Latest Updates
-
ಸಾವಿನ ನಂತರವೂ ಜೀವದಾನ: ದಂಪತಿಗಳೇ, ಈ ಒಂದು ನಿರ್ಧಾರ 8 ಜನರ ಪ್ರಾಣ ಉಳಿಸಬಹುದು! -
ಹರ್ ಘರ್ ತಿರಂಗಾ: ಅಪಾರ್ಟ್ಮೆಂಟ್ ಬಾಲ್ಕನಿಯಲ್ಲಿ ಧ್ವಜ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಬೆಲೆ ಏರಿಕೆಯ ಬಿಸಿ: ಕೇವಲ ₹99 ಬಜೆಟ್ನಲ್ಲಿ ಸಿಗುವ ಪೌಷ್ಟಿಕಾಂಶಯುಕ್ತ ಹೈ-ಪ್ರೊಟೀನ್ ಊಟದ ಪ್ಲಾನ್! -
ಆಕಾಶದಲ್ಲಿ ಅದ್ಭುತ ಕೌತುಕ: ನಾಳೆ ರಾತ್ರಿ ಪರ್ಸೀಡ್ ಉಲ್ಕಾಪಾತ ವೀಕ್ಷಿಸಲು ಮಿಸ್ ಮಾಡ್ಬೇಡಿ! -
ಕಾಡಿನ ಅಂಚಿನಲ್ಲಿ ವಾಕಿಂಗ್ ಹೋಗ್ತೀರಾ? ಆನೆಗಳ ಕಾಟ ತಪ್ಪಿಸಲು ಮತ್ತು ಫಿಟ್ ಆಗಿರಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ? -
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ!
ದೀಪಾವಳಿಯಂದು ಈ ಸರಳ ಪರಿಹಾರ ಮಾಡಿದರೆ ಆರ್ಥಿಕ ಸಮಸ್ಯೆ ದೂರಾಗುವುದು
ದೀಪಾವಳಿಯ ದಿನ ಮನೆಗೆ ಕೆಲವೊಂದು ವಸ್ತುಗಳನ್ನು ತಂದರೆ ಒಳ್ಳೆಯದು ಎಂದು ಹೇಳಲಾಗುವುದು. ದೀಪಾವಳಿ ಹಬ್ಬ 5 ದಿನಗಳ ಸಂಭ್ರಮ, ಈ ದಿನಗಳಲ್ಲಿ ಶಾಸ್ತ್ರ ಪ್ರಕಾರ ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆ ಬಗೆಹರಿಯುವುದು ಎಂದು ಅದನ್ನು ಪಾಲಿಸಿಕೊಂಡು ಬರುವವರು ಹೇಳುತ್ತಾರೆ.
ದೀಪಾವಳಿ ದೀಪಗಳ ಹಬ್ಬ, ಈ ದಿನ ಮನೆಯಲ್ಲಿ ಹಚ್ಚಿಟ್ಟಿರುವ ಹಣತೆಯನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬ, ದೀಪಗಳ ಹಬ್ಬವನ್ನು 5 ದಿನ ಆಚರಿಸಲಾಗುವುದು. ಧನ್ತೇರಸ್‌ನಿಂದ ದೀಪಾವಳಿ ಹಬ್ಬದ ಸಡಗರ ಶುರುವಾಗುವುದು.
ದೀಪಾವಳಿಯಂದು ಮನೆಯಲ್ಲಿ ಮಣ್ಣಿನ ಹಣತೆಯನ್ನು ಹಚ್ಚಿಡುತ್ತಾರೆ.ಈ ರೀತಿ ದೀಪಾವಳಿ ಅಮವಾಸ್ಯೆಗೆ ಮಣ್ಣಿನ ಹಣತೆಗಳನ್ನು ಹಚ್ಚಿಡುವುದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುವುದು ಎಂದು ನಂಬಿಕೆ, ಅಲ್ಲದೆ ದೀಪಾವಳಿಗೆ ಕೆಲವೊಂದು ಪರಿಹಾರವಿದ್ದರೆ ಆರ್ಥಿಕ ಸಮಸ್ಯೆವಿದ್ದರೆ ದೂರಾಗುವುದು ಎಂದು ಹೇಳಲಾಗುವುದು:

ತುಪ್ಪದ ದೀಪ ಹಚ್ಚಿಡಿ
ದೀಪಾವಳಿಗೆ ಲಕ್ಷ್ಮಿ ಪೂಜೆ ಮಾಡುವಾಗ ತುಪ್ಪದ ದೀಪ ಹಚ್ಚಿಡಿ, ಅಲ್ಲದೆ ನಾಲ್ಕು ಬತ್ತಿಯ ದೀಪವನ್ನು ಹಚ್ಚಿಡಬೇಕು. ಇದರಿಂದ ಲಕ್ಷ್ಮಿ ಕೃಪೆಯಿಂದಾಗಿ ಆರ್ಥಿಕ ತೊಂದರೆಯಿದ್ದರೆ ಬಗೆಹರಿಯಲಿದೆ, ಸಂಪತ್ತು ವೃದ್ಧಿಸಲಿದೆ.
ರಾತ್ರಿ ಹೊತ್ತು ಲಕ್ಷ್ಮಿ ಫೋಟೋದ ಮುಂದೆ ಹಚ್ಚಿಡಿ
ಯಾಕೋ ಗೊತ್ತಿಲ್ಲ ಆರ್ಥಿಕ ಪರಿಸ್ಥಿತಿ ಸರಿಯಾಗುತ್ತಿಲ್ಲ, ಮಾಡಿದ ಪ್ರಯತ್ನಗಳು ವಿಫಲವಾಗುತ್ತಿದೆ, ಆರ್ಥಿಕ ನಷ್ಟ ಉಂಟಾಗುತ್ತಿದೆ ಹೀಗೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರೆ ದೀಪಾವಳಿಯಂದು ರಾತ್ರಿ ಲಕ್ಷ್ಮಿ ಮುಂದೆ ತುಪ್ಪದ ದೀಪ ಹಚ್ಚಿಟ್ಟು ಆರಾಧಿಸಬೇಕು.
ನಿಶಿತ್ ಮುಹೂರ್ತ: ಮಧ್ಯರಾತ್ರಿ:12:03ರಿಂದ 01:36ರವರೆಗೆ ಇದೆ
ಈ ಸಮಯದಲ್ಲಿ ಲಕ್ಷ್ಮಿ ಫೋಟೋದ ಮುಂದೆ ತುಪ್ಪದ ದೀಪ ಹಚ್ಚಿಟ್ಟು ಲಕ್ಷ್ಮಿ ಮಂತ್ರಗಳನ್ನು ಪಠಿಸುತ್ತಾ ಲಕ್ಷ್ಮಿಯನ್ನು ಆರಾಧನೆ ಮಾಡುವುದರಿಂದ ಆರ್ಥಿಕ ತೊಂದರೆಗಳಿದ್ದರೆ ಅದು ದೂರಾಗಲಿದೆ.
ದಕ್ಷಿಣ ಭಾಗದಲ್ಲಿಯೂ ದೀಪವನ್ನು ಹಚ್ಚಿಡಬೇಕು
ಶಾಸ್ತ್ರ ಪ್ರಕಾರ ದಕ್ಷಿಣ ದಿಕ್ಕಿನಲ್ಲಿಯೂ ಒಂದು ದೀಪವನ್ನು ಹಚ್ಚಿಡಬೇಕು, ಹೀಗೆ ಹಚ್ಚಿಡುವುದರಿಂದ ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ಹೊರ ದೂಡುತ್ತದೆ, ಮನೆಯಲದಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು, ಸಂಪತ್ತು ವೃದ್ಧಿಸಲಿದೆ ಎಂದು ಹೇಳಲಾಗುವುದು.
ಮನೆ ಮುಂದುಗಡೆ ಇಡುವ ದೀಪಕ್ಕೆ ತುಪ್ಪ ಹಾಕಿ
ಮನೆ ಮುಂದುಗಡೆ ಅಂದರೆ ಮನೆಯ ಹೆಬ್ಬಾಗಿಲಿಗೆ ಇಡುವ ದೀಪಕ್ಕೆ ತುಪ್ಪ ಹಾಕಿದರೆ ಒಳ್ಳೆಯದು, ತುಪ್ಪದ ಹಣತೆ ಲಕ್ಷ್ಮಿಯನ್ನು ಆಕರ್ಷಿಸುತ್ತದೆ.
ದೀಪಾವಳಿಯಂದು ಮಣ್ಣಿನ ಹಣತೆಗಳನ್ನು ಖರೀದಿಸಿ
ದೀಪಾವಳಿ ದಿನ ಮಣ್ಣಿನ ಹಣತೆಗಳನ್ನು ಖರೀದಿಸಿದರೆ ಶುಭ ಎಂದು ಪರಿಗಣಿಸಲಾಗಿದೆ. ಮನೆಗೆ ಹೊಸ ಮಣ್ಣಿನ ಹಣತೆ ತಂದು ಅದರಲ್ಲಿ ಎಣ್ಣೆ ಹಾಕಿ ಹಚ್ಚಿಟ್ಟರೆ ಒಳ್ಳೆಯದು, ಈ ದಿನ ಮಣ್ಣಿನ ಹಣತೆಗಳನ್ನು ದಾನ ಕೂಡ ಮಾಡಬಹುದು.
ಮಹಾಲಕ್ಷ್ಮಿ ಹಾಗೂ ಶ್ರೀ ಗಣೇಶನ ಫೋಟೋ ಮನೆಗೆ ತನ್ನಿ
ದೀಪಾವಳಿಯಂದು ಲಕ್ಷ್ಮಿ ಅಥವಾ ಶ್ರೀ ಗಣೇಶನ ಮೂರ್ತಿ ಅಥವಾ ಫೋಟೋ ಮನೆಗೆ ತಂದರೆ ಮನೆಗೆ ಒಳತಾಗುವುದು ಎಂಬ ನಂಬಿಕೆ ಇದೆ.
ವೀಳ್ಯೆದೆಲೆ ಖರೀದಿಸಿ
ದೀಪಾವಳಿಯಂದು ಲಕ್ಷ್ಮಿ ಪೂಜೆಗೆ ವೀಳ್ಯೆದೆಲೆ ಖರೀದಿಸಿ ತರಬೇಕು ಎಂದು ಹೇಳಲಾಗುವುದು.
ಶಂಖ ತನ್ನಿ
ಈ ದಿನದಂದು ಮನೆಗೆ ಶಂಖ ತರುವುದು, ಪೂಜೆ ವೇಳೆ ಶಂಖ ಊದುವುದು ಮಾಡಿದರೆ ಮನೆಯಲ್ಲಿನ ನಕರಾತ್ಮಕ ಶಕ್ತಿ ಹೋಗಲಾಡಿಸಲು ಸಹಕಾರಿ.
ದೀಪಾವಳಿಯಂದು ಮನೆಗೆ ಅರಿಶಿಣ ಕೊಂಬು ತನ್ನಿ
ದೀಪಾವಳಿ ಹಬ್ಬದ ಸಮಯದಲ್ಲಿ ಮನೆಗೆ ಅರಿಶಿಣದ ಕೊಂಬು ತರುವುದು ಕೂಡ ಶುಭ ಎಂದು ಪರಿಗಣಿಸಲಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications