Dina Bhavishya: ಸೋಮವಾರದ ರಾಶಿಫಲ ಯಾರಿಗೆಲ್ಲಾ ಅಚ್ಚರಿ!

ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 01 (01 December Horoscope)ರ ನಿಮ್ಮ ರಾಶಿಫಲ ನೋಡೋಣ

ಮೇಷ ರಾಶಿ

ಮೇಷ ರಾಶಿಯವರಿಗೆ ಈ ಸೋಮವಾರವು ಅಧಿಕ ಲಾಭದ ದಿನ, ನಿಮ್ಮ ಶ್ರಮದಾಯಕ ಕೆಲಸಗಳಲ್ಲಿ ಫಲ ನೋಡಲಿದ್ದೀರಿ. ಸರ್ಕಾರಿ ನೌಕರರಲ್ಲಿ ಒತ್ತಡದ ದಿನವಾಗುತ್ತಿದೆ. ಅನೇಕರಲ್ಲಿ ಪ್ರಯಾಣದ ದಿನವಾಗಲಿದೆ. ನಿಮ್ಮ ಆಪ್ತರಿಂದ ಹಲವು ರೀತಿಯ ಸಹಾಯ ಪಡೆಯಬಹುದು.

ವೃಷಭ ರಾಶಿ

ವೃಷಭ‍ ರಾಶಿ ಜನರಿಗೆ ಇಂದು ಉತ್ತಮ ದಿನ. ಗೃಹಿಣಿಯರು ಹಾಗೂ ಅವಿವಾಹಿತರಲ್ಲಿ ಶುಭ ಸುದ್ದಿಯೊಂದು ಕೇಳುವ ದಿನ. ನಿಮ್ಮ ಹಣಕಾಸು ಸ್ಥಿತಿಯಲ್ಲಿ ಸುಧಾರಣೆ ನೋಡುವಿರಿ. ಆಪ್ತ ಭೇಟಿಯಿಂದ ನಿಮ್ಮಲ್ಲಿ ಹೊಸ ವಿಚಾರವೊಂದು ಚಿಂತೆಗೆ ಕಾರಣವಾಗಬಹುದು.

Dina Bhavishya December 01

ಮಿಥುನ ರಾಶಿ

ಮಿಥುನ ರಾಶಿ ಜನರು ಇಂದು ಪ್ರಯಾಣ ಮಾಡಬಹುದು. ಕೆಲಸದ ವಿಚಾರವಾಗಿ ಇಲ್ಲವೆ ಆಪ್ತರ ಕೆಲಸದ ಕಾರಣಕ್ಕೆ ಇಂದು ಪ್ರಯಾಣಗಳಲ್ಲಿ ಭಾಗಿಯಾಗುತ್ತೀರಿ. ನಿಮ್ಮ ಕೌಟುಂಬಿಕ ವಿಚಾರದಲ್ಲಿ ಮೂರನೆ ವ್ಯಕ್ತಿಯ ಹಸ್ತಕ್ಷೇಪವು ನಿಮಗೆ ಸಮಸ್ಯೆಗಳ ಅಥವಾ ಗೊಂದಲ ಉಂಟು ಮಾಡಬಹುದು.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಈ ದಿನ ಹಣಕಾಸು ಕುರಿತ ಚಿಂತೆ ಮಾಡುವ ದಿನ. ನೀವು ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾಗಬಹುದು. ಹಾಗೆ ನಿಮ್ಮಿಂದ ಇತರರಿಗೆ ಸಹಾಯವಾಗುವ ದಿನ. ಸಮಾಜಮುಖಿ ಕಾರ್ಯಗಳಲ್ಲಿ ಇಂದು ಭಾಗಿಯಾಗುತ್ತೀರಿ. ಆಹಾರ ಸಂಬಂಧಿತ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ.

ಸಿಂಹ ರಾಶಿ

ಸಿಂಹ ರಾಶಿ ಜನರಿಗೆ ಈ ದಿನವು ಉತ್ತಮವಾಗಿರಲಿದೆ. ನಿಮ್ಮ ಹಣಕಾಸಿನ ನೆಮ್ಮದಿಯು ಕೆಲಸದಲ್ಲಿ ಪ್ರಾಮಾಣಿಕರವಾಗಿ ಅಥವಾ ಏಕಾಗ್ರತೆಯಿಂದ ಇರಲು ನೆರವಾಗಲಿದೆ. ನಿಮ್ಮಿಂದಾಗಿ ಆಪ್ತರೊಬ್ಬರ ಸಮಸ್ಯೆ ಬಗೆಹರಿಯಲಿದೆ. ಮನೆಯ ವಾತಾವರಣ ಸಂತೋಷದಿಂದ ಕೂಡಿರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರ ಪೂರ್ವ ನಿಗದಿತ ಕೆಲಸದಲ್ಲಿ ವಿಳಂಬವಾಗಬಹುದು. ನಿಮ್ಮ ಪ್ರಯಾಣವನ್ನು ಮುಂದೂಡುತ್ತೀರಿ. ದೇವಾಲಯ ಭೇಟಿಯ ಸಾಧ್ಯತೆ ಇದೆ. ಯಾವುದೇ ಷರತ್ತುಗಳಿಲ್ಲದೆ ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ದಿನದ ಅಂತ್ಯದಲ್ಲಿ ಖರ್ಚುಗಳು ಹೆಚ್ಚಾಗಲಿವೆ.

ತುಲಾ ರಾಶಿ

ತುಲಾ ರಾಶಿ ಜನರಿಗೆ ಇಂದು ಪ್ರಯಾಣ ಹಾಗೂ ಆಯಾಸದಾಯಕ ದಿನ. ಕುಟುಂಬ ಸದಸ್ಯರು ಅಥವಾ ಆಪ್ತರಲ್ಲಿ ಮನಸ್ತಾಪ ಮೂಡುವ ಸಾಧ್ಯತೆ ಇದೆ. ಗೃಹಿಣಿಯರು ಇಂದು ಖರ್ಚುಗಳ ಮೇಲೆ ನಿಗ ಇಡಬೇಕಿದೆ, ವಾಹನ ಚಲಾವಣೆಯಲ್ಲಿ ಎಚ್ಚರಿಕೆ ವಹಿಸಿ. ಆಸ್ಪತ್ರೆ ಅಥವಾ ನಿಗದಿತ ಪರೀಕ್ಷೆಗಳ ಮಾಡಿಸುವುದನ್ನು ಮರೆಯಬೇಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಜನರು ಇಂದು ಪ್ರಯಾಣಗಳ ಮಾಡುವಿರಿ. ಉಳಿತಾಯದ ಹಣವನ್ನು ಬೇರೊಂದು ವಿಚಾರಕ್ಕೆ ನೀವು ಖಾಲಿ ಮಾಡಬೇಕಾಗಿ ಬರಬಹುದು. ಯಾರಿಗೂ ಹಣ ನೀಡಲು ಮುಂದಾಗಬೇಡಿ. ನಿಮ್ಮ ಆಪ್ತ ವಲಯದಿಂದ ನಿಮಗೆ ಸಹಾಯಗಳು ಬರಲಿವೆ.

ಧನು ರಾಶಿ

ಧನು ರಾಶಿ ಜನರಿಗೆ ಇಂದು ಮಿಶ್ರಫಲದ ದಿನ. ನಿಮ್ಮ ಹಲವು ಕೆಲಸಗಳನ್ನು ಮುಗಿಸುವಲ್ಲಿ ನಿರಾಸಕ್ತಿ ಹೊಂದಬಹುದು. ಯಾರಿಗಾದರು ಹಣ ನೀಡಿದ್ದರೆ ಮರಳಿ ಕೇಳುವ ಪ್ರಯತ್ನ ಮುಂದುವರೆಸಿ. ಹೊಸ ವ್ಯಾಪಾರಗಳಲ್ಲಿ ಶುಭವಿದೆ. ಯಾರಿಂದಾದರು ಸಹಾಯ ಬಯಸಿದ್ದರೆ ಇಂದು ಸಿಗಲಿದೆ.

ಮಕರ ರಾಶಿ

ಮಕರ ರಾಶಿ ಜನರಿಗೆ ಈ ದಿನವು ಅತ್ಯುತ್ತಮವಾಗಿರಲಿದೆ. ನಿಮ್ಮ ಹಲವು ಕೆಲಸಗಳನ್ನು ಒಟ್ಟಿಗೆ ಮಾಡಿ ಮುಗಿಸುವಿರಿ, ದಿನದ ಅಂತ್ಯದಲ್ಲಿ ಒತ್ತಡ ಬರಬಹುದು. ಮನೆಯಲ್ಲಿ ಹಣ‍ಕಾಸು ವಿಚಾರದಲ್ಲಿದ್ದ ಸಮಸ್ಯೆಗಳನ್ನು ನಿಭಾಯಿಸುವುದು ಉತ್ತಮ. ಕೃಷಿ ಸಂಬಂಧಿತ ವಿಚಾರವಾಗಿ ಉತ್ತಮ ದಿನವಾಗಿರಲಿದೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಈ ದಿನವು ಅನೇಕ ರೀತಿಯಲ್ಲಿ ಶುಭವನ್ನು ಅನುಭವಿಸಬಹುದು. ನಿಮ್ಮ ಯಾವುದಾದರು ನಿಯೋಜಿತ ಕೆಲಸಗಳಿಂದ ಹಿನ್ನಡೆ ಅನುಭವಿಸಬಹುದು. ಬಹಳ ಸಮಯದಿಂದ ಉಳಿಸಿದ್ದ ಹಣವನ್ನು ಬೇರೊಂದು ಕೆಲಸಕ್ಕೆ ಬಳಸಬಹುದು.

ಮೀನ ರಾಶಿ

ಮೀನ ರಾಶಿಯ ಜನರಿಗೆ ಇಂದು ಪ್ರಯಾಣಗಳಲ್ಲಿ ತೊಡಗುವ ದಿನ. ನಿಮ್ಮ ಹಲವು ಕೆಲಸಗಳನ್ನು ಇಂದು ಪೂರ್ಣ ಮಾಡುವಿರಿ. ಅಗತ್ಯ ವಸ್ತುಗಳಿಗಾಗಿ ಹಣ ಖರ್ಚು ಮಾಡುವಿರಿ. ಗೃಹಿಣಿಯರಿಗೆ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು.

English summary

Dina Bhavishya December 01: Today’s (Daily) Horoscope for 12 Zodiac Signs

daily horoscope for December 01 astrology predictions for all 12 zodiac signs including career, health, love, and money Boldsky kannada
Story first published: Monday, December 1, 2025, 5:00 [IST]
X
Desktop Bottom Promotion