Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದಿನ ಭವಿಷ್ಯ: ಜೂನ್ 26, ಈ ದಿನ ನಿಮ್ಮ ರಾಶಿಫಲ ಹೇಗಿದೆ?
ಶುಭ ಬುಧವಾರ, ದ್ವಾದಶ ರಾಶಿಗಳ ರಾಶಿಫಲ....
ಮೇಷ ರಾಶಿ
ವೃತ್ತಿ ಬದುಕಿನ ಕೆಲಸಗಳು ಬಗೆಹರಿಯಲಿದೆ. ಇನ್ನು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಆತುರಪಡಬೇಡಿ, ಉದ್ಯೋಗಗಳಿಗೆ ಈ ದಿನ ದುಬಾರಿಯಾಗಲಿದೆ.
ಕುಟುಂಬ ಜೀವನ ಚೆನ್ನಾಗಿರಲಿದೆ. ನೀವು ಮಕ್ಕಳ ಆರೋಗ್ಯದ ಕಡೆಗೆ ಗಮನಹರಿಸಿ. ಪ್ರೀತಿ, ಪ್ರೇಮಿಗಳು ಮದುವೆಯ ತೀರ್ಮಾನ ತೆಗೆದುಕೊಳ್ಲಲು ಈ ಅವಧಿ ತುಂಬಾನೇ ಅನುಕೂಲಕರವಾಗಿದೆ. ಉದ್ಯಮಿಗಳಿಗೆ ಈ ದಿನ ಉತ್ತಮವಾಗಿದೆ. ನೀವು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುತ್ತೀರಿ.

ವೃಷಭ ರಾಶಿ
ನೀವು ಕೆಲಸದ ಜಾಗದಲ್ಲಿ ಇತರರ ವಿಷಯಗಳಿಗೆ ತಲೆ ಹಾಕಬೇಡಿ. ವ್ಯಾಪಾರಿಗಳಿಗೆ ಉದ್ಯಮಿಯಾಗಿದ್ದರೆ ಉತ್ತಮ ಫಲಿತಾಂಶ. ಉದ್ಯೋಗಿಗಳಿಗೂ ಸಂಪೂರ್ಣ ಬೆಂಬಲ ಸಿಗಲಿದೆ. ಕೆಲಸದ ಜಾಗದಲ್ಲಿ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ನಿಮ್ಮ ಪರಿಶ್ರಮಕ್ಕೆ ಫಲ ಸಿಗಲಿದೆ. ಪೋಷಕರ ಜೊತೆಗಿನ ಸಂಬಂಧ ಚೆನ್ನಾಗಿರಲಿದೆ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗದಂತೆ ಜಾಗ್ರತೆವಹಿಸಿ. ಆರೋಗ್ಯದ ಬಗ್ಗೆ ನೋಡುವುದಾದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆವಿರಬಹುದು.
ಮಿಥುನ ರಾಶಿ
ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಅದಕ್ಕೆ ಕೂಡ ಈ ಸಮಯ ತುಂಬಾನೇ ಅನುಕೂಲಕರವಾಗಿದೆ. ನೀವು ನಿಮಗೆವಹಿಸಿದ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಬೇಕು. ವ್ಯಾಪಾರಿಗಳು ಕೂಡ ತಮ್ಮ ವ್ಯವಹಾರದ ಕಡೆಗೆ ತುಂಬಾನೇ ಜಾಗ್ರತೆವಹಿಸಬೇಕು.
ಇನ್ನು ಕುಟುಂಬದಲ್ಲಿ ಈ ಅವಧಿಯಲ್ಲಿ ಅವಾಹಿತರಿದ್ದರೆ ಅವರಿಗೆ ಮದುವೆ ಪ್ರಸ್ತಾಪ ಬರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಮೈಕೈ ನೋವಿನ ಸಮಸ್ಯೆವಿರಬಹುದು.
ಕರ್ಕ ರಾಶಿ
ನೀವು ಬೇಡದ ವಿಷಯಗಳಲ್ಲಿ ಸಮಯ ಕಳೆಯದಿರುವುದು ಒಳ್ಳೆಯದು. ವ್ಯಾಪಾರಿಗಳು ಈ ದಿನ ಲಾಭ ಪಡೆಯಲು ಸಾಧ್ಯವಾಗುವುದು. ಕೆಲಸದಲ್ಲಿ ಒತ್ತಡ ಇರಲಿದೆ, ಅಲ್ಲದೆ ಈ ಅವಧಿಯಲ್ಲಿ ಕೆಲಸದ ಕಡೆಗೆ ಗಮನಹರಿಸುವುದು ಕೂಡ ಕಷ್ಟವಾಗುವುದು. ನಿಮ್ಮ ಕೆಲಸ ಕಾರ್ಯಗಳಿಗೆ ಸಂಗಾತಿಯ ಬೆಂಬಲ ಸಿಗಲಿದೆ. ಮಾನಸಿಕವಾಗಿ ಈ ದಿನ ಉತ್ತಮವಾಗಿದೆ, ನಕಾರಾತ್ಮಕ ಆಲೋಚನೆಗಳಿಂದ ದೂರವಿರಬೇಕು.
ಸಿಂಹ ರಾಶಿ
ನೀವು ಆದಾಯವನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದರೆ ಅದರಲ್ಲಿ ಯಶಸ್ಸು ದೊರೆಯಲಿದೆ. ವ್ಯಾಪಾರಿಗಳಿಗೆ ಮಾರುಕಟ್ಟೆಯಲ್ಲಿ ನಿಮ್ಮ ಸ್ಥಾನ ಭದ್ರಪಡಿಸಲು ಸಾಧ್ಯವಾಗುವುದು. ನಿಮ್ಮ ಹಾಗೂ ಸಂಗಾತಿ ನಡುವಿನ ಭಿನ್ನಾಭಿಪ್ರಾಯ ಕೊನೆಯಾಗಲಿದೆ. ವೈವಾಹಿಕ ಜೀವನದ ಕಡೆಗೆ ಗಮನಹರಿಸಿ, ಪ್ರೇಮಿಗಳಿಗೆ ಈ ದಿನ ಖುಷಿಯಾಗಿರಲಿದೆ. ಆರೋಗ್ಯ ಚೆನ್ನಾಗಿರಲಿದೆ.
ಕನ್ಯಾ ರಾಶಿ
ನೀವು ಯಾರಿಂದಲೂ ಅಗತ್ಯಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಬೇಡಿ, ಈ ದಿನ ನೀವು ಭಾವನಾತ್ಮಕವಾಗಿ ದುರ್ಬಲರಾಗುತ್ತೀರಿ. ವ್ಯಾಪಾರಿಗಳಿಗೆ ಯಾವುದೇ ದಾಖಲೆ ಸರಿಯಾಗಿ ನೋಡದೆ ಸಹಿ ಹಾಕದಂತೆ ಸಲಹೆ ನೀಡಲಾಗುವುದು. ನಿಮ್ಮ ಕೆಲಸ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳಲಿದೆ. ಕುಟುಂಬದಲ್ಲಿ ಅಹಂ ಸಮಸ್ಯೆಗಳನ್ನು ಹೆಚ್ಚಿಸಲಿದೆ, ಮಕ್ಕಳಿಗೆ ಸಂಬಂಧಿಸಿದ ಚಿಂತೆ ನಿಮ್ಮನ್ನು ಕಾಡಬಹುದು, ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಆರೋಗ್ಯದಲ್ಲಿ ನೀವು ದೊಡ್ಡ ಸುಧಾರಣೆ ಕಂಡು ಬರಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನ ಅನುಕೂಲಕರವಾಗಿದೆ, ಈ ದಿನ ನೀವು ನಿಮ್ಮ ಕೆಲವು ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ಸಂಬಂಧದಲ್ಲಿದ್ದ ಭಿನ್ನಾಭಿಪ್ರಾಯದ ದೂರಾಗಲಿದೆ. ಈ ಅವಧಿಯಲ್ಲಿ ನೀವು ಸಾಲ ಏಳಿದ್ದರೆ ಹಣ ಸಿಗಲಿದೆ, ಉದ್ಯೋಗಿಗಳಿಗೆ ಈ ದಿನ ಅನುಕೂಲಕರವಾಗಿದೆ. ಆರೋಗ್ಯ ಚೆನ್ನಾಗಿರಲಿದೆ, ನಿಮ್ಮ ಸಂಗಾತಿಯೊಂದಿಗೆ ಬಾಂಧವ್ಯ ಚೆನ್ನಾಗಿರಲಿದೆ.
ವೃಶ್ಚಿಕ ರಾಶಿ
ಈ ಅವಧಿಯಲ್ಲಿ ನೀವು ಹಣ ಮತ್ತು ಖ್ಯಾತಿ ಎರಡನ್ನೂ ಪಡೆಯುತ್ತೀರಿ. ಇದೆಲ್ಲವೂ ನಿಮ್ಮ ಶ್ರಮದ ಫಲ. ವ್ಯಾಪಾರಿಗಳು ತಮ್ಮ ಪ್ರತಿಸ್ಪರ್ಧಿಗಳಿಗಿಣತ ಉತ್ತಮ ಪ್ರಯೋಜನ ಪಡೆಯುತ್ತೀರಿ. ಉದ್ಯೋಗಿಗಳಿಗೆ ಈ ಸಮಯ ಅನುಕೂಲಕರವಾಗಿದೆ, ನೀವು ಬಡ್ತಿ ಪಡೆಯುತ್ತೀರಿ, ಕುಟುಂಬ ಬದುಕು ಚೆನ್ನಾಗಿರಲಿದೆ, ಪ್ರೇಮ ವಿವಾಹವಾಗಲು ಬಯಸುವವರು ಮನೆಯವರ ಒಪ್ಪಿಗೆ ಪಡೆಯಬಹುದು, ಒಟ್ಟಿನಲ್ಲಿ ಈ ದಿನ ನಿಮಗೆ ಸಕಾರಾತ್ಮಕವಾಗಿರಲಿದೆ.
ಧನು ರಾಶಿ
ವೃತ್ತಿ ಬದುಕಿನ ಬಗ್ಗೆ ನೋಡುವುದಾದರೆ ಈ ದಿನ ನಿಮಗೆ ತುಂಬಾ ಚೆನ್ನಾಗಿರಲಿದೆ. ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೀವು ಹೆಚ್ಚು ಶ್ರಮಿಸಬೇಕಾಗುತ್ತದೆ.
ನೀವು ಯಾವುದೇ ಹೊಸ ವ್ಯವಹಾರದಿಂದ ದೂರವಿದ್ದರೆ ಒಳ್ಳೆಯದು. ಉದ್ಯೋಗಿಗಳು ಅಜಾಗರೂಕತೆಯಿಂದ ದೊಡ್ಡ ನಷ್ಟ ಸಂಭವಿಸಬಹುದು. ಕುಟುಂಬದ ನೆಮ್ಮದಿಗಾಗಿ ನಿಮ್ಮ ಕೋಪ ನಿಯಂತ್ರಿಸಿ. ಆರೋಗ್ಯದ ಕಡೆಗೆ ಗಮನಹರಿಸಿ.
ಮಕರ ರಾಶಿ'
ಈ ದಿನ ನೀವು ಖುಷಿ ಖುಷಿಯಿಂದ ಕಳೆಯುತ್ತೀರಿ. ನಿಮ್ಮ ವ್ಯಾಪಾರ ಯೋಜನೆಗಳನ್ನು ರಹಸ್ಯವಾಗಿಡಿ, ಅದರ ಬಗ್ಗೆ ಬೇರೆಯವರ ಜೊತೆಗೆ ಹೆಚ್ಚು ಮಾತನಾಡಬೇಡಿ.
ವಿದೇಶದಲ್ಲಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ದಿನ ಒಳ್ಳೆಯ ಸುದ್ದಿ ಪಡೆಯುತ್ತೀರಿ. ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಅಂತರ ಕಡಿಮೆಯಾಗುವುದು, ಆರೋಗ್ಯದ ಬಗ್ಗೆ ಹೇಳುವುದಾದರೆ ಆಹಾರಕ್ರಮದ ಕಡೆಗೆ ಗಮನಹರಿಸಿ.
ಕುಂಭ ರಾಶಿ
ಈ ದಿನ ನೀವು ನಿಮ್ಮ ಕಠಿಣಶ್ರಮಕ್ಕೆ ಉತ್ತಮ ಫಲ ಪಡೆಯುತ್ತೀರಿ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ, ಬಾಕಿಯುಳಿದ ಕೆಲಸಗಳು ಪೂರ್ಣಗೊಳ್ಳಲಿದೆ, ಕೆಲಸದ ಬಗ್ಗೆ ಯಾವುದೇ ರೀತಿಯಲ್ಲಿ ನಿರ್ಲಕ್ಷ್ಯ ಮಾಡಬೇಡಿ, ನೀವು ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ಯೋಜನೆಗಳನ್ನು ಮಾಡಿದರೆ, ನಿಮ್ಮ ಹಿರಿಯರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ಸಂಗಾತಿಯೊಂದಿಗಿನ ಸಂಬಂಧ ಚೆನ್ನಾಗಿರಲಿದೆ. ಕುಟುಂಬದ ಹಿರಿಯ ಸದಸ್ಯರಿಗೆ ಆರೋಗ್ಯ ಸಮಸ್ಯೆಯಿದ್ದರೆ ಅವರ ಆರೋಗ್ಯದ ಕಡೆಗೆ ಗಮನಹರಿಸಿ.
ಮೀನ ರಾಶಿ
ವೈವಾಹಿಕ ಜೀವನದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ, ನೀವು ಕೋಪ ಮತ್ತು ಅಹಂಕಾರವನ್ನು ತ್ಯಜಿಸಬೇಕು. ವ್ಯಾಪಾರಿಗಳು ಈ ದಿನ ನಿರೀಕ್ಷೆ ಮಾಡಿದಂತೆ ಲಾಭ ಸಿಗದಿದ್ದರೆ ನಿರಾಸೆ ಬೇಡ, ನಿಮ್ಮ ಫಲಕ್ಕೆ ಫಲ ಸಿಗಲಿದೆ, ಉದ್ಯೋಗಿಗಳು ಮೇಲಾಧಿಕಾರಿಗಳ ಮಾತನ್ನು ನಿರ್ಲಕ್ಷಿಸಬೇಡಿ. ಇನ್ನು ಈ ಅವಧಿಯಲ್ಲಿ ಆರೋಗ್ಯದ ಕಡೆಗೂ ಗಮನಹರಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











