Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶುಕ್ರನಿಂದಾಗಿ ಧನಶಕ್ತಿ ಯೋಗ: ಮೂರು ರಾಶಿಯವರಿಗೆ ಹಣದ ಹರಿವು..!
ಜ್ಯೋತಿಷ್ಯದಲ್ಲಿ ಶುಕ್ರನನ್ನು ಸೌಂದರ್ಯ, ಐಷಾರಾಮಿ, ಪ್ರೀತಿ ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಶುಕ್ರನ ಆಶೀರ್ವಾದ ಪಡೆದರೆ ಆ ರಾಶಿಯವರು ಇನ್ನಿಲ್ಲಭ ಲಾಭ ಪಡೆಯುತ್ತಾರೆ ಎಂದು ನಂಬಲಾಗಿದೆ. ತುಲಾ ಹಾಗೂ ವೃಷಭ ರಾಶಿಯ ಅಧಿಪತಿಯಾಗಿರುವ ಶುಕ್ರನು 26 ದಿನಗಳ ಕಾಲ ಒಂದೇ ರಾಶಿಯಲ್ಲಿ ಚಲಿಸುತ್ತಾನೆ. ವೇಗವಾಗಿ ಚಲಿಸುವ ಗ್ರಹ ಆಗಿರುವುದರಿಂದ ಒಂದು ವರ್ಷದಲ್ಲಿ ಎಲ್ಲಾ ರಾಶಿಗಳಲ್ಲೂ ಶುಕ್ರನ ಸಂಚಾರ ನೋಡಬಹುದು.
ಪ್ರಸ್ತುತ ಶುಕ್ರನು ಮೇಷ ರಾಶಿಯಲ್ಲಿ ಚಲಿಸುತ್ತಿದ್ದಾನೆ. ಆದರೆ ಇದೇ ಜೂನ್ 29ರಂದು ತನ್ನ ರಾಶಿ ಬದಲಾಯಿಸುತ್ತಿದ್ದಾನೆ. ಮೇಷವು ಮಂಗಳನ ಅಧಿಪತ್ಯದಲ್ಲಿದ್ದರೂ ಈ ಸಮಯದಲ್ಲಿ ಮಂಗಳನು ಸಿಂಹ ರಾಶಿಯಲ್ಲಿ ಚಲಿಸುತ್ತಿದ್ದಾನೆ. ಈಗ ಶುಕ್ರ ಮೇಷ ಮಂಗಳನ ಮೇಷ ರಾಶಿಗೆ ಚಲಿಸುವುದು ಎರಡೂ ಗ್ರಹಗಳ ನಡುವಿನ ಯೋಗಗಳಿಗೆ ಕಾರಣವಾಗುತ್ತಿದೆ.

ಶುಕ್ರನು ಮಂಗಳನ ಮೇಷ ರಾಶಿಯಲ್ಲಿ ಪ್ರಯಾಣಿಸುತ್ತಿದ್ದಾನೆ. ಅದೇ ಸಮಯದಲ್ಲಿ ಮಂಗಳನು ಸಿಂಹ ರಾಶಿಯಲ್ಲಿದ್ದಾನೆ. ಇದರಿಂದಾಗಿ ಎರಡು ಗ್ರಹಗಳ ಸ್ಥಾನಗಳು ಧನಶಕ್ತಿ ರಾಜ ಯೋಗವನ್ನು ರೂಪಿಸಲಿದೆ. ಈ ಯೋಗವು ಹಲವು ರೀತಿಯ ಲಾಭಗಳಿಗೆ ಕಾರಣವಾಗುತ್ತಿದೆ. ಹಾಗಾದ್ರೆ ಯಾವೆಲ್ಲಾ ರಾಶಿಗಳಲ್ಲಿ ಶುಭಕರ ಯೋಗ ನೋಡಬಹುದು.
ಕರ್ಕ ರಾಶಿ
ಧನಶಕ್ತಿ ರಾಜಯೋಗವು ಕರ್ಕ ರಾಶಿಯ ಜನರಿಗೆ ಪ್ರತಿಯೊಂದು ಕೆಲಸದಲ್ಲಿ ಲಾಭ ತರಲು ಕಾರಣವಾಗಲಿದೆ. ಹಾಗೆ ನಿಮ್ಮ ಕಷ್ಟದ ಕೆಲಸಗಳಲ್ಲಿ ಧನಾತ್ಮಕ ಪ್ರಭಾವ ಉಂಟು ಮಾಡಲಿದೆ. ಮಂಗಳನಿಂದ ನಿಮಗೆ ಶ್ರಮದಾಯಕ ಕಲಸಗಳಲ್ಲಿ ಉತ್ತಮ ಫಲಿತಾಂಶ ನೀಡಬಹುದು, ಹಾಗೆ ಶುಕ್ರನಿಂದಾಗಿ ಆರ್ಥಿಕ ಲಾಭವನ್ನು ಪಡೆಯಬಹುದಾಗಿದೆ. ನಿಮ್ಮಲ್ಲಿ ಹೊಸ ಆದಾಯ ಮೂಲಗಳು ತೆರೆದುಕೊಳ್ಳಲಿದೆ. ಔದ್ಯೋಗಿಕ ಲಾಭಗಳು ಹೆಚ್ಚಾಗಬಹುದು. ನಿಮ್ಮ ಹೊಸ ವ್ಯವಹಾರಗಳು ಲಾಭದಾಯಕ ರೀತಿಯಾಗಿ ಪರಿಣಮಿಸಬಹುದು. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆ ಈಡೇರಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ.
ಮಿಥುನ ರಾಶಿ
ಮಿಥುನ ರಾಶಿಯ ಮಂದಿ ಈ ಸಮಯದಲ್ಲಿ ಬಹಳ ಲಾಭ ನೋಡುತ್ತೀರಿ. ಧನಶಕ್ತಿ ರಾಜಯೋಗವು ತುಂಬಾ ಅದೃಷ್ಟಶಾಲಿಯಾಗಿರುತ್ತದೆ. ಮಂಗಳ ಮೂರನೇ ಮನೆಯಲ್ಲಿ ಮತ್ತು ಶುಕ್ರ 11ನೇ ಮನೆಯಲ್ಲಿ ಇರುವುದರಿಂದ ಈ ರಾಶಿಯವರಿಗೆ ಅವರ ಕಠಿಣ ಪರಿಶ್ರಮದ ಫಲ ಅನುಭವಿಸಬಹುದು. ದೀರ್ಘಕಾಲದ ನಿಮ್ಮ ಬಯಕೆಯೊಂದು ಈಡೇರಲಿದೆ. ಬಹಳ ಸಮಯದಿಂದ ನೀವು ಮುಖ್ಯ ಕೆಲಸವೊಂದರ ಪರಿಣಾಮವಾಗಿ ಹಣಕಾಸು ಸಮಸ್ಯೆ ಎದುರಿಸಿದ್ದರೆ ಅದು ನಿವಾರಣೆಯಾಗಲಿದೆ. ಕೌಟುಂಬಿಕ ವಿಚಾರವಾಗಿ ನಿಮಗೆ ಶುಭವಾಗಲಿದೆ. ಅವಿವಾಹಿತರಿಗೆ ಈ ಸಮಯ ಬಹಳ ಶುಭವಾಗಲಿದೆ.
ವೃಶ್ಚಿಕ ರಾಶಿ
ಧನಶಕ್ತಿ ರಾಜ ಯೋಗವು ವೃಶ್ಚಿಕ ರಾಶಿಯವರಿಗೆ ಅದೃಷ್ಟದ ಅವಧಿ ಎನ್ನಬಹುದು. ನೀವು ಐಷಾರಾಮಿ ವಸ್ತುಗಳ ಖರೀದಿಸಿಲು ಇದು ಉತ್ತಮ ಸಮಯ ಆಗಿರಲಿದೆ. ಉದ್ಯಮಿಗಳು ಬಹಳ ಲಾಭ ನೋಡುವ ಸಮಯವಿದು. ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭಗಳ ನೋಡಬಹುದು. ರಿಯಲ್ ಎಸ್ಟೇಟ್, ಆಸ್ತಿ ಖರೀದಿ, ಮನೆ ನಿರ್ಮಾಣ, ವಾಹನ ಖರೀದಿ, ನಿವೇಶನ ಖರೀದಿ ಹೀಗೆ ಹಲವು ವಿಚಾರಗಳಲ್ಲಿ ನಿಮಗೆ ಲಾಭವಾಗುವ ಸಾಧ್ಯತೆ ಇದೆ. ನಿಮ್ಮ ಸಾಲಗಳು ಮುಗಿಯುವ ಹಂತ ತಲುಪಲಿವೆ. ನೀವು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರೆ ಈ ಸಮಯದಲ್ಲಿ ಸುಧಾರಣೆ ನೋಡುವಿರಿ, ಹಾಗೆ ಅದರಿಂದ ನಿಮ್ಮ ಕೆಲಸಗಳಿಗೆ ಆಗುತ್ತಿದ್ದ ಅಡ್ಡಿ ಆತಂಕ ದೂರಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
