Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
December 30 Horoscope: ಖರ್ಚುಗಳ ಮೇಲೆ ಹಿಡಿತ ಸಾಧಿಸುವುದು ಉತ್ತಮ!
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 30 (December 30 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನ ಬಹಳ ಸಮಸ್ಯೆಗಳಿವೆ. ಇಂದು ನಿಮ್ಮ ಹಣಕಾಸಿನ ವಿಚಾರದಲ್ಲಿ ಅಡೆತಡೆಗಳಿವೆ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯು ಈ ದಿನ ಈಡೇರದೆ ಇರಬಹುದು. ಆಹಾರ ಸಂಬಂಧಿತ ಖರ್ಚುಗಳಿಂದ ಒತ್ತಡಗಳಿವೆ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನ ಅನುಕೂಲಕರ. ಮನೆಯ ವಿಚಾರದಲ್ಲಿ ನಿಮಗೆ ಒತ್ತಡಗಳಿವೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಕಾರಣ ನಿಮಗೆ ದಿನದ ಅಂತ್ಯದಲ್ಲಿ ಹೆಚ್ಚಿನ ನೆಮ್ಮದಿ ಇರಲಿದೆ. ವ್ಯಾಪಾರಿಗಳಿಗೆ ಮಿಶ್ರಫಲವಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಪ್ರಯಾಣಗಳ ಮಾಡಬೇಕಾದ ದಿನವಾಗಬಹುದು. ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ಮುಂದೂಡಲಾಗುತ್ತದೆ. ದಾಂಪತ್ಯ ವಿಚಾರದಲ್ಲಿ ನಿಮಗೆ ಸಂತಸ ತರುವ ದಿನ. ಮನೆಯ ಹಿರಿಯ ಸದಸ್ಯರ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ನೋಡಬಹುದು.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಅನಗತ್ಯ ದುಂದುವೆಚ್ಚಗಳಿವೆ. ಮೂರನೇ ವ್ಯಕ್ತಿಯ ಕೆಲಸಗಳಿಗೆ ನೀವು ಹಣ ವ್ಯಯಿಸಬೇಕಾಗುತ್ತದೆ. ಸಮಯದೊಳಗೆ ನೀವು ನಿಯೋಜಿತ ಕೆಲಸಗಳ ಮುಗಿಸುವಿರಿ. ಪ್ರಯಾಣಗಳಲ್ಲಿ ಲಾಭವಿದೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಮಿಶ್ರಫಲವಿದೆ. ನಿಮ್ಮ ಹಣಕಾಸು ವಿಚಾರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಆಪ್ತರೊಬ್ಬರಿಂದ ಬರಬೇಕಿದ್ದ ಹಣ ಕೈ ಸಿಗದೆ ಇರಬಹುದು. ದಾಂಪತ್ಯದಲ್ಲಿ ಮನಸ್ತಾಪಗಳು ಹೆಚ್ಚಾಗಬಹುದು. ಪ್ರಯಾಣ ಮಾಡುವಾಗ ಎಚ್ಚರ ವಹಿಸಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಇಂದು ಅಡೆತಡೆಗಳ ನೋಡಬಹುದು ಹಾಗೆ ಗೃಹಿಣಿಯರು ಇಂದು ಪ್ರಯಾಣ ಮಾಡುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ನಿಮ್ಮ ಹಲವು ಕಷ್ಟಕರ ಕೆಲಸಗಳನ್ನು ಬೇರೆಯವರ ಸಹಾಕಾರದಿಂದ ಮಾಡಿ ಮುಗಿಸುವಿರಿ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಯಶಸ್ಸು ಸಿಗಲಿದೆ, ನೀವು ಮಾಡಬೇಕಿದ್ದ ಪ್ರಯಾಣಗಳನ್ನು ಮುಂದೂಡುತ್ತೀರಿ. ಪ್ರೇಮಿಗಳು ಇಂದು ನೋವು ಅನುಭವಿಸಬಹುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಶುಭ ವಿಚಾರಗಳಿವೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಈ ದಿನದಂದು ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ದುಬಾರಿ ವಸ್ತವೊಂದನ್ನು ಖರೀದಿಸುವ ನಿಮ್ಮ ಬಯಕೆ ಈಡೇರಬಹುದು. ನಿರುದ್ಯೋಗಿ ಯುವತಿಯರಿಗೆ ಆಪ್ತರೊಬ್ಬರ ಸಹಕಾರದಿಂದ ಅವಕಾಶ ಪಡೆಯಬಹುದು.
ಧನು ರಾಶಿ
ಧನು ರಾಶಿಯವರಿಗೆ ಈ ದಿನ ಮಿಶ್ರಫಲದಿಂದ ಕೂಡಿರಲಿದೆ. ನಿಮಗೆ ಬೇಕಾಗಿದ್ದ ಅಗತ್ಯ ವಸ್ತುವೊಂದನ್ನು ಇಂದು ಖರೀದಿಸಬಹುದು. ಪ್ರಯಾಣಗಳ ಮಾಡುವಾಗ ಎಚ್ಚರಿಕೆ ಇಡಿ. ವಾಹನ ಸಂಬಂಧಿತ ವಿಚಾರವಾಗಿ ಇಂದು ಖರ್ಚುಗಳಿವೆ.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ಉತ್ತಮ ದಿನ. ಮನೆಯಲ್ಲಿನ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಅದ್ರಲ್ಲೂ ಹಣಕಾಸು ಕುರಿತಾದ ವಿಚಾರವೊಂದರಲ್ಲಿ ನೀವು ಯಶಸ್ಸು ಪಡೆಯುವ ದಿನ. ಉದ್ಯೋಗ ಸಂಬಂಧಿ ವಿಚಾರದಲ್ಲಿ ಇಂದು ಉತ್ತಮ ದಿನ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಈ ದಿನವು ಅನುಕೂಲಕರವಾಗಿರಲಿದೆ. ಈ ದಿನವು ನೀವು ಮಾಡಬೇಕಿದ್ದ ಕೆಲಸಗಳಿಗೆ ಪೂರಕ ವಾತಾವರಣದಿಂದ ತುಂಬಿರಲಿದೆ. ವ್ಯಾಪಾರಿಗಳಿಗೆ ಅನುಕೂಲ. ಅವಿವಾಹಿತರಲ್ಲಿ ಖರ್ಚುಗಳಿವೆ. ಆದ್ರೆ ಅದನ್ನು ನೀವು ನಿಭಾಯಿಸುವಿರಿ.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಉತ್ತಮ ದಿನ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆ ಈಡೇರಲಿದೆ. ಆಸ್ಪತ್ರೆ ಸಂಬಂಧಿತ ವಿಚಾರದಲ್ಲಿ ಓಡಾಟಗಳಿವೆ. ಅನೇಕರಲ್ಲಿ ಈ ದಿನ ವಿಶ್ರಾಂತಿ ಪಡೆಯಬೇಕಾಗಬಹುದು. ಹಾಗೆ ಪ್ರೀತಿಯ ವಿಚಾರದಲ್ಲಿ ಮಧುರತೆ ಇರಲಿದೆ.



Click it and Unblock the Notifications
