Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
100 ವರ್ಷದ ಬಳಿಕ ದೀಪಾವಳಿಯಲ್ಲಿ ಧನ ರಾಜಯೋಗ: ಶನಿಯಿಂದ ಹಣದ ಹರಿವು!
Dhan Rajyog: ಅಕ್ಟೋಬರ್ ತಿಂಗಳಲ್ಲಿ ಹಲವು ಗ್ರಹಗಳ ಸಂಚಾರ ನೋಡಬಹುದು. ಅದರಲ್ಲೂ ದೀಪಾವಳಿಯ ಸಮಯದಲ್ಲಿ ಉಂಟಾಗುತ್ತಿರುವ ಗ್ರಹಗಳ ಬದಲಾವಣೆಗಳಿಂದ ಹಲವು ರೀತಿಯ ಯೋಗಗಳು ರೂಪುಗೊಳ್ಳುತ್ತಿವೆ. ಅದ್ರಲ್ಲೂ ದೀಪಾವಳಿಯ ಸಮಯದಲ್ಲಿ ಶನಿ ಗ್ರಹದ ಬದಲಾವಣೆಯಿಂದಾಗಿ ಹಲವು ರೀತಿಯ ಶುಭಕರ ಯೋಗ ಉಂಟಾಗುತ್ತಿದೆ.
ವರ್ಷದ ದೀಪಾವಳಿ ಹಬ್ಬವು ಅಕ್ಟೋಬರ್ 20 ರಂದು ಆಚರಿಸಲಾಗುತ್ತದೆ. ಈ ವರ್ಷದ ದೀಪಾವಳಿ ಹಬ್ಬವು ಬಹಳ ವಿಶೇಷ ಎನಿಸಿದೆ. ಏಕೆಂದರೆ ಈ ದೀಪಾವಳಿಯ ದಿನದಂದು ಬಹಳಷ್ಟು ಯೋಗಗಳು ರೂಪುಗೊಳ್ಳುತ್ತವೆ. ಇದಲ್ಲದೆ ಗ್ರಹಗಳಲ್ಲಿ ಪ್ರಮುಖವಾಗಿ ನ್ಯಾಯ, ನೀತಿಯ ದೇವರು ಎಂದು ಕರೆಯಲಾಗುವ ಶನಿ ಈಗ ಮೀನ ರಾಶಿಯಲ್ಲಿದ್ದಾನೆ. ಆತ 2027ರ ವರೆಗೂ ಮೀನ ರಾಶಿಯಲ್ಲಿ ಚಲಿಸಲಿದ್ದಾನೆ.

ಶನಿಯ ಈ ಸ್ಥಾನಪಲ್ಲಟದ ಸಮಯದಲ್ಲಿ ಹಲವು ಗ್ರಹಗಳೊಂದಿಗೆ ಸಂಯೋಗವಾಗುವುದು ನೋಡಬಹುದು. ಹಾಗೆ ದೀಪಾವಳಿಯ ಸಮಯದಲ್ಲಿ ಶನಿಯಿಂದಾಗಿ ಧನ ರಾಜಯೋಗ ಸೃಷ್ಟಿಯಾಗುತ್ತಿದೆ. ಅಚ್ಚರಿ ಏನೆಂದರೆ ದೀಪಾವಳಿಯ ಸಮಯದಲ್ಲಿ ಸುಮಾರು 100 ವರ್ಷದ ಬಳಿಕ ಈ ಯೋಗ ರೂಪುಗೊಳ್ಳುತ್ತಿದೆ.
ಶನಿಯಿಂದ ದೀಪಾವಳಿಯಲ್ಲಿ ರೂಪುಗೊಳ್ಳುತ್ತಿರುವ ಈ ಧನ ರಾಜಯೋಗವು ಮೂರು ರಾಶಿಗಳಿಗೆ ಇನ್ನಿಲ್ಲದ ಲಾಭ ತರಲಿದೆ. ಹಾಗೆ ಎಲ್ಲಾ ರಾಶಿಗಳ ಮೇಲೆಯೂ ಇದರ ಪರಿಣಾಮ ನೋಡಬಹುದು. ನಾವಿಂದು ಶನಿಯ ಈ ಅಪರೂಪದ ಯೋಗದಿಂದ ಯಾರಿಗೆಲ್ಲಾ ಶುಭವಾಗುತ್ತಿದೆ. ಯಾವ ರೀತಿಯಲ್ಲಿ ಶುಭವನ್ನು ತರಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ವೃಷಭ ರಾಶಿ
ಧನ ರಾಜಯೋಗವು ವೃಷಭ ರಾಶಿಯವರಿಗೆ ಅನೇಕ ಬಗೆಯಲ್ಲಿ ಲಾಭ ತರಲಿದೆ. ಶನಿ ದೇವನು ಲಾಭದ ಮನೆಯಲ್ಲಿರುವುದರಿಂದ, ಈ ರಾಶಿ ಜನರ ಆದಾಯದಲ್ಲಿ ಹೆಚ್ಚಳವಾಗುತ್ತದೆ. ಕೆಲಸ ಮಾಡುವವರಿಗೆ ಬಡ್ತಿ ಸಿಗುವ ಸಾಧ್ಯತೆಯಿದೆ. ಅವರಿಗೆ ಪ್ರಭಾವಿ ವ್ಯಕ್ತಿಯ ಬೆಂಬಲ ಸಿಗುತ್ತದೆ. ನೀವು ನಿಮ್ಮ ಪ್ರತಿಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಛಾಗುವ ಸಾಧ್ಯತೆ ಇದೆ. ನಿಮ್ಮ ಹಲವು ಹೂಡಿಕೆಗಳಿಂದ ಲಾಭ ನೋಡಬಹುದು. ಹಾಗೆ ಮಾರುಕಟ್ಟೆ ಸಂಬಂಧಿ ವಿಚಾರವಾಗಿ ನಿಮ್ಮಲ್ಲಿ ಶುಭವಿದೆ. ಹಣಕಾಸಿನ ವಿಚಾರದಲ್ಲಿ ಅದೃಷ್ಟಗಳು ಇರಲಿದೆ. ವೈಯಕ್ತಿಕ ಜೀವನದಲ್ಲಿನ ಸುಖ ಹೆಚ್ಛಾಗಲಿದೆ.
ಮಕರ ರಾಶಿ
ಶನಿಯಿಂದ ಉಂಟಾಗುತ್ತಿರುವ ಧನ ರಾಜಯೋಗವು ಮಕರ ರಾಶಿಯವರಿಗೆ ಧೈರ್ಯ ಮತ್ತು ಸ್ವಾವಲಂಬನೆ ಹೆಚ್ಚಾಗುವ ಸಮಯ ಆಗಿರಲಿದೆ. ನೀವು ಕೆಲಸ ಮತ್ತು ವೃತ್ತಿಯಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತೀರಿ. ಆತ್ಮವಿಶ್ವಾಸದಿಂದ ಕೆಲಸಗಳನ್ನು ಮಾಡುವ ಮೂಲಕ ನೀವು ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಹೊಸ ಮನೆ ಮತ್ತು ವಾಹನ ಖರೀದಿಸಲು ನಿಮಗೆ ಅವಕಾಶಗಳು ಸಿಗುತ್ತವೆ. ನಿಮ್ಮ ಒಡಹುಟ್ಟಿದವರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುವ ಸಾಧ್ಯತೆಯಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಧನ ರಾಜಯೋಗದಿಂದಾಗಿ ಹಣದ ಸುರಿಮಳೆಯಾಗುತ್ತದೆ. ನೀವು ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ, ಜೊತೆಗೆ ಆರ್ಥಿಕ ಲಾಭವನ್ನೂ ಪಡೆಯುತ್ತೀರಿ. ಉದ್ಯೋಗದ ಸ್ಥಳದಲ್ಲಿದ್ದ ಸಮಸ್ಯೆಯೊಂದು ಶಾಶ್ವತವಾಗಿ ಪರಿಹಾರವಾಗಲಿದೆ. ಉದ್ಯಮಿಗಳು, ಸ್ವಂತ ವ್ಯಾಪಾರಿಗಳಿಗೆ ಸಂತೋಷದ ವಿಚಾರಗಳಿವೆ. ತಂದೆಯೊಂದಿಗಿನ ಸಂಬಂಧವು ತುಂಬಾ ಉತ್ತಮವಾಗಿರುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ದಾಂಪತ್ಯ ವಿಚಾರದಲ್ಲಿ ನಿಮ್ಮ ಕನಸುಗಳು ಈಡೇರಬಹುದು. ವಾಹನ ಖರೀದಿಯ ಲಾಭವಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications