Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
December 29 Horoscope: ವಿಶೇಷ ರೀತಿಯ ಲಾಭ ಪಡೆಯುವ ದಿನವಿದು!
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 29 (December 29 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನವು ಸಾಮಾನ್ಯವಾಗಿರಲಿದೆ. ಎಂದಿನಂತೆ ನಿಮ್ಮ ಕೆಲಸ ಕಾರ್ಯಗಳು ನಡೆಯಲಿವೆ. ನಿಮ್ಮ ಸಾಮಾಜಿಕ ಕಳಕಳಿಯಿಂದಾಗಿ ಉತ್ತಮ ಕೆಲಸಗಳ ಮಾಡುವಿರಿ. ಆರ್ಥಿಕ ಸ್ಥಿತಿ ಒತ್ತಡದಿಂದ ಕೂಡಿರಬಹುದು. ವ್ಯಾಪಾರಿಗಳಿಗೆ ಉತ್ತಮ ದಿನ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ದೊಡ್ಡ ಲಾಭದಾಯಕ ದಿನ. ನಿಮಗಾಗಿ ವಸ್ತುವೊಂದನ್ನು ನೀವು ಖರೀದಿಸುವಿರಿ. ನ್ಯಾಯಾಲಯ ಸಂಬಂಧಿತ ವಿಚಾರದಲ್ಲಿ ನೀವು ಬಹುಸಮಯದಿಂದ ಸಿಲುಕಿದ್ದರೆ ಈ ದಿನ ಅದರಿಂದ ಹೊರಬರುವ ಅವಕಾಶಗಳಿವೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಉತ್ತಮ ದಿನ. ಆಪ್ತರೊಬ್ಬರ ಬಳಿ ನೀವು ಹಣದ ಬೇಡಿಕೆ ಇಟ್ಟಿದರೆ ಅದರಿಂದ ಲಾಭ ಪಡೆಯಬಹುದು. ಪ್ರೀತಿ, ಮದುವೆ ವಿಚಾರವಾಗಿ ನಿಮ್ಮ ನಿರ್ಧಾರಗಳು ತಪ್ಪಾಗಬಹುದು. ಅಪಾಯಕಾರಿ ವಸ್ತುಗಳಿಂದ ದೂರ ಇರುವುದು ಉತ್ತಮ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಉತ್ತಮ ದಿನ. ನೀವು ಯಾರಿಂದಾದರು ಹಣವನ್ನು ಸಾಲವಾಗಿ ಪಡೆದಿದ್ದರೆ ಮರಳಿ ನೀಡಬೇಕಾದ ಒತ್ತಡ ಅನುಭವಿಸುವಿರಿ. ಪ್ರಯಾಣಗಳ ಮಾಡುವಿರಿ. ವ್ಯಾಪಾರಿಗಳು ಹೊಸ ರೀತಿಯ ಖರ್ಚುಗಳ ನೋಡಬಹುದು. ಮಾನಸಿಕ ನೆಮ್ಮದಿ ಹಾಳು ಮಾಡುವಂತಹ ವಿಚಾರಗಳು ನಡೆಯಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಉತ್ತಮ ದಿನ. ಯಾರಿಂದಾದರು ಹಣ ಬಯಸುವುದು ವಿಫಲವಾಗಲಿದೆ. ನಿರುದ್ಯೋಗಿಗಳಿಗೆ ಹಣಕಾಸಿನ ಸಮಸ್ಯೆ ಉಂಟಾಗಲಿದೆ. ಅವಿವಾಹಿತರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಬಹಳಷ್ಟು ಸಲಹೆ, ಆಲೋಚನೆ ಮಾಡುವುದು ಉತ್ತಮ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಮಿಶ್ರಫಲವಿದೆ. ಕೆಲಸದ ಸ್ಥಳದಲ್ಲಿ ಬಿಡುವಿಲ್ಲದ ಕೆಲಸಗಳ ಮಾಡಬೇಕಾಗುತ್ತದೆ. ನಿಮ್ಮ ಮನೆಯಲ್ಲಿ ಶುಭ ಕಾರ್ಯ ಸಂಬಂಧಿತ ವಿಚಾರವಾಗಿ ದೊಡ್ಡ ಮಟ್ಟದ ಚರ್ಚೆಗಳು ನಡೆಯಲಿವೆ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಸಮಸ್ಯೆಗಳ ದಿನ. ನೀವು ಮಾಡುವ ವ್ಯವಹಾರಗಳಲ್ಲಿ ಹಣಕಾಸಿನ ಅಡ್ಡಿ ನೋಡಬಹುದು. ಸಾಲದ ಸಮಸ್ಯೆಗಳಿಂದ ನೀವು ಸಮಸ್ಯೆಗಳ ಎದುರಿಸಬಹುದು. ದಾಂಪತ್ಯದಲ್ಲಿ ಇಂದು ಅನಾರೋಗ್ಯ ಕಾಡಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ಸವಾಲುಗಳಿವೆ. ನಿಮ್ಮ ಉದ್ಯೋಗ ಸಂಬಂಧಿತ ವಿಚಾರದಲ್ಲಿ ಸವಾಲುಗಳನ್ನು ಎದುರಿಸುವುದು ದಿನದ ಅಂತ್ಯದವರೆಗೂ ಕಿರಿಕಿರಿ ತರಬಹುದು. ಆಸ್ಪತ್ರೆ ಸಂಬಂಧಿತ ವಿಚಾರವಾಿ ಪ್ರಯಾಣ ಮಾಡುವಿರಿ. ಮನೆಯ ಹಿರಿಯ ಸದಸ್ಯರ ಸಲಹೆಯನ್ನು ಪಾಲಿಸುವುದು ಉತ್ತಮ.
ಧನು ರಾಶಿ
ಧನು ರಾಶಿ ಜನರಲ್ಲಿ ಈ ದಿನವು ಒತ್ತಡದಿಂದ ಕೂಡಿರಲಿದೆ. ನೀವು ಮಾಡಬೇಕಿದ್ದ ಕೆಲಸಗಳು ಅಡ್ಡಿಗಳಿಂದ ತುಂಬಿರುವ ಕಾರಣ ಮುಂದೂಡಬೇಕಾಗಬಹುದು. ಪ್ರೇಮಿಗಳ ವಿಚಾರದಲ್ಲಿ ಇಂದು ಉತ್ತಮ ದಿನವಾಗಿರುವುದಿಲ್ಲ.
ಮಕರ ರಾಶಿ
ಮಕರ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲಕರವಾಗಿರಲಿದೆ. ಹಣ ಗಳಿಸುವ ದೊಡ್ಡ ಮಾರ್ಗವೊಂದಕ್ಕೆ ನೀವು ಹೂಡಿಕೆ ಮಾಡುವಿರಿ. ನಿಮ್ಮ ಉಳಿತಾಯದ ಹಣವನ್ನು ಇಂದು ಉತ್ತಮ ಕೆಲಸವೊಂದಕ್ಕೆ ವಿನಿಯೋಗಿಸುವಿರಿ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ದಿನವು ಶಾಂತಿಯ ದಿನ. ನೀವು ಕುಟುಂಬಸ್ಥರೊಂದಿಗೆ ದೇವಾಲಯ ಭೇಟಿಯ ಸಾಧ್ಯತೆ ಇದೆ. ಹಣಕಾಸು ವಿಚಾರದಲ್ಲಿ ಧನಾತ್ಮಕ ದಿನವಾಗುತ್ತದೆ. ಬ್ಯಾಂಕಿಂಗ್ ವಿಚಾರಗಳು, ಮನೆ ವಿಚಾರದಲ್ಲಿ ನಿಮಗೆ ಇಂದು ಉತ್ತಮ ದಿನವಾಗಿರಲಿದೆ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಉತ್ತಮ ದಿನ, ನಿಮ್ಮ ಹಲವು ಸಮಸ್ಯೆಗಳನ್ನು ಇಂದು ಬಗೆಹರಿಸಿಕೊಳ್ಳುವಿರಿ. ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ವ್ಯಾಪಾರಿ ವಲಯವು ದಿನದ ಅಂತ್ಯದಲ್ಲಿ ಸಂತಸ ಅನುಭವಿಸಲಿದ್ದಾರೆ. ದಾಂಪತ್ಯದಲ್ಲಿ ಖುಷಿ ಇರಲಿದೆ.



Click it and Unblock the Notifications











