ಸೆಪ್ಟೆಂಬರ್ 9, ದಿನ ಭವಿಷ್ಯ: ಶುಭ ದಿನ, 12 ರಾಶಿಗಳಿಗೆ ಈ ದಿನ ಹೇಗಿರಲಿದೆ?

ಶುಭ ಸೋಮವಾರ, ಈ ದಿನ ನಿಮ್ಮ ರಾಶಿಫಲ ಹೇಗಿದೆ?

ಮೇಷ ರಾಶಿ

ಈ ದಿನ ನಿಮಗೆ ಶುಭವಾಗಿದೆ. ವ್ಯಾಪಾರಿಗಳು ಹೆಚ್ಚಿನ ಲಾಭಕ್ಕೆ ಕೆಲ ಯೋಜನೆಗಳನ್ನು ರೂಪಿಸಿದರೆ ಒಳ್ಳೆಯದು. ನೀವು ಕುಟುಂಬದ ಕಡೆಗೆ ಗಮನಹರಿಸಬೆಕು, ಸಂಗಾತಿಯ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸಿ. ಆಹಾರಕ್ರಮದ ಕಡೆಗೆ ಗಮನಹರಿಸಿ.

Dina Bhavishya

ವೃಷಭ ರಾಶಿ

ಕೆಲಸ ಕಾರ್ಯಗಲಲ್ಲಿ ಈ ದಿನ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿರಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಈ ಅವಧಿ ಉತ್ತಮವಾಗಿರಲಿದೆ. ಆರೋಗ್ಯವು ಉತ್ತಮವಾಗಿರುತ್ತದೆ.

ಮಿಥುನ ರಾಶಿ

ಈ ದಿನ ಕುಟುಂಬ ಜೀವನದಲ್ಲಿ ಕೆಲ ಸಮಸ್ಯೆಗಳಿರಬಹುದು, ಮನೆಯ ಸದಸ್ಯರ ನಡುವೆ ಕೆಲ ಭಿನ್ನಾಭಿಪ್ರಾಯಗಳಿರಬಹುದು. ಕೆಲಸದ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ.ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಿರಬಹುದು. ಉದ್ಯೋಗದ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ. ಸಂಗಾತಿಗೆ ನೀಡಿದ ಭರವಸೆ ಈಡೇರಿಸಲು ಪ್ರಯತ್ನಿಸಿ.

ಕರ್ಕ ರಾಶಿ

ಈ ದಿನ ಶುಭವಾಗಿದೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ ಮತ್ತು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಿಮ್ಮ ಸಮಸ್ಯೆಯನ್ನು ಪರಿಹರಿಸಬಹುದು. ವ್ಯಾಪಾರಿಗಳಿಗೆ ದಿನ ಅಷ್ಟೊಂದು ಅನುಕೂಲಕರವಲ್ಲ. ಅರೋಗ್ಯ ಉತ್ತಮವಾಗಿರಲಿದೆ.

ಸಿಂಹ ರಾಶಿ

ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ.ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ. ಆರೋಗ್ಯ ಸಮಸ್ಯೆ ಇದ್ದರೆ ಸುಧಾರಣೆ ಕಂಡು ಬರುವುದು. ಮನೆಯಲ್ಲಿ ವಾತಾವರಣ ಅಷ್ಟೊಂದು ಚೆನ್ನಾಗಿರಲಿಲ್ಲ ಎಂದರೆ ನೀವು ತಾಳ್ಮೆಯಿಂದ ವರ್ತಿಸಿ. ಆರೋಗ್ಯದ ಕಡಿಗೆ ಗಮನಹರಿಸಿ.

ಕನ್ಯಾ ರಾಶಿ

ಇತರರು ಏನು ಹೇಳುತ್ತಾರೆಂದು ಗಮನ ಹರಿಸದೆ ನಿಮ್ಮ ಗುರಿಯತ್ತ ಗಮನ ಹರಿಸಿದರೆ ಎಂದು ಸಲಹೆ ನಿಡಲಾಗುವುದು.ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ದೊಡ್ಡ ಹಣಕಾಸಿನ ವಹಿವಾಟುಗಳನ್ನು ಮಾಡಲು ಹೋಗಬೇಡಿ. ವ್ಯಾಪಾರಿಗಳು ಸ್ವಲ್ಪ ನಿರ್ಲಕ್ಷ್ಯ ತೋರಿದರು ನಷ್ಟ ಉಂಟಾಗಬಹುದು. ನಿಮ್ಮ ಅತಿಯಾದ ಆತ್ಮವಿಶ್ವಾಸವು ನಿಮ್ಮನ್ನು ಮುಜುಗರಕ್ಕೀಡುಮಾಡಬಹುದು. ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯದ ಕಡೆಗೆ ಗಮನಹರಿಸಿ.

ತುಲಾ ರಾಶಿ

ನೀವು ನಿಮ್ಮ ಗುರಿಯತ್ತ ಗಮಹರಿಸಿದರೆ ಒಳ್ಳೆಯದು. ಬೇಡದ ವಿಷಯಗಳ ಕಡೆಗೆ ಗಮನಹರಿಸಬೇಡಿ. ಆರ್ಥಿಕ ಸ್ಥಿತಿಯು ಬಲವಾಗಿ ಉಳಿಯುತ್ತದೆ. ವ್ಯಾಪಾರಿಗಳು ನಿಮ್ಮ ಶ್ರಮಕ್ಕೆ ತಕ್ಕ ಲಾಭ ಸಿಗಲಿದೆ. ಮನೆಯಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ವೈವಾಹಿಕ ಜೀವನದ ಕಡೆಗೆ ಗಮನಹರಿಸಿ.


ವೃಶ್ಚಿಕ ರಾಶಿ

ಆಪ್ತರ ಜೊತೆಗೆ ಭಿನ್ನಾಭಿಪ್ರಾಯವಿದ್ದರೆ ಅದು ಬಗೆಹರಿಯಲಿದೆ. ಉದ್ಯೋಗವಾಗಲಿ ಅಥವಾ ವ್ಯವಹಾರವಾಗಲಿ, ನಿಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶವನ್ನು ನೀವು ಪಡೆಯುತ್ತೀರಿ. ನಿಮ್ಮ ವ್ಯಾಪಾರ ಯೋಜನೆಗಳಲ್ಲಿ ನೀವು ಇತ್ತೀಚೆಗೆ ಕೆಲವು ಬದಲಾವಣೆಗಳನ್ನು ಮಾಡಿದ್ದರೆ, ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಉದ್ಯೋಗದಲ್ಲಿ ಈ ದಿನ ಉತ್ತಮವಾಗಿದೆ. ಬೇರೆಯವರ ವೈಯಕ್ತಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬೇಡಿ, ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಬೇಡ.


ಧನು ರಾಶಿ

ನೀವು ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಿ. ನಿಮ್ಮ ಪ್ರಸ್ತುತ ಕೆಲಸಕ್ಕೆ ಹೆಚ್ಚು ಗಮನ ಕೊಡಿ. ಅತಿಯಾದ ಕೆಲಸದ ಹೊರೆಯಿಂದಾಗಿ ಆಯಾಸ ಉಂಟಾಗಬಹುದು. ಕಟುಉಮಬ ಜೀವನ ಚೆನ್ನಾಗಿರಲಿದೆ. ಗ್ಯಾಸ್, ಮಲಬದ್ಧತೆ, ಅಸಿಡಿಟಿ ಮುಂತಾದ ಆರೋಗ್ಯ ಸಮಸ್ಯೆಗಳಿರಬಹುದು.

ಮಕರ ರಾಶಿ

ನೀವು ಹಣದ ವಿಷಯದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅದರ ಬಗ್ಗೆ ತುಂಬಾ ತಲೆ ಕೆಡಿಸಬೇಡಿ. ಸರಿಯಾದ ಸಮಯ ಬಂದಾಗ ನಿಮ್ಮ ಸಮಸ್ಯೆ ಖಂಡಿತಾ ಪರಿಹಾರವಾಗುತ್ತದೆ. ಈ ಸಮಯದಲ್ಲಿ ಮಾಡಿದ ಕಠಿಣ ಶ್ರಮಕ್ಕೆ ಒಳ್ಳೆಯ ಫಲ ಸಿಗಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ನೋಡುವುದಾದರೆ ಹಲ್ಲು ನೋವಿನ ಸಮಸ್ಯೆ ಉಂಟಾಗುವುದು.

ಕುಂಭ ರಾಶಿ

ಸಂಬಂಧಗಳ ಬಗ್ಗೆ ಹೆಚ್ಚು ಗಮನ ಹರಿಸುವ ಅವಶ್ಯಕತೆಯಿದೆ. ಖರ್ಚು-ವೆಚ್ಚಗಳು ಹೆಚ್ಚಾಗುವುದರಿಂದ ಹಣದ ಚಿಂತೆ ಕಾಡಬಹುದು. ವ್ಯಾಪಾರಿಗಳು ಈ ದಿನ ಯಾವುದೇ ದೊಡ್ಡ ಹೂಡಿಕೆ ಮಾಡಲು ಹೋಗಬೇಡಿ. ಪ್ರೇಮಿಗಳಿಗೆ ಈ ದಿನ ಉತ್ತಮವಾಗಿದೆ. ಆರೋಗ್ಯದ ಬಗ್ಗೆ ನೋಡುವುದಾದರೆ ಮೊಣಕಾಲ ನೋವಿನ ಸಮಸ್ಯೆವಿರಬಹುದು.

ಮೀನ ರಾಶಿ

ಎಲ್ಲಾ ಚಿಂತೆಗಳನ್ನು ಮರೆತು ನೀವು ನಿಮ್ಮ ಕೆಲಸದ ಕಡೆಗೆ ಗಮನಹರಿಸಿ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುವುದು. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚು ಆತುರಪಡಬೇಡಿ. ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ವೈವಾಹಿಕ ಬದುಕು ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ತಲೆನೋವಿನ ಸಮಸ್ಯೆವಿರಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

Story first published: Sunday, September 8, 2024, 20:50 [IST]
X
Desktop Bottom Promotion