Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಡಿಸೆಂಬರ್‌ನಲ್ಲಿ ಜನಿಸಿದವರಲ್ಲಿ ಕಂಡು ಬರುವ ಸ್ಪೆಷಲ್ ಗುಣಗಳಿವು
ನಾವು ಯಾವ ತಿಂಗಳಿನಲ್ಲಿ ಜನಿಸುತ್ತೇವೆ ಅದರಂತೆ ಕೆಲವು ವಿಶೇಷ ಗುಣಗಳು ನಮ್ಮಲ್ಲಿ ಇರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಹೌದು ನಮ್ಮ ರಾಶಿ, ನಮ್ಮ ನಕ್ಷತ್ರದಂತೆ, ನಾವು ಯಾವ ತಿಂಗಳಿನಲ್ಲಿ ಜನಿಸಿದ್ದೇವೆ ಎಂಬುವುದು ಕೂಡ ನಮ್ಮ ಸ್ವಭಾವದ ಮೇಲೆ ಪ್ರಭಾವ ಬೀರುವುದಂತೆ. ವ್ಯಕ್ತಿಯಿಂದ ವ್ಯಕ್ತಿ ಭಿನ್ನ ನಿಜ, ಆದರೆ ಕೆಲವೊಂದು ಸಾಮ್ಯತೆ ಇರಲಿದೆ. ನೀವು ಡಿಸೆಂಬರ್ ಮಾಸದಲ್ಲಿ ಜನಿಸಿರುವವರ ಬಳಿ ಆ ರೀತಿಯ ಸಾಮ್ಯತೆ ಕಾಣಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ವರ್ಷದ ಕೊನೆಯ ತಿಂಗಳು ಡಿಸೆಂಬರ್, ಈ ಡಿಸೆಂಬರ್‌ನಲ್ಲಿ ಜನಿಸಿದವರಲ್ಲಿ ಈ ಗುಣಗಳು ಕಂಡು ಬರುವುದಂತೆ, ಆ ವಿಶೇಷ ಗಗುಣಗಳಾವುವು ಎಂದು ನೋಡೋಣ:

ಡಿಸೆಂಬರ್ ಮಾಸದಲ್ಲಿ ಜನಿಸಿದವರು ಈ ರಾಶಿಯವರು
ಡಿಸೆಂಬರ್ 21ಕ್ಕೆ ಮೊದಲು ಜನಿಸಿದ್ದರೆ ಮಕರ ರಾಶಿ, ಡಿಸೆಂಬರ್ 21ರ ನಂತರ ಜನಿಸಿದ್ದರೆ ಅವರದ್ದು ಧನುರಾಶಿಯಾಗಿರುತ್ತದೆ.
ಸೂರ್ಯ ಮತ್ತು ಮಂಗಳನ ಪ್ರಭಾವ ಅಧಿಕವಿರುತ್ತದೆ
ಡಿಸೆಂಬರ್ ಮಾಸದಲ್ಲಿ ಸೂರ್ಯ ಮತ್ತು ಮಂಗಳನ ಪ್ರಭಾವ ಅಧಿಕವಿರಲಿದೆ, ಈ ಎರಡು ಗ್ರಹಗಳ ಪ್ರಭಾವ ಇವರ ಮೃಲೆ ಇರುತ್ತದೆ, ಅಲ್ಲದೆ ಇವರು ಹೆಚ್ಚು ಮಹತ್ವಾಕಾಂಕ್ಷಿಗಳು, ಅಲ್ಲದೆ ಇವರಿಗೆ ಕೋಪ ಕೂಡ ಸ್ವಲ್ಪ ಹೆಚ್ಚೇ ಇರುತ್ತದೆ.
ಡಿಸೆಂಬರ್ ತಿಂಗಳಿನಲ್ಲಿ ಜನಿಸಿದವರು ತುಂಬಾ ಸ್ಮಾರ್ಟ್
ಡಿಸೆಂಬರ್ ಮಾಸದಲ್ಲಿ ಜನಿಸಿದವರು ತುಂಬಾ ಸ್ಮಾರ್ಟ್ ಆಗಿ ಯೋಚಿಸುತ್ತಾರೆ, ಅಲ್ಲದೆ ಇವರು ಲುಕ್ ಕೂಡ ಸ್ಮಾರ್ಟ್ ಆಗಿರುತ್ತದೆ.
ಅವರು ಧಾರ್ಮಿಕ ವಿಚಾರಗಳನ್ನು ಕೂಡ ನಂಬುತ್ತಾರೆ
ಇವರಿಗೆ ಧಾರ್ಮಿಕ ನಂಬಿಕೆ ತುಂಬಾ ಇರಲಿದೆ. ಇವರಿಗೆ ದೇವರ ಮೇಲೆ ತುಂಬಾ ನಂಬಿಕೆ ಇರುತ್ತದೆ, ಪ್ರತಿಯೊಂದು ಕಾರ್ಯ ಮಾಡುವಾಗಲೂ ದೇವರ ಮೇಲೆ ನಂಬಿಕೆ ಇಟ್ಟು ಮಾಡುತ್ತಾರೆ.
ಇವರು ಬೇಗನೆ ಫ್ರೆಂಡ್ ಆಗ್ತಾರೆ
ಬೇಗನೆ ಸ್ನೇಹಿತರಾಗುತ್ತಾರೆ, ಇವರು ಸ್ನೇಹಿತರಾದರೆ ತುಂಬಾನೇ ಕೇರ್ ಮಾಡ್ತಾರೆ, ಚಿಕ್ಕ ವಿಷಯವನ್ನು ಮನಸ್ಸಿಗೆ ತೆಗೆದುಕೊಳ್ಳುತ್ತಾರೆ. ಶತ್ರುಗಳನ್ನು ಕೂಡ ಸ್ನೇಹಿತರನ್ನಾಗಿ ಮಾಡುವ ಕಲೆ ಇವರಲ್ಲಿ ಇರುತ್ತದೆ, ತನ್ನವರಿಗೆ ಸ್ವಲ್ಪ ಏನಾದರು ಆದರೂ ಇವರಿಗೆ ಸಹಿಸಲು ಸಾಧ್ಯವಾಗಲ್ಲ.
ಇವರಲ್ಲಿ ಆರೋಗ್ಯ ಕಾಳಜಿ ತುಂಬಾನೇ ಇರುತ್ತದೆ
ಡಿಸೆಂಬರ್‌ನಲ್ಲಿ ಜನಿಸಿದವರು ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ಮಾಡುತ್ತಾರೆ. ಚಿಕ್ಕ ಆರೋಗ್ಯ ಸಮಸ್ಯೆ ಬಂದರೂ ತುಂಬಾ ಟೆನ್ಷನ್ ಮಾಡಿಕೊಳ್ಳುತ್ತಾರೆ, ಅಲ್ಲದೆ ಇವರಿಗೆ ದೈಹಿಕ ಶ್ರಮದ ಕೆಲಸದ ಬದಲಿಗೆ ಸ್ಮಾರ್ಟ್ ವರ್ಕ್ ಕಡೆ ಹೆಚ್ಚಿನ ಗಮನ ನೀಡುತ್ತಾರೆ.
ಪ್ರತಿಯೊಂದು ವಿಷಯವೂ ಸರಿಯಾಗಿ ಇರಬೇಕೆಂದು ಬಯಸುತ್ತಾರೆ
ಅವರಿಗೆ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡುವುದು ಇಷ್ಟವಾಗಲ್ಲ, ಅವರಿಗೆ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ಇಡಬೇಕು, ಕೆಲಸ ಕಾರ್ಯಗಳಲ್ಲಿ ಪ್ರತಿಯೊಂದು ವಿಷಯವು ಸರಿಯಾದ ರೀತಿಯಲ್ಲಿ ನಡೆಯಬೇಕು ಎಂದು ಬಯಸುತ್ತಾರೆ.
ಅವರು ತಮ್ಮ ಗುರಿ ಮುಟ್ಟುವವರೆಗೆ ಪ್ರಯತ್ನ ಪಡುತ್ತಾರೆ
ಇವರು ಏನಾದರೂ ಗುರಿ ಇಟ್ಟರೆ ಅದನ್ನು ಮುಟ್ಟುವವರೆಗೆ ಪ್ರಯತ್ನ ಮಾಡುತ್ತಾರೆ, ಅಷ್ಟೊಂದು ಡೆಡಿಕೇಷನ್ ಇವರಲ್ಲಿ ಇರಲಿದೆ, ಸದಾ ತಮ್ಮ ಕನಸುಗಳ ಹಿಂದೆ ಓಡುವವರು ಇವರಾಗಿರುತ್ತಾರೆ, ಇವರು ತಮ್ಮ ಗುರಿಯನ್ನು ತಲುಪದೆ ಸುಮ್ಮನೆ ಕೂರುವವರಲ್ಲ.
ಬೇರೆಯವರ ಮೇಲೆ ಕಾಳಜಿ ತೋರುತ್ತರೆ
ತನ್ನವರಿಗೆ, ತನ್ನ ಸ್ನೇಹಿತರಿಗೆ ಕಷ್ಟ ಅಂತ ಬಂದರೆ ಸದಾ ಸಹಾಯ ಮಾಡುತ್ತಾರೆ, ಯಾವುದೇ ಸ್ವಾರ್ಥವಿಲ್ಲದೆ ಸ್ನೇಹ ಮಾಡುತ್ತಾರೆ, ಅಲ್ಲದೆ ನಿಮಗೆ ಸಹಾಯ ಮಾಡಿದಾಗ ಅವರು ನಿಮ್ಮಿಂದ ಏನೂ ನಿರೀಕ್ಷೆ ಮಾಡುವುದಿಲ್ಲ.
ಜ್ಯೋತಿಷ್ಯ ಪ್ರಕಾರ ಡಿಸೆಂಬರ್ ಮಾಸದಲ್ಲಿ ಜನಿಸಿದವರಿಗೆ
ಅದೃಷ್ಟದ ಸಂಖ್ಯೆಗಳಿ 1, 3
ಅದೃಷ್ಟದ ಬಣ್ಣ: ನೀಲಿ,ಹಳದಿ, ಕಂದು, ಕೆಂಪು
ಅದೃಷ್ಟದ ದಿನಗಳಿ: ನೀಲಿ, ಹಳದಿ, ಕಂದು, ಕೆಂಪು
ಅದೃಷ್ಟದ ದಿನಗಳು:ಭಾನುವಾರ, ಶನಿವಾರ, ಬುಧವಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











