ದಿನ ಭವಿಷ್ಯ: ಜೂನ್ 20, ಗುರುವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?

ಶುಭ ಗುರುವಾರ, ದ್ವಾದಶ ರಾಶಿಗಳ ರಾಶಿಫಲ....

ಮೇಷ ರಾಶಿ

ದಿನ ಶುಭವಾಗಿದೆ. ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಕೆಲ ಬದಲಾವಣೆ ಕಾಣಲಿದೆ. ವ್ಯಾಪಾರಿಗಳಿಗೆ ಈ ದಿನ ಧನ ಲಾಭವಾಗಲಿದೆ. ಈ ದಿನ ಆರ್ಥಿಕವಾಗಿ ಉತ್ತಮವಿದೆ, ಈ ದಿನ ಆರೋಗ್ಯ ಕೂಡ ಚೆನ್ನಾಗಿರಲಿದೆ.

Dina Bhavishya

ವೃಷಭ ರಾಶಿ

ನೀವು ಇತ್ತೇಚೆಗೆ ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ನಿಮಗೆ ಶಿಕ್ಷಕರ ಮಾರ್ಗದರ್ಶನ ದೊರೆಯಲಿದೆ. ಕೆಲಸದಲ್ಲಿ ಈ ದಿನ ಉತ್ತಮವಾಗಿದೆ. ನಿಮ್ಮ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುವುದು. ನೀವು ವಿವಾಹಿತರಾಗಿದ್ದರೆ, ನಿಮ್ಮ ವೈವಾಹಿಕ ಜೀವನದ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು. ಕೆಲವು ಭಿನ್ನಾಭಿಪ್ರಾಯವಿದ್ದರೆ ನಿಮ್ಮ ಸಂಬಂಧ ಸುಧಾರಿಸಲು ಪ್ರಯತ್ನಿಸಬೇಕು. ಆರ್ಥಿಕವಾಗಿ ಈ ದಿನ ನಿಮಗೆ ಉತ್ತಮವಾಗಿದೆ, ಆರೋಗ್ಯ ಚೆನ್ನಾಗಿರಲಿದೆ.

ಮಿಥುನ ರಾಶಿ

ನೀವು ಸರ್ಕಾರಿ ಉದ್ಯೋಗಿ ಆಗುದ್ದರೆ ಈ ದಿನ ನಿಮ್ಮ ವೃತ್ತಿ ಬದುಕಿನಲ್ಲಿ ಬಹುದೊಡ್ಡ ತೀರ್ಪು ಉಂಟಾಗಲಿದೆ. ವ್ಯಾಪಾರಿಗಳು ಈ ದಿನ ಜಾಗ್ರತೆವಹಿಸಬೇಕು, ಅದರಲ್ಲಿಯೂ ಗ್ರಾಹಕರ ಜೊತೆಗೆ ಅನಗ್ಯತ ವಾದ ಮಾಡಲು ಹೋಗಬೇಡಿ. ಇಲ್ಲದಿದ್ದರೆ ಸುಮ್ಮನೆ ದೊಡ್ಡ ತೊಂದರೆಗೆ ಸಿಲುಕಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಚೆನ್ನಾಗಿರಲಿದೆ. ಪ್ರೇಮಿಗಳಿಗೆ ಈ ದಿನ ಚೆನ್ನಾಗಿರಲಿದೆ, ನಿಮ್ಮ ಸಂಗಾತಿ ನಿಮಗೆ ಸರ್‌ಫ್ರೈಸ್ ನೀಡಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಕೂಡಲೇ ನೀವು ವೈದ್ಯರನ್ನು ಕಾಣಬೇಕು.

ಕರ್ಕ ರಾಶಿಯರ

ಈ ದಿನ ನಿಮಗೆ ಮಿಶ್ರಫಲ, ಕೆಲಸದಲ್ಲಿ ನೀವು ಊಹಿಸಿದಂತೆ ಕೆಲಸಗಳು ನಡೆಯುವುದಿಲ್ಲ, ಇದರಿಂದ ಮಾನಸಿ ಒತ್ತಡ ಹೆಚ್ಚಿರಲಿದೆ. ನಿಮ್ಮ ಕೆಲಸ ಅಪೂರ್ಣವಾದರೆ ಬಾಸ್‌ ಕೋಪಗೊಳ್ಳಬಹುದು, ಇದೇ ರೀತಿ ಮುಂದುವರೆದರೆ ವೃತ್ತಿ ಬದುಕಿನಲ್ಲಿ ಸಮಸ್ಯೆಗಳು ಉಂಟಾಗಬಹುದು. ಉದ್ಯಮಿಗಳಿಗೂ ಈ ದಿನ ಆರ್ಥಿಕವಾಗಿ ಅನುಕೂಲಕರವಲ್ಲ, ಇದರಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಹಣದ ಬಗ್ಗೆ ಹೆಚ್ಚು ಚಿಂತೆ ಬಿಡಿ, ಶೀಘ್ರದಲ್ಲಿಯೇ ಎಲ್ಲಾ ಸಮಸ್ಯೆ ಬಗೆಹರಿಯಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ, ಆರೋಗ್ಯದಲ್ಲಿ ಏರಳಿತ ಇರಲಿದೆ.

ಸಿಂಹ ರಾಶಿ

ಹಣದ ವಿಷಯದಲ್ಲಿ ಈ ದಿನ ನಿಮಗೆ ಉತ್ತಮವಾಗಿದೆ, ಭವಿಷ್ಯದ ಹಣಕಾಸು ವ್ಯವಹಾರಕ್ಕೆ ಹೂಡಿಕೆ ಮಾಡುವುದಾದರೆ ನೀವು ಹೆಚ್ಚು ಜಾಗ್ರತೆವಹಿಸಿ, ಉದ್ಯೋಗಿಗಳಿಗೆ ದಿನ ಚೆನ್ನಾಗಿರಲಿದೆ. ಈ ದಿನ ಕುಟುಂಬ ಜೀವನ ಚೆನ್ನಾಗಿರಲಿದೆ, ಮಕ್ಕಳ ಜೊತೆ ಖುಷಿಯಿಂದ ಕಳೆಯಲು ಸಾಧ್ಯವಾಗುವುದು, ಆರೋಗ್ಯ ಜೀವನ ಚೆನ್ನಾಗಿರಲಿದೆ.

ಕನ್ಯಾ ರಾಶಿ

ಕೆಲಸದ ಒತ್ತಡ ಹೆಚ್ಚಿರಲಿದೆ, ಇದು ನಿಮಗೆ ಟೆನ್ಷನ್ ಉಂಟು ಮಾಡಬಹುದು, ಆದರೆ ಎಲ್ಲಾ ಚಿಂತೆಗಳನ್ನು ಮರೆತು ನಿಮ್ಮ ಕೆಲಸದ ಮೇಲೆ ಗಮನ ಹರಿಸಬೇಕು ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಈ ದಿನ ನೀವು ನಿಮ್ಮ ಸಂಗಾತಿಯ ಆರೋಗ್ಯದ ಕಡೆಗೆ ಗಮನಹರಿಸಿ, ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ.

ತುಲಾ ರಾಶಿ

ಆರ್ಥಿಕವಾಗಿ ಈ ದಿನ ನಿಮಗೆ ಉತ್ತಮವಲ್ಲ, ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಹಿಂದೆ ನೀವು ಮಾಡಿದ ತಪ್ಪು ನಿರ್ಧಾರದ ಪರಿಣಾಮಗಳನ್ನು ಇಂದು ನೀವು ಅನುಭವಿಸಬೇಕಾಗಬಹುದು. ನೀವು ಭಾವನಾತ್ಮಕವಾಗಿ ತುಂಬಾ ದುರ್ಬಲರಾಗುತ್ತೀರಿ. ಕೆಲಸದಲ್ಲಿ ಈ ದಿನ ಉತ್ತಮವಾಗಿದೆ. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.

ವೃಶ್ಚಿಕ ರಾಶಿ

ಈ ದಿನ ನಿಮಗೆ ಶುಭವಾಗಿದೆ, ಆರ್ಥಿಕವಾಗಿ ಈ ದಿನ ನಿಮಗೆ ಉತ್ತಮವಾಗಿದೆ, ನೀವು ಬ್ಯಾಂಕ್‌ನಿಂದ ಸಾಲ ಪಡೆಯಲು ಯೋಜಿಸುತ್ತಿದ್ದರೆ ಆ ಹಣ ಪಡೆಯುತ್ತೀರಿ. ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರೆಯಲಿದೆ. ಕೆಲಸದಲ್ಲಿ ನಿರ್ಲಕ್ಷ್ಯ ಬೇಡ, ಪೂರ್ಣ ಶ್ರದ್ಧೆಯಿಂದ ಕೆಲಸ ಮಾಡಿ. ಆರೋಗ್ಯದ ದೃಷ್ಟಿಯಿಂದ ದಿನವು ಸಾಮಾನ್ಯವಾಗಿರಲಿದೆ.

ಧನು ರಾಶಿ

ಉದ್ಯೋಗಿಗಳಿಗೆ ಈ ದಿನ ಕೆಲಸ ಕಾರ್ಯಗಳು ಸುಲಭವಾಗಿ ಪೂರ್ಣವಾಗಲಿದೆ. ಉದ್ಯಮಿಗಳಿಗೆ ಈ ದಿನ ಧನಲಾಭವಾಗಲಿದೆ. ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶವನ್ನು ಪಡೆಯುವ ಸಾಧ್ಯತೆಯಿದೆ. ಆರ್ಥಿಕವಾಗಿ ಈ ದಿನ ಉತ್ತಮವಾಗಿದೆ. ಚಿಕ್ಕ ವಿಷಯಕ್ಕೆ ಕೋಪಗೊಳ್ಳುವ ನಿಮ್ಮ ಸ್ವಭಾವದಿಂದ ಸಮಸ್ಯೆ ಉಂಟಾಗುವುದು, ಆದ್ದರಿಂದ ಕೋಪ ನಿಯಂತ್ರಿಸಿ. ಆರೋಗ್ಯ ಚೆನ್ನಾಗಿರಲಿದೆ.

ಮಕರ ರಾಶಿ

ಈ ದಿನ ನಿಮಗೆ ಶುಭವಾಗಿದೆ. ಆರ್ಥಿಕವಾಗಿಯೂ ಉತ್ತಮವಾಗಿದೆ, ನೀವು ಕೆಲಸ ಕೆಲಸ ಅಂತ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ನೀವು ಕೆಲಸದ ಜೊತೆಗೆ, ನೀವು ನಿಮ್ಮ ಆರೋಗ್ಯವನ್ನು ಸಹ ನೋಡಿಕೊಳ್ಳಬೇಕು, ಇಲ್ಲದಿದ್ದರೆ ಅದು ಕಷ್ಟಕರವಾಗಬಹುದು. ಇನ್ನು ವೈವಾಹಿಕ ಜೀವನದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.

ಕುಂಭ ರಾಶಿ

ವ್ಯಾಪಾರಿಗಳಿಗೆ ಈ ದಿನ ಉತ್ತಮವಲ್ಲ, ಉದ್ಯೋಗಿಗಳಿಗೆ ಈ ದಿನ ಚೆನ್ನಾಗಿರಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನಿಮ್ಮ ಸಮಸ್ಯೆಯನ್ನು ಪರಿಹರಿಸಬಹುದು. ಆರೋಗ್ಯದ ದೃಷ್ಟಿಯಿಂದ ಈ ದಿನ ಮಿಶ್ರಫಲ.

ಮೀನ ರಾಶಿ

ವ್ಯಾಪಾರಿಗಳು ಈ ದಿನ ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ಪಡೆಯಬಹುದು. ವ್ಯಾಪಾರಿಗಳಿಗೂ ಈ ದಿನ ಶುಭವಾಗಿದೆ. ಆರ್ಥಿಕವಾಗಿ ಈ ದಿನ ನಿಮಗೆ ಉತ್ತಮವಾಗಿದೆ. ವೈವಾಹಿಕ ಬದುಕು ಚೆನ್ನಾಗಿರಲಿದೆ, ಕುಟುಂಬ ಸದಸ್ಯರಲ್ಲಿ ಪ್ರೀತಿ ಇರಲಿದೆ, ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಬೇಡ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Dina Bhavishya: 20th June 2024 Daily Horoscope Prediction for All 12 Zodiac Signs in Kannada

Explore Dina Bhavishya (ದಿನ ಭವಿಷ್ಯ) /Daily Horoscope Prediction For Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, And Pisces In Kannada
Story first published: Wednesday, June 19, 2024, 20:22 [IST]
X
Desktop Bottom Promotion