬಯಸಿದ ದಿನವಾಗಲಿದೆ. ಪೂರ್ವ ನಿಯೋಜಿತ ಕಾರ್ಯವೊಂದರಲ್ಲಿ ನೀವು ತೊಡಗುತ್ತೀರಿ. ಆಪ್ತರಿಂದ ದೊಡ್ಡ ಸಹಾಯ ಸಿಗಲಿದೆ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಮಿಶ್ರ ಫಲದ ದಿನ. ಗೃಹಿಣಿಯರು ತಮ್ಮ ಖರ್ಚುಗಳ ಮೇಲೆ ಹಿಡಿತ ಸಾಧಿಸಬೇಕು. ನಿಮ್ಮಿಂದಾಗಿ ಇತರರಿಗೆ ಆಗುವ ಸಹಾಯ ಮುಂದೆ ನಿಮಗೆ ಒತ್ತಡ ತರಬಹುದು. ಮನೆಯಲ್ಲಿ ಶಾಂತಿ ಇರಲಿದೆ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಇಂದು ಮಿಶ್ರಫಲವಿದೆ. ನಿಮ್ಮ ವ್ಯಾಪಾರ, ವ್ಯವಹಾರಗಳು ನೀವು ಬಯಸಿದ ರೀತಿಯಲ್ಲಿ ನಡೆದರೂ ಅದರಿಂದ ದಿನದ ಅಂತ್ಯದಲ್ಲಿ ತೃಪ್ತಿ ಇರುವುದಿಲ್ಲ. ಪ್ರಯಾಣ ಮಾಡಬೇಕಾದ ದಿನವಾಗಿರಲಿದೆ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಸಾಮಾನ್ಯ ದಿನವಾಗಲಿದೆ. ನಿಮ್ಮ ಅನೇಕ ವಿಚಾರದಲ್ಲಿ ಶುಭವಾಗಲಿದೆ. ನಿಮ್ಮ ಆಪ್ತರಿಂದ ಆರ್ಥಿಕ ಸಹಾಯಕ್ಕೆ ಬೇಡಿಕೆ ಇಟ್ಟಿದ್ದರೆ ನೆರವೇರಲಿದೆ. ಖರ್ಚುಗಳು ಹೆಚ್ಚಾಗಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಜನರಲ್ಲಿ ಇಂದು ಪ್ರಯಾಣದಾಯಕ ದಿನ. ಹೆಚ್ಚಿನ ಸಮಯ ಪ್ರಯಾಣದಲ್ಲಿ ಕಳೆಯುವಿರಿ. ನಿಮಗಾಗಿ ವಸ್ತುವೊಂದನ್ನು ಖರೀದಿಸಲಿದ್ದೀರಿ. ದಾಂಪತ್ಯ ವಿಚಾರದಲ್ಲಿ ಸಂತೋಷದಿಂದ ತುಂಬಿದ ದಿನವಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ದೊಡ್ಡ ಮಟ್ಟದಲ್ಲಿ ಅಡ್ಡಿಗಳು ಎದುರಾಗುವ ದಿನ. ನೀವು ಮಾಡಬೇಕಿದ್ದ ಕೆಲಸಗಳನ್ನು ಅರ್ಧದಲ್ಲಿಯೇ ಬಿಡಬೇಕಾಗಬಹುದು. ಉದ್ಯೋಗದ ಸ್ಥಳದಲ್ಲಿನ ಒತ್ತಡದಿಂದ ನಿಮಗೆ ಮಾನಸಿಕ ಕಿರಿಕಿರಿ ಉಂಟಾಗಬಹುದು.
ತುಲಾ ರಾಶಿ
ತುಲಾ ರಾಶಿ ಜನರಿಗೆ ಇಂದು ಸಾಮಾನ್ಯ ಫಲಿತಾಂಶದ ದಿನ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ನಿಮಗೆ ಒಳಿತು ತರಲಿದೆ. ದೇವಾಲಯ ಭೇಟಿಯ ಸಂಭವವಿದೆ. ಮನೆಯಲ್ಲಿ ನಿಮ್ಮ ಉದ್ಯೋಗ ಸಂಬಂಧ ಚರ್ಚೆಗಳು ನಡೆಯಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಈ ದಿನ ಪ್ರಯಾಣ ಮಾಡುವಿರಿ. ವಾಹನ ಸಂಬಂಧಿತ ವಿಚಾರವಾಗಿ ಖರ್ಚುಗಳು ಹೆಚ್ಚಾಗುತ್ತದೆ. ಬ್ಯಾಂಕ್ ವಿಚಾರಗಳು, ಆಸ್ತಿ ಕುರಿತ ವಿಚಾರಗಳಗಳಲ್ಲಿ ಹೊಸ ನಿಲುವುಗಳನ್ನು ಹೊಂದಲಿದ್ದೀರಿ. ಸಾಲ ನೀಡಲು ಮುಂದಾಗದೆ ಇರುವುದು ಉತ್ತಮ.
ಧನು ರಾಶಿ
ಧನು ರಾಶಿ ಮಂದಿಗೆ ಇಂದು ಅನುಕೂಲಕರ ದಿನ. ಆರ್ಥಿಕವಾಗಿ ನೀವು ಲಾಭ ನೋಡುವ ದಿನ. ವ್ಯಾಪಾರ, ವ್ಯವಹಾರಗಳಲ್ಲಿ ಯಶಸ್ಸು ಪಡೆಯುವ ದಿನ. ಕೆಲಸದ ಸ್ಥಳದಲ್ಲಿ ಶುಭ ಸುದ್ದಿಯೊಂದನ್ನು ಪಡೆಯುವ ದಿನ.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ದೊಡ್ಡ ಅಚ್ಚರಿ ಕಾದಿರಲಿದೆ. ನೀವು ಬಹುದಿನದಿಂದ ಮುಗಿಸದೆ ಇದ್ದ ಕೆಲಸವೊಂದನ್ನು ಪೂರ್ಣ ಮಾಡುವಿರಿ. ಅಪಾಯಕಾರಿ ಜಾಗದಲ್ಲಿ ಕೆಲಸ ಮಾಡುವ ಮಂದಿ ಇಂದು ಎಚ್ಚರಿಕೆ ವಹಿಸಿ.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಇಂದು ಸವಾಲುಗಳಿಂದ ತುಂಬಿದ ದಿನ ಆಗಬಹುದು. ಗೃಹಿಣಿಯರ ಖರ್ಚು ಹೆಚ್ಛಾಗುತ್ತದೆ. ಕುಟುಂಬದಲ್ಲಿ ಹಣಕಾಸು ಸಂಬಂಧಿ ಒತ್ತಡವಿದೆ. ಆಪ್ತರೊಬ್ಬರಿಂದ ನಿಮಗೆ ಹಣದ ಸಹಾಯಕ್ಕಾಗಿ ಕರೆ ಬರಬಹುದು. ದಿನದ ಅಂತ್ಯದಲ್ಲಿ ಅಶುಭ ಸುದ್ದಿ ಬರಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಉತ್ತಮ ದಿನ. ನೀವು ಮಾಡಬೇಕಿದ್ದ ಕೆಲಸದಲ್ಲಿ ಯಶಸ್ಸು ಇರಲಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ಒತ್ತಡ ಬರಬಹುದು. ನಿಮ್ಮ ಮುಂದಿನ ಆಲೋಚನೆಗಳಿಗೆ ಪೂರ್ವ ತಯಾರಿ ನಡೆಸಲಿದ್ದೀರಿ. ಪ್ರವಾಸ ಸಂಬಂಧವಾಗಿ ಆಪ್ತರಲ್ಲಿ ಚರ್ಚೆ ನಡೆಸಬಹುದು.



Click it and Unblock the Notifications










