Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್ 24ರ ಭವಿಷ್ಯ
ತಿಥಿ: ಪ್ರತಿಪಾದ
ನಕ್ಷತ್ರ: ಸ್ವಾತಿ
ಬ್ರಹ್ಮ ಮುಹೂರ್ತ: ಬೆಳಗ್ಗೆ 04:19ರಿಂದ 05:03ರವರೆಗೆ
ರಾಹುಕಾಲ: ಮಧ್ಯಾಹ್ನ 12:19ರಿಂದ ಮಧ್ಯಾಹ್ 01:58ರವರೆಗೆ
ಮೇಷ ರಾಶಿ
ನೀವು ಕೆಲಸದ ಜೊತೆಗೆ ಕುಟುಂಭ ಜೀವನದ ಕಡೆಗೆ ಗಮನಹರಿಸಿ, ಇಲ್ಲದಿದ್ದರೆ ನಿಮ್ಮ ಹಾಗೂ ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಉಂಟಾಗಲಿದೆ, ಆದ್ದರಿಂದ ಜಾಗ್ರತೆವಹಿಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರ ಬರುತ್ತಿದ್ದರೆ ನೀವು ಓದಿನ ಕಡೆಗೆ ತುಂಬಾನೇ ಗಮನಹರಿಸಬೇಕು. ಹಣದ ವಿಷಯದಲ್ಲಿ ಯಾವುದೇ ತೊಂದರೆಯಿಲ್ಲ, ಕೆಲಸದಲ್ಲಿ ಈ ದಿನ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಆರೋಗ್ಯ ಸಮಸ್ಯೆವಿದ್ದರೆ ನಿರ್ಲಕ್ಷ್ಯ ಮಾಡಲೇಬೇಡಿ.
ಅದೃಷ್ಟದ ಬಣ್ಣ: ಗೋಲ್ಡನ್
ಅದೃಷ್ಟದ ಸಂಖ್ಯೆ: 21
ಶುಭ ಸಮಯ: ಬೆಳಗ್ಗೆ 8:15 ರಿಂದ 10:50 ರವರೆಗೆ

ವೃಷಭ ರಾಶಿ
ನೀವಿಂದು ಕೆಲಸದ ಕಡೆಗೆ ತುಂಬಾನೇ ಗಮನಹರಿಸಬೇಕು, ಏಕೆಂದರೆ ನಿಮ್ಮಿಂದ ಚಿಕ್ಕ ತಪ್ಪಾದರೂ ಮೇಲಾದಿಕಾರಿಗಳು ತುಂಬಾನೇ ಕೋಪಗೊಳ್ಳುತ್ತಾರೆ ವ್ಯಾಪಾರಿಗಳಿಗೆ ಹಾಗೂ ಉದ್ಯಮಿಗಳಿಗೆ ಈ ದಿನ ಅನುಕೂಲಕವಾಗಿದೆ, ಅಲ್ಲದೆ ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಇಂದು ಮನೆಯವರ ಖುಷಿಗಾಗಿ ಹೆಚ್ಚು ಹಣ ಖರ್ಚಾಗಲಿದೆ. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಲೇಬೇಡಿ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 36
ಶುಭ ಸಮಯ: ಮಧ್ಯಾಹ್ನ 2:20 ರಿಂದ 4 ರವರೆಗೆ
ಮಿಥುನ ರಾಶಿ
ಇಂದು ನೀವು ಪೋಷಕರ ಮನಸ್ಸಿಗೆ ನೋವಾಗದಂತೆ ಜಾಗ್ರತೆವಹಿಸಿ. ಏನಾದರೂ ಭಿನ್ನಾಭಿಪ್ರಾಯವಿದ್ದರೆ ಸೂಕ್ಷ್ಮದಿಂದ ಬಗೆಹರಿಸಿ. ಉದ್ಯೋಗಿಗಳು ಉತ್ತಮ ಲಾಭ ಗಳಿಸುತ್ತೀರಿ. ಈ ಸಮಯದಲ್ಲಿ ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣುವಿರಿ. ನೀವು ಆಹಾರಕ್ರಮದ ಕಡೆಗೆ ತುಂಬಾನೇ ಗಮನಹರಿಸಿ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 9
ಶುಭ ಸಮಯ: ಬೆಳಗ್ಗೆ 7 ರಿಂದ 11 ರವರೆಗೆ
ಕರ್ಕ ರಾಶಿ
