Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದಿನ ಭವಿಷ್ಯ: ಜೂನ್ 22, ಈ ದಿನ ನಿಮ್ಮ ರಾಶಿಫಲ ಹೇಗಿದೆ?
ಶುಭ ದಿನ, ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
ಮೇಷ ರಾಶಿ
ಈ ದಿನ ನಿಮಗೆ ಶುಭವಾಗಿದೆ, ನಿಮ್ಮ ಕೆಲಸ ಕಾರ್ಯಗಳು ಸಮಯಕ್ಕೆ ಪೂರ್ಣಗೊಳ್ಳಲಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ಆರೋಗ್ಯವೂ ಚೆನ್ನಾಗಿರುತ್ತದೆ.

ವೃಷಭ ರಾಶಿ
ಈ ದಿನ ಮನಸ್ಸಿನಲ್ಲಿ ಬೇಡದ ಚಿಂತೆ ಬರಬಹುದು, ಈ ದಿನ ನೀವು ಅನಗತ್ಯವಾಗಿ ಚಿಂತಿಸಬೇಕಾಗಿಲ್ಲ, ಧನಾತ್ಮಕವಾಗಿರಿ. ವ್ಯಾಪಾರಿಗಳು ನಷ್ಟ ಉಂಟಾಗದಂತೆ ಜಾಗ್ರತೆವಹಿಸಿ. ಈ ದಿನ ಅರ್ಥಿಕವಾಗಿ ಉತ್ತಮವಾಗಿರಲಿದೆ. ಆಹಾರಕ್ರಮದ ಕಡೆಗೆ ಗಮನಹರಿಸಿ.
ಮಿಥುನ ರಾಶಿ
ನಿಮ್ಮ ಸ್ವಭಾವವೇ ನಿಮ್ಮ ಸಮಸ್ಯೆ ಹೆಚ್ಚಿಸಬಹುದು. ವ್ಯಾಪಾರಿಗಳು ಈ ದಿನ ಯಾವುದೇ ರಿಸ್ಕ್ ತೆಗೆದುಕೊಳ್ಳದಿದ್ದರೆ ಒಳ್ಳೆಯದು. ಕಾನೂನು ವಿಷಯಗಳಲ್ಲಿಯೂ ಜಾಗರೂಕರಾಗಿರಬೇಕು. ಉದ್ಯೋಗದಲ್ಲಿ ನಿಮ್ಮ ಕಠಿಣಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ, ಒಡಹುಟ್ಟಿದವರ ಜೊತೆಗೆ ಭಿನ್ನಾಭಿಪ್ರಾಯವಿರಬಹುದು, ಕೋಪ, ಆತುರದಿಂದ ದೂರವಿದ್ದರೆ ಉತ್ತಮ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯ ಚೆನ್ನಾಗಿರಲಿದೆ.
ಕರ್ಕ ರಾಶಿ
ಈ ದಿನ ನಿಮಗೆ ಶುಭವಾಗಿದೆ, ಆರ್ಥಿಕವಾಗಿಯೂ ಈ ದಿನ ಚೆನ್ನಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ತೆಗೆದ ಸಾಲ ಮರುಕಳಿಸಲು ಸಾಧ್ಯವಾಗುವುದು.
ಉದ್ಯೋಗಿಗಳು ತಮ್ಮ ಕೆಲಸದ ಕಡೆಗೆ ಗಮನಹರಿಸಿ. ಕುಟುಂಬ ಜೀವನ ಚೆನ್ನಾಗಿರಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ, ಆರೋಗ್ಯ ಉತ್ತಮವಾಗಿರಲಿದೆ.
ಸಿಂಹ ರಾಶಿ
ನೀವು ಅನಗ್ಯತ ಚಿಂತೆ ಮಾಡದೆ ನಿಮ್ಮ ಕೆಲಸದ ಕಡೆಗೆ ಗಮನಹರಿಸಿ, ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ನಿಮ್ಮ ನಡುವೆ ಹೊಂದಾಣಿಕೆ ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಕಣ್ಣಿಗೆ ಸಂಬಂಧಿಸಿದ ಸಮಸ್ಯೆವಿರಬಹುದು.
ಕನ್ಯಾ ರಾಶಿ
ಈ ದಿನ ನಿಮಗೆ ಶುಭವಾಗಿದೆ, ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ವ್ಯಾಪಾರಿಗಳಿಗೆ ಧನ ಲಾಭ ಸಿಗಲಿದೆ, ಕೆಲಸ ಹುಡುಕುತ್ತಿದ್ದರೆ ಶೀಘ್ರವೇ ಕೆಲಸ ಸಿಗಲಿದೆ. ವೈವಾಹಿಕ ಜೀವನದಲ್ಲಿನ ಸಮಸ್ಯೆ ಬಗೆಹರಿಸಲು ಈ ಅವಧಿ ಉತ್ತಮವಾಗಿದೆ, ಆರೋಗ್ಯ ಚೆನ್ನಾಗಿರಲಿದೆ.
ತುಲಾ ರಾಶಿ
ಹಣದ ಚಿಂತೆ ಇರಲಿದೆ, ಹಣವನ್ನು ನೋಡಿಕೊಂಡು ಖರ್ಚು ಮಾಡಿದರೆ ಒಳ್ಳೆಯದು. ಉದ್ಯೋಗಿಗಳಿಗೆ ಈ ದಿನ ಒತ್ತಡದಿಂದ ಕೂಡಿರಲಿದೆ. ಕುಟುಂಬ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯವಿರಬಹುದು, ಸಂಗಾತಿಯ ಮನಸ್ಸು ನೋಯಿಸಬೇಡಿ. ಆರೋಗ್ಯದ ಕಡೆಗೆ ಗಮನಹರಿಸಿ.
ವೃಶ್ಚಿಕ ರಾಶಿ
ಈ ದಿನ ನೀವು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ. ವ್ಯಾಪಾರಿಗಳಿಗೆ ಈ ದಿನ ಅಷ್ಟೊಂದು ಅನುಕೂಲಕರವಲ್ಲ. ನೀವು ಕೋಪ ನಿಯಂತ್ರಿಸಿದರೆ ಕುಟುಂಬ ಜೀವನ ಚೆನ್ನಾಗಿರಲಿದೆ, ವೈವಾಹಿಕ ಜೀವನ ಚೆನ್ನಾಗಿರಲಿದೆ, ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಬೇಡ.
ಧನು ರಾಶಿ
ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನ ಕಾಪಾಡಲು ಯೋಚಿಸಬೇಕು. ವ್ಯಾಪಾರಿಗಳು ಪ್ರಭಾವಿ ವ್ಯಕ್ತಿಗಳಿಂದ ಬೆಂಬಲವನ್ನು ಪಡೆಯುತ್ತೀರಿ . ಈ ದಿನ ಹೂಡಿಕೆ ಮಾಡುವ ಮುನ್ನ ಅದರ ಬಗ್ಗೆ ಯೋಚಿಸುವುದು ಒಳ್ಳೆಯದು. ಕುಟುಂಬ ಜೀವನ ಚೆನ್ನಾಗಿರಲಿದೆ. ನೀವು ಆರೋಗ್ಯದ ಕಡೆಗೆ ಗಮನಹರಿಸಿ.
ಮಕರ ರಾಶಿ
ಅತಿಯಾಸೆ ಒಳ್ಳೆಯದಲ್ಲ, ನೀವು ಇಂದು ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡದಿದ್ದರೆ ಒಳ್ಳೆಯದು. ಹೊಸ ಕೆಲಸವನ್ನು ಪ್ರಾರಂಭಿಸಲು ದಿನವು ಸೂಕ್ತವಲ್ಲ.
ನೀವು ಕುಟುಂಬದ ಕಡೆಗೆ ಗಮನಹರಿಸಿ. ಸಂಗಾತಿಯ ಜೊತೆಗೆ ಕೋಪದಿಂದ ವರ್ತಿಸಬೇಡಿ. ಆರೋಗ್ಯದ ಕಡೆಗೆ ಗಮನಹರಿಸಿ.
ಕುಂಭ ರಾಶಿ
ಈ ದಿನ ನೀವು ತಾಳ್ಮೆಯಿಂದ ಯೋಚಿಸಬೇಕು, ಏನೋ ಚಿಂತೆ ಕಾಡಬಹುದು, ಆತ್ಮವಿಶ್ವಾಸ ಕುಗ್ಗಬಹುದು. ನೀವು ಯಾವುದೇ ರೀತಿಯ ಬದಲಾವಣೆಯನ್ನು ಮಾಡಲು ಯೋಚಿಸುತ್ತಿದ್ದರೆ ಈ ಸಮಯವು ಅನುಕೂಲಕರವಾಗಿರುತ್ತದೆ. ಉದ್ಯೋಗಿಗಳಿಗೆ ಕೆಲಸದ ಹೊರೆ ಹೆಚ್ಚಿರಲಿದೆ. ಕುಟುಂಬದಲ್ಲಿನ ಸಮಸ್ಯೆ ತಾಳ್ಮೆಯಿಂದ ಬಗೆಹರಿಸಿ.
ಆತಂಕ ಮತ್ತು ಆಯಾಸವು ಆರೋಗ್ಯವನ್ನು ಹಾಳು ಮಾಡುತ್ತದೆ, ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ.
ಮೀನ ರಾಶಿ
ಹಠದ ಸ್ವಭಾವ ಸಮಸ್ಯೆ ಹೆಚ್ಚಿಸಬಹುದು, ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರು ಇಂದು ಜಾಗರೂಕರಾಗಿರಬೇಕು. ನೀವು ಪಾಲುದಾರಿಕೆಯಲ್ಲಿ ಕೆಲಸ ಮಾಡಿದರೆ, ನೀವು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ನೆಮ್ಮದಿ ಇರಲಿದೆ. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಬೇಡ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










