Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದಿನ ಭವಿಷ್ಯ: ಜೂನ್ 21, ಶುಕ್ರವಾರದ ದಿನ ನಿಮ್ಮ ರಾಶಿಫಲ ಹೇಗಿದೆ?
ಶುಭ ಶುಕ್ರವಾರ....
ಮೇಷ ರಾಶಿ
ಈ ದಿನ ಸವಾಲುಗಳು ಬರಬಹುದು, ಉದ್ಯಮಿಗಳು ಈ ದಿನ ಹಣಕ್ಕೆ ಸಂಬಂಧಿಸಿದ ನಿರ್ಧಾರ ತೆಗೆದುಕೊಲ್ಲುವುದಾದರೆ ನೀವು ಅವಲೋಕಿಸಿ ಮಾಡಬೇಕು, ಮೂರನೇಯ ವ್ಯಕ್ತಿ ಹೇಳಿದರು ಎಂದು ತೆಗೆಯಲು ಹೋಗಬೇಡಿ. ಕುಟುಂಬ ಹಾಗೂ ವೈವಾಹಿಕ ಜೀವನ ಚೆನ್ನಾಗಿರಲಿದೆ. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಲು ಹೋಗಬೇಡಿ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ದಿನ ಶುಭವಾಗಿದೆ, ನಿಮ್ಮ ಪ್ರಮುಖ ಚಿಂತೆ ದೂರಾಗಲಿದೆ, ಈ ದಿನ ಧನಾತ್ಮಕವಾಗಿರಲಿದೆ. ವ್ಯಾಪಾರಿಗಳಿಗೆ ಈ ದಿನ ಧನ ಲಾಭವಾಗಲಿದೆ, ಉದ್ಯೋಗಿಗಳು ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ, ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯ ಕೂಡ ಉತ್ತಮವಾಗಿರಲಿದೆ.
ಮಿಥುನ ರಾಶಿ'
ನಿಮ್ಮ ಮಾತೇ ನಿಮಗೆ ಸಮಸ್ಯೆಯಾಗಬಹುದು, ಆದ್ದರಿಂದ ಮಾತಿನಲ್ಲಿ ಹಿಡಿತವಿದ್ದರೆ ಒಳ್ಳೆಯದು. ಉದ್ಯೋಗಿಗಳಿಗೆ ಈ ದಿನ ಸಾಧಾರಣವಾಗಿರಲಿದೆ. ಅತಿಯಾದ ಆತ್ಮವಿಶ್ವಾಸ ನಿಮಗೆ ಮುಜುಗರ ತರುವುದು, ಆದ್ದರಿಂದ ಜಾಗ್ರತೆ, ಕುಟುಂಬ ಜೀವನ ಚೆನ್ನಾಗಿರಲಿದೆ. ಆದರೆ ಸಂಗಾತಿಗೆ ಸುಳ್ಳು ಹೇಳಬೇಡಿ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿರಲಿದೆ.
ಕರ್ಕ ರಾಶಿ
ಈ ದಿನ ಸವಾಲಿನಿಂದ ಕೂಡಿರಲಿದೆ, ಆದರೆ ಅದನ್ನು ಜಯಿಸುವಲ್ಲಿ ಯಶಸ್ವಿಯಾಗುತ್ತೀರಿ. ವ್ಯಾಪಾರಿಗಳಿಗೆ ಧನಲಾಭವಾಗಲಿದೆ. ಉದ್ಯೋಗಿಗಳ ಬಾಕಿ ಇರುವ ಕೆಲಸ ಪೂರ್ಣಗೊಳ್ಳಲಿದೆ. ನೀವು ಕುಟುಂಬದವರ ಜೊತೆ ಸಮಯ ಕಳೆಯಿರಿ, ನಿಮ್ಮ ಪ್ರೀತಿಪಾತ್ರರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಈ ದಿನ ಚೆನ್ನಾಗಿರಲಿದೆ.
