Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದಿನ ಭವಿಷ್ಯ: ಜೂನ್ 25, ಮಂಗಳವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
ಶುಭ ಮಂಗಳವಾರ, ದ್ವಾದಶ ರಾಶಿಗಳ ರಾಶಿಫಲ....
ಮೇಷ ರಾಶಿ
ಈ ದಿನ ನೀವು ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುನ್ನ ನಿಮ್ಮ ಮನೆಯವರ ಸಲಹೆ ಪಡೆಯಿರಿ, ಆರ್ಥಿಕ ಚಿಂತೆ ನಿಮ್ಮನ್ನು ಕಾಡಬಹುದು. ವ್ಯಾಪಾರಿಗಳಿಗೆ ಈ ದಿನ ಆರ್ಥಿಕವಾಗಿ ಲಾಭದಾಯಕವಾಗಿದೆ. ಉದ್ಯೋಗಿಗಳು ಕೆಲಸದ ಕಡೆಗೆ ತುಂಬಾನೇ ಗಮನಹರಿಸಬೇಕು. ವೈವಾಹಿಕ ಜೀವನ ಚೆನ್ನಾಗಿರಲಿದೆ, ಆರೋಗ್ಯದ ಬಗ್ಗೆ ನೋಡುವುದಾದರೆ ಆಯಾಸ ಹೆಚ್ಚಿರಲಿದೆ.

ವೃಷಭ ರಾಶಿ
ಈ ದಿನ ನಿಮಗೆ ಶುಭವಾಗಿದೆ, ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ, ವ್ಯಾಪಾರಿಗಳಿಗೂ ಈ ದಿನ ಲಾಭದಾಯಕವಾಗಿದೆ, ಹೊಸ ವ್ಯವಹಾರ ಸಿಗಬಹುದು. ಉದ್ಯೋಗಿಗಳಿಗೂ ಈ ದಿನ ಕೆಲಸ ಬೇಗನೆ ಮುಗುಸಲು ಸಾಧ್ಯವಾಗುವುದರಿಂದ ರಿಲ್ಯಾಕ್ಸ್ ಅನಿಸುವುದು. ಕುಟುಂಬ ಜೀವನ ಚೆನ್ನಾಗಿರಲಿದೆ. ವಿವಾಹಿತರ ನಡುವೆ ಹೊಂದಾಣಿಕೆ ಚೆನ್ನಾಗಿರಲಿದೆ, ಆರೋಗ್ಯ ಚೆನ್ನಾಗಿರಲಿದೆ.
ಮಿಥುನ ರಾಶಿ
ಈ ದಿನ ನೀವು ಇತರ ವಿಷಯಗಳಿಗೆ ಗಮನ ಕೊಡದೆ ನಿಮ್ಮ ಕೆಲಸದತ್ತ ಗಮನಹರಿಸಿ. ವೃತ್ತಿ ಬದುಕಿನಲ್ಲಿ ಅಡೆತಡೆಗಳು ಎದುರಾಗಬಹುದು. ವ್ಯಾಪಾರಿಗಳು ಈ ದಿನ ಜಾಗ್ರತೆವಹಿಸಿ. ಉದ್ಯೋಗಿಗಳಿಗೆ ಈ ಅವಧಿ ಅನುಕೂಲಕರವಾಗಿದೆ, ನಿಮ್ಮ ಎಲ್ಲಾ ಕೆಲಸವು ನೀವು ಯೋಚಿಸಿದಂತೆಯೇ ಬಗೆಹರಿಯಲಿದೆ. ಹಣದ ಬಗ್ಗೆ ಹೇಳುವುದಾದರೆ ಖರ್ಚು ಹೆಚ್ಚಿರಲಿದೆ. ವಿವಾಹಿತರಿಗೆ ಈ ಅವಧಿ ಅನುಕೂಲಕರವಾಗಿದೆ.
ಕರ್ಕ ರಾಶಿ
ಕೆಲಸದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ ವೃತ್ತಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ದಿನವು ಅನುಕೂಲಕರವಾಗಿದೆ. ವ್ಯಾಪಾರಿಗಳಿಗೆ ಈ ದಿನ ಅನುಕೂಲಕರವಾಗಿದೆ, ನೀವು ಆರ್ಥಿಕ ಲಾಭವನ್ನು ಸಹ ಪಡೆಯುತ್ತೀರಿ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಮಾನಸಿಕ ಒತ್ತಡ ಕಡಿಮೆ ಇರಲಿದೆ, ಆರೋಗ್ಯ ಚೆನ್ನಾಗಿರಲಿದೆ.
ಸಿಂಹ ರಾಶಿ
ಈ ದಿನ ನೀವು ಕೆಲಸದ ಕಡೆಗೆ ಗಮನಹರಿಸಬೇಕು. ಇತರರನ್ನು ಅವಲಂಬಿಸಬೇಡಿ. ಈ ದಿನ ನಿಮ್ಮ ಮನಸ್ಸಿಗೆ ನೋವುಂಟಾಗಬಹುದು. ಮೇಲಾಧಿಕಾರಿ ಜೊತೆಗೆ ಭಿನ್ನಾಭಿಪ್ರಾಯ ತಪ್ಪಿಸಿ, ವ್ಯಾಪಾರಿಗಳಿಗೆ ಆತ್ಮವಿಶ್ವಾಸ ಕಳೆದುಕೊಳ್ಖಬೇಡಿ ಎಂದ ಸಲಹೆ ನೀಡಲಾಗುವುದು, ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ.
ಕುಟುಂಬದ ಸಮಸ್ಯೆ ಶಾಂತಿಯುತವಾಗಿ ಬಗೆಹರಿಸಿ. ಆರೋಗ್ಯಕ್ಕಾಗಿ ಆಹಾರಕ್ರಮದ ಕಡೆಗೆ ಗಮನಹರಿಸಿ.
ಕನ್ಯಾ ರಾಶಿ
ಈ ದಿನ ನೀವು ಕೋಪ ಮತ್ತು ಅಹಂಕಾರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ವ್ಯಾಪಾರಿಗಳು ನೀವು ನಿಮ್ಮ ವ್ಯಾಪಾರ ಯೋಜನೆಗಳನ್ನು ನೀವು ಇದ್ದಕ್ಕಿದ್ದಂತೆ ಬದಲಾಯಿಸಬೇಕಾಗಬಹುದು. ಅತಿಯಾದ ಕೆಲಸದ ಒತ್ತಡ ತೆಗೆದುಕೊಳ್ಳಬೇಡಿ, ಇದು ಕುಟುಂಬದ ಮೇಲೂ ಪರಿಣಾಮ ಬೀರುವುದು, ವೈವಾಹಿಕ ಜೀವನ ಚೆನ್ನಾಗಿರಲಿದೆ, ಆರೋಗ್ಯದ ಕಡೆಗೆ ಗಮನಹರಿಸಿ.
ತುಲಾ ರಾಶಿ
ನೀವು ಹಳೆಯದರ ಬಗ್ಗೆ ಚಿಂತಿಸುವುದರ ಬದಲು ಹೊಸ ಆರಂಭವನ್ನು ಮಾಡಲು ಪ್ರಯತ್ನಿಸುವಯದಯ ಒಳ್ಳೆಯದು, ಇದು ನಿಮ್ಮಲ್ಲಿ ಧನಾತ್ಮಕ ಬದಲಾವಣೆ ತರಬಹುದು. ಉದ್ಯೋಗಿಗಳಿಗೆ ಈ ದಿನ ಅನುಕೂಲಕರವಾಗಿದೆ, ಇನ್ನು ಉದ್ಯೋಗ ಬದಲಾಯಿಸಬೇಕೆಂದಿದ್ದರೆ ನೀವು ನಿಮ್ಮ ಪ್ರಯತ್ನ ಚುರುಕುಗೊಳಿಸಿ. ವಿವಾಹಿತರ ನಡುವೆ ಕೆಲ ಭಿನ್ನಾಭಿಪ್ರಾಯವಿರಬಹುದು. ಆರೋಗ್ಯಕ್ಕಾಗಿ ವ್ಯಾಯಾಮ, ಧ್ಯಾನ ಮಾಡಿ.
ವೃಶ್ಚಿಕ ರಾಶಿ
ಹಣಕಾಸಿನ ವಿಷಯಗಳಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಬೇಡಿ, ನೀವು ಲಾಭದ ಬದಲು ನಷ್ಟವನ್ನು ಅನುಭವಿಸಬಹುದು. ವ್ಯಾಪಾರಿಗಳಿಗೆ ಯೋಜನೆಯ ಕೆಲಸವನ್ನು ಪುನರಾರಂಭಿಸಲು ದಿನವು ಅನುಕೂಲಕರವಾಗಿದೆ. ಉದ್ಯೋಗದಲ್ಲಿ ಈ ದಿನ ಶುಭವಾಗುದೆ. ನಿಮ್ಮ ಕಠಿಣ ಪರಿಶ್ರಮದ ಫಲಿತಾಂಶವನ್ನು ನೀವು ಶೀಘ್ರದಲ್ಲೇ ಪಡೆಯಬಹುದು.
ಕುಟುಂಬದ ಜೊತೆ ಸಂತೋಷದಿಂದ ಸಮಯ ಕಳೆಯುತ್ತೀರಿ. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳಿರಬಹುದು.
ಧನು ರಾಶಿ
ಇಂದು ನಿಮ್ಮ ಪ್ರಮುಖ ಸಮಸ್ಯೆ ಬಗೆಹರಿಯಲಿದೆ, ಇದರಿಂದ ಕಳೆದುಹೋದ ಆತ್ಮವಿಶ್ವಾಸ ಮತ್ತೊಮ್ಮೆ ಮರಳುತ್ತದೆ, ಈ ದಿನ ನಿಮಗೆ ಧನಾತ್ಮಕವಾಗಿರಲಿದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಯಿದ್ದರೆ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು. ದೊಡ್ಡ ಯೋಜನೆಯನ್ನು ಮುನ್ನಡೆಸಲು ನಿಮಗೆ ಅವಕಾಶ ಸಿಗಲಿದೆ. ಕುಟುಂಬದಲ್ಲಿ ಈ ದಿನ ಅನುಕೂಲಕರವಾಗಿದೆ. ಆರೋಗ್ಯ ಸಮಸ್ಯೆವಿರಬಹುದು.
ಮಕರ ರಾಶಿ'
ಇದು ಕಷ್ಟಪಟ್ಟು ಕೆಲಸ ಮಾಡುವ ಸಮಯ, ಆದ್ದರಿಂದ ಸೋಮಾರಿತನವು ನಿಮ್ಮನ್ನು ಆಳಲು ಬಿಡಬೇಡಿ, ಇಲ್ಲದಿದ್ದರೆ ನಿಮ್ಮ ಕೆಲವು ಪ್ರಮುಖ ಕೆಲಸಗಳು ಇಂದು ಅಪೂರ್ಣವಾಗಿ ಉಳಿಯುತ್ತವೆ. ವ್ಯಾಪಾರಿಗಳಿಗೆ ಈ ದಿನ ಅನುಕೂಲಕರವಾಗಿದೆ. ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು.ಮನೆಯ ವಾತಾವರಣ ಚೆನ್ನಾಗಿರಲಿದೆ. ಬೇಡದ ವಿಷಯಗಳಿಂದ ದೂರವಿರಿ, ಅನಗ್ಯತ ಕೋಪ ಸಂಸಾರದಲ್ಲಿಯೂ ಸಮಸ್ಯೆಯನ್ನುಂಟು ಮಾಡಬಹುದು. ಧ್ಯಾನ ಮಾಡಬೇಡಿ.
ಕುಂಭ ರಾಶಿ
ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣವಿದ್ದರೆ ಜಯ ನಿಮ್ಮದಾಗಬಹುದು.. ವೃತ್ತಿಪರ ಜೀವನಕ್ಕೆ ಹೆಚ್ಚು ಗಮನ ಕೊಡಬೇಕಾದ ಅವಶ್ಯಕತೆ ಇದೆ ಇಲ್ಲದಿದ್ದರೆ ಕಷ್ಟವಾಗಬಹುದು. ವ್ಯಾಪಾರಿಗಳಿಗೆ ಆರ್ಥಿಕವಾಗಿ ಈ ದಿನ ಉತ್ತಮವಾಗಿದ. ಮೇಲಾಧಿಕಾರಿಗಳು ನಿಮ್ಮ ಕೆಲಸದಿಂದ ಅತೃಪ್ತರಾಗುತ್ತಾರೆ. ನಿಮ್ಮ ಕಾರ್ಯಕ್ಷಮತೆಯನ್ನು ನೀವು ಸುಧಾರಿಸಬೇಕಾಗಿದೆ, ಕುಟುಂಬದ ಕಡೆಗೆ ಗಮನಹರಿಸಿ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವಿರಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ನಿದ್ರಾಹೀನತೆ ಸಮಸ್ಯೆವಿರಬಹುದು.
ಮೀನ ರಾಶಿ
ಭವಿಷ್ಯದ ಬಗ್ಗೆ ಅನಗ್ಯತ ಚಿಂತೆ ಮಾಡಬೇಡಿ. ಸಿಕ್ಕ ಅವಕಾಶ ಕಳೆದುಕೊಳ್ಳದಂತೆ ಜಾಗ್ರತೆವಹಿಸಿ, ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆಯ ಲಕ್ಷಣಗಳಿವೆ. ನಿಮ್ಮ ವ್ಯವಹಾರದಲ್ಲಿಉತ್ತಮ ಫಲಿತಾಂಶ ಪಡೆಯುತ್ತೀರಿ, ಉದ್ಯೋಗಿಗಳು ಮೇಲಾಧಿಕಾರಿಗಳ ವಿಶ್ವಾಸವನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ನಿರ್ಧಾರಕ್ಕೆ ಪೋಷಕರಿಂದ ಪ್ರೀತಿ ಮತ್ತು ಬೆಂಬಲ ಸಿಗುತ್ತದೆ. ವೈವಾಹಿಕ ಜೀವನದ ಕಡೆಗೆ ಹೆಚ್ಚು ಗಮನ ಕೊಡಿ, ಇಲ್ಲದಿದ್ದರೆ ನಿಮ್ಮ ಹಾಗೂ ಸಂಗಾತಿ ನಡುವೆ ಅಂತರ ಹೆಚ್ಚಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










