Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಡಿಸೆಂಬರ್ ತಿಂಗಳ ಆರ್ಥಿಕ ಭವಿಷ್ಯ: ವರ್ಷದ ಕೊನೆಯ ತಿಂಗಳು ದ್ವಾದಶ ರಾಶಿಗಳಿಗೆ ಆರ್ಥಿಕವಾಗಿ ಹೇಗಿರಲಿದೆ?
ಡಿಸೆಂಬರ್ ತಿಂಗಳ ಮಾಸ ಭವಿಷ್ಯ ಪ್ರಕಾರ ದ್ವಾದಶ ರಾಶಿಗಳಲ್ಲಿ ಕೆಲ ರಾಶಿಯವರಿಗೆ ಶುಭ, ಇನ್ನು ಕೆಲವರಿಗೆ ಸವಾಲಿನ ಸಮಯ, ಯಾವ ರಾಶಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಡಿಸೆಂಬರ್ ಮಾಸದ ಆರ್ಥಿಕ ಭವಿಷ್ಯ ನೋಡುವುದಾದರೆ ವರ್ಷದ ಕೊನೆಯ ತಿಂಗಳು ನಿಮಗೆ ಉತ್ತಮವಾಗಿರಲಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೂ ಈ ಸಮಯ ತುಂಬಾ ಅನುಕೂಲಕರವಾಗಿರಲಿದೆ, ಆರ್ಥಿಕ ಸಮಸ್ಯೆಯಿಂದ ಯಾವುದಾದರು ಕೆಲಸ ಅಪೂರ್ಣವಾಗಿದ್ದರೆ ಈ ಅವಧಿಯಲ್ಲಿ ಪೂರ್ಣವಾಗಲಿದೆ.

ವೃಷಭ ರಾಶಿ
ಹಣದ ವಿಚಾರದಲ್ಲಿ ನೀವು ಜಾಗ್ರತೆವಹಿಸಿ.ಈ ಅವಧಿಯಲ್ಲಿ ಖರ್ಚು ಹೆಚ್ಚಿರಲಿದೆ. ನೀವು ಖರ್ಚು-ವೆಚ್ಚ ನಿಯಂತ್ರಿಸಿದರೆ ಒಳ್ಳೆಯದು.ಬಜೆಟ್ ಮೀರಿ ಖರ್ಚು ಮಾಡಲು ಹೋಗಬೇಡಿ. ಈ ಅವಧಿಯಲ್ಲಿ ಹಣದ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳದಿರುವುದು ಒಳ್ಳೆಯದು, ಯಾವುದೇ ದೊಡ್ಡ ಹೂಡಿಕೆ ಮಾಡಲು ಹೋಗಬೇಡಿ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಒಳ್ಳೆಯದಿದೆ. ಈ ಅವಧಿಯಲ್ಲಿ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದು, ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಹಣವಿದೆ ಎಂದು ಹೆಚ್ಚು ಖರ್ಚು ಮಾಡಲು ಹೋಗಬೇಡಿ, ಉಳಿತಾಯದ ಕಡೆಗೆ ಗಮನಹರಿಸಿದರೆ ಒಳ್ಳೆಯದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ಮಾಸ ಹಣದ ವಿಷಯದಲ್ಲಿ ಏರಳಿತಗಳಿಂದ ಕೂಡಿರಲಿದೆ, ನೀವು ಆಸ್ತಿ ಸಂಬಂಧಿತ ವ್ಯವಹಾರವನ್ನು ಸ್ವಲ್ಪ ಮುಂದೂಡುವುದು ಒಳ್ಳೆಯದು, ಇಲ್ಲದಿದ್ದರೆ ನಷ್ಟ ಉಂಟಾಗಬಹುದು, ವ್ಯಾಪಾರಿಗಳಿಗೆ ತಿಂಗಳ ಆರಂಭದಲ್ಲಿ ಸವಾಲಿನ ಸಮಯ ನಂತರ ಸುಧಾರಣೆ ಕಂಡು ಬರಲಿದೆ.
ಸಿಂಹ ರಾಶಿ
ಆರ್ಥಿಕ ಜೀವನದ ದೃಷ್ಟಿಯಿಂದ ನೋಡುವುದಾದರೆ ಈ ಅವಧಿ ನಿಮಗೆ ಅನುಕೂಲಕರವಾಗಿರಲಿದೆ, ಈ ಸಮಯದಲ್ಲಿ ಹಣ ಉಳಿತಾಯ ಮಾಡಲು ಸಾಧ್ಯವಾಗುವುದು. ವ್ಯಾಪಾರಿಗಳಿಗೂ ಈ ಸಮಯ ಲಾಭದಾಯಕವಾಗಿರಲಿದೆ, ಈ ಅವಧಿಯಲ್ಲಿ ನಿಮ್ಮ ಆರೋಗ್ಯ ಕೂಡ ಚೆನ್ನಾಗಿರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಡಿಸೆಂಬರ್ ತಿಂಗಳಿನಲ್ಲಿ ಆರ್ಥಿಕವಾಗಿ ಕೆಲ ಸವಾಲುಗಳನ್ನು ಎದುರಿಸಬಹುದು, ಈ ಸಮಯದಲ್ಲಿ ಹಣಕ್ಕೆ ಸಂಬಂಧಿಸಿದ ಯಾವುದೇ ದೊಡ್ಡ ಹೂಡಿಕೆ ಮಾಡಬೇಡಿ, ಸಾಲದ ವ್ಯವಹಾರದ ಕಡೆಯೂ ಜಾಗ್ರತೆವಹಿಸಬೇಕು.
ತುಲಾ ರಾಶಿ
ವರ್ಷದ ಕೊನೆಯ ತಿಂಗಳು ಆರ್ಥಿಕವಾಗಿ ನಿಮಗೆ ಅಷ್ಟೊಂದು ಶುಭವಲ್ಲ, ಈ ಸಮಯದಲ್ಲಿ ಖರ್ಚುಗಳು ಹೆಚ್ಚು ಬರಬಹುದು. ಹಣವನ್ನು ಬಜೆಟ್ ಪ್ಲ್ಯಾನ್ ಮಾಡಿ ಅದರಂತೆ ಖರ್ಚು ಮಾಡಿದರೆ ತುಂಬಾ ಒಳ್ಳೆಯದು. ಯಾರಿಗೂ ಸಾಲ ಕೊಡಲು ಹೋಗಬೇಡಿ.
ವೃಶ್ಚಿಕ ರಾಶಿ
ಈ ತಿಂಗಳು ನಿಮಗೆ ಆರ್ಥಿಕವಾಗಿ ತುಂಬಾ ಚೆನ್ನಾಗಿರಲಿದೆ, ನೀವು ಹಣದ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಈ ಅವಧಿ ಅನುಕೂಲಕರವಾಗಿರಲಿದೆ. ಆದರೆ ನೀವು ಹೂಡಿಕೆಗೆ ಮುನ್ನ ಅದರ ಡಾಕ್ಯೂಮೆಂಟ್ ಪರಿಶೀಲನೆ ಮಾಡಬೇಕು.
ಧನು ರಾಶಿ
ಡಿಸೆಂಬರ್ ಮಾಸ ಆರ್ಥಿಕ ಬದುಕು ತುಂಬಾ ಚೆನ್ನಾಗಿರಲಿದೆ, ಈ ಸಮಯದಲ್ಲಿ ಹಣದ ಹೂಡಿಕೆ ಮಾಡಲು ಸಮಯ ಉತ್ತಮವಾಗಿರಲಿದೆ, ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ.
ಮಕರ ರಾಶಿ
ಮಕರ ರಾಶಿಯವರು ಹಣಕಾಸಿನ ವಿಚಾರದಲ್ಲಿ ನೀವು ಜಾಗ್ರತೆವಹಿಸಬೇಕು. ಈ ಸಮಯದಲ್ಲಿ ಬಜೆಟ್‌ಗಿಂತ ಹೆಚ್ಚು ಖರ್ಚು ಬರಲಿದೆ. ಖರ್ಚು ಮಿತಗೊಳಿಸಿದರೆ ತುಂಬಾ ಒಳ್ಳೆಯದು. ಮೊದಲೇ ಬಜೆಟ್ ಪ್ಲ್ಯಾನ್ ನೋಡಿ ಖರ್ಚು ಮಾಡಿದರೆ ಒಳ್ಳೆಯದು.
ಕುಂಭ ರಾಶಿ
ಹಣಕಾಸಿನ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿರಲಿದೆ. ಆದರೆ ಈ ಅವಧಿಯಲ್ಲಿ ನೀವು ಯಾವುದೇ ದೊಡ್ಡ ಹೂಡಿಕೆ ಮಾಡಲು ಹೋಗಬೇಡಿ. ದೊಡ್ಡ ಲಾಭ ಸಿಗಲಿದೆ ಅಂತ ಚಿಕ್ಕ ಲಾಭ ನಿರ್ಲಕ್ಷ್ಯ ಮಾಡುವ ತಪ್ಪು ಮಾಡದಿರಿ.
ಮೀನ ರಾಶಿ
ಹಣಕಾಸಿನ ವಿಷಯದಲ್ಲಿ ಜಾಗ್ರತೆವಹಿಸಬೇಕು, ಈ ಸಮಯದಲಲಿ ಖರ್ಚು ಹೆಚ್ಚಿರಬಹುದು, ಬಜೆಟ್ ಮೀರಿ ಖರ್ಚು ಬರುವುದರಿಂದ ಹಣದ ಚಿಂತೆ ಕಾಡಬಹುದು, ಅಲ್ಲದೆ ಅನಾರೋಗ್ಯದ ಕಾರಣದಿಂದಲೂ ಹಣ ಖರ್ಚಾಗಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
