Dhanu Sankranti 2023: ಡಿ.16ಕ್ಕೆ ಧನು ಸಂಕ್ರಾಂತಿ: ದ್ವಾದಶಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?

ಡಿಸೆಂಬರ್ 16ಕ್ಕೆ ಸೂರ್ಯ ಧನು ರಾಶಿಗೆ ಸಂಚಾರಿಸಲಿದೆ. ಈ ಸಂಚಾರ ದ್ವಾದಶಗಳ ಮೇಲೆ ಪ್ರಭಾವ ಬೀರಲಿದ್ದು ಈ ಅವಧಿ ಯಾವ ರಾಶಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯವರಲ್ಲಿ ಸೂರ್ಯ 9ನೇ ಮನೆಯಲ್ಲಿ ಇರಲಿದೆ. ಈ ಸಂಚಾರ ವಿದ್ಯಾರ್ಥಿಗಳಿಗೆ ತುಂಬಾ ಉತ್ತಮವಾಗಿದೆ. ಅದೇ ಸಮಯದಲ್ಲಿ, ವಿದ್ಯಾರ್ಥಿಗಳು ಯಾವುದೇ ರೀತಿಯ ಗೊಂದಲದಲ್ಲಿದ್ದರೆ ಅಥವಾ ಯಾವುದೇ ಗೊಂದಲವನ್ನು ಎದುರಿಸುತ್ತಿದ್ದರೆ ನಿಮ್ಮ ಗುರುವಿನ ಮಾರ್ಗದರ್ಶನದಿಂದ ನಿಮ್ಮ ಸಮಸ್ಯೆ ಬಗೆಹರಿಯಲಿದೆ. ಪ್ರೀತಿ, ವೈವಾಹಿಕ ಜೀವನ ಚೆನ್ನಾಗಿರಲಿದೆ. ರಾಜಕಾರಣಿಗಳಿಗೆ ಈ ಸಮಯ ಉತ್ತಮವಾಗಿದೆ. ಸೂರ್ಯನು ಧನು ರಾಶಿಗೆ ಪ್ರವೇಶಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ.
ಪರಿಹಾರ: ಯಾವುದೇ ಕೆಲಸ ಮಾಡುವ ಮುನ್ನ ಹಿರಿಯರ ಸಲಹೆ ಪಡೆಯಿರಿ.

Dhanu Sankranti 2023

ವೃಷಭ ರಾಶಿ
ವೃಷಭ ರಾಶಿಯವಲ್ಲಿ ಸೂರ್ಯ 8ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗಿದೆ, ಈ ಅವಧಿಯಲ್ಲಿ ತಾಯಿಯ ಆರೋಗ್ಯದ ಕಡೆಗೆ ಗಮನಹರಿಸಬೇಕಾಗಿದೆ. ನೀವು ವಾಹನ ಖರೀದಿಸಲು ಬಯಸುತ್ತಿದ್ದರೆ ಸೂರ್ಯ ಮಕರ ರಾಶಿಗೆ ಬರುವವರೆಗೆ ಕಾಯುವುದು ಒಳ್ಳೆಯದು. ಸೂರ್ಯನ ಸಂಚಾರ ನಿಮಗೆ ಫಲಪ್ರದವಾಗಿದೆ. ಈ ಅವಧಿಯಲ್ಲಿ ಮನೆಯ ವಾತಾವರಣ ಅಷ್ಟು ಚೆನ್ನಾಗಿರುವುದಿಲ್ಲ, ಆದರೆ ಈ ಅವಧಿಯಲ್ಲಿ ಆದಾಯ ಚೆನ್ನಾಗಿರಲಿದೆ.
ಪರಿಹಾರ: ಪ್ರತಿದಿನ ಆದಿತ್ಯ ಹೃದಯಂ ಸ್ತೋತ್ರವನ್ನು ಪಠಿಸಿ.

ಮಿಥುನ ರಾಶಿ
ಮಿಥುನ ರಾಶಿಯವರಲ್ಲಿ ಸೂರ್ಯ 7ನೇ ಮನೆಯಲ್ಲಿ ಇರಲಿದೆ. ಈ ಅವಧಿ ವೈವಾಹಿಕ ಜೀವನಕ್ಕೆ ಒಳ್ಳೆಯದಲ್ಲ. ಈ ಸಂಚಾರದ ಸಮಯದಲ್ಲಿ, ನಿಮ್ಮ ಸಂಬಂಧದಲ್ಲಿ ಇಬ್ಬರೂ ಏರಿಳಿತಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸುವಲ್ಲಿ ನೀವು ಯಶಸ್ವಿಯಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ಆರೋಗ್ಯ ಕೂಡ ಚೆನ್ನಾಗಿರಲಿದೆ.
ಪರಿಹಾರ: ಸೂರ್ಯ ಮಂತ್ರ ಪಠಿಸಿ

ಕರ್ಕ ರಾಶಿ
ಕರ್ಕ ರಾಶಿಯಲ್ಲಿ ಸೂರ್ಯ 6ನೇ ಮನೆಯಲ್ಲಿ ಇರಲಿದೆ. ಧನು ರಾಶಿಯಲ್ಲಿ ಸೂರ್ಯನ ಸಂಚಾರವು ನಿಮಗೆ ಅನುಕೂಲಕರವಾಗಿರುವುದಿಲ್ಲ. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಲೇಬೇಡಿ. ಸರ್ಕಾರಿ ಉದ್ಯೋಗಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಕರ್ಕ ರಾಶಿಯ ವಿದ್ಯಾರ್ಥಿಗಳಿಗೆ ಈ ಸಮಯವು ಉತ್ತಮವಾಗಿರುತ್ತದೆ. ಹಣ, ಆಸ್ತಿ, ಪೂರ್ವಜರ ಆಸ್ತಿಗೆ ಸಂಬಂಧಿಸಿದ ವಿವಾದಗಳು ನಿಮ್ಮನ್ನು ಕಾನೂನು ವಿಷಯಗಳಲ್ಲಿ ನಿಮ್ಮನ್ನು ಸಿಕ್ಕಿಹಾಕಿಕೊಳ್ಳಬಹುದು ಜಾಗ್ರತೆವಹಿಸಿ.
MNC, ವಿದೇಶಿ ಕಂಪನಿಗಳು , ಸರ್ಕಾರಿ ಉದ್ಯೋಗಗಳಲ್ಲಿ ಕೆಲಸ ಮಾಡುವ ಕರ್ಕ ರಾಶಿಯವರಿಗೆ ಈ ಸಮಚಾರವು ಉತ್ತಮವೆಂದು ಪರಿಗಣಿಸಲಾಗುವುದು.
ಪರಿಹಾರ: ಉತ್ತಮ ಆರೋಗ್ಯವನ್ನು ಸಾಧಿಸಲು ನಿಯಮಿತವಾಗಿ ಶುಂಠಿ ಮತ್ತು ಬೆಲ್ಲವನ್ನು ಸೇವಿಸಿ.

ಸಿಂಹ ರಾಶಿ
ಸಿಂಹ ರಾಶಿಯವರಲ್ಲಿ ಸೂರ್ಯ 5ನೇ ಮನೆಯಲ್ಲಿ ಇರಲಿದೆ. ವಿದ್ಯಾರ್ಥಿಗಳಿಗೆ ಸೂರ್ಯನ ಸಂಚಾರವು ಉತ್ತಮವಾಗಿರುತ್ತದೆ. ಸೂರ್ಯನ ಸಂಚಾರವು ಪ್ರೇಮಿಗಳಿಗೆ ಅನುಕೂಲಕರವಲ್ಲ. ಧನು ರಾಶಿಯಲ್ಲಿ ಸೂರ್ಯನ ಸಂಕ್ರಮಣದ ಸಮಯದಲ್ಲಿ, ಕಳೆದ ವರ್ಷಗಳಲ್ಲಿ ಮಾಡಿದ ನಿಮ್ಮ ಕಾರ್ಯಗಳ ಸಕಾರಾತ್ಮಕ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಷೇರು ಮಾರುಕಟ್ಟೆಯಲ್ಲಿ ತೊಡಗಿರುವವರು ಉತ್ತಮ ಲಾಭವನ್ನು ಪಡೆಯಬಹುದು. ಹಣಕ್ಕೆ ಸಂಬಂಧಿಸಿದಂತೆ ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
ಪರಿಹಾರ: ಪ್ರತಿದಿನ ಸೂರ್ಯ ನಮಸ್ಕಾರ ಮಾಡಿ.

ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ ಸೂರ್ಯ 4ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನೀವು ಹೊಸ ಮನೆ ಅಥವಾ ಹೊಸ ವಾಹನವನ್ನು ಖರೀದಿಸುವ ಸೂಚನೆಯಿದೆ, ತಾಯಿಯ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ. ವೃತ್ತಿ ಜೀವನ ಸಾಧಾರಣವಾಗಿರಲಿದೆ. ವಿದೇಶ ಕಂಪನಿಗಳಲ್ಲಿ ಕೆಲಸ ಮಾಡುವವರು ಈ ಅವಧಿಯಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ವಿದೇಶ ಪ್ರಯಾಣಕ್ಕೆ ಈ ಅವಧಿ ಅನುಕೂಲಕರವಾಗಿದೆ.
ಪರಿಹಾರ: ಪ್ರತಿದಿನ ಸೂರ್ಯನಮಸ್ಕಾರ ಮಾಡಿ.

ತುಲಾ ರಾಶಿ
ತುಲಾ ರಾಶಿಯವರಲ್ಲಿ ಸೂರ್ಯ 3ನೇ ಮನೆಯಲ್ಲಿ ಇರಲಿದೆ. ಧನು ರಾಶಿಯಲ್ಲಿ ಸೂರ್ಯನ ಸಂಚಾರವು ಫಲಪ್ರದವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. . ಮಾರ್ಕೆಟಿಂಗ್, ಸಾಮಾಜಿಕ ಮಾಧ್ಯಮ ಅಥವಾ ಸಮಾಲೋಚನೆ ಇತ್ಯಾದಿಗಳಿಗೆ ಸಂಬಂಧಿಸಿದವರಿಗೆ ಸೂರ್ಯನ ಸಂಕ್ರಮಣವು ತುಂಬಾ ಪ್ರಯೋಜನಕಾರಿಯಾಗಿದೆ. ನೀವು ವೃತ್ತಿಪರ ಜೀವನದಲ್ಲಿ ಪ್ರಗತಿಯನ್ನು ಸಾಧಿಸುವಿರಿ. ದೂರ ಪ್ರಯಾಣಕ್ಕೆ ಈ ಅವಧಿ ಅನುಕೂಲಕರವಾಗಿದೆ.
ಪರಿಹಾರ: ಪ್ರತಿದಿನ ಬೆಳಿಗ್ಗೆ ಸೂರ್ಯ ದೇವರಿಗೆ ಕೆಂಪು ಗುಲಾಬಿ ದಳಗಳನ್ನು ಬೆರೆಸಿದ ನೀರನ್ನು ಅರ್ಪಿಸಿ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ ಸೂರ್ಯ 2ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನಿಮ್ಮ ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಚೆನ್ನಾಗಿರಲಿದೆ. ಈ ಅವಧಿ ಆರ್ಥಿಕವಾಗಿ ಒಳ್ಳೆಯದಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಧನು ರಾಶಿಯಲ್ಲಿ ಸೂರ್ಯನ ಸಂಕ್ರಮಣದ ಅವಧಿಯಲ್ಲಿ, ನಿಮ್ಮ ಕೋಪವನ್ನು ಕಳೆದುಕೊಳ್ಳಬೇಡಿ , ಯಾವುದೇ ವಿವಾದದಲ್ಲಿ ಭಾಗಿಯಾಗದಂತೆ ಎಚ್ಚರವಹಿಸಿ.
ಪರಿಹಾರ: ಹನುಮಂತನಿಗೆ ಕೆಂಪು ಬಣ್ಣದ ಹೂಗಳನ್ನು ಅರ್ಪಿಸಿ.

ಧನು ರಾಶಿ
ಧನು ರಾಶಿಯವರಲ್ಲಿ ಸೂರ್ಯ 1ನೇ ಮನೆಯಲ್ಲಿ ಇರಲಿದೆ. ಈ ಸಂಚಾರವು ಧನು ರಾಶಿಯವರಿಗೆ ಅನುಕೂಲಕರವಾಗಿರುತ್ತದೆ ಏಕೆಂದರೆ ಅದು ನಿಮ್ಮ ಜೀವನದಲ್ಲಿ ಅದೃಷ್ಟವನ್ನು ತರುತ್ತದೆ. ನೀವು ರಾಜಕಾರಣಿಯಾಗಿ, ಮಾರ್ಗದರ್ಶಕರಾಗಿ, ಧಾರ್ಮಿಕ ಗುರುಗಳಾಗಿ, ಶಿಕ್ಷಕರಾಗಿ, ಪ್ರಾಧ್ಯಾಪಕರಾಗಿ ಅಥವಾ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರೆ, ಸೂರ್ಯನ ಸಂಚಾರದ ಸಮಯದಲ್ಲಿ ನಿಮ್ಮ ವೃತ್ತಿಪರ ಜೀವನವು ಪ್ರಗತಿಯ ಹಾದಿಯಲ್ಲಿ ಸಾಗುತ್ತದೆ. ನಿಮ್ಮ ಕೋಪ ಮತ್ತು ಅಹಂಕಾರಕ್ಕೆ ಕಡಿವಾಣ ಹಾಕಿದರೆ ಒಳ್ಳೆಯದು. ವಿವಾಹವಾಗಲು ಸಂಬಂಧ ಹುಡುಕುತ್ತಿದ್ದರೆ ಈ ಅವಧಿಯಲ್ಲಿ ಕೂಡಿ ಬರಲಿದೆ.
ಪರಿಹಾರ: ನಿಮ್ಮ ಜೇಬಿನಲ್ಲಿ ಯಾವಾಗಲೂ ಕೆಂಪು ಕರವಸ್ತ್ರ ಇಟ್ಟುಕೊಳ್ಳಿ.

ಮಕರ ರಾಶಿ
ಮಕರ ರಾಶಿಯಲ್ಲಿ ಸೂರ್ಯ 12ನೇ ಮನೆಯಲ್ಲಿ ಇರಲಿದೆ. ಧನು ರಾಶಿಯಲ್ಲಿ ಸೂರ್ಯನ ಸಂಕ್ರಮಣದ ಸಮಯದಲ್ಲಿ, ಎಂಟನೇ ಮನೆಯ ಅಧಿಪತಿಯಾಗಿ ಸೂರ್ಯನು ಹನ್ನೆರಡನೇ ಮನೆಗೆ ಪ್ರವೇಶಿಸಿ ವಿಪರೀತ ರಾಜಯೋಗವನ್ನು ಸೃಷ್ಟಿಸುತ್ತಾನೆ. ಇದರಿಂದಾಗಿ ಈ ಅವಧಿ ನಿಮಗೆ ತುಂಬಾ ಪ್ರಯೋಜನಕಾರಿಯಾಗಿರಲಿದೆ. ನಿಮ್ಮ ಪರವಾಗಿ ಪರಿಸ್ಥಿತಿಗಳನ್ನು ತಿರುಗಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಈ ಅವಧಿಯಲ್ಲಿ ಆರೋಗ್ಯದ ಕಡೆಗೆ ಗಮನಹರಿಸಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಅವಧಿ ಅನುಕೂಲಕರವಾಗಿದೆ.
ಪರಿಹಾರ: ಭಾನುವಾರದಂದು ದೇವಸ್ಥಾನದಲ್ಲಿ ದಾಳಿಂಬೆಯನ್ನು ದಾನ ಮಾಡಿ.

ಕುಂಭ ರಾಶಿ
ಕುಂಭ ರಾಶಿಯವರಲ್ಲಿ ಸೂರ್ಯ 11ನೇ ಮನೆಯಲ್ಲಿ ಇರಲಿದೆ. ಈ ಅವಧಿ ಆರ್ಥಿಕವಾಗಿ ಒಳ್ಳೆಯದು. ಆದರೆ ನಿಮ್ಮ ಸೌಕರ್ಯಕ್ಕಾಗಿ ಹಣ ಹೆಚ್ಚು ಖರ್ಚು ಮಾಡುತ್ತೀರಿ. ಹನ್ನೊಂದನೇ ಮನೆಯಲ್ಲಿ ಇರುವ ಸೂರ್ಯ ಇರುವುದರಿಂದ ವಿದ್ಯಾರ್ಥಿಗಳಿಗೆ ಈ ಅವಧಿಯು ಫಲಪ್ರದವಾಗಿದೆ. ಪೋಷಕರು ಮಕ್ಕಳ ಪ್ರಗತಿ ನೋಡಿ ಖುಷಿ ಪಡುತ್ತೀರಿ, ಆದರೆ, ಧನು ರಾಶಿಯಲ್ಲಿ ಸೂರ್ಯನ ಸಂಚಾರವು ನಿಮ್ಮ ಪ್ರೇಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು, ತಾಳ್ಮೆಯಿಂದ ಪರಿಸ್ಥಿತಿಯನ್ನು ತಿಳಿಗೊಳಿಸಿ.
ಪರಿಹಾರ: ಗಾಯತ್ರಿ ಮಂತ್ರವನ್ನು ಪಠಿಸಿ.

ಮೀನ ರಾಶಿ
ಮೀನ ರಾಶಿಯವರಲ್ಲಿ ಸೂರ್ಯ 10ನೇ ಮನೆಯಲ್ಲಿ ಇರಲಿದೆ. ಇದು ಹೆಸರು, ಖ್ಯಾತಿ ಮತ್ತು ವೃತ್ತಿಯ ಮನೆಯಾಗಿದೆ. ಆದ್ದರಿಂದ ಈ ಸಂಚಾರ ವೃತ್ತಿ ಜೀವನದ ದೃಷ್ಟಿಯಿಂದ ನಿಮಗೆ ಒಳ್ಳೆಯದಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಹೊಸ ವಾಹನವನ್ನು ಖರೀದಿಸಲು ಯೋಜಿಸುವವರಿಗೆ ಈ ಸಮಯವು ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ಆರೋಗ್ಯದ ಬಗ್ಗೆಯೂ ಜಾಗರೂಕರಾಗಿರಬೇಕು. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ತಾಳ್ಮೆಯಿಂದ ಬಗೆಹರಿಸಿ.
ಪರಿಹಾರ: ಪ್ರತಿದಿನ ತಾಮ್ರದ ಪಾತ್ರೆಯಲ್ಲಿ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Dhanu Sankranti 2023: Sun Transit in Sagittarius on 16 December 2023 Effects on 12 Zodiac Signs

Dhanu Sankranti 2023: Surya Rashi Parivartan 2023 In Dhanu Rashi ; Sun Transit in December Effects on 12 zodiac signs: The Sun Transit in Dhanu will take place on 16 December 2023. Learn about remedies to perform in Kannada
Story first published: Wednesday, December 13, 2023, 11:58 [IST]
X
Desktop Bottom Promotion