Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೇ 26, ದಿನ ಭವಿಷ್ಯ: 12 ರಾಶಿಗಳ ಸಂಪೂರ್ಣ ರಾಶಿಫಲ, ಈ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
ಭಾನುವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ ಬನ್ನಿ:
ಮೇಷ ರಾಶಿ
ನೀವು ವ್ಯಾಪಾರಸ್ಥರಾಗಿದ್ದರೆ ಈ ದಿನ ಜಾಗ್ರತೆವಹಿಸಿ. ನೀವು ವ್ಯಾಪಾರದಲ್ಲಿ ಜಾಗ್ರತೆವಹಿಸದಿದ್ದರೆ ನೀವು ದೊಡ್ಡ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಕೆಲವು ಅಮೂಲ್ಯ ವಸ್ತುಗಳನ್ನು ಸಹ ಪಡೆಯಬಹುದು. ಮನೆಯ ವಾತಾವರಣ ಶಾಂತವಾಗಿರುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಮಾನಸಿಕ ಒತ್ತಡ ಹೆಚ್ಚಿರಲಿದೆ.

ವೃಷಭ ರಾಶಿ
ರಾಜಕಾರಣಿಗಳಿಗೆ ಈ ದಿನ ತುಂಬಾ ಮುಖ್ಯವಾಗಿದೆ. ನಿಮ್ಮ ಕೆಲಸದ ಕಡೆಗೆ ಗಮನಹರಿಸಬೇಕು, ವ್ಯಾಪಾರಿಗಳಿಗೆ ಈ ದಿನ ತುಂಬಾ ಚೆನ್ನಾಗಿರಲಿದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಬೆನ್ನು ನೋವಿನ ಸಮಸ್ಯೆವಿರಬಹುದು.
ಮಿಥುನ ರಾಶಿ
ನೀವು ಇತರರ ಕೆಲಸದಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಬೇಡಿ, ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರೆಯಲಿದೆ. ವಿಶೇಷವಾಗಿ ನೀವು ಚಿಲ್ಲರೆ ವ್ಯಾಪಾರಿಯಾಗಿದ್ದರೆ, ನಿಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶವನ್ನು ನೀವು ಪಡೆಯುತ್ತೀರಿ. ಕುಟುಂಬದಲ್ಲಿ ಕೆಲ ಸಮಸ್ಯೆಗಳಿರಬಹುದು. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಖರ್ಚು ಅಧಿಕವಿರಲಿದೆ.
ಕರ್ಕ ರಾಶಿ
ಈ ದಿನ ಅಷ್ಟೊಂದು ಅನುಕೂಲಕರವಲ್ಲ, ಈ ಸಮಯದಲ್ಲಿ ನೀವು ಯಾವುದೇ ಅಪಾಯಕಾರಿ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ನಿಮ್ಮ ಸಂಗಾತಿಯ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದು. ಆರೋಗ್ಯದ ದೃಷ್ಟಿಯಿಂದ ದಿನವು ಸಾಮಾನ್ಯವಾಗಿರಲಿದೆ.
ಸಿಂಹ ರಾಶಿ
ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ನಿಮ್ಮ ಆದಾಯ ಹೆಚ್ಚಾಗಬಹುದು. ನೀವು ಕೆಲಸದ ಕಡೆಗೆ ಗಮನಹರಿಸಬೇಕು, ಇದು ನಿಮ್ಮ ಪ್ರಗತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ವ್ಯಾಪಾರಿಗಳಿಗೆ ಈ ದಿನ ಅನುಕೂಲಕರವಲ್ಲ. ಕೌಟುಂಬಿಕ ಜೀವನದಲ್ಲಿ ಪರಿಸ್ಥಿತಿ ಚೆನ್ನಾಗಿರಲಿದೆ, ಆರೋಗ್ಯ ಸಮಸ್ಯೆಗಳಿರಬಹುದು.
ಕನ್ಯಾ ರಾಶಿ
ಕೆಲಸದ ಬಗ್ಗೆ ಅತಿಯಾದ ಚಿಂತೆ ಬಿಡಿ. ನೀವು ಅವಿವಾಹಿತರಾಗಿದ್ದರೆ ಇಂದು ನಿಮಗೆ ಮದುವೆಯ ಪ್ರಸ್ತಾಪ ಬರಬಹುದು. ಕುಟುಂಬ ಜೀವನ ಚೆನ್ನಾಗಿರಲಿದೆ, ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಲು ಹೋಗಬೇಡಿ.
ತುಲಾ ರಾಶಿ
ನೀವು ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ಕೆಲಸದಲ್ಲಿ ಈ ದಿನ ನಿಮಗೆ ಮಿಶ್ರಫಲ.ಉದ್ಯೋಗಿಗಳು ತಮ್ಮ ಎಲ್ಲಾ ಕೆಲಸಗಳನ್ನು ಯೋಜನೆಯ ಪ್ರಕಾರ ಪೂರ್ಣಗೊಳಿಸಬೇಕು. ವ್ಯಾಪಾರಿಗಳು ತ್ವರಿತ ಲಾಭ ಗಳಿಸಲು ಇತರರಿಂದ ದಾರಿತಪ್ಪಿಸುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ಅವರು ಲಾಭದ ಬದಲು ನಷ್ಟವನ್ನು ಅನುಭವಿಸಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಚೆನ್ನಾಗಿರಲಿದೆ.
ವೃಶ್ಚಿಕ ರಾಶಿ
ಉದ್ಯೋಗಿಗಳು ಬಡ್ತಿಗಾಗಿ ಕಾಯುತ್ತಿದ್ದರೆ, ನೀವು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು. ನೀವು ತಾಳ್ಮೆಯಿಂದಿರಿ. ವ್ಯಾಪಾರಿಗಳ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ದಿನವು ಸೂಕ್ತವಾಗಿದೆ. ಆರೋಗ್ಯದ ವಿಷಯದಲ್ಲಿ ಈ ದಿನ ಅನುಕೂಲಕರವಲ್ಲ.
ಧನು ರಾಶಿ
ಕುಟುಂಬದ ವಿಷಯದಲ್ಲಿ ಈ ದಿನ ನಿಮಗೆ ಉತ್ತಮವಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೀವು ಶ್ರಮಿಸುತ್ತಿದ್ದರೆ, ಇಂದು ನಿಮಗೆ ಉತ್ತಮ ಸಂಕೇತವಾಗಿದೆ. ನೀವು ಯಶಸ್ಸನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ಅದು ಉದ್ಯೋಗ ಅಥವಾ ವ್ಯವಹಾರವಾಗಿರಲಿ, ಇಂದು ನಿಮ್ಮ ಎಲ್ಲಾ ಕೆಲಸಗಳು ಯೋಜನೆಯ ಪ್ರಕಾರ ಪೂರ್ಣಗೊಳ್ಳುತ್ತವೆ. ಹೀಗಾಗಿ ಈ ದಿನ ನಿಮಗೆ ಉತ್ತಮವಾಗಿರಲಿದೆ.
ಮಕರ ರಾಶಿ
ಆರ್ಥಿಕವಾಗಿ ಈ ದಿನ ಉತ್ತಮವಾಗಿದೆ. ವ್ಯಾಪಾರಿಗಳು ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶವನ್ನು ಪಡೆಯಬಹುದು. ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ಉದ್ಯೋಗಿಗಳ ಆದಾಯದಲ್ಲಿಯೂ ಹೆಚ್ಚಳವಾಗಬಹುದು. ಪ್ರೇಮಿಗಳ ನಡುವೆ ನಂಬಿಕೆಯ ಕೊರತೆ ಇರಲಿದೆ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
ಕುಂಭ ರಾಶಿ
ಈ ದಿನ ಖರ್ಚು ಹೆಚ್ಚಿರಲಿದೆ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡುವಾಗ, ನಿಮ್ಮ ಮಾತುಗಳನ್ನು ಬಹಳ ಎಚ್ಚರಿಕೆಯಿಂದ ಬಳಸಿ, ಇಲ್ಲದಿದ್ದರೆ ನಿಮಗೆ ತುಂಬಾನೇ ಕಷ್ಟವಾಗಬಹುದು. ವ್ಯಾಪಾರಿಗಲಿಗೆ ಈ ದಿನ ಮಿಶ್ರ ಫಲಿತಾಂಶ. ಖರ್ಚುಗಳ ಕಡೆಗೆ ಗಮನಹರಿಸಬೇಕು. ಆರೋಗ್ಯದ ವಿಷಯದಲ್ಲಿ ದಿನವು ಮಿಶ್ರಫಲ.
ಮೀನ ರಾಶಿ
ನೀವು ಸರ್ಕಾರಿ ಕೆಲಸಕ್ಕೆ ತಯಾರಿ ನಡೆಸುತ್ತಿದ್ದರೆ ಮತ್ತಷ್ಟು ಪ್ರಯತ್ನ ಹಾಕಿ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ಇರುತ್ತದೆ. ಉದ್ಯೋಗಿಗಳಿಗೆ ಬಡ್ತಿಯ ಕನಸು ಶೀಘ್ರವೇ ನನಸಾಗಬಹುದು. ಅದೇ ಸಮಯದಲ್ಲಿ, ಉದ್ಯಮಿಗಳು ಲಾಭ ಗಳಿಸಲು ಉತ್ತಮ ಅವಕಾಶವನ್ನು ಪಡೆಯುತ್ತಾರೆ. ಹಣದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications