Dina Bhavishya: ಈ ಮಂಗಳವಾರ ಯಾರಲ್ಲಿ ಹಣಕಾಸು ಒತ್ತಡ?

ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 04 (04 November Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಇಂದು ಮಿಶ್ರ ಫಲದ ದಿನ. ನೀವು ಇಂದು ಪ್ರಯಾಣ ಮಾಡುವಾಗ ಎಚ್ಚರಿಕೆ ಇಡಿ. ಸಾಲ ಮರುಪಾವತಿ ಮಾಡುವಿರಿ. ಆಪ್ತರಿಂದ ಬರಬೇಕಿದ್ದ ಹಣ ಮುಂದೂಡಲಿದೆ. ಗೃಹಿಣಿಯರು ಇಂದು ಒತ್ತಡದಲ್ಲಿ ಕಳೆಯಬಹುದು. ವ್ಯಾಪಾರದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಎದುರಾಗಲಿದೆ.

ವೃಷಭ ರಾಶಿ

ವೃಷಭ ರಾಶಿ ಜನರಿಗೆ ಈ ದಿನ ದೊಡ್ಡ ಸವಾಲುಗಳಿವೆ. ನೀವು ಮಾಡಬೇಕಿದ್ದ ಕೆಲಸ ಬಿಟ್ಟು ಅನ್ಯ ಕೆಲಸಗಳತ್ತ ಒಲವು ಹೊಂದಬಹುದು. ಯಾರಿಗೂ ನೀವು ಸಲಹೆಗಳು, ಸಹಾಯ ಮಾಡಲು ಇಂದು ಮುಂದಾಗದೆ ಇರುವುದು ಉತ್ತಮ. ಆರೋಗ್ಯದಲ್ಲಿ ಅಡೆತಡೆ ಉಂಟಾಗಬಹುದು.

Dina Bhavishya November 04 Today s

ಮಿಥುನ ರಾಶಿ

ಮಿಥುನ ರಾಶಿಯ ಜನರಿಗೆ ಇಂದು ಮಿಶ್ರ ಫಲದ ದಿನ. ಈ ಮಂಗಳವಾರವು ನಿಮಗೆ ಶ್ರಮದಾಯಕ ದಿನ. ಯಾರಿಗಾದರು ಹಣ ನೀಡಿದ್ದರೆ ಮರಳಿ ಪಡೆಯಲು ಪ್ರಯತ್ನಿಸುವುದು ಉತ್ತಮ. ಕುಟುಂಬದಲ್ಲಿದ್ದ ಹಣಕಾಸು ಒತ್ತಡ ಕಡಿಮೆಯಾಗಲಿದೆ. ಪೂರ್ವಜನರ ಆಸ್ತಿ ವಿಚಾರದಲ್ಲಿ ಶುಭ ಸುದ್ದಿ ಇದೆ.

ಕರ್ಕ ರಾಶಿ

ಕರ್ಕ ರಾಶಿಯ ಜನರಿಗೆ ಇಂದು ಉತ್ತಮ ದಿನ. ವ್ಯಾಪಾರ ವ್ಯವಹಾರದಲ್ಲಿ ಇಂದು ಉತ್ತಮ ದಿನ. ಯಾರಿಂದಾದರು ಹಣ ಪಡೆಯುವುದು ಬಾಕಿ ಉಳಿಸಿಕೊಂಡಿದ್ದರೆ ಇಂದು ಪ್ರಯತ್ನ ಪಟ್ಟರೆ ಫಲ ಸಿಗಬಹುದು.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಇಂದು ಉತ್ತಮ ದಿನ. ಯಾರಿಗೂ ಹಣ ನೀಡಬೇಡಿ. ಹಾಗೆ ಕೆಲಸದಲ್ಲಿ ಕೆಲವು ಅಡೆತಡೆ ಎದುರಾಗಬಹುದು. ಪ್ರಯಾಣ ಮಾಡಬಹುದು, ಎಲ್ಲಾದರು ಹಣ ಹೂಡಿಕೆ ಮಾಡಲು ಆಲೋಚಿಸಿದ್ದರೆ ಇಂದು ಉತ್ತಮ ದಿನ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಿಗೆ ಇಂದು ಪ್ರಯಾಣದ ದಿನ. ನಿಮಗೆ ಹಲವು ವಿಚಾರದಲ್ಲಿ ಧನಾತ್ಮಕ ಸ್ಥಿತಿ ನೋಡಬಹುದು. ಪ್ರಾಣಿಗಳಿಂದ ದೂರ ಇರುವುದು ಉತ್ತಮ. ದಿನದ ಅಂತ್ಯದಲ್ಲಿ ನಿಮಗೆ ಖರ್ಚು ಇರಲಿದೆ. ವಾಹನ ಸಂಬಂಧಿ ವಿಚಾರದಲ್ಲಿ ಎಚ್ಚರ ವಹಿಸಿ.

ತುಲಾ ರಾಶಿ

ತುಲಾ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಣಕಾಸಿನ ವಿಚಾರದಲ್ಲಿ ಉತ್ತಮ ದಿನ. ನಿಮಗೆ ಬರಬೇಕಿದ್ದ ಹಣವೊಂದು ಕೈ ಸೇರಲಿದೆ. ಪ್ರಯಾಣಗಳು ನಿಮ್ಮನ್ನು ಆಯಾಸಕ್ಕೆ ತಳ್ಳಬಹುದು. ಪ್ರೇಮಿಗಳು ಇಂದು ದೊಡ್ಡ ಮಟ್ಟದ ನಿರ್ಧಾರ ತೆಗೆದುಕೊಳ್ಳಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಜನರಿಗೆ ಇಂದು ಮಿಶ್ರ ಫಲವಿದೆ. ತಂದೆ ತಾಯಿ ಮನಸ್ಸು ನೋವಿಸುವ ಕೆಲಸಕ್ಕೆ ಮುಂದಾಗಬೇಡಿ. ಯಾರಿಂದಾದರು ಅಮೂಲ್ಯವಾದ ವಸ್ತು ಪಡೆದಿದ್ದರೆ ಮರಳಿ ನೀಡುವುದು ಉತ್ತಮ. ಪ್ರಯಾಣದಲ್ಲಿ ಎಚ್ಚರ ವಹಿಸಿ.

ಧನು ರಾಶಿ

ಧನು ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಲವು ಸವಾಲುಗಳನ್ನು ಏಕಾಂಗಿಯಾಗಿ ಎದುರಿಸಲು ಸಿದ್ದರಾಗುತ್ತೀರಿ. ಮನೆಗಾಗಿ ಖರ್ಚು ಮಾಡುವಿರಿ. ಗೃಹಿಣಿಯರಿಗೆ ಸವಾಲಿನ ದಿನ, ನಿಮ್ಮ ಹಣಕಾಸು ವಿಚಾರದಲ್ಲಿ ಒತ್ತಡ ಇರಲಿದೆ.

ಮಕರ ರಾಶಿ

ಮಕರ ರಾಶಿಯವರಿಗೆ ಸವಾಲುಗಳಿಂದ ತುಂಬಿದ ದಿನ. ನಿಮ್ಮ ಆರೋಗ್ಯದಲ್ಲಿ ಏರುಪೇರು ಸಂಭವಿವಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ಒತ್ತಡ ಬರಬಹುದು. ದೀರ್ಘಕಾಲದ ಸಮಸ್ಯೆಯೊಂದು ನಿಮಗೆ ಮತ್ತೆ ಕಾಡಬಹುದು. ನಿದ್ರೆ ಸಂಬಂಧಿತ ಸಮಸ್ಯೆಗೆ ಒಳಗಾಗಬಹುದು.

ಕುಂಭ ರಾಶಿ

ಕುಂಭ ರಾಶಿಯ ಜನರಿಗೆ ಇಂದು ಉತ್ತಮ ದಿನವಾಗುವ ಅವಕಾಶಗಳಿವೆ. ದಾಂಪತ್ಯದಲ್ಲಿನ ಮನಸ್ತಾಪ ದೊಡ್ಡದಾಗಬಹುದು. ಆದ್ರೆ ದಿನದ ಅಂತ್ಯದಲ್ಲಿ ಪರಿಹಾರವೂ ಸಿಗಲಿದೆ. ನಿಮ್ಮ ಕೆಲಸಗಳಲ್ಲಿ ಅಡ್ಡಿಗಳಿದ್ದರು ಅದನ್ನು ನಿವಾರಿಸಿಕೊಳ್ಳಬಹುದು.

ಮೀನ ರಾಶಿ

ಮೀನ ರಾಶಿಯ ಜನರಿಗೆ ಇಂದು ಅನುಕೂಲಕರ ದಿನ. ನಿಮ್ಮ ಹಲವು ಕೆಲಸಗಳು ನೀವು ಅಂದುಕೊಂಡ ರೀತಿ ನಡೆಯಲಿದೆ. ಹಣಕಾಸು ವಿಚಾರವಾಗಿ ಚಿಂತೆ ಇರಲಿದೆ, ಆದ್ರೆ ಪರಿಹಾರ ಪಡೆಯುವುದು ಸಹ ನಿಮಗೆ ಸುಲಭವಾಗಲಿದೆ. ಆರೋಗ್ಯದ ಕಡೆ ಗಮನವಿಡಿ.

English summary

Dina Bhavishya November 04: Today’s (Daily) Horoscope for 12 Zodiac Signs

daily horoscope for November 04 astrology predictions for all 12 zodiac signs including career, health, love, and money Boldsky kannada
Story first published: Tuesday, November 4, 2025, 5:00 [IST]
X
Desktop Bottom Promotion