ದಿನ ಭವಿಷ್ಯ: ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಜೂನ್ 8ರ ರಾಶಿಫಲ

ಮೇಷ ರಾಶಿ

ನ್ಯಾಯಾಲಯಕ್ಕೆ ಸಂಬಂಧಸಿದ ವಿಷಯವಿದ್ದರೆ ಸೂಕ್ತ ಕಾನೂನು ಸಲಹೆ ಪಡೆಯುವುದು ಒಳ್ಳೆಯದು. ಕಚೇರಿಯಲ್ಲಿ ನಿಮ್ಮ ಕೆಲವು ಪ್ರಮುಖ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಬಹುದು, ವ್ಯಾಪಾರಿಗಳು ಇಂದು ಅಪೇಕ್ಷಿತ ಲಾಭವನ್ನು ಪಡೆಯುತ್ತಾರೆ. ಈ ದಿನ ನೀವು ಉಳಿತಾಯದತ್ತ ಹೆಚ್ಚು ಗಮನಹರಿಸಿದರೆ, ನೀವು ಉತ್ತಮವಾಗಿರುತ್ತದೆ, ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ.

Explore Dina Bhavishya

ವೃಷಭ ರಾಶಿ

ಈ ದಿನ ನಿಮಗೆ ಉತ್ತಮವಾಗಿದೆ, ವ್ಯಾಪಾರಿಗಳು ಈ ದಿನ ಮಾಡುವ ಪ್ರಮಾಣ ಬಹು ಮುಖ್ಯವಾಗಿರುತ್ತದೆ, ನೀವು ಪಾಲುದಾರಿಕೆಯಲ್ಲಿ ಯಾವುದೇ ವ್ಯವಹಾರವನ್ನು ಮಾಡಲು ಬಯಸಿದರೆ ಈ ದಿನ ನಿಮಗೆ ಉತ್ತಮವಾಗಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಖರ್ಚುವೆಚ್ಚಗಳ ಮೇಲೆ ನಿಗಾ ಇರಿಸಬೇಕು. ನಿಮ್ಮ ಸಂಗಾತಿಯೊಂದಿಗೆ ಪ್ರೀತಿ ಮತ್ತು ಬಾಂಧವ್ಯ ಹೆಚ್ಚಾಗುವುದು.

ಮಿಥುನ ರಾಶಿ

ಈ ದಿನ ಮನೆಯಲ್ಲಿ ವಿಸೇಷ ಕಾರ್ಯಕ್ರಮವಿರಬಹುದು, ಕೆಲಸದಲ್ಲಿ ಈ ದಿನ ತುಂಬಾ ಶುಭ ದಿನವಾಗಲಿದೆ. ಅದು ಉದ್ಯೋಗ ಅಥವಾ ವ್ಯವಹಾರವಾಗಿರಲಿ ಈ ದಿನ ಶುಭವಾಗಿದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ಶೀಘ್ರದಲ್ಲೇ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಕೊನೆಯಾಗಲಿದೆ. ಕೌಟುಂಬಿಕ ಜೀವನದಲ್ಲಿ ಪರಿಸ್ಥಿತಿ ಚೆನ್ನಾಗಿರಲಿದೆ.

ಕರ್ಕ ರಾಶಿ

ಈ ದಿನ ಅಪೂರ್ಣವಾಗಿ ಬಿಟ್ಟ ಪ್ರಮುಖ ಕೆಲಸ ಪುರ್ಣಗೊಳ್ಳಲಿದೆ. ವ್ಯಾಪಾರಗಳಿಗೆ ಈ ದಿನ ಮಿಶ್ರಫಲ. ನೀವು ಖರ್ಚು ನೋಡಿಕೊಂಡು ಮಾಡಿ, ಇಲ್ಲದಿದ್ದರೆ ಭವಿಷ್ಯದಲ್ಲಿ ತೊಂದರೆಯಾಗುವುದು, ಆರೋಗ್ಯದ ದೃಷ್ಟಿಯಿಂದ ಈ ದಿನ ಸಾಮಾನ್ಯವಾಗಿರುತ್ತದೆ.

ಸಿಂಹ ರಾಶಿ

ಬೇಡದ ಯೋಚನೆ ಮರೆತು ಇಂದು ಮತ್ತು ನಾಳೆಯತ್ತ ಗಮನ ಹರಿಸುವುದು ಉತ್ತಮ. ಈ ಸಮಯವು ನಿಮಗೆ ಬಹಳ ಮುಖ್ಯವಾಗಿದೆ. ವ್ಯಾಪಾರಸ್ಥರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ, ನಿಮ್ಮ ಬಾಂಧವ್ಯ ಗಟ್ಟಿಯಾಗಲಿದೆ.

ಕನ್ಯಾ ರಾಶಿ

ಈ ದಿನ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ಆರ್ಥಿಕವಾಗಿ ಈ ದಿನ ಉತ್ತಮವಾಗಿದೆ, ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿದೆ. ಉದ್ಯಮಿಗಳ ಯಾವುದೇ ಪ್ರಮುಖ ಸಮಸ್ಯೆಯು ಪರಿಹರಿಸಲ್ಪಡುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಆರೋಗ್ಯ ಚೆನ್ನಾಗಿರಲಿದೆ.

ತುಲಾ ರಾಶಿ

ಉದ್ಯಮಿಗಳ ಯಾವುದೇ ಪ್ರಮುಖ ಸಮಸ್ಯೆಯು ಪರಿಹರಿಸಲ್ಪಡುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ಒಗ್ಗಟ್ಟು ಇರಲಿದೆ. ಈ ದಿನ ನೀವು ಹಣಕಾಸಿನ ನಿರ್ಧಾರಗಳನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ. ನಿಮ್ಮ ಕೋಪದ ಸ್ವಭಾವು ಸಂಗಾತಿಯ ಮನಸ್ಸು ನೋಯಿಸದಂತೆ ಜಾಗ್ರತೆವಹಿಸಿ. ಆರೋಗ್ಯದಲ್ಲಿ ಈ ದಿನ ಮಿಶ್ರಫಲ.

ವೃಶ್ಚಿಕ ರಾಶಿ

ಈ ದಿನ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೋಲ್ಳಬೇಡಿ, ಏಕೆಂದರೆ ನಿಮ್ಮ ಮನಸ್ಥಿತಿ ಸರಿಯಿರಲ್ಲ ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಯಾವುದೇ ಹೊಸ ಕೆಲಸವನ್ನು ಪ್ರಾರಂಭ ಮಾಡದಂತೆ ಸಲಹೆ ನೀಡಲಾಗುವುದು. ಮಕ್ಕಳ ಕಡೆಗೆ ಗಮನಹರಿಸಿ. ಅನಗ್ಯತ ಚಿಂತೆಯಿಂದ ದೂರವಿರಿ.

ಧನು ರಾಶಿ

ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿರಲಿದೆ. ಉದ್ಯೋಗಿಗಳು ಈ ದಿನ ಜಾಗರೂಕರಾಗಿರಲು ಸಲಹೆ ನೀಡಲಾಗುವುದು, ಹಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಲು ಹೋಗಬೇಡಿ, ಕೆಲಸದ ಜೊತೆಗೆ ನೀವು ವಿಶ್ರಾಂತಿ ಕಡೆಗೆ ಗಮನಹರಿಸಿ.

ಮಕರ ರಾಶಿ

ಕೆಲಸದಲ್ಲಿ ಈ ದಿನ ಉತ್ತಮವಾಗಿದೆ. ಉದ್ಯೋಗ ಅಥವಾ ವ್ಯವಹಾರವಾಗಿರಲಿ, ನಿಮಗೆ ದೊಡ್ಡ ಪ್ರಗತಿ ಇರಲಿದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವ ಬಲವಾದ ಸಾಧ್ಯತೆಯಿದೆ. ಈ ದಿನ ನಿಮಗೆ ತುಂಬಾ ಚೆನ್ನಾಗಿರಲಿದೆ.

ಕುಂಭ ರಾಶಿ

ಈ ದಿನ ನೀವು ಸಂತೋಷದಿಂದ ಇರುತ್ತೀರಿ, ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಇಂದು ಅತ್ಯಂತ ಮಂಗಳಕರ ದಿನವಾಗಿದೆ. ಉದ್ಯಮಿಗಳು ಲಾಭ ಗಳಿಸಲು ಉತ್ತಮ ಅವಕಾಶವನ್ನು ಪಡೆಯುತ್ತಾರೆ. ಹಣದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ., ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡದಂತೆ ನಿಮಗೆ ಸಲಹೆ ನೀಡಲಾಗುವುದು. ಇಂದು ನಿಮಗೆ ಆರೋಗ್ಯದ ದೃಷ್ಟಿಯಿಂದ ಉತ್ತಮ ದಿನವಾಗಿರುತ್ತದೆ.

ಮೀನ ರಾಶಿ

ಇಂದು ಕೆಲಸದ ಹೊರೆ ಹೆಚ್ಚಾಗಲಿದೆ. ವ್ಯವಹಾರಕ್ಕೆ ಸಂಬಂಧಿಸಿದ ಪ್ರಮುಖ ವ್ಯವಹಾರ ನಿರ್ಧಾರ ತೆಗೆದುಕೊಳ್ಳದಂತೆ ಸಲಹೆ ನೀಡಲಾಗುವುದು. ತಾಯಿಯ ಆರೋಗ್ಯ ಸ್ವಲ್ಪ ದುರ್ಬಲವಾಗಿರುತ್ತದೆ. ಹಣದ ವಿಷಯದಲ್ಲಿ ಇಂದು ದುಬಾರಿ ದಿನವಾಗಿರುತ್ತದೆ. ನಿಮ್ಮ ಬಜೆಟ್ ಅಸಮತೋಲಿತವಾಗಿರಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ನಿಮಗೆ ತಲೆನೋವು, ನಿದ್ರಾಹೀನತೆ ಮುಂತಾದ ಸಮಸ್ಯೆಗಳಿರಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Dina Bhavishya: 8th June 2024 Daily Horoscope Prediction for All 12 Zodiac Signs in Kannada

Explore Dina Bhavishya (ದಿನ ಭವಿಷ್ಯ) /Daily Horoscope Prediction For Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, And Pisces In Kannada
Story first published: Friday, June 7, 2024, 22:15 [IST]
X
Desktop Bottom Promotion