ದಿನ ಭವಿಷ್ಯ: ಜೂನ್ 24 ಈ ದಿನ ನಿಮ್ಮ ರಾಶಿಫಲ ಹೇಗಿದೆ?

ಶುಭ ಸೋಮವಾರ, ಈ ದಿನದ ದ್ವಾದಶ ರಾಶಿಗಳ ರಾಶಿಫಲ....

ಮೇಷ ರಾಶಿ

ನೀವು ಇತರರ ಮಾತು ಕೇಳಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನೀವು ಆಡಂಬರದಿಂದ ದೂರವಿರಬೇಕು. ವ್ಯಾಪಾರಗಳಿಗೆ ಈ ದಿನ ಶುಭವಾಗಿದೆ. ಉದ್ಯೋಗಿಗಳಿಗೆ ಈ ದಿನ ಶುಭವಾಗಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದಾಗಿ ನಿಮ್ಮ ನಡುವೆ ಅಂತರವಿರಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ಅನಗತ್ಯ ಚಿಂತೆಗಳಿಂದ ದೂರವಿರಿ.

Dina Bhavishya

ವೃಷಭ ರಾಶಿ

ವೃಷಭ ರಾಶಿಯವರು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ಕೆಲಸದ ಕಡೆಗೆ ತುಂಬಾ ಗಮನಹರಿಸಿ. ಕುಟುಂಬದಲ್ಲಿನ ಜವಾಬ್ದಾರಿ ನಿರ್ಲಕ್ಷ್ಯ ಮಾಡಬೇಡಿ.
ವೈವಾಹಿಕ ಜೀವನದ ಬಗ್ಗೆ ನೋಡುವುದಾದರೆ ಸಂಗಾತಿಯ ಮಾತನ್ನು ನಿರ್ಲಕ್ಷಿಸಬೇಡಿ, ಆರೋಗ್ಯದ ಬಗ್ಗೆ ನೋಡುವುದಾದರೆ ಬೆನ್ನು ಅಥವಾ ಸೊಂಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರಬಹುದು.

ಮಿಥುನ ರಾಶಿ

ಈ ದಿನ ಅನುಕೂಲಕರವಲ್ಲ. ಆದರೆ ಹೆದರಬೇಡಿ, ನಿಮ್ಮ ಮೇಲೆ ನಿಮಗೆ ನಂಬಿಕೆ ಇಡಿ. ಆದಾಯ ಚೆನ್ನಾಗಿರಲಿದೆ. ನೀವು ವಿದೇಶಕ್ಕೆ ಹೋಗಿ ಉದ್ಯೋಗ ಮಾಡಲು ಬಯಸಿದರೆ ಮತ್ತು ನಿಮ್ಮ ದಾರಿಯಲ್ಲಿ ಯಾವುದೇ ಅಡೆತಡೆಗಳು ಬಂದರೆ, ಈ ಸಮಸ್ಯೆ ಬಗೆಹರಿಯಲಿದೆ ಕುಟುಂಬದಲ್ಲಿನ ಸಂಬಂಧಗಳಲ್ಲಿ ಸಾಮರಸ್ಯ ಇರಲಿದೆ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಅವಾಹಿತರಿಗೆ ಶೀಘ್ರವೇ ಜೋಡಿ ಸಿಗಲಿದೆ. ಆರೋಗ್ಯದ ಕಡೆಗೆ ವಿಶೇಷ ಕಾಳಜಿ ವಹಿಸಿ.

ಕರ್ಕ ರಾಶಿ

ಈ ದಿನ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ತುಂಬಾ ಜಾಗ್ರತೆವಹಿಸಿ. ಮನೆಯವರ ವಿರುದ್ಧ ಹೋಗಬೇಡಿ. ಹಣಕ್ಕೆ ಸಂಬಂಧಿಸಿದ ಚಿಂತೆ ಕಾಡಬಹುದು. ಖರ್ಚಿನ ಕಡೆಗೆ ಗಮನಹರಿಸಿ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಕೆಲಸದ ಜಾಗದಲ್ಲಿ ನಿಮ್ಮ ನಡವಳಿಕೆ ಕಡೆಗೆ ಜಾಗರೂಕರಾಗಿರಿ. ನಿಮ್ಮ ಸಹೋದ್ಯೋಗಿಗಳ ಕೆಲಸದಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಬೇಡಿ. ಈ ಅವಧಿಯಲ್ಲಿ ಕೋಪ, ಆತುರವನ್ನು ತಪ್ಪಿಸಬೇಕು. ಆರೋಗ್ಯವನ್ನು ನಿರ್ಲಕ್ಷಿಸಬೇಡಿ.

ಸಿಂಹ ರಾಶಿ

ನೀವು ಈ ಅವಧಿಯಲ್ಲಿ ಜಾಗ್ರತೆವಹಿಸಿ, ಕೆಟ್ಟ ಸಹವಾಸವನ್ನು ತಪ್ಪಿಸಿ ಇಲ್ಲದಿದ್ದರೆ ನೀವು ದೊಡ್ಡ ತೊಂದರೆಗೆ ಸಿಲುಕಬಹುದು. ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ನೀವು ಅರ್ಥಮಾಡಿಕೊಳ್ಳಬೇಕು. ಅಗತ್ಯಕ್ಕಿಂತ ಹೆಚ್ಚಿನ ಹಣ ವ್ಯಯವಾಗಬಹುದು. ವ್ಯಾಪಾರಿಗಳಿಗೆ ಧನಲಾಭವಾಗಲಿದೆ. ಕೆಲಸದ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಈ ದಿನ ಕುಟುಂಬದ ಕಡೆಗೆ ಗಮನಹರಿಸುತ್ತೀರಿ, ಅವರೊಂದಿಗೆ ಸಮಯ ಕಳೆಯುತ್ತೀರಿ. ಆರೋಗ್ಯದ ಕಡೆಗೆ ಗಮನಹರಿಸಿ.

ಕನ್ಯಾ ರಾಶಿ

ಬದುಕಿನಲ್ಲಿ ಹಲವು ಗೊಂದಲಗಳು ಇರಬಹುದು, ವೈಯಕ್ತಿಕ ಬದುಕಿನ ಸಮಸ್ಯೆ ಆರೋಗ್ಯದ ಮೇಲೆ ಪರಿಣಾಮ ಬೀರಲು ಬಿಡಬೇಡಿ. ವ್ಯಾಪಾರಿಗಳು ಈ ದಿನ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ಹಣ ನಷ್ಟವಾಗಬಹುದು. ಉದ್ಯೋಗಿಗಳು ನಿಮಗೆ ವಹಿಸಿದ ಕೆಲಸವನ್ನು ಅಪೂರ್ಣವಾಗಿ ಬಿಡಬೇಡಿ, ಇನ್ನು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದಾದರೆ ಕುಟುಂಬದವರ ಸಲಹೆ ಪಡೆಯುವುದು ಒಳ್ಳೆಯದು. ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯದ ಕಡೆಗೆ ಗಮನಹರಿಸಿ, ಧ್ಯಾನ ಮಾಡಿ.

ತುಲಾ ರಾಶಿ

ತುಲಾ ರಾಶಿಯವರಿಗೆ ಈ ದಿನ ಚೆನ್ನಾಗಿರಲಿದೆ. ವ್ಯಾಪಾರಿಗಳ ಆರ್ಥಿಕ ಸ್ಥಿತಿ ಶೀಘ್ರವೇ ಬಲಗೊಳ್ಳುತ್ತದೆ. ನಿರುದ್ಯೋಗಿಗಳಾಗುದ್ದರೆ ಶೀಘ್ರವೇ ಉದ್ಯೋಗ ಪಡೆಯಬಹುದು.
ನೀವು ಪ್ರೇಮ ವಿವಾಹವನ್ನು ಆಗುವುದಾದರೆ ಅದರ ಬಗ್ಗೆ ನಿಮ್ಮ ಮನೆಯವರಿಗೆ ತಿಳಿಸಲು ಈ ದಿನ ಉತ್ತಮವಾಗಿದೆ. ಆರೋಗ್ಯ ಸಮಸ್ಯೆ ಇರುವವರು ವಿಶ್ರಾಂತಿ ಕಡೆಗೆ ಗಮನಹರಿಸಿ.

ವೃಶ್ಚಿಕ ರಾಶಿ

ಬಹಳ ಸಮಯದ ನಂತರ ಈಗ ನಿಮಗೆ ಎಲ್ಲವೂ ನೀವು ಉತ್ತಮ ಫಲಿತಾಂಶ ಕಾಣಲು ಸಾಧ್ಯವಾಗಿದೆ, ಸಮಯ ವ್ಯರ್ಥ ಮಾಡದೆ ಕೆಲಸದ ಕಡೆಗೆ ಗಮನಹರಿಸಿ.
ಕೆಲಸದಲ್ಲಿ ಕೆಲವು ಬದಲಾವಣೆಗಳನ್ನು ತರಬೇಕಾಗಿದೆ. ಕುಟುಂಬದಲ್ಲಿ ಪರಿಸ್ಥಿತಿ ಅಷ್ಟು ಚೆನ್ನಾಗಿರಲ್ಲ, ಆದರೆ ಸಮತೋಲಿತವಾಗಿ ವರ್ತಿಸುವಂತೆ ಸಲಹೆ ನೀಡಲಾಗುವುದು.
ಸಂಗಾತಿಯ ಮೇಲೆ ಅನಗ್ಯತ ಅನುಮಾನ ಬೇಡ. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಬೇಡ.

ಧನು ರಾಶಿ

ಈ ದಿನ ಅಧಿಕ ಕೆಲಸ ಇರಲಿದೆ, ಆದರೆ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವ್ಯಾಪಾರಿಗಳಿಗೆ ಈ ದಿನ ಲಾಭದಾಯಕವಾಗಿರಲಿದೆ, ಪ್ರತಿಕೂಲ ಸಂದರ್ಭಗಳಲ್ಲಿ ಸುಲಭವಾಗಿ ಕೆಲಸ ಮಾಡುವ ನಿಮ್ಮ ಸಾಮರ್ಥ್ಯವು ನಿಮಗೆ ಉತ್ತಮ ಯಶಸ್ಸು ನೀಡಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ಅವಾಹಿತರಿಗೆ ಮದುವೆ ಪ್ರಸ್ತಾಪ ಬರಬಹುದು. ಆರೋಗ್ಯ ಚೆನ್ನಾಗಿರಲಿದೆ.

ಮಕರ ರಾಶಿ

ಕೆಲವೊಂದು ಸಮಸ್ಯೆಗಳಿರಬಹುದು, ಆದರೆ ತಾಳ್ಮೆಯಿಂದಿರಿ. ಪ್ರಮುಖ ಹಣಕಾಸಿನ ನಿರ್ಧಾರಗಳನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ. ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ದೊಡ್ಡ ವಹಿವಾಟು ಮಾಡಲು ಹೋಗದಿರಿ. ವ್ಯಾಪಾರಿಗಳು ಲಾಬ ಗಳಿಸಲು ಅಡ್ಡಮಾರ್ಗ ಹಿಡಿಯಬೇಡಿ. ಕಚೇರಿಯಲ್ಲಿ ನಿಮ್ಮನ್ನು ಕಂಡರೆ ಅಸೂಯೆ ಪಡುವ ಸಹೋದ್ಯೋಗಿಗಳು ನಿಮ್ಮ ಹೆಸರು ಹಾಳು ಮಾಡಲು ಪ್ರಯತ್ನಿಸಬೇಕು, ನೀವು ಅಂಥವರ ಬಗ್ಗೆ ಜಾಗರೂಕರಾಗಿರಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯವಿರಬಹುದು, ಅದರೆ ನೀವು ಕೋಪ ನಿಯಂತ್ರಿಸಿದರೆ ಒಳ್ಳೆಯದು. ಆರೋಗ್ಯದ ಕಡೆಗೆ ಗಮನಹರಿಸಿ.

ಕುಂಭ ರಾಶಿ

ಈ ದಿನ ನಿಮಗೆ ಶುಭವಾಗಿದೆ, ನಿಮಗೆ ಉತ್ತಮ ಅವಕಾಶ ಸಿಗಲಿದೆ. ಈ ದಿನ ವ್ಯಾಪಾರಿಗಳಿಗೆ ಆರ್ಥಿಕ ಲಾಭದ ಸಾಧ್ಯತೆಗಳಿವೆ. ಹಣದ ಕೊರತೆಯಿಂದ ಸ್ಥಗಿತಗೊಂಡಿದ್ದ ಕಾಮಗಾರಿ ಪೂರ್ಣಗೊಳ್ಳಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಆರೋಗ್ಯದ ಕಡೆಗೆ ಗಮನಹರಿಸಬೇಕು, ಹಳೆಯ ಕಾಯಿಲೆಗಳು ಮರುಕಳಿಸಬಹುದು.

ಮೀನ ರಾಶಿ

ನೀವು ಕೆಲಸದ ಕಡೆಗೆ ಗಮನಹರಿಸಿ. ನಿಮ್ಮ ಪ್ರಮುಖ ಕೆಲಸಗಳು ಅಪೂರ್ಣವಾಗಿ ಇರಲಿದೆ. ವ್ಯಾಪಾರಿಗಳು ಈ ದಿನ ತುಂಬಾ ಜಾಗರೂಕರಾಗಿರಬೇಕು. ಉದ್ಯೋಗಿಗಳು ಯಾವುದೇ ಆತುರದ ಕೆಲಸ ಮಾಡುವುದನ್ನು ತಪ್ಪಿಸಬೇಕು. ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Dina Bhavishya: 24th June 2024 Daily Horoscope Prediction for All 12 Zodiac Signs in Kannada

Explore Dina Bhavishya (ದಿನ ಭವಿಷ್ಯ) /Daily Horoscope Prediction For Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, And Pisces In Kannada:
Story first published: Monday, June 24, 2024, 3:09 [IST]
X
Desktop Bottom Promotion