Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೀಪಾವಳಿಯಲ್ಲಿ ಶನಿ ಹಿಮ್ಮುಖ ಚಲನೆ: ಈ ರಾಶಿಯವರ ಅದೃಷ್ಟವೇ ಬದಲಾಗಲಿದೆ..!!
ಈ ದೀಪಾವಳಿಯಲ್ಲಿ ಹಲವು ಗ್ರಹಗಳ ಚಲನೆಯಲ್ಲಿ ಬದಲಾವಣೆ ನಾವು ನೋಡಬಹುದು. ಅದರಲ್ಲೂ ಗುರು ಹಾಗೂ ಶನಿಯ ಹಿಮ್ಮುಖ ಚಲನೆಯೂ ಹಲವು ರಾಶಿಯವರಿಗೆ ಲಾಭದಾಯಕವಾವಿದ್ದರೆ ಮತ್ತೆ ಕೆಲವು ರಾಶಿಯವರಿಗೆ ಇದು ಸಂಕಷ್ಟವಾಗಲಿದೆ. ಆದರೆ ಈ ದೀಪಾವಳಿಯಲ್ಲಿ ಶನಿಯ ಹಿಮ್ಮುಖ ಚಲನೆಯೂ ಈ ರಾಶಿಯವರಲ್ಲಿ ಧನಾತ್ಮಕ ಪರಿಣಾಮ ಬೀರಲಿದೆಯಂತೆ.
ಹಾಗಾದ್ರೆ ನಾವಿಂದು ದೀಪಾವಳಿಯಲ್ಲಿ ಶನಿ ಹಿಮ್ಮುಖ ಚಲನೆಯಿಂದ ಯಾವ ರಾಶಿಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ? ಯಾವ ರಾಶಿಯವರಿಗೆ ವಿಶೇಷ ಲಾಭವಾಗಲಿದೆ ಎಂಬುದನ್ನು ನಾವು ತಿಳಿಯೋಣ.

ಸುಮಾರು 30 ವರ್ಷಗಳಿಗೆ ಒಮ್ಮೆ ಶನಿ ಗ್ರಹವು ಕುಂಣ ರಾಶಿಯಲ್ಲಿ ಹಿಮ್ಮುಖ ಚಲನೆಗೆ ಒಳಗಾಗುತ್ತಿದೆ. ನವೆಂಬರ್ ಮಧ್ಯದ ವರೆಗೂ ಶನಿ ಕುಂಭದಲ್ಲಿ ಹಿಮ್ಮುಖ ಚಲನೆಯಲ್ಲಿರಲಿದ್ದಾನೆ. ಹೀಗಾಗಿ ಈ ದೀಪಾವಳಿಯಲ್ಲಿ ಯಾವ ರಾಶಿಯವರಿಗೆ ಶನಿ ಶುಭ ಸಂಕೇತವಾಗಲಿದ್ದಾನೆ ಎಂಬುದನ್ನು ತಿಳಿಯುವುದು ಮುಖ್ಯವಾಗಿದೆ.
ಮೇಷ ರಾಶಿ
ದೀಪಾವಳಿಯಂದು ಶನಿಯ ಹಿಮ್ಮುಖ ಚಲನೆಯು ಮೇಷ ರಾಶಿಯವರಿಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ರಾಶಿಯವರ ವ್ಯವಹಾರ ಅತ್ಯಂತ ಲಾಭದಾಯಕ ರೀತಿಯಲ್ಲಿ ತಿರಗುತ್ತದೆ. ಒಳ್ಳೆಯ ಸುದ್ದಿಗಳನ್ನು ನೀವು ಕೇಳುತ್ತೀರಿ. ಬಹುದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಕೆಲಸಗಳು ಈಗ ನೆರವೇರಲಿದೆ. ಮದುವೆಯಾಗದವರಿಗೆ ಈ ದಿನದಲ್ಲಿ ಶುಭ ಸುದ್ದಿಗಳ ಕೇಳಬಹುದು. ಅಂದರೆ ಕಲ್ಯಾಣ ಭಾಗ್ಯಕ್ಕೆ ಅತ್ಯುತ್ತಮ ಸಮಯ. ಹೊಸ ಮನೆ, ವಾಹನ, ವಸ್ತು ಖರೀದಿಯ ಆಲೋಚನೆಗಳಿಗೆ ಹೊಸ ಚಿಗುರು ಮೂಡಲಿದೆ.
ವೃಷಭ ರಾಶಿ
ದೀಪಾವಳಿಯಂದು ಶನಿಯ ಹಿಮ್ಮುಖ ಚಲನೆಯು ಮಕರ ರಾಶಿಯ ಅದೃಷ್ಟವನ್ನು ತರಲಿದೆ ಎಂದು ಹೇಳಲಾಗಿದೆ. ನಿಮಗೆ ಅಂಟಿರುವ ಬಹುದೊಡ್ಡ ಕಳಂಕ ನಿವಾರಣೆಯಾಗುವ ಸಾಧ್ಯತೆ ಇದೆ. ಕೆಲಸದ ಸ್ಥಳಗಳು, ಮನೆಯಲ್ಲಿ ನಿಮಗೆ ಗೌರವ ಸಿಗಲಿದೆ. ಅಲ್ಲದೆ ನೀವು ಭೂಮಿ, ಕಬ್ಬಿನ, ಬಂಗಾರದ ವ್ಯವಹಾರ ನಡೆಸುವವರಾಗಿದ್ದರೆ ಒಳ್ಳೆಯ ಲಾಭ ಪಡೆಯಬಹುದು. ನಿಮ್ಮ ಆರ್ಥಿಕ ಬಲ ಹೆಚ್ಚಿಸಿಕೊಳ್ಳಲು ಇದೊಂದು ಉತ್ತಮ ಕಾಲವಾಗಿರಲಿದೆ.
ಮಕರ ರಾಶಿ
ದೀಪಾವಳಿಯಂದು ಶನಿಯ ಹಿಮ್ಮುಖ ಚಲನೆಯಿಂದಾಗಿ. ಮಕರ ರಾಶಿಯವರಲ್ಲಿ ಉತ್ತಮ ದಿನವಾಗಿ ನೋಡಬಹುದು. ನಿಮ್ಮ ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿದೆ. ಬಹುಕಾಲದಿಂದ ನಿಮಗೆ ಬರಬೇಕಿದ್ದ ಹಣ ಈ ದೀಪಾವಳಿಯಲ್ಲಿ ಮರಳಿ ನಿಮ್ಮ ಕೈ ಸೇರಲಿದೆ. ಒಂದಿಷ್ಟು ಹಣದ ಮೂಲಗಳು ನಿಮ್ಮ ಕೈ ಹಿಡಿಯಲಿದೆ. ಒಳ್ಳೆಯ ಕೆಲಸಗಳು ನಿಮಗೆ ಫಲ ನೀಡಲಿದೆ. ಬಹುಕಾಲದ ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಗಲಿದೆ.
ಕುಂಭ ರಾಶಿ
ಶನಿ ಹಿಮ್ಮುಖ ಸಂಚಾರವು ಕುಂಭ ರಾಶಿಯವರಿಗೆ ಅದೃಷ್ಟ ತರಲಿದೆ. ನಿಮ್ಮ ಖರ್ಚು ವೆಚ್ಚಗಳು ಕಡಿಮೆಯಾಗಲಿದೆ. ಆರೋಗ್ಯದಲ್ಲಿ ನೀವು ಅಂದುಕೊಂಡಿದ್ದಕ್ಕಿಂತಲೂ ಬಹುಬೇಗ ಚೇತರಿಕೆ ಕಾಣುತ್ತೀರಿ. ಆರ್ಥಿಕವಾಗಿ ನೀವು ಮತ್ತಷ್ಟು ಬಲಗೊಳ್ಳುತ್ತೀರಿ. ನಿಮ್ಮ ಅದೃಷ್ಟ ಬದಲಾಗುತ್ತದೆ. ಕುಂಭರಾಶಿಯರಲ್ಲಿ ಶನಿಯ ಹಿಮ್ಮುಖ ಚಲನೆಯಿಂದಾಗಿ ನಿಮ್ಮ ಹಣಕಾಸು ವ್ಯವಹಾರಗಳಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು. ಇಷ್ಟು ವರ್ಷಗಳ ಕಷ್ಟದ ಫಲ ಈ ಸಮಯದಲ್ಲಿ ನಿಮ್ಮ ಕೈ ಸೇರುವ ಸಾಧ್ಯತೆ ಇದೆ.
ಧನು ರಾಶಿ
ಗುರು ಮತ್ತು ಶನಿಯ ಹಿಮ್ಮುಖ ಚಲನೆಯು ಈ ರಾಶಿಯವರಿಗೆ ಹೆಚ್ಚು ಲಾಭದಾಯಕವಾಗಿರಲಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ನಿಮಗೆ ಯಶಸ್ಸು ಒಲಿದು ಬರುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಒಳ್ಳೆಯ ಹೆಸರು ಮಾಡಲಿದ್ದೀರಿ. ಬಹು ವರ್ಷಗಳಿಂದ ಮಾಡಬೇಕು ಎಂದು ಯೋಚಿಸಿದ್ದ ಕೆಲಸಗಳನ್ನು ಮಾಡಲು ಒಳ್ಳೆಯ ಕಾಲವಿದು. ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮ್ಮ ಆಲೋಚನೆಗಳು ಬದಲಾಗಲಿದೆ. ನಿಮ್ಮ ಕುಟುಂಬದಲ್ಲಿ ಶುಭ ಕಾರ್ಯ ಜರುಗುವ ಸಾಧತೆ ಇದೆ. ಧಲಲಾಭದ ಲಕ್ಷಣಗಳು ಹೆಚ್ಚಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications