Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ದಿನ ಭವಿಷ್ಯ: ಮೇ 1, ತಿಂಗಳ ಮೊದಲ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
ವೈದಿಕ ಶಾಸ್ತ್ರದ ಪ್ರಕಾರ ಮೇ 1, ತಿಂಗಳ ಮೊದಲ ದಿನ ನಿಮಗೆ ಹೇಗಿರಲಿದೆ ಎಂದು ನೋಡೋಣ.
ಮೇಷ ರಾಶಿ
ಮನೆಯ ವಾತಾವರಣ ಅಷ್ಟು ಚೆನ್ನಾಗಿರಲ್ಲ, ಮನೆಯ ವಾತಾವರಣ ಸುಧಾರಿಸಲು ನೀವು ತುಂಬಾ ಬುದ್ಧಿವಂತಿಕೆಯಿಂದ ವರ್ತಿಸಬೇಕು. ವ್ಯಾಪಾರಿಗಳು ಈ ದಿನ ಯಾವುದೇ ರಿಸ್ಕ್ ತೆಗದುಕೊಳ್ಳಬೇಡಿ, ಇಲ್ಲದಿದ್ದರೆ ನಷ್ಟ ಉಂಟಾಗಬಹುದು. ಕೆಲಸದ ಕಡೆಗೆ ಅಧಿಕ ಗಮನಹರಿಸಬೇಕು. ಇಂದು ನೀವು ಹಣದ ಸಮಸ್ಯೆ ತಡೆಗಟ್ಟಲು ಪ್ರಮುಖ ನಿರ್ಧಾರ ತೆಗೆದುಕೊಳ್ಳುತ್ತೀರಿ.

ವೃಷಭ ರಾಶಿ
ಕೆಲಸದ ಒತ್ತಡ ಅಧಿಕವಿರಲಿದೆ, ಈ ದಿನ ಮಾನಸಿಕ ಒತ್ತಡ ತುಂಬಾ ಚೆನ್ನಾಗಿರಲಿದೆ. ವ್ಯಾಪಾರಿಗಳು ಈ ದಿನ ಮಾಡುವ ಪ್ರಯಾಣ ತುಂಬಾನೇ ಮುಖ್ಯವಾಗಿರಲಿದೆ. ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಇನ್ನು ನಿಮಗೆ ಬರಬೇಕಾಗಿದ್ದ ಹಣ ಕೈ ಸೇರಲಿದೆ.
ಮಿಥುನ ರಾಶಿ
ಕೌಟುಂಬಿಕ ಜೀವನ ಚೆನ್ನಾಗಿರಲಿದೆ, ಉದ್ಯೋಗಿಗಳಿಗೆ ಈ ದಿನ ಶುಭ ಸುದ್ದಿ ಸಿಗಲಿದೆ. ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿರಲಿದೆ. ವ್ಯಾಪಾರಿಗಳಿಗೆ ಧನ ಲಾಭವಿರಲಿದೆ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ, ಒಟ್ಟಿನಲ್ಲಿ ಈ ದಿನ ನಿಮಗೆ ಶುಭವಾಗಿರಲಿ.
ಕರ್ಕ ರಾಶಿ
ವ್ಯಾಪಾರಿಗಳು ಈ ದಿನ ಯಾವುದೇ ಸಾಲ ತೆಗೆದುಕೊಳ್ಳದಿದ್ದರೆ ಒಳ್ಳೆಯದು. ಉದ್ಯೋಗಿಗಳು ಕೆಲಸದಲ್ಲಿ ಏನಾದರೂ ಸಮಸ್ಯೆ ಎದುರಿಸುತ್ತಿದ್ದರೆ ನಿಮ್ಮ ಮೇಲಾಧಿಕಾರಿಗಳ ಸಲಹೆ ಪಡೆಯಿರಿ. ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ಉದ್ಯೋಗವನ್ನು ಹುಡುಕುತ್ತಿದ್ದರೆ ಪ್ರಯತ್ನ ಮುಂದುವರೆಸಿ. ಹಣದಲ್ಲಿ ಈ ದಿನ ಮಿಶ್ರಫಲ. ನಿಮ್ಮ ಆದಾಯವು ಉತ್ತಮವಾಗಿರಲಿದೆ. ಖರ್ಚು ಕೂಡ ಹೆಚ್ಚಿರಲಿದೆ, ಆರೋಗ್ಯ ಕೂಡ ಚೆನ್ನಾಗಿರಲಿದೆ.
ಸಿಂಹ ರಾಶಿ
ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿದೆ, ಹಣದಲ್ಲಿಯೂ ಉತ್ತಮ ಬೆಳವಣಿಗೆಯಾಗಲಿದೆ, ಹೀಗಾಗಿ ಶೀಘ್ರದಲ್ಲೇ ನಿಮ್ಮ ಎಲ್ಲಾ ಕನಸುಗಳು ನನಸಾಗುತ್ತವೆ. ಇನ್ನು ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಶೀಘ್ರವೇ ಒಳ್ಳೆಯ ಅವಕಾಶ ಸಿಗಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ. ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ.
ಕನ್ಯಾ ರಾಶಿ
ಕಚೇರಿಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ಆದರೆ ನಿಮ್ಮ ಹಿಂದೆ ಕೆಲವರು ಪಿತೂರಿ ಮಾಡಬಹುದು, ಆ ಬಗ್ಗೆ ಜಾಗ್ರತೆ. ವ್ಯಾಪಾರಿಗಳಿಗೆ ಈ ದಿನ ಧನಲಾಭವಾಗಲಿದೆ. ಕಾನೂನುಬಾಹಿರ ಕೆಲಸ ಮಾಡದಂತೆ ಸಲಹೆ ನೀಡಲಾಗುವುದು. ತಂಗಳು ಆಹಾರ ಸೇವಿಸಬೇಡಿ.
ತುಲಾ ರಾಶಿ
ಕೆಲಸದಲ್ಲಿ ನೀವು ಉತ್ತಮ ಫಲಿತಾಂಶ ಪಡೆಯುತ್ತೀರಿ. ವ್ಯಾಪಾರಿಗಳಿಗೂ ಈ ದಿನ ಶುಭವಾಗಿದೆ. ಇಂದು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮನೆಯವರ ಸಲಹೆ ಪಡೆಯಿರಿ. ಹಣದಲ್ಲಿ ಈ ದಿನ ಮಿಶ್ರಫಲ. ಖರ್ಚು ಮಿತಿಯಲ್ಲಿ ಮಾಡಿ, ಆರೋಗ್ಯ ಚೆನ್ನಾಗಿರಲಿದೆ.
ವೃಶ್ಚಿಕ ರಾಶಿ
ಇಂದು ನಿಮ್ಮ ವಸ್ತುಗಳು ಕಳುವಾಗದಂತೆ ಜಾಗ್ರತೆವಹಿಸಬೇಕು. ಇನ್ನು ನಿಮ್ಮ ಮಾತುಗಳಿಂದ ತಮಾಷೆಗೂ ಬೇರೆಯವರನ್ನು ನೋಯಿಸಲು ಹೋಗಬೇಡಿ. ಇನ್ನು ನೀವು ಕೆಲಸವನ್ನು ಪೂರ್ಣಗೊಳಿಸದಿದ್ದರೆ ಮೇಲಾಧಿಕಾರಿಗಳ ಅಸಮಧಾನ ಎದುರಿಸಬೇಕಾಗುವುದು. ವ್ಯಾಪಾರಿಗಳಿಗೆ ಸರಾಸರಿಯಾಗಿರಲಿದೆ. ಆರೋಗ್ಯ ಕೂಡ ಚೆನ್ನಾಗಿರಲಿದೆ
ಧನು ರಾಶಿ
ನೀವು ತುಂಬಾ ಸಮಯದಿಂದ ಉದ್ಯೋಗವನ್ನು ಹುಡುಕುತ್ತಿದ್ದರೆ ಈ ದಿನ ಅದಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿ ಪಡೆಯುತ್ತೀರಿ. ಉದ್ಯಮಿಗಳು ದೊಡ್ಡ ಲಾಭವನ್ನು ಗಳಿಸಬಹುದು. ಹಣದ ವಿಷಯದಲ್ಲಿ ಈ ದಿನ ಚೆನ್ನಾಗಿರಲಿದೆ. ಖರ್ಚು ಕಡಿಮೆ ಇರುವುದರಿಂದ ಆರ್ಥಿಕವಾಗಿ ಒಳ್ಳೆಯದಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ನೀವು ಹಲ್ಲು ಅಥವಾ ಕಿವಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು.
ಮಕರ ರಾಶಿ
ವ್ಯಾಪಾರಿಗಳು ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ಇಂದು ನೀವು ದೊಡ್ಡ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ಉದ್ಯೋಗಿಗಳು ಕೆಲಸದ ಜಾಗದಲ್ಲಿ ಅತಿಯಾದ ಆತ್ಮವಿಶ್ವಾಸ ತೋರಿದರೆ ಮುಜುಗರ ಅನುಭವಿಸಬೇಕಾಗುವುದು. ಆರೋಗ್ಯದ, ಆರ್ಥಿಕ ದೃಷ್ಟಿಯಿಂದ ನಿಮಗೆ ಮಿಶ್ರಫಲ, ಆದ್ದರಿಂದ ಜಾಗ್ರತೆವಹಿಸಿ.
ಕುಂಭ ರಾಶಿ
ಇಂದು ವೈಯಕ್ತಿಕ ಜೀವನದ ಸಮಸ್ಯೆ ಕೆಲಸದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆವಹಿಸಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಬಲವಾದ ಸಾಧ್ಯತೆಯಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ಆರೋಗ್ಯದ ಕಡೆಗೆ ಗಮನಹರಿಸಬೇಕು, ಹಳೆಯ ಕಾಯಿಲೆ ಮರುಕಳಿಸಬಹುದು.
ಮೀನ ರಾಶಿ
ಇಂದು ನೀವು ಹಣದ ವಿಷಯದಲ್ಲಿ ತುಂಬಾ ಅದೃಷ್ಟದ ದಿನ. ವ್ಯಾಪಾರಿಗಳು ನಿರೀಕ್ಷಿತ ಫಲಿತಾಂಶ ಪಡೆಯಬಹುದು. ಇಂದು ನೀವು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ. ಉದ್ಯೋಗಿಗಳು ಕೆಲಸದ ಕಡೆಗೆ ಗಮನ ಹರಿಸದಿದ್ದರೆ ಯಾವುದೇ ಜವಾಬ್ದಾರಿಯನ್ನು ನಿಮ್ಮಿಂದ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಒತ್ತಡದಿಂದ ಕೂಡಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications