Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2025ರ ಮೊದಲ ದಿನವೇ ಮಂಗಳ-ಚಂದ್ರನಿಂದ ಧನ ಯೋಗ: ಈ ರಾಶಿಯ ಅದೃಷ್ಟ ಬದಲು!!
ಹೊಸ ವರ್ಷವನ್ನು ಸ್ವಾಗತಿಸಲು ದಿನಗಣನೆ ಆರಂಭವಾಗಿದೆ. ಕೆಲ ದಿನದಲ್ಲಿ 2025ಕ್ಕೆ ನಾವು ಕಾಲಿಡಲಿದ್ದೇವೆ. ಈ ವರ್ಷ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಹಳ ಮಹತ್ವ ಪಡೆದುಕೊಂಡಿದೆ. ಹಲವು ಗ್ರಹಗಳು ತಮ್ಮ ಚಲನೆಯನ್ನು ಬದಲಿಸುತ್ತಿವೆ. ಹಾಗೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುತ್ತಿವೆ. ಇದರಿಂದ ಹಲವು ಯೋಗಗಳನ್ನು ನಾವು ಈ ವರ್ಷದಲ್ಲಿ ನೋಡಬಹುದಾಗಿದೆ.
ಜನವರಿ 01, 2025 ರಂದು ಚಂದ್ರನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಚಂದ್ರನು ಮಕರ ರಾಶಿಯಲ್ಲಿದ್ದಾಗ ಗ್ರಹಗಳ ಅಧಿಪತಿ ಮಂಗಳನು ಈ ರಾಶಿಯ 7 ನೇ ಮನೆಯಲ್ಲಿರುತ್ತಾನೆ. ಹೀಗೆ ಮಂಗಳಕರವಾದ ಧನಯೋಗವು ರೂಪುಗೊಳ್ಳುತ್ತದೆ. ಹೊಸ ವರ್ಷದ ಮೊದಲ ದಿನದಂದು ಈ ಶುಭ ಯೋಗವು ರೂಪುಗೊಳ್ಳುವುದರಿಂದ ಹಲವು ರಾಶಿಗಳಿಗೆ ಇದು ಶುಭವಾಗುತ್ತಿದೆ.

ಈ ಧನಯೋಗದಿಂದ ಹಲವು ರಾಶಿಯವರಲ್ಲಿ ಅಧಿಕ ಲಾಭ ನಾವು ನೋಡಬಹುದು. ಹಾಗಾದ್ರೆ ಯಾವ ರಾಶಿಯವರಲ್ಲಿ ಲಾಭದಾಯಕ ದಿನಗಳ ನಾವು ನೋಡಬಹುದು. ಈ ಮಂಗಳಕರ ಯೋಗ ಯಾರಿಗೆ ಶುಭ ದಿನಗಳನ್ನು ತರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಧನಯೋಗ ಇರುವುದರಿಂದ ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಮತ್ತು ದೀರ್ಘಾವಧಿಯ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಉದ್ಯೋಗಿಗಳು ಕಚೇರಿಯಲ್ಲಿ ಉತ್ತಮ ಪರಿಸರ ಇರಲಿದೆ. ಬಡ್ತಿ, ಪ್ರಶಂಸೆ ಪಡೆಯಲಿದ್ದೀರಿ. ವಿದ್ಯಾರ್ಥಿಗಳಿಗೆ ಇದು ಉತ್ತಮ ದಿನವಾಗಿರಲಿದೆ. ನಿಮ್ಮ ಸಂಗಾತಿಯೊಂದಿಗೆ ಅಥವಾ ಪ್ರೀತಿ ಪಾತ್ರರೊಂದಿಗೆ ಕಳೆಯುವ ಸಮಯವು ನೆನಪಿನಲ್ಲಿ ಉಳಿಯುವಂತೆ ಇರಲಿದೆ. ನಿಮ್ಮ ಹಣಕಾಸು ಪರಿಸ್ಥಿತಿ ಸುಧಾರಿಸಲಿದೆ.
ವೃಶ್ಚಿಕ ರಾಶಿ
2025 ರ ಆರಂಭವು ವೃಶ್ಚಿಕ ರಾಶಿಯವರಿಗೆ ಧನ ಯೋಗದಿಂದ ಉತ್ತಮವಾಗಿರುತ್ತದೆ. ವಿವಾಹಿತರಲ್ಲಿ ಹಣಕಾಸು ಪರಿಸ್ಥಿತಿ ಸುಧಾರಿಸಲಿದೆ. ನಿಮ್ಮ ಜೀವನದ ಬಹುಮುಖ್ಯ ವಿಚಾರಗಳು ನಿಮ್ಮ ಆಲೋಚನೆಯಂತೆ ನಡೆಯಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಉದ್ಯೋಗಿಗಳು ಉನ್ನತಿಗಾಗಿ ಹೊಸ ಅವಕಾಶಗಳ ಪಡೆಯುತ್ತಾರೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಹಠಾತ್ ಆರ್ಥಿಕ ಲಾಭದಿಂದಾಗಿ ಕೆಲವು ಸಮಸ್ಯೆಗಳು ದೂರಾಗಲಿದೆ.
ಧನು ರಾಶಿ
ಹೊಸ ವರ್ಷದ ಆರಂಭವು ಧನು ರಾಶಿಯವರಿಗೆ ಉತ್ತಮ ಫಲಿತಾಂಶ ತರಲಿದೆ. ನಿಮ್ಮ ಬಹುಕಾಲದಿಂದ ಬಾಕಿ ಉಳಿದಿದ್ದ ಹಣಕಾಸು ಸಂಬಂಧಿ ಕೆಲಸಗಳು ಮುಗಿಯುವ ಹಂತ ತಲುಪಲಿದೆ. ಉದ್ಯೋಗಿಗಳಿಗೆ ಹಣ ಲಾಭವಿದೆ. ಬ್ರೋಕರ್, ರಿಯಲ್ ಎಸ್ಟೇಟ್, ಚಿಲ್ಲರೆ ವ್ಯಾಪಾರಿಗಳಿಗೆ ಅತ್ಯುತ್ತಮ ಲಾಭದ ದಿನಗಳಿವೆ. ಕುಟುಂಬದೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ. ದಾಂಪತ್ಯ ಜೀವನ ಮಧುರವಾಗಿರುತ್ತದೆ. ಕೃಷಿಕರು ಹಾಗೂ ಯಂತ್ರೋಪಕರಣ ಮಾರಾಟಗಾರರಲ್ಲಿ ಪ್ರಗತಿ ನೋಡಬಹುದು. ಕುಟುಂಬಸ್ಥರಿಂದ ಸಿಗುವ ಬೆಂಬಲದಿಂದ ಹೊಸ ಪ್ರಗತಿ ನೋಡುವಿರಿ.
ಕುಂಭ ರಾಶಿ
ಈ ಜನವರಿಯಲ್ಲಿ ಲಾಭದಾಯಕ ದಿನಗಳ ನೋಡಲಿದ್ದೀರಿ. ನಿಮ್ಮ ಆರೋಗ್ಯದಿಂದ ಹಿಡಿದು ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸಲಿದೆ. ಸಾಲ ಮರುಪಾವತಿ, ಹೂಡಿಕೆ ಮಾಡಿದ ಹಣದಲ್ಲಿನ ಲಾಭ ಹೆಚ್ಚಾಗಲಿದೆ. ಕೆಲ ಸಮಯದಿಂದ ನೀವು ಮಾಡಬೇಕಿದ್ದ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಮಾಡಿ ಮುಗಿಸಬಹುದಾಗಿದ್ದು, ಅದಕ್ಕಾಗಿ ಹೆಚ್ಚು ಶ್ರಮ ಹಾಕುತ್ತೀರಿ. ಅವಿವಾಹಿತರಿಗೆ ಈ ಸಮಯದಲ್ಲಿ ವಿವಾಹ ಪೂರ್ವ ಆಲೋಚನೆಗಳು ಶುಭಕರವಾಗಿರಲಿದೆ. ನೀವು ವೃತ್ತಿ ಬದಲಿಸುವ ಮನಸ್ಸು ಮಾಡಿದ್ದರೆ ಒಳಿತಾಗುವ ಸಂಭವವಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications