Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದಿನ ಭವಿಷ್ಯ ಏಪ್ರಿಲ್ 16: ಮಂಗಳವಾರದ ಈ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
ವೈದಿಕ ಶಾಸ್ತ್ರದ ಪ್ರಕಾರ ಮಂಗಳವಾರದ ಈ ದಿನ (ಏಪ್ರಿಲ್ 16) ನಿಮಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:
ಮೇಷ ರಾಶಿ
ಕೆಲಸದ ವಿಷಯದಲ್ಲಿ ಇಂದು ನಿಮಗೆ ಉತ್ತಮವಾಗಿದೆ. ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿದೆ. ವ್ಯಾಪಾರಿಗಳು ಪಾಲುದಾರಿಕೆಯ ವ್ಯವಹಾರದಲ್ಲಿಇಂದು ನೀವು ನಿಮ್ಮ ಎಲ್ಲಾ ನಿರ್ಧಾರಗಳನ್ನು ಸಂಪೂರ್ಣ ವಿಶ್ವಾಸದಿಂದ ತೆಗೆದುಕೊಳ್ಳುತ್ತೀರಿ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಇಂದು ನೀವು ಐಷಾರಾಮಿಗಳಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬಹುದು. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರಲಿದೆ. ನಿಮ್ಮ ಪ್ರೀತಿಪಾತ್ರರು ಇಂದು ಉತ್ತಮ ಮನಸ್ಥಿತಿಯಲ್ಲಿರುತ್ತಾರೆ. ಆರೋಗ್ಯದಲ್ಲಿ ಈ ದಿನ ಸರಾಸರಿಯಾಗಿರಲಿದೆ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 14
ಶುಭ ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ

ವೃಷಭ ರಾಶಿ
ಆಸ್ತಿ ವ್ಯವಹಾರ ಮಾಡುವವರಿ ಈ ದಿನ ತುಂಬಾ ಮುಖ್ಯವಾಗಿದೆ. ಶೀಘ್ರದಲ್ಲಿಯೇ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ಹಣದ ವಿಷಯದಲ್ಲಿ ಈ ದಿನವು ಉತ್ತಮವಾಗಿರುತ್ತದೆ. ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಆರೋಗ್ಯದ ಕಡೆಗೆ ಗಮನಹರಿಸಬೇಕು.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 5
ಶುಭ ಸಮಯ: ಸಂಜೆ 5 ರಿಂದ ರಾತ್ರಿ 8 ರವರೆಗೆ
ಮಿಥುನ ರಾಶಿ
ಕೆಲಸದಲ್ಲಿ ಈ ದಿನ ಉತ್ತಮವಾಗಿದೆ. ನಿರುದ್ಯೋಗಿಗಳು ಉತ್ತಮ ಲಾಭ ಪಡೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಇಂದು ನೀವು ಬುದ್ಧಿವಂತ ಆರ್ಥಿಕ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಕುಟುಂಬದಲ್ಲಿ ಸಮಸ್ಯೆ ಉಂಟಾಗದಂತೆ ಜಾಗ್ರತೆವಹಿಸಿ. ಆರೋಗ್ಯ ಸಂಬಂಧಿ ಸಮಸ್ಯೆಗಳಿರಬಹುದು.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 20
ಶುಭ ಸಮಯ: ಬೆಳಿಗ್ಗೆ 6 ರಿಂದ 9 ರವರೆಗೆ
ಕರ್ಕ ರಾಶಿ
ಇಂದು ನೀವು ಕೆಲವು ಹೊಸ ಸವಾಲುಗಳನ್ನು ಎದುರಿಸಬಹುದು. ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಆತುರದಲ್ಲಿ ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಳದಿದ್ದರೆ ಉತ್ತಮ. ಕೆಲವರಿಗೆ ಕೆಲಸಕ್ಕೆ ಸಂಬಂಧಸಿದಂತೆ ಪ್ರಯಾಣ ಮಾಡಬೇಕಾಗಿ ಬರುವುದು. ಇನ್ನು ಆರೋಗ್ಯದ ಕಡೆಯೂ ಗಮನಹರಿಸಬೇಕು.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: 10
ಶುಭ ಸಮಯ: ಸಂಜೆ 5:50 ರಿಂದ 8:50 ರವರೆಗೆ
ಸಿಂಹ ರಾಶಿ
ವಿವಾಹಿತರಿಗೆ ಈ ದಿನ ನಿಮಗೆ ರೊಮ್ಯಾಂಟಿಕ್ ಆಗಿರಲಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಕೆಲಸದ ಕಡೆಗೆ ತುಂಬಾನೃ ಗಮನಹರಿಸಬೇಕು. ವ್ಯಾಪಾರಿಗಳಿಗೆ ಈ ದಿನ ದುಬಾರಿಯಾಗಲಿದೆ. ನೀವು ಯಾವುದೇ ದುಬಾರಿ ವಸ್ತುವನ್ನು ಖರೀದಿಸಲು ಬಯಸಿದರೆ ಸ್ವಲ್ಪ ಸಮಯ ಕಾಯಲು ನಿಮಗೆ ಸಲಹೆ ನೀಡಲಾಗುವುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಕೋಪ ಮತ್ತು ಒತ್ತಡದಿಂದ ದೂರವಿರಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 2
ಶುಭ ಸಮಯ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ
ಕನ್ಯಾ ರಾಶಿ
ಈ ದಿನ ನಿಮಗೆ ಒಳ್ಳೆಯದಿದೆ. ಕೆಲಸವನ್ನು ಬೇಗನೆ ಮಾಡಿ ಮುಗಿಸುವಿರಿ. ವ್ಯಾಪಾರಿಗಳು ಬಯಸಿದ ಲಾಭವನ್ನು ಪಡೆಯಬಹುದು. ವ್ಯಾಪಾರಿಗಳಿಗೂ ಈ ದಿನ ಲಾಭದಾಯಕವಾಗಿದೆ. ವೈವಾಹಿಕ ಜೀವನದಲ್ಲಿ ಖುಷಿ ಇರಲಿದೆ.
ಅದೃಷ್ಟದ ಬಣ್ಣ: ಕಡು ಹಸಿರು
ಅದೃಷ್ಟದ ಸಂಖ್ಯೆ: 26
ಶುಭ ಸಮಯ: ಸಂಜೆ 5 ರಿಂದ ರಾತ್ರಿ 8 ರವರೆಗೆ
ತುಲಾ ರಾಶಿ
ವಿದ್ಯಾರ್ಥಿಗಳಿಗೆ ಈ ದಿನ ಅನುಕೂಲಕರವಾಗಿದೆ. ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಸಿಗಬಹುಉದು. ಕೌಟುಂಬಿಕ ಜೀವನದಲ್ಲಿ ಪರಿಸ್ಥಿತಿ ಚೆನ್ನಾಗಿರಲಿದೆ. ಹಣದ ವಿಚಾರದಲ್ಲ ಈ ದಿನ ಉತ್ತಮವಾಗಿದೆ. ನಿಮ್ಮ ಬಜೆಟ್‌ಗಿಂತ ಹೆಚ್ಚು ಖರ್ಚು ಮಾಡುವ ತಪ್ಪು ಮಾಡಬೇಡಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಹೆಚ್ಚು ಸಿಹಿ ತಿಂಡಿ ತಿನ್ನಬೇಡಿ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 14
ಶುಭ ಸಮಯ: ಬೆಳಿಗ್ಗೆ 5:30 ರಿಂದ 11 ರವರೆಗೆ
ವೃಶ್ಚಿಕ ರಾಶಿ
ಆರೋಗ್ಯದ ಬಗ್ಗೆ ಹೆಚ್ಚಿನ ಗಮನನೀಡಬೇಕು. ಕೆಲಸದ ಕಡೆಗೆ ತುಂಬಾನೇ ಗಮನಹರಿಸಬೇಕು, ಇಲ್ಲದಿದ್ದರೆ ನಿರ್ಲಕ್ಷ್ಯ ಮಾಡಿದರೆ ಹೆಚ್ಚು ಸಮಸ್ಯೆಯಾಗುವುದು. ವ್ಯಾಪಾರಿಗೂ ಇಂದು ಯಾವುದೇ ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಸಲಹೆ ನೀಡಲಾಗುವುದು. ಈ ದಿನ ಹಣದ ಬಗ್ಗೆ ಗಮನಹರಿಸಬೇಕು. ನಿಇಲ್ಲದಿದ್ದರೆ ನಿಮ್ಮ ಸಾಲದ ಹೊರೆ ಹೆಚ್ಚಾಗಬಹುದು. ಈ ದಿನ ನೀವು ಕೋಪವನ್ನು ನೀವು ನಿಯಂತ್ರಿಸಬೇಕು.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 4
ಶುಭ ಸಮಯ: ಸಂಜೆ 6 ರಿಂದ ರಾತ್ರಿ 9 ರವರೆಗೆ
ಧನು ರಾಶಿ
ಮಿಂದು ಕೆಲಸದಲ್ಲಿ ಶುಭವಾಗಿದೆ, ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಬಹುದು. ಆರ್ಥಿಕ ಸ್ಥಿತಿ ಚೆನ್ನಾಗಿಲಿದೆ. ಮನೆಯ ಅಲಂಕಾರಕ್ಕೆ ಹಣ ಖರ್ಚಾಗುವುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಒತ್ತಡದಿಂದ ಕೂಡಿರಲಿದೆ. ಕುಟುಂಬದಲ್ಲಿ ಕೆಲ ಅಭಿಪ್ರಾಯ ವ್ಯತ್ಯಾಸವಿರಬಹುದು.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 28
ಶುಭ ಮುಹೂರ್ತ: ಬೆಳಗ್ಗೆ 8:30 ರಿಂದ ಮಧ್ಯಾಹ್ನ 12
ಮಕರ ರಾಶಿ
ಇಂದು ನೀವು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳಳುವುದಾದರೆ ಸಂಗಾತಿಯ ಅಭಿಪ್ರಾಯ ಪಡೆಯಲು ಮರೆಯಬೇಡಿ. ಇದು ನಿಮ್ಮ ನಡುವಿನ ಸಂಬಂಧವನ್ನು ಗಟ್ಟಿಯಾಗಿಸುವುದು. ಕೆಲಸದ ಒತ್ತಡ ಅಧಿಕವಿರಲಿದೆ. ವ್ಯಾಪಾರಿಗಳು ತಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ಪಡೆಯುತ್ತಾರೆ.ಇಂದು ನೀವು ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ದೊಡ್ಡ ಸುಧಾರಣೆಯನ್ನು ಕಾಣಬಹುದು. ಹಣದ ವಿಷಯದಲ್ಲಿ ಈ ದಿನ ಉತ್ತಮವಾಗಿದೆ. ಅನಗತ್ಯ ವಿಷಯಗಳಿಗೆ ಹಣ ವ್ಯರ್ಥ ಮಾಡಬೇಡಿ. ಆರೋಗ್ಯದ ಕಡೆ ಗಮನಹರಿಸಿ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 36
ಶುಭ ಸಮಯ: ಬೆಳಿಗ್ಗೆ 5 ರಿಂದ 7:30 ರವರೆಗೆ
ಕುಂಭ ರಾಶಿ
ರಾಜಕಾರಣಿಗಳಿಗೆ ಈ ದಿನ ಉತ್ತಮವಾಗಿದೆ. ಉದ್ಯೋಗಿಗಳಿಗೆ ಇದು ಬದಲಾವಣೆಯ ಸಮಯ. ಸರಿಯಾಗಿ ಪ್ರಯತ್ನಿಸಿದರೆ ಹೊಸ ಕೆಲಸ ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇಂದು ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 19
ಶುಭ ಸಮಯ: ಸಂಜೆ 6:15 ರಿಂದ 8:15 ರವರೆಗೆ
ಮೀನ ರಾಶಿ
ಹಣದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ನೀವು ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ, ಇಂದು ಅದನ್ನು ಮರಳಿ ಪಡೆಯುವ ಬಲವಾದ ಸಾಧ್ಯತೆಯಿದೆ. ಕಛೇರಿಯಲ್ಲಿ ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳುತ್ತವೆ. ವ್ಯಾಪಾರಿಗಳು ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ಸರಿಯಾದ ನಿರ್ಧಾರಗಳ ಉತ್ತಮ ಫಲಿತಾಂಶಗಳನ್ನು ಸಹ ನೀವು ಪಡೆಯುತ್ತೀರಿ. ನಿಮ್ಮ ಸಂಬಂಧದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದಾಗಿ ನಿಮ್ಮ ನಡುವೆ ತಪ್ಪು ತಿಳುವಳಿಕೆ ಉಂಟಾಗಬಹುದು, ಹಾಗಾಗದಂತೆ ಜಾಗ್ರತೆವಹಿಸಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 20
ಶುಭ ಸಮಯ: ಬೆಳಗ್ಗೆ 7 ರಿಂದ 10 ರವರೆಗೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