ಉದ್ಯೋಗಿಗಳು ಈ ದಿನ ಶುಭ ಸುದ್ದಿ ಪಡೆಯಬಹುದು. ಇನ್ನು ನೀವು ಬೇರೆ ಕಡೆ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ಅದು ಕೂಡ ಉತ್ತಮವಾಗಿರಲಿದೆ. ವ್ಯಾಪಾರಿಗಳು ಈ ದಿನ ಯಾವುದೇ ದೊಡ್ಡ ಹಣದ ಹೂಡಿಕೆ ಮಾಡಲು ಹೋಗದಿರುವುದು ಒಳ್ಳೆಯದು. ವೈವಾಹಿಕ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯ ಉಂಟಾಗಬಹುದು. ನೀವಿಬ್ಬರು ಜೊತೆಯಾಗಿ ಚಿಕ್ಕ ಟ್ರಿಪ್ ಪ್ಲ್ಯಾನ್ ಮಾಡಿ. ಆರೋಗ್ಯಕ್ಕಾಗಿ ಯೋಗ, ವ್ಯಾಯಾಮದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 30
ಶುಭ ಸಮಯ: ಮಧ್ಯಾಹ್ನ 3:30 ರಿಂದ 6:30 ರವರೆಗೆ
ಸಿಂಹ ರಾಶಿ
ಕೆಲಸದ ಒತ್ತಡ ಅಧಿಕವಿರಲಿದೆ, ವ್ಯಾಪರಿಗಳಿಗೂ ಈ ದಿನ ಅಷ್ಟೊಂದು ಲಾಭದಾಯಕವಲ್ಲ. ತಾಯಿ ಅಥವಾ ತಂದೆಯ ಆರೋಗ್ಯವು ಉತ್ತಮವಾಗಿಲ್ಲದಿದ್ದರೆ ಅವರ ಆರೋಗ್ಯದ ಕಡೆಗೆ ಗಮನಹರಿಸಿ. ನಿದ್ರಾಹೀನತೆ ಸಮಸ್ಯೆವಿರಬಹುದು.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 14
ಶುಭ ಸಮಯ: ಬೆಳಗ್ಗೆ 6:20 ರಿಂದ 9:20 ರವರೆಗೆ
ಕನ್ಯಾ ರಾಶಿ
ಕೆಲಸದಲ್ಲಿ ಈ ದಿನ ಉತ್ತಮವಾಗಿದೆ. ವ್ಯಾಪಾಇಗಳು ಇಂದು ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಸಂಗಾತಿಯೊಂದಿಗೆ ಬಾಂಧವ್ಯ ಚೆನ್ನಾಗಿರಲಿದೆ. ಇನ್ನು ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ, ಆರೋಗ್ಯದ ದೃಷ್ಟಿಯಿಂದ ಈ ದಿನ ನಿಮಗೆ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ:42
ಶುಭ ಸಮಯ: ಸಂಜೆ 4:30 ರಿಂದ 7 ರವರೆಗೆ
ತುಲಾ ರಾಶಿ
ಹಣದ ವಿಷಯದಲ್ಲಿ ಈ ದಿನ ನಿಮಗೆ ಉತ್ತಮವಾಗಿರಲಿದೆ. ನೀವು ಹೂಡಿಕೆ ಮಾಡಿದ್ದರಿಂದ ಒಳ್ಳೆಯ ಲಾಭ ಗಳಿಸಬಹುದು. ಅನಗ್ಯತ ವಿಷಯಗಳಿಗೆ ತಲೆ ಹಾಕದೆ ಇದ್ದರೆ ಒಳ್ಳೆಯದು. ಕೆಲಸದ ಕಡೆಗೆ ಗಮನಹರಿಸಬೇಕು. ವ್ಯಾಪಾರಿಗಳು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ಇನ್ನು ಈ ದಿನ ಆರೋಗ್ಯ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 18
ಶುಭ ಸಮಯ: ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ
ವೃಶ್ಚಿಕ ರಾಶಿ
ಈ ದಿನ ನಿಮಗೆ ತುಂಬಾ ಖುಷಿಯಾಗಲಿದೆ, ಏಕೆಂದರೆ ನಿಮ್ಮ ಎಲ್ಲಾ ಕೆಲಸಗಳು ಯೋಜನೆಯಂತೆಯೇ ಪೂರ್ಣವಾಗುವುದರಿಂದ ಯಾವುದೇ ಚಿಂತೆ ಇರಲ್ಲ, ಅಲ್ಲದೆ ಮೇಲಾಧಿಕಾರಿಗಳು ನಿಮ್ಮ ಕೆಲಸ ನೋಡಿ ಇಷ್ಟಪಡುತ್ತಾರೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 6
ಶುಭ ಸಮಯ: ಬೆಳಗ್ಗೆ 8:30 ರಿಂದ 10:20 ರವರೆಗೆ
ಧನು ರಾಶಿ
ವ್ಯಾಪಾರಿಗಳು ಈ ದಿನ ಉತ್ತಮ ಲಾಭ ಗಳಿಸುತ್ತೀರಿ. ಉದ್ಯೋಗಿಗಳು ಈ ದಿನ ಸ್ವಲ್ಪ ಜಾಗ್ರತೆವಹಿಸಬೇಕು. ನಿಮ್ಮ ಹಿಂದೆಯೇ ಪಿತೂರಿ ನಡೆಯಬಹುದು. ನೀವು ಹಣದ ಬಗ್ಗೆ ಕೂಡ ಜಾಗ್ರತೆ ವಹಿಸಬೇಕು, ಏಕೆಂದರೆ ಖರ್ಚು ಇರಲಿದೆ ಮದ್ಯ, ಸಿಗರೇಟ್ ಈ ಬಗೆಯ ಚಟದಿಂದ ದೂರವಿರಿ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 44
ಶುಭ ಸಮಯ: ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ
ಮಕರ ರಾಶಿ
ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿರಲಿದೆ, ಹಣ ಲಾಭ ಗಳಿಸಬಹುದು. ಉದ್ಯೋಗಿಗಳು ಕೆಲಸದ ಕಡೆಗೆ ನಿರ್ಲಕ್ಷ್ಯ ತೋರಿದರೆ ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುವುದು. ಹಣಕಾಸಿನ ನಿರ್ಧಾರ ಚೆನ್ನಾಗಿ ಯೋಚಿಸಿ ತೆಗೆದುಕೊಳ್ಳುವುಉದ ಒಳ್ಳೆಯದು. ಕುಟುಂಬ ಜೀವನದಲ್ಲಿ ಪ್ರೀತಿ ಇರಲಿದೆ, ಆರೋಗ್ಯವೂ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 5
ಶುಭ ಸಮಯ: ಬೆಳಗ್ಗೆ 8 ರಿಂದ 11:30 ರವರೆಗೆ
ಕುಂಭ ರಾಶಿ
ನೀವು ಹಣಕಾಸಿನ ಸಮಸ್ಯೆಯಿಂದ ಹೊರ ಬರಲು ಖರ್ಚು ಕಡಿಮೆ ಮಾಡಿ. ಸಾಲ ಮಾಡಲು ಹೋಗಬೇಡಿ . ವ್ಯಾಪಾರಿಗಳು ತಮ್ಮ ವ್ಯವಹಾರ ಹೆಚ್ಚಿಸಲು ಹೊಸ ಯೋಜನೆ ಮಾಡುತ್ತೀರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಇಂದು ಗಾಡಿಯನ್ನು ನಿಧಾಬಕ್ಕೆ ಚಲಾಯಿಸಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 10
ಶುಭ ಸಮಯ: ಮಧ್ಯಾಹ್ನ 2:30 ರಿಂದ ಸಂಜೆ 5 ರವರೆಗೆ
ಮೀನ ರಾಶಿ
ವ್ಯಾಪಾರಿಗಳು ಜಾಗ್ರತೆವಹಿಸಬೇಕು, ತಪ್ಪು ನಿರ್ಧಾರಗಳು ಸಮಸ್ಯೆ ಹೆಚ್ಚಿಸಬಹುದು. ವಿವಾಹಿತರು ಈ ದಿನ ತಾಳ್ಮೆಯಿಂದ ಇರಬೇಕು, ಏಕೆಂದರೆ ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯವಿರುತ್ತದೆ, ಕೋಪದಿಂದ ವರ್ತಿಸಿದರೆ ಸಮಸ್ಯೆ ಹೆಚ್ಚಾಗುವುದು, ಪ್ರೇಮಿಗಳಿಗೆ ಈ ದಿನ ಉತ್ತಮವಾಗಿದೆ. ಆರೋಗ್ಯದ ಬಗ್ಗೆ ಗಮನಹರಿಸಬೇಕು.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 2
ಶುಭ ಸಮಯ: ಬೆಳಿಗ್ಗೆ 7 ರಿಂದ 10 ರವರೆಗೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