ಸಿಂಹ ರಾಶಿ
ಇಂದು ಎಲ್ಲಾ ಚಿಂತೆಗಳನ್ನು ಮರೆತು ನಿಮ್ಮ ಕೆಲಸದತ್ತ ಗಮನಹರಿಸಲು ಸಾಧ್ಯವಾಗುವುದು. ಕೆಲಸದಲ್ಲಿ ಅತಿಯಾದ ಒತ್ತಡ ತೆಗೆದುಕೊಳ್ಳಬೇಡಿ, ವ್ಯಾಪಾರಿಗಳಿಗೆ ಲಾಭದಾಯಕವಾಗಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ಸಂಬಂಧದಲ್ಲಿ ನಿಯತ್ತಿನಿಂದ ಇರಬೇಕು, ಬೇರೆ ಕಡೆ ಆಕರ್ಷಣೆ ಉಂಟಾಗದಂತೆ ಮನಸ್ಸು ತಡೆ ಹಿಡಿಯಬೇಕು. ಆರೋಗ್ಯ ಸಮಸ್ಯೆಯಿದ್ದರೆ ಜಾಗ್ರತೆವಹಿಸಿ.
ಕನ್ಯಾ ರಾಶಿ
ಈ ದಿನ ನಿಮಗೆ ಅಷ್ಟೊಂದು ಅನುಕೂಲಕರವಲ್ಲ, ಈ ದಿನ ನಿಮಗೆ ಒತ್ತಡದಿಮದ ಕೂಡಿರಲಿದೆ. ವ್ಯಾಪಾರಿಗಳಿಗೆ ಸವಾಲಿನ ದಿನ, ಈ ದಿನ ಯಾವುದೇಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಕೆಲಸದ ಕಡೆಗೆ ಗಮನಹರಿಸಿ, ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಅತಿಯಾಗಿ ಒತ್ತಡ ತೆಗೆದುಕೊಳ್ಳಬೇಡಿ.
ತುಲಾ ರಾಶಿ
ಈ ದಿನ ನಿಮಗೆ ಅನುಕೂಲಕರವಲ್ಲ ಆದ್ದರಿಂದ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ. ವ್ಯಾಪಾರಿಗಳು ಆರ್ಥಿಕ ನಷ್ಟ ಉಂಟಾಗದಂತೆ ಜಾಗ್ರತೆವಹಿಸಿ. ವೈಯಕ್ತಿಕ ಜೀವನದ ಸಮಸ್ಯೆಗಳು ನಿಮ್ಮ ಕೆಲಸದಲ್ಲಿ ಮೇಲುಗೈ ಸಾಧಿಸಲು ಬಿಡಬೇಡಿ. ಕುಟುಂಬ ಹಾಗೂ ಕೆಲಸದ ನಡುವೆ ಸಮತೋಲನ ಕಾಪಾಡಲು ಪ್ರಯತ್ನ ಮಾಡಬೇಕು. ಅವಾಹಿತರಿಗೆ ಶೀಘ್ರವೇ ಮದುವೆ ಸಂಬಂಧ ಬರಲಿದೆ, ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಬೇಡ.
ವೃಶ್ಚಿಕ ರಾಶಿ
ತುಂಬಾನೇ ನೆಗೆಟಿವ್ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು. ನೀವು ಬೇಡದ ವಿಚಾರಕ್ಕೆ ಕೈ ಹಾಕದೆ ನಿಮ್ಮ ಕೆಲಸದ ಕಡೆಗೆ ಗಮನಹರಿಸಿ.
ವ್ಯಾಪಾರಿಗಳ ಸಮಸ್ಯೆ ತಾತ್ಕಾಲಿಕವಾಗಿದೆ. ಮನೆಯಲ್ಲಿ ಹಿರಿಯರ ಆರೋಗ್ಯಕ್ಕಾಗಿ ಹಣ ಖರ್ಚಾಗುವುದು. ಕೆಲಸದ ಜೊತೆಗೆ ನೀವು ವಿಶ್ರಾಂತಿ ಕಡೆಗೆ ಗಮನಹರಿಸಿ.
ಧನು ರಾಶಿ
ಭವಿಷ್ಯದ ಬಗ್ಗೆ ಸೂಕ್ತ ಪ್ಲ್ಯಾನ್ ಮಾಡಬೇಕು. ವ್ಯಾಪಾರಿಗಳು ಲಾಭ ಗಳಿಸಲು ಉತ್ತಮ ಅವಕಾಶವನ್ನು ಪಡೆಯುತ್ತೀರಿ. ಕೌಟುಂಬಿಕ ಜೀವನ ಚೆನ್ನಾಗಿರಲಿದೆ, ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಇನ್ನಷ್ಟು ಬಲಗೊಳ್ಳುತ್ತವೆ. ಆರೋಗ್ಯ ಸಂಬಂಧಿತ ಸಮಸ್ಯೆಯಿದ್ದರೆ ಸ್ವ ಚಿಕಿತ್ಸೆ ಮಾಡಬೇಡಿ, ಸೂಕ್ತ ವೈದ್ಯರನ್ನು ಕಾಣಿ.
ಮಕರ ರಾಶಿ
ಈ ದಿನ ಅಧಿಕ ಕೆಲಸ ಇರಲಿದೆ, ಕೆಲಸದ ಒತ್ತಡ ಅಧಿಕವಿರಲಿದೆ. ವ್ಯಾಪಾರಿಗಳು ನಿರೀಕ್ಷಿಸಿದಷ್ಟು ಲಾಭ ಗಳಿಸಲು ಸಾಧ್ಯವಾಗಲ್ಲ. ನೀವು ಕೆಲಸ ಹುಡುಕುತ್ತಿದ್ದರೆ ನಿಮ್ಮ ಪ್ರಯತ್ನಗಳನ್ನು ಮತ್ತಷ್ಟು ಚುರುಕುಗೊಳಿಸಿ, ಕುಟುಂಬದಲ್ಲಿನ ನಿಮ್ಮ ಜವಾಬ್ದಾರಿಗಳ ಬಗ್ಗೆ ನಿರ್ಲಕ್ಷ್ಯ ತೋರಬೇಡಿ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯವಿರಲಿದೆ, ಆರೋಗ್ಯದ ಬಗ್ಗೆ ಹೇಳುವುದಾದರೆ ನಿದ್ರಾಹೀನತೆ ಸಮಸ್ಯೆ ಉಂಟಾಗುವುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ದಿನ ಅನುಕೂಲಕರವಾಗಿದೆ, ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆ ಕಂಡು ಬರುವುದು. ವ್ಯಾಪಾರಿಗಳಿಗೆ ಧನ ಲಾಬವಾಗಲಿದೆ. ನೀವು ನಿಮ್ಮ ವ್ಯವಹಾರದ ನಿರ್ಧಾರಗಳನ್ನು ಪೂರ್ಣ ವಿಶ್ವಾಸದಿಂದ ತೆಗೆದುಕೊಳ್ಳುತ್ತೀರಿ. ನೀವು ಅಹಂಕಾರದ ವರ್ತನೆಯಿಂದ ದೂರವಿರಿ. ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯ ಚೆನ್ನಾಗಿರಲಿದೆ.
ಮೀನ ರಾಶಿ
ನೀವು ನಿಮ್ಮ ಭಾವನೆಗಳನ್ನು ನಿಮ್ಮ ಆಪ್ತರ ಜೊತೆ ಹೇಳಿಕೊಳ್ಳಿ, ಮೌನವಾಗಿ ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬೇಡಿ. ವ್ಯಾಪಾರಿಗಳಿಗೆ ಲಾಭ ಪಡೆಯಬಹುದು. ಉದ್ಯೋಗಿಗಳಿಗೆ ದಿನವು ಅನುಕೂಲಕರವಾಗಿರುತ್ತದೆ. ಪ್ರೇಮಿಗಳಿಗೆ ಈ ದಿನ ಅನುಕೂಲಕರವಲ್ಲ, ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇರಲಿದೆ. ತಪ್ಪು ತಿಳುವಳಿಕೆ ಹೋಗಲಾಡಿಸಿದರೆ ಒಳ್ಳೆಯದು. ಆರೋಗ್ಯ ಸಮಸ್ಯೆಯಿದ್ದರೆ ಈ ದಿನ ತುಂಬಾ ಜಾಗರೂಕರಾಗಿರಲು ಸಲಹೆ ನೀಡಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










