Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೆಪ್ಟೆಂಬರ್ 6, ದಿನ ಭವಿಷ್ಯ: ಈ ದಿನ 12 ರಾಶಿಗಳಿಗೆ ಹೇಗಿರಲಿದೆ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 6, ಈ ದಿನ ನಿಮಗೆ ಹೇಗಿರಲಿದೆ?
ಮೇಷ ರಾಶಿ
ಮನಸ್ಸಿನಲ್ಲಿ ಹಲವು ಗೊಮದಲಗಳು ಇರುವುದರಿಂದ ಈ ದಿನ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ. ವ್ಯಾಪಾರಿಗಲು ಈ ದಿನ ಜಾಗ್ರತೆವಹಿಸಬೇಕು. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿ ಉತ್ತಮವಾಗಿರಲಿದೆ. ವಿವಾಹಿತ ದಂಪತಿ ನಡುವೆ ಭಿನ್ನಾಭಿಪ್ರಾಯವಿರಬಹುದು. ಆಹಾರಕ್ರಮದ ಕಡೆಗೆ ಗಮನಹರಿಸಿ.

ವೃಷಭ ರಾಶಿ
ಕೆಲಸದ ಜೊತೆಗೆ ನಿಮ್ಮ ಬಗ್ಗೆಯೂ ಗಮನ ಹರಿಸಬೇಕು. ಇದರಿಂದ ನಿಮ್ಮ ಕೆಲಸಕ್ಕೆ ಉತ್ತಮ ಪ್ರತಿಫಲ ಸಿಗಲಿದೆ. ಅಲ್ಲದೆ ಈ ದಿನ ವ್ಯಾಪಾರಿಗಳು ಪ್ರಗತಿಯನ್ನು ಕಾಣುವಿರಿ. ಈ ದಿನ ಕೆಲಸದಲ್ಲಿ ಒತ್ತಡ ಇರಲಿದೆ. ಕುಟುಂಬದಲ್ಲಿ ವಾತಾವರಣ ಅಷ್ಟೊಂದು ಅನುಕುಲಕರವಲ್ಲ, ಈ ದಿನ ನೀವು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಅಗತ್ಯ.
ಮಿಥುನ ರಾಶಿ
ನೀವು ಕಾನೂನು ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಇಂದು ಕೆಲಸಕ್ಕೆ ಸಂಬಂಧಿಸಿದಂತೆ ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ವ್ಯಾಪಾರಿಗಳಿಗೆ ಈ ಧನ ಲಾಭವಿರಲಿದೆ. ಈ ದಿನ ಸಂಬಂಧದ ವಿಷಯದಲ್ಲಿ ಈ ದಿನ ಉತ್ತಮವಾಗಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ಕರ್ಕ ರಾಶಿ
ಈ ದಿನ ಕೆಲಸದಲ್ಲಿ ಉತ್ತಮವಾಗಿರಲಿದೆ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಿರಲಿದೆ. ಇನ್ನು ಕುಟುಂಬ ಜಿವನ ಚೆನ್ನಾಗಿರಲಿದೆ. ವೈವಾಹಿಕ ಬದುಕಿನಲ್ಲಿ ಸಂತೋಷ ಇರಲಿದೆ. ಆರೋಗ್ಯ ಸಮಸ್ಯೆ ಇದ್ದರೆ ಸುಧಾರಣೆ ಕಂಡು ಬರುವುದು.
ಸಿಂಹ ರಾಶಿ
ಸಂಬಂಧಗಳಲ್ಲಿ ಸ್ವಲ್ಪ ಭಿನ್ನಾಭಿಪ್ರಾಯಗಳಿರಬಹುದು, ಆರೋಗ್ಯದ ಬಗ್ಗೆ ಯಾವುದೇ ರೀತಿಯಲ್ಲಿ ಅಸಡ್ಡೆ ಮಾಡಬೇಡಿ, ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಸಹೋದ್ಯೋಗಿಗಳನ್ನು ಅತಿಯಾಗಿ ನಂಬುವುದನ್ನು ತಪ್ಪಿಸಿ. ಆರೋಗ್ಯದ ಕಡೆಗೆ ಗಮನಹರಿಸಿ.
ಕನ್ಯಾ ರಾಶಿ
ಬೇಡದ ವಿಷಯಗಳಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡುವ ಬದಲು, ಪ್ರಮುಖ ಕಾರ್ಯಗಳ ಮೇಲೆ ಕೇಂದ್ರೀಕರಿಸಿ. ಮಈ ದಿನ ಖರ್ಚು ಇರಲಿದೆ. ನಿಮ್ಮ ಬಜೆಟ್‌ಗಿಂತ ಹೆಚ್ಚು ದೂರ ಹೋಗಬೇಡಿ, ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಕೆಲಸದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಆರೋಗ್ಯದ ಕಡೆಯೂ ಗಮನಹರಿಸಿ.
ತುಲಾ ರಾಶಿ
ಕೆಲಸ ಕಾರ್ಯಗಳಲ್ಲಿ ಈ ದಿನ ಉತ್ತಮವಾಗಿದೆ. ಹೆಚ್ಚು ಕೆಲಸದ ಒತ್ತಡವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ವ್ಯಾಪಾರಿಗಳಿಗೆ ಈ ದಿನ ಧನಾತ್ಮಕವಾಗಿರಲಿದೆ. ಹಠಾತ್ ಕೆಲಸದ ಹೊರೆಯಿಂದಾಗಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ಉತ್ತಮ ವಾತಾವರಣ ಇರುತ್ತದೆ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
ವೃಶ್ಚಿಕ ರಾಶಿ
ಕೆಲಸಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರಪಡಬೇಡಿ. ಹಣಕಾಸಿನ ಪರಿಸ್ಥಿತಿಯಲ್ಲಿ ಹದಗೆಡುವ ಸಾಧ್ಯತೆಯಿದೆ. ಆರ್ಥಿಕ ನಷ್ಟ ಉಂಟಾಗಬಹುದು. ವ್ಯಾಪಾರಿಗಳಿಗೆ ಈ ದಿನ ಅಷ್ಟೊಂದು ಅನುಕೂಲಕರವಲ್ಲ. ಕುಟುಂಬ ಸದಸ್ಯರಿಂದ ನೀವು ಭಾವನಾತ್ಮಕ ಬೆಂಬಲವನ್ನು ಪಡೆಯುತ್ತೀರಿ. ಮಾನಸಿಕ ಒತ್ತಡ ಆರೊಗ್ಯದ ಮೇಲೆ ಪರಿಣಾಮ ಬೀರಬಹುದು.
ಧನು ರಾಶಿ
ಕೆಲ ಸಮಸ್ಯೆಗಳು ನಿಮ್ಮ ಚಿಂತೆಯನ್ನು ಹೆಚ್ಚಿಸಬಹುದು. ನೀವು ಕೆಲಸದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ತಪ್ಪಿಸಬೇಕು. ಹಣದ ಕೊರತೆಯಿಂದ ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಆಹಾರಕ್ರಮದ ಕಡೆಗೆ ಗಮನಹರಿಸಿ.
ಮಕರ ರಾಶಿ
ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಅವಕಾಶ ಸಿಗಬಹುದು. ಕೆಲಸಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಬಗೆಹರಿಯುತ್ತವೆ. ಈ ದಿನ ನಿಮ್ಮ ಆತ್ಮವಿಶ್ವಾಸ ಚೆನ್ನಾಗಿರಲಿದೆ. ಮನೆಯಲ್ಲಿ ಶಾಂತಿಯುತ ವಾತಾವರಣ ಇರುತ್ತದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯ ಸಮಸ್ಯೆ ಇದ್ದರೆ ಸುಧಾರಣೆ ಕಂಡು ಬರುವುದು.
ಕುಂಭ ರಾಶಿ
ಈ ದಿನ ಕೆಲಸ ಕಾರ್ಯಗಳು ಉತ್ತಮವಾಗಿರಲಿದೆ. ಸಂಬಂಧದ ದೃಷ್ಟಿಯಿಂದ ಈ ದಿನ ಅನುಕೂಲಕರವಾಗಿದೆ. ವ್ಯಾಪಾರಿಗಳು ಯಾವುದೇ ಪ್ರಮುಖ ದಾಖಲೆಗಳನ್ನು ಮಾಡುವಾಗ ಆತುರಪಡಬೇಡಿ. ಕೆಲಸಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೆ ಅದರ ಬಗ್ಗೆ ನಿಮ್ಮ ಅಧಿಕಾರಿಗಳ ಜೊತೆ ಚರ್ಚಿಸುವುದು ಒಳ್ಳೆಯದು. ಮನೆಯಲ್ಲಿ ಉತ್ತಮ ವಾತಾವರಣ ಇರುತ್ತದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ, ಆರೋಗ್ಯ ಉತ್ತಮವಾಗಿರಲಿದೆ.
ಮೀನ ರಾಶಿ
ಈ ದಿನ ನಿಮಗೆ ಉತ್ತಮವಾಗಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ಆದಾಯದ ಹೊಸ ಮೂಲವಾಗಬಹುದು. ನಿಮ್ಮ ವ್ಯವಹಾರದ ನಿರ್ಧಾರಗಳನ್ನು ನೀವು ಪೂರ್ಣ ವಿಶ್ವಾಸದಿಂದ ತೆಗೆದುಕೊಳ್ಳುತ್ತೀರಿ ಹೂಡಿಕೆ ಮಾಡಲು ಈ ದಿನ ಉತ್ತಮವಾಗಿದೆ. ಆರೋಗ್ಯ ಬಗ್ಗೆ ಹೇಳುವುದಾದರೆ ನರಗಳಿಗೆ ಸಂಬಂಧಿಸಿದ ಸಮಸ್ಯೆ ಇರಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications