Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಭಾನುವಾರದ ಈ ದಿನ ಯಾರಿಗೆ ಶುಭ ತರಲಿದೆ?
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 02 (02 November Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಹಲವು ರೀತಿಯಲ್ಲು ಅನುಕೂಲಕರ ದಿನ. ನೀವು ಶುಭ ಕಾರ್ಯವೊಂದರಲ್ಲಿ ಭಾಗಿಯಾಗಬಹುದು. ನಿಮಗಾಗಿ ಹಲವರು ಹಣಕಾಸಿನ ನೆರವಿಗೆ ಮುಂದಾಗಬಹುದು. ಪ್ರಯಾಣಗಳ ಮಾಡಬೇಕಾಗುತ್ತದೆ.
ವೃಷಭ ರಾಶಿ
ವೃಷಭ ರಾಶಿಯ ಜನರಲ್ಲಿ ಇಂದು ಪ್ರಯಾಣ ಮಾಡುವ ದಿನ. ದಿನದ ಆರಂಭದಲ್ಲಿ ಆರಂಭಗೊಂಡ ಪ್ರಯಾಣ ದಿನದ ಕೊನೆಯಲ್ಲಿ ಅಂತ್ಯವಾಗಬಹುದು. ಆಹಾರ ಸಂಬಂಧವಾಗಿ ಖರ್ಚುಗಳಿವೆ. ಮಿತ್ರರೊಂದಿಗೆ ಉತ್ತಮ ಬಾಂಧವ್ಯ ಇರಲಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಉತ್ತಮ ಅನುಕೂಲ ಬರುವ ದಿನ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಿದೆ. ನಿಮ್ಮ ಮನೆಗಾಗಿ ನೀವು ಖರ್ಚು ಮಾಡುತ್ತೀರಿ. ಉದರ ಸಂಬಂಧಿ ಸಮಸ್ಯೆಗೆ ಒಳಗಾಗಬಹುದು. ಖರ್ಚುಗಳ ಮಾಡುವಾಗ ಎಚ್ಚರ ಇರಲಿ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಉತ್ತಮ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಾಗುತ್ತಿದೆ. ಬಹುದಿನದಿಂದ ಮುಗಿಸದೆ ಉಳಿಸಿಕೊಂಡಿದ್ದ ಕೆಲಸವೊಂದನ್ನು ಪೂರ್ಣ ಮಾಡುವಿರಿ. ಯಾರಿಗಾದರು ಹಣ ನೀಡುವುದು ಉಳಿಸಿಕೊಂಡಿದ್ದರೆ ಪೂರ್ಣ ಮಾಡಬೇಕಾದ ಒತ್ತಡ ಬರಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಪ್ರಯಾಣದಲ್ಲಿ ಶುಭವಿದೆ. ಖರ್ಚುಗಳು ಕಡಿಮೆಯಾಗಲಿದೆ. ಶುಭ ಕಾರ್ಯದಲ್ಲಿ ಅಥವಾ ಸಭೆ ಸಮಾರಂಭದಲ್ಲಿ ಭಾಗಿಯಾಗಬಹುದು. ಸಂಬಂಧಿಕರ ಭೇಟಿಯಿಂದ ನಿಮ್ಮಲ್ಲಿ ನೆಮ್ಮದಿ ಇರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಪೂರ್ವ ನಿಯೋಜಿತ ಕಾರ್ಯದಲ್ಲಿ ಭಾಗಿಯಾಗುತ್ತೀರಿ. ನಿಮ್ಮ ಬಹುದಿನದ ಆಸೆಯೊಂದನ್ನು ಈಡೇರಿಸಿಕೊಳ್ಳಬಹುದು, ಉಳಿತಾಯ ಸಂಬಂಧವಾಗಿ ನಿಮ್ಮಲ್ಲಿ ದೊಡ್ಡ ಫಲವಿದೆ. ಹೂಡಿಕೆಗಳತ್ತ ನೀವು ಆಸಕ್ತಿ ಹೆಚ್ಚಿಸಿಕೊಳ್ಳಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ದೊಡ್ಡ ಲಾಭದ ದಿನ. ಹಣಕಾಸು ವಿಚಾರವಾಗಿ ಇಂದು ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳಬಹುದು. ನಿಮ್ಮ ಮನೆಗಾಗಿ ನೀವು ವಸ್ತುವೊಂದನ್ನು ಖರೀದಿಸಬಹುದು. ಗೃಹಿಣಿಯರು ವಿಶ್ರಾಂತಿ ಪಡೆಯುವ ದಿನ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರು ಇಂದು ಒತ್ತಡದಿಂದ ಹೊರಬರುವ ದಿನ. ನಿಮ್ಮ ಆರೋಗ್ಯ, ಆರ್ಥಿಕ ವಿಚಾರದಲ್ಲಿ ನಿರಾಳತೆ ಅನುಭವಿಸಬಹುದು. ಸಾಲ ಮರುಪಾವತಿಗೆ ಒತ್ತಡ ಬರಬಹುದು. ಮನೆಯ ವಸ್ತುವೊಂದು ದುರಸ್ಥಿಯಾಗಬಹುದು. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ.
ಧನು ರಾಶಿ
ಧನು ರಾಶಿಯವರು ಇಂದು ದೊಡ್ಡ ಲಾಭ ನೋಡುವಂತಹ ದಿನವಾಗುತ್ತಿದೆ. ನಿಮ್ಮ ಹಲವು ವಿಚಾರಗಳು ಶುಭವಾಗುತ್ತದೆ. ವಾಹನ ಸಂಬಂಧ ಇದ್ದಂತಹ ಖರ್ಚು ಕಡಿಮೆಯಾಗಲಿದೆ. ನೀವು ಬಯಸಿದ ವಸ್ತುವೊಂದನ್ನು ಮನೆಗೆ ತರಬಹುದು. ಸರ್ಕಾರಿ ಕೆಲಸಗಳಲ್ಲಿ ಓಡಾಟಗಳಿವೆ.
ಮಕರ ರಾಶಿ
ಮಕರ ರಾಶಿಯ ಜನರಲ್ಲಿ ಇಂದು ಸವಾಲುಗಳಿಂದ ತುಂಬಿದ ದಿನವಾಗಲಿದೆ. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು. ಹಣಕಾಸು ವಿಚಾರದಲ್ಲಿ ಲೆಕ್ಕಾಚಾರ ಹಾಕಿಕೊಂಡು ಮುಂದುವರೆಯಬೇಕಿದೆ. ಪಂಚೇಂದ್ರಿಯ ಸಂಬಂಧಿ ಸಣ್ಣ ಅನಾರೋಗ್ಯ ಕಾಡಬಹುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ದೊಡ್ಡ ಕೆಲಸಗಳಲ್ಲಿ ಶುಭವಾಗುತ್ತದೆ. ವ್ಯಾಪಾರಿ ವರ್ಗವು ಈ ದಿನ ಲಾಭ ಪಡೆಯಬಹುದು. ನಿಮ್ಮಿಂದಾಗಿ ಕುಟುಂಬ ಸದಸ್ಯರೊಬ್ಬರಿಗೆ ಸಹಾಯವಾಗಲಿದೆ. ಹಣಕಾಸು ವಿಚಾರದಲ್ಲಿ ಶುಭವಿದೆ. ದೊಡ್ಡ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸುವಿರಿ.
ಮೀನ ರಾಶಿ
ನೀವಿಂದು ಪ್ರಯಾಣ ಮಾಡುವ ದಿನವಾಗುತ್ತಿದೆ. ದೂರ ಪ್ರಯಾಣಗಳಲ್ಲಿ ತೊಡಗುವುದು ನಿಮಗೆ ಶ್ರಮದಾಯಕ ಎನಿಸಬಹುದು. ಹಣಕಾಸು ವಿಚಾರವಾಗಿ ಶುಭವಿದೆ. ಯಾರಿಂದಾದರು ಹಣ ಪಡೆದರೆ ಮರಳಿ ನೀಡಬೇಕಾಗುತ್ತದೆ. ನಿದ್ರೆ ಸಂಬಂಧಿತ ವಿಚಾರವಾಗಿ ಸಮಸ್ಯೆಗಳಿರಬಹುದು.



Click it and Unblock the Notifications